ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಸ್ಪಂದನಾ ನೀವು ಅಷ್ಟೊಂದು ವೀಕ್‌ ಇದ್ದೀರಾ? ಅಶ್ವಿನಿ ಟಾಂಗ್‌; ಸ್ಪಂದನಾ- ರಾಶಿಕಾ ಒಬ್ಬರನ್ನೊಬ್ಬರು ಲಾಕ್!

Spadana Rashika: ಕ್ಯಾಪ್ಟನ್ಸ್‌ ರೇಸ್‌ನಲ್ಲಿ ಸ್ಪಂದನಾ ಹಾಗೂ ರಾಶಿಕಾ ನಡುವೆ ಸ್ಪರ್ಧಿ ಏರ್ಪಟ್ಟಿದೆ. ಈ ವೇಳೆ ಒಬ್ಬರಿಗೊಬ್ಬರು ಎಳೆದಾಡಿಕೊಂಡಿದ್ದಾರೆ. ಇವರಿಬ್ಬರೂ ಆಟ ಆಡ್ತಾ ಇದ್ದಾರೋ ಹಾಗೆ ಕುಸ್ತಿ ಮಾಡ್ತಾ ಇದ್ದಾರೋ ಅಂತ ಮನೆಮಂದಿ ಕನ್‌ಫ್ಯೂಸ್‌ ಆಗಿದ್ದಾರೆ. ಬಿಲ್ಲೆಗಳನ್ನು ಜೋಡಿಸುವ ಆಟವು ದೈಹಿಕ ಜಟಾಪಟಿಗೆ ತಿರುಗಿದೆ.

ಬಿಗ್‌ ಬಾಸ್‌ ಕನ್ನಡ

ಕ್ಯಾಪ್ಟನ್ಸ್‌ ರೇಸ್‌ನಲ್ಲಿ ಸ್ಪಂದನಾ (Spandana) ಹಾಗೂ ರಾಶಿಕಾ (Rashika Shetty) ನಡುವೆ ಸ್ಪರ್ಧಿ ಏರ್ಪಟ್ಟಿದೆ. ಈ ವೇಳೆ ಒಬ್ಬರಿಗೊಬ್ಬರು ಎಳೆದಾಡಿಕೊಂಡಿದ್ದಾರೆ. ಇವರಿಬ್ಬರೂ ಆಟ ಆಡ್ತಾ ಇದ್ದಾರೋ ಹಾಗೆ ಕುಸ್ತಿ ಮಾಡ್ತಾ ಇದ್ದಾರೋ ಅಂತ ಮನೆಮಂದಿ ಕನ್‌ಫ್ಯೂಸ್‌ ಆಗಿದ್ದಾರೆ. ಬಿಲ್ಲೆಗಳನ್ನು ಜೋಡಿಸುವ ಆಟವು ದೈಹಿಕ ಜಟಾಪಟಿಗೆ ತಿರುಗಿದೆ. ಅಶ್ವಿನಿ ಗೌಡ (Ashwini Gowda) ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಿರುವ ಕಾರಣ ಸ್ಪಂದನಾ ಸೋಮಣ್ಣ ಮತ್ತು ರಾಶಿಕಾ ಶೆಟ್ಟಿ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ಏನಿದು ಟಾಸ್ಕ್‌?

ಇದೀಗ ಪ್ರೋಮೋ ಔಟ್‌ ಆಗಿದೆ. ಇಬ್ಬರು ಸ್ಪರ್ಧಿಗಳು ತಮಗೆ ನೀಡಲಾಗಿರುವ ಬಿಲ್ಲೆಗಳನ್ನು ಸಾಲಿನಲ್ಲಿ ಜೋಡಿಸಬೇಕು. ಬಿಲ್ಲೆಗಳನ್ನು ಅಧಿಕವಾಗಿ ಬೀಳಿಸುವ ಸ್ಪರ್ಧಿ ಆಟದಲ್ಲಿ ಗೆಲ್ಲುತ್ತಾರೆ. ಬಿಲ್ಲೆಗಳನ್ನು ಸಾಲಿನಲ್ಲಿ ಜೋಡಿಸಿದ ನಂತರ ಅವುಗಳನ್ನು ಕಾಪಾಡಿಕೊಳ್ಳಬೇಕು. ಎದುರಾಳಿ ಸ್ಪರ್ಧಿಯ ಬಿಲ್ಲೆ ಬೀಳಿಸಲು ಪ್ರಯತ್ನಿಸಬೇಕು ಎಂದು ಪ್ರೋಮೋದಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ಪಕ್ಕಾ ಪ್ಲೇಯರ್; ಶೋಗೆ ನ್ಯಾಯ ಒದಗಿಸುತ್ತ ಇರೋದು ಇವರೇ ಎಂದ ಸೂರಜ್‌!

ರಾಶಿಕಾ ಅಡುಗೆಮನೆ ಮತ್ತು ಸ್ಪಂದನಾ ಬಾತ್‌ರೂಮ್‌ನಲ್ಲಿ ತಮ್ಮ ಬಿಲ್ಲೆಗಳನ್ನು ಜೋಡಿಸಿದ್ದಾರೆ. ನಂತರ ಬಿಲ್ಲೆಗಳನ್ನು ಕಾಪಾಡಿಕೊಳ್ಳುವ ಸಂದರ್ಭದಲ್ಲಿ ಇಬ್ಬರ ನಡುವೆ ಒಂದು ರೀತಿ ಕುಸ್ತಿಯೇ ನಡೆದಿದೆ. ಇಬ್ಬರು ಸ್ಪರ್ಧಿಗಳು ಒಬ್ಬರೊಬ್ಬರನ್ನು ಲಾಕ್ ಮಾಡಿಕೊಂಡಿದ್ದಾರೆ.



ಇವರಿಬ್ಬರ ಆಟ ನೋಡಿದ ಧ್ರುವಂತ್, ಬಿಗ್‌ಬಾಸ್ ನೀವು ಹೇಳಿದ ಟಾಸ್ಕ್ ಯಾವುದು? ಬಿಲ್ಲೆಗಳದ್ದಾ ಅಥವಾ ಕುಸ್ತಿ ಆಡೋದಾ ಎಂದು ಕೇಳುತ್ತಾರೆ. ಸ್ಪಂದನಾ ಇಷ್ಟು ದಿನ ನಿಮ್ಮೊಳಗೆ ಬಚ್ಚಿಟ್ಟುಕೊಂಡಿರುವ ಶಕ್ತಿಯನ್ನು ತೋರಿಸಬೇಕು ಎಂದು ಧ್ರುವಂತ್ ಹೇಳಿದ್ದಾರೆ. ಸ್ಪಂದನಾ ನೀವು ಇಷ್ಟೊಂದು ವೀಕ್‌ ಆಗಿದ್ದೀರಾ ಎಂದು ಅಶ್ವಿನಿ ಗೌಡ ಹೇಳುತ್ತಾರೆ.

ಒಟ್ಟಿನಲ್ಲಿ ರಾಶಿಕಾ ಅವರು ಸೂರಜ್‌ ಹೋದ ಬಳಿಕ ಗೇಮ್‌ನಲ್ಲಿ ಸಖತ್‌ ತೊಡಗಿಸಿಕೊಂಡಿದ್ದಾರೆ ಅಂತ ನೆಟ್ಟಿಗರು ಕಮೆಂಟ್‌ ಮಾಡ್ತಾ ಇದ್ದಾರೆ.

ಯಾರೆಲ್ಲ ನಾಮಿನೇಟ್‌?

ಬಿಗ್‌ ಬಾಸ್‌ ಮನೆಯಲ್ಲಿ ಕಳೆದ ವಾರ ತುಂಬಾ ಮಂದಿ ನಾಮಿನೇಟ್‌ ಆಗಿದ್ದರು, ಜೊತೆಗೆ ಡಬಲ್‌ ಎಲಿಮಿನೇಷನ್‌ ನಡೆದಿದೆ. ಮಾಳು ನಿಪನಾಳ್‌ ಮತ್ತು ಸೂರಜ್‌ ಸಿಂಗ್‌ ಅವರು ಮನೆಯಿಂದ ಆಚೆ ಹೋಗಿದ್ದಾರೆ. ಅಂತೆಯೇ ಈ ವಾರ ನಾಮಿನೇಷನ್‌ ಕೂಡ ಮುಕ್ತಾಯವಾಗಿದ್ದು, ಈ ವಾರ 5 ಮಂದಿಗೆ ಎಲಿಮಿನೇಷನ್‌ ಭಯ ಕಾಡುತ್ತಿದೆ.

ಈ ವಾರ ಮನೆಯ ಕ್ಯಾಪ್ಟನ್‌ ಆಗಿ ಗಿಲ್ಲಿ ನಟ ಆಯ್ಕೆ ಆಗಿದ್ದು, ಅವರ ನೇತೃತ್ವದಲ್ಲಿ ಮನೆಯ ಸದಸ್ಯರ ನಾಮಿನೇಷನ್‌ ಪ್ರಕ್ರಿಯೆ ನಡೆದಿದೆ. ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್, ಧನುಷ್‌ ಸೇರಿ ಒಟ್ಟು ಮಂದಿ ನಾಮಿನೇಟ್‌ ಆಗಿದ್ದಾರೆ. ಕಳೆದ ವಾರ ಜಸ್ಟ್‌ ಮಿಸ್‌ ಆಗಿದ್ದ ಸ್ಪಂದನಾ ಸೋಮಣ್ಣ ಈ ವಾರ ಕೂಡ ನಾಮಿನೇಟ್‌ ಆಗಿದ್ದಾರೆ.

ಇದನ್ನೂ ಓದಿ: Bigg Boss Kannada 12: ಟಾಸ್ಕ್‌ನಲ್ಲಿ ಗಿಲ್ಲಿಯಿಂದ ಭಾರೀ ಮೋಸ? ಕಾವ್ಯಾಗಾಗಿ ಸ್ಪಂದನಾಗೆ ಅನ್ಯಾಯ?

ಸ್ಪಂದನಾ ಪ್ರತಿ ವಾರ ಸೇಫ್‌ ಆಗುತ್ತಿರುವ ಹಿನ್ನೆಲೆಯಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಕಳೆದ ವಾರ ಅವರನ್ನು ಎಲಿಮಿನೇಷನ್‌ನ ಕೊನೆವರೆಗೂ ಹೋಗಿಬಂದಿದ್ದರು. ಅಂತಿಮ ಕ್ಷಣದಲ್ಲಿ ಸ್ಪಂದನಾ ಸೇಫ್‌ ಆದರೆ ಮಾಳು ನಿಪನಾಳ್‌ ಹೊರಗೆ ಬಂದರು. ಈ ವಾರ ಕೂಡ ಸ್ಪಂದನಾಗೆ ಎಲಿಮಿನೇಷನ್‌ ಆತಂಕ ಇದ್ದೇ ಇದೆ.

Yashaswi Devadiga

View all posts by this author