ಬಿಗ್ ಬಾಸ್ ಸೀಸನ್ 12ರ (Bigg Boss Kannada 12) ಫ್ಯಾಮಿಲಿ ವೀಕ್ ಮುಕ್ತಾಯವಾಗಿದೆ. ಇನ್ನೇನಿದರೂ ಸೀಸನ್ ಅಂತ್ಯ ಹಾಡಲು ಕೆಲವೇ ದಿನಗಳು ಇವೆ. ಎಲಿಮಿನೇಶನ್ ಬಿಸಿ ಸ್ಪರ್ಧಿಗಳಿಗೆ ತಟ್ಟಿದೆ. ಈ ವಾರ ಮನೆಯಿಂದ ಒಬ್ಬರಲ್ಲ ಬದಲಿಗೆ ಇಬ್ಬರು ಹೊರಗೆ ಹೋಗಲಿದ್ದಾರೆ. ಬಿಗ್ಬಾಸ್ ಮನೆಗೆ ಈ ವಾರ ಕೆಲವು ಸೆಲೆಬ್ರಿಟಿಗಳು ಬಂದಿದ್ದಾರೆ, ನಿರ್ದೇಶಕ ಪ್ರೇಮ್ (Director Prem) ಸೇರಿದಂತೆ ಇನ್ನೂ ಕೆಲವರು ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಆದರೆ ಎಲ್ಲದರ ಅಂತ್ಯದಲ್ಲಿ ಡಬಲ್ ಎಲಿಮಿನೇಷನ್ (Double Elimination) ಎಂಬುದು ಮನೆ ಮಂದಿಗೆ ಶಾಕ್ ನೀಡಿದೆ. ಇದೀಗ ಸೂರಜ್ ಔಟ್ ಆಗಿದ್ದಾರೆ. ತಮ್ಮದೇ ಸ್ಟಾಟರ್ಜಿ ಇಟ್ಟುಕೊಂಡು ಆಟವಾಡುತ್ತ ಟಾಸ್ಕ್‌ಗಳನ್ನು ಮುಗಿಸುತ್ತಿದ್ದ ಸೂರಜ್ ಮನೆಯಿಂದ ಹೊರ ಬಂದಿದ್ದಾರೆ.
ಮನೆಗೆ ಪ್ರೇಮ್ ಹಾಗೂ ಸುಷ್ಮಾ ಅವರು ಅತಿಥಿಗಳಾಗಿ ಬಂದಿದ್ದಾರೆ. ನಿರ್ದೇಶಕ ಪ್ರೇಮ್ ತಮ್ಮ 'ಕೆಡಿ: ದಿ ಡೆವಿಲ್' ಚಿತ್ರತಂಡ ಮತ್ತು ಭಾಗ್ಯಲಕ್ಷ್ಮೀ ಸೀರಿಯಲ್ ತಂಡ ಆಗಮಿಸಿದೆ. ಡಬಲ್ ಎಲಿಮಿನೇಟ್ ಅಂತ ವಿಷಯ ತಿಳಿಯುತ್ತಲೇ ಸ್ಪರ್ಧಿಗಳು ಆಘಾತಗೊಂಡಿದ್ದಾರೆ.ಈ ವಾರ ಕಾವ್ಯಾ ಅವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದಾರೆ.ಅಲ್ಲದೆ ಸ್ಪಂದನಾ ಸೋಮಣ್ಣ ಸಹ ದೊಡ್ಮನೆಯಿಂದ ಗೇಟ್ ಪಾಸ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Bigg Boss Kannada 12: ಈ ವೀಕೆಂಡ್‌ಗೆ ಕಿಚ್ಚ ಸುದೀಪ್ ಬದಲಿಗೆ ಯಾರು ಬರ್ತಾ ಇದ್ದಾರೆ ಗೊತ್ತಾ?
ಸೂರಜ್ ಸಿಂಗ್ ಮೈಸೂರಿನ ಹುಡುಗ. ಐಟಿ ಉದ್ಯೋಗಿ ಆಗಿರುವ ಸೂರಜ್, ಫಿಟ್‌ನೆಸ್ ಫ್ರೀಕ್, ಮಾಡೆಲ್ ಕೂಡ ಆಗಿದ್ದಾರೆ. ಇವರು ಉನ್ನತ ಶಿಕ್ಷಣಕ್ಕಾಗಿ ಕೆನಡಾಗೆ ಹೋಗಿ ಬಂದಿದ್ದರು.
ಫ್ಯಾಮಿಲಿ ವೀಕ್ ರೌಂಡ್‌ನಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ನಾನು ವಿದೇಶದಿಂದ ವಾಪಸ್ ಬರಲು ಕಾರಣ, ನನ್ನ ಅಕ್ಕನಿಗೆ ಮದುವೆ ಆಯ್ತು, ನನ್ನ ತಾಯಿ ಒಬ್ರೇ ಇರ್ತಾರೆ. ಹಾಗಾಗಿ ಬಂದೆ. ಈ ಸಮಯದಲ್ಲಿ ನಾನು ಅವರ ಜೊತೆಗೆ ಇರಬೇಕು. ನನ್ನನ್ನು ತುಂಬಾ ಕಷ್ಟಪಟ್ಟು ಸಾಕಿದ್ದಾರೆ ನಮ್ಮಮ್ಮ ಎಂದು ಹೇಳಿದ್ದರು.
ಇವರು ಸೋಶಿಯಲ್ ಮೀಡಿಯಾದಲ್ಲೂ ಫೇಮಸ್ ಆಗಿದ್ದಾರೆ.ಇವರು ಕೆನಾಡದಲ್ಲಿ ಶಿಕ್ಷಣಕ್ಕೆಂದು ಹೋದಾಗ ಅಲ್ಲಿ ಶೆಫ್ ಆಗಿ ಕೂಡ ಕೆಲಸ ಮಾಡಿದ್ದರಂತೆ. ನಾನು ನೋಡೋಕೆ ಸಾಫ್ಟ್ ಅನ್ನಿಸಬಹುದು. ಆದರೆ ನಾನು ಮಿರರ್ ಥರ. ಚೆನ್ನಾಗಿ ಇರುವವರ ಜೊತೆ ಚೆನ್ನಾಗಿ ಇರ್ತಿನಿ ಎಂದು ಹೇಳಿದ್ದರು.
ರಾಶಿಕಾ-ಸೂರಜ್ ಜೋಡಿಯೇ ಹೈಲೈಟ್
ರಾಶಿಕಾ ಶೆಟ್ಟಿ ಹಾಗೂ ಸೂರಜ್ ಒಟ್ಟಿಗೆ ಇರೋದರ ಬಗ್ಗೆ ಇಡೀ ಮನೆ ಆಗಾಗ ಚರ್ಚೆ ಮಾಡುತ್ತಲೇ ಇತ್ತು. ಕಿಚ್ಚ ಸುದೀಪ್ ಕೂಡ ವಾರ್ನಿಂಗ್ ಕೊಟ್ಟರೂ ಕೂಡ, ಸೂರಜ್ ಎಚ್ಚೆತ್ತುಕೊಳ್ಳಲಿಲ್ಲ. ಜಗಳದ ವಿಚಾರಕ್ಕೋ ಟಾಸ್ಕ್ ವಿಚಾರಕ್ಕೋ ರಾಶಿಕಾ ಶೆಟ್ಟಿ ಟ್ರೋಲ್ ಆಗಿದ್ದೇ ಜಾಸ್ತಿ. ಆದರೆ ಸೂರಜ್ ಮೇಲಿದ್ದ ನಿರೀಕ್ಷೆ ಸುಳ್ಳಾಯ್ತು.
ರಾಶಿಕಾ ಕಾರಣಕ್ಕೆ ಸೂರಜ್ ತಮ್ಮ ಅಸಲಿ ಆಟ ಆಡುತ್ತಿಲ್ಲ ಎನ್ನುವ ಚರ್ಚೆ ಶುರುವಾಗಿತ್ತು. ಸುದೀಪ್ ಕೂಡ ವೀಕೆಂಡ್ ಪಂಚಾಯ್ತಿ ವೇಳೆ ಈ ಬಗ್ಗೆ ಕಿವಿಮಾತು ಹೇಳಿದ್ದರು. ಆದರೂ ಇಬ್ಬರ ಸ್ನೇಹಕ್ಕೆ ಭಂಗ ಬಂದಿರಲಿಲ್ಲ. ಆದರೀಗ ಸೂರಜ್ ಔಟ್ ಆಗಿದ್ದಾರೆ. ಫಿನಾಲೆ ಹತ್ತಿರವಾಗುತ್ತಿದೆ. ಆಟದ ತೀವ್ರತೆ ಹೆಚ್ಚಾಗಿದೆ.