ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಬಿಗ್‌ ಬಾಸ್‌ ಮನೆಗೆ ವಿಲನ್ ಬಂದಾಯ್ತು; ಭಯದಲ್ಲಿ ನಡುಗಿದ ಚೈತ್ರಾ!

Gilli Nata: ಬಿಗ್‌ ಬಾಸ್‌ ಮನೆಯಿಂದ ಅಭಿಷೇಕ್‌ ಔಟ್‌ ಆಗಿದ್ದಾರೆ. ಫಿನಾಲೆ ಸಮೀಪಿಸುತ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಟಾಸ್ಕ್‌ಗಳು ಕಠಿಣವಾಗುತ್ತಿದೆ. ಇದೀಗ ಬಿಗ್‌ ಬಾಸ್‌ ಮನೆ ಭೂತದ ಬಂಗಲೆ ಆಗಿದೆ. ಈ ಮನೆಯಲ್ಲಿ ಎಲ್ಲ ನಿರ್ಧಾರಗಳು ನಂದೇ, ಈ ಮನೆಯನ್ನು ಕಂಟ್ರೋಲ್‌ ಮಾಡ್ತಾ ಇರೋದು ಬಿಗ್‌ ಬಾಸ್‌ ಅಲ್ಲ, ವಿಲನ್‌ ಅಂತ ಬಿಗ್‌ ಬಾಸ್‌ ಅನೌನ್ಸ್‌ ಮಾಡಿದ್ದಾರೆ. ಕಳೆದ ಸೀಸನ್‌ನಲ್ಲಿ ಚೈತ್ರಾ ಕುಂದಾಪುರ ಅವರು ಭೂತದ ವಿಚಾರಕ್ಕೆ ಸಖತ್‌ ಹೆದರುಕೊಂಡಿದ್ದರು. ಈಗಲೂ ಚೈತ್ರಾ ನಡುಗಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ (Bigg Boss Kannada 12) ಮನೆಯಿಂದ ಅಭಿಷೇಕ್‌ ಔಟ್‌ (Abhishek Out) ಆಗಿದ್ದಾರೆ. ಫಿನಾಲೆ ಸಮೀಪಿಸುತ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಟಾಸ್ಕ್‌ಗಳು ಕಠಿಣವಾಗುತ್ತಿದೆ. ಇದೀಗ ಬಿಗ್‌ ಬಾಸ್‌ ಮನೆ ಭೂತದ ಬಂಗಲೆ ಆಗಿದೆ. ಈ ಮನೆಯಲ್ಲಿ ಎಲ್ಲ ನಿರ್ಧಾರಗಳು ನಂದೇ, ಈ ಮನೆಯನ್ನು ಕಂಟ್ರೋಲ್‌ ಮಾಡ್ತಾ ಇರೋದು ಬಿಗ್‌ ಬಾಸ್‌ ಅಲ್ಲ, ವಿಲನ್‌ ಅಂತ ಬಿಗ್‌ ಬಾಸ್‌ ಅನೌನ್ಸ್‌ ಮಾಡಿದ್ದಾರೆ. ಕಳೆದ ಸೀಸನ್‌ನಲ್ಲಿ ಚೈತ್ರಾ ಕುಂದಾಪುರ (Chaithra Kundapura) ಅವರು ಭೂತದ ವಿಚಾರಕ್ಕೆ ಸಖತ್‌ ಹೆದರುಕೊಂಡಿದ್ದರು. ಈಗಲೂ ಚೈತ್ರಾ ನಡುಗಿದ್ದಾರೆ. ಇಡೀ ಮನೆಯೇ ಈಗ ಭೂತದ ಮನೆಯಾಗಿದೆ. ಈ ಪ್ರೋಮೋ ವೈರಲ್‌ ಆಗುತ್ತಿದೆ.

ಇಡೀ ಬಿಗ್‌ ಬಾಸ್‌ ಮನೆಯೇ ಭೂತದ ಮನೆ!

ಗಿಲ್ಲಿ ಲುಕ್‌ವನ್ನು ಫ್ಯಾನ್ಸ್‌ ಶೇರ್‌ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ BBK10 ರ ಏಂಜಲ್ಸ್ vs ಡೆಮನ್ಸ್ ತಂಡದ ಟಾಸ್ಕ್ ಅನ್ನು ಹೋಲುತ್ತದೆ ಎಂದು ಕಮೆಂಟ್‌ ಮಾಡಿದ್ದಾರೆ. ಇದು ಹೆಚ್ಚು ಚರ್ಚಿಸಲ್ಪಟ್ಟ, ವಿವಾದಾತ್ಮಕ ವಾರಗಳಲ್ಲಿ ಒಂದಾಗಿದೆ. ಕಾರ್ತಿಕ್ ಆ ವಾರ ಪಾತ್ರದಲ್ಲಿ ಚೆನ್ನಾಗಿ ನಟಿಸಿದ್ದರು ಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಕಾವು ಪಾಲಿಗೆ ಗಿಲ್ಲಿ ನಟ ಹಾವಂತೆ! ರಘು ತಿರುಗಿ ಬಿದ್ದಿದ್ದೇಕೆ?



ಈ ಹಿಂದೆ ಸೀಸನ್‌ 10ರಲ್ಲಿ ರಾಕ್ಷಸರು-ಗಂಧರ್ವರು ಎಂದು ಗುಂಪುಗಳನ್ನಾಗಿ ವಿಂಗಡಿಸಿದ್ದು ಜಗಳಗಳಿಗೆ ಸರಿಯಾದ ವೇದಿಕೆಯನ್ನೇ ಒದಗಿಸಲಾಗಿತ್ತು. ಕಾರ್ತಿಕ್‌ ಅವರು ಸಖತ್‌ ಆಗಿಯೇ ಟಾಸ್ಕ್‌ ನಿಭಾಯಿಸಿದ್ದರು. ಇದೀಗ ಇಂದಿನಿಂದ ಸ್ಪರ್ಧಿಗಳ ಮಧ್ಯೆ ಮತ್ತಷ್ಟು ಗಲಾಟೆ, ವಿವಾದ ನಡೆದೇ ನಡಯುತ್ತೆ ಎನ್ನುವುದು ವೀಕ್ಷಕರ ಅಭಿಪ್ರಾಯ.

ಆರಂಭದಿಂದಲೂ ತಮ್ಮ ಒಳ್ಳೆಯತನದಿಂದ ಸೆಳೆದಿದ್ದ ಅಭಿಷೇಕ್ ಅವರು ಈ ವಾರ ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಅಭಿಷೇಕ್ ಅವರು ಈ ವಾರ ಚೆನ್ನಾಗಿ ಆಟವಾಡಿ ಎರಡನೇ ಬಾರಿ ಕ್ಯಾಪ್ಟನ್ ಸಹ ಆಗಿದ್ದರು.

ಈ ವಾರ ಸಾಕಷ್ಟು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಗಿಲ್ಲಿ, ಕಾವ್ಯಾ, ಅಶ್ವಿನಿ, ಧ್ರುವಂತ್, ಧನುಶ್, ಸೂರಜ್, ಮಾಳು, ರಾಶಿಕಾ, ಸ್ಪಂದನಾ ಅವರುಗಳು ಈ ವಾರ ನಾಮಿನೇಟ್ ಆಗಿದ್ದರು. ಎಲ್ಲರೂ ಸೇಫ್ ಆಗಿ ಕೊನೆಯದಾಗಿ ಸೂರಜ್, ಮಾಳು ಮತ್ತು ಅಭಿಷೇಕ್ ಮಾತ್ರವೇ ಉಳಿದುಕೊಂಡರು. ಅವರು ಮೂವರನ್ನೂ ಆಕ್ಟಿವಿಟಿ ರೂಂಗೆ ಕಳಿಸಲಾಯ್ತು.

ಇದನ್ನೂ ಓದಿ: Bigg Boss Kannada 12: ನನ್ನ ಶಿಷ್ಯ ಎಂದು ಒಬ್ಬೇ ಒಬ್ಬನನ್ನು ಸಹ ನಾನು ಬಿಗ್​​ಬಾಸ್​​ಗೆ ಕಳಿಸಿಲ್ಲ! ಹೀಗ್ಯಾಕೆ ಅಂದ್ರು ಕಿಚ್ಚ?

ಮೂವರ ಮುಂದೆ ಸೂಟ್​ಕೇಸ್ ಇಡಲಾಗಿತ್ತು. ಸೂಟ್​​ಕೇಸ್​​ನಲ್ಲಿ ಅವರ ಎವಿಕ್ಷನ್​​ಗೆ ಸಂಬಂಧಿಸಿದ ಬೋರ್ಡ್ ಇಡಲಾಗಿತ್ತು. ಅಭಿಷೇಕ್ ಅವರ ಸೂಟ್​ಕೇಸ್​​ನಲ್ಲಿ ‘ದಿ ಎಂಡ್’ ಎಂದು ಬರೆದಿತ್ತು. ಅಲ್ಲಿಗೆ ಅಭಿಷೇಕ್ ಅವರ ಆಟ ಅಂತ್ಯವಾಗಿದೆ.

Yashaswi Devadiga

View all posts by this author