ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ದೊಡ್ಮನೆಯಿಂದ ಹೊರಗೆ ಹೋಗ್ತೀನಿ ಅಂತ ಅಶ್ವಿನಿ ಕೂಗಾಡಲು ಇದೇ ಕಾರಣ ಅಂತೆ! ಗಿಲ್ಲಿ ಹೇಳಿದ್ದೇನು?

Ashwini Gowda: ಅಶ್ವಿನಿ ಹಾಗೂ ಜಾಹ್ನವಿ ಅವರು ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡಿದ್ದರು. ಈ ವಿಚಾರವನ್ನ ಕಿಚ್ಚ ಸುದೀಪ್‌ ಹೇಳಿದ್ದಾರೆ. ಆ ಬಗ್ಗೆ ಪ್ರಶ್ನೆ ಬಂದಾಗ, ಗಿಲ್ಲಿ ಅವರು , ʻಆ ರೂಮ್‌ನಲ್ಲಿ ನಾವು ಮಲಗಿದ್ದೆವು. ಸಖತ್‌ ನೆಗೆಟಿವ್‌ ಎನರ್ಜಿ ಎಂದಿದ್ದಾರೆ. ಮೊದಲಿಗೆ ಅಶ್ವಿನಿ ಅವರು ಜಾಹ್ನವಿ ಅವರಿಗೆ ದೃಷ್ಟಿ ತೆಗೆದಿದ್ದರು. ಕಾವ್ಯ ಕಣ್ಣು, ಅಭಿ ಕಣ್ಣು, ರಕ್ಷಿತಾ ಕಣ್ಣು,ಬಿಗ್‌ ಬಾಸ್‌ ಕಣ್ಣು, ಎಲ್ಲರ ಕಣ್ಣು ಹೋಗಲಿ ಎಂದು ದೃಷ್ಟಿ ತೆಗೆದಿದ್ದರು. ಜಾಹ್ನವಿ ಅವರು ಅಶ್ವಿನಿ ಅವರಿಗೆ ದೃಷ್ಟಿ ತೆಗೆಯುತ್ತಾ, ಗಿಲ್ಲಿ ಕಣ್ಣು, ರಘು ಕಣ್ಣು, ರಾಶಿಕಾ, ರಿಷಾ ಕಣ್ಣು , ಬಿಗ್‌ ಬಾಸ್‌ ಮನೆಯವರ ಎಲ್ಲ ಕಣ್ಣು ಹೋಗಲಿ ಅಂತ ದೃಷ್ಟಿ ತೆಗೆದಿದ್ದರು.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 12) ಅಶ್ವಿನಿ (Ashwini Gowda) ಹಾಗೂ ಜಾಹ್ನವಿ ಒಂದಲ್ಲ ಒಂದು ಕಿತಾಪತಿ ಮಾಡುತ್ತಲೇ ಇರ್ತಾರೆ. ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡಿದ್ದರು. ಇದನ್ನ ಕಿಚ್ಚ (Sudeep) ಅವರು ತಮಾಷೆ ಮಾಡಿದ್ದಾರೆ. ಆದರೆ ಗಿಲ್ಲಿ (Gilli Nata) ಕೊಟ್ಟ ಉತ್ತರ ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ.

ಅಶ್ವಿನಿ ಹಾಗೂ ಜಾಹ್ನವಿ ಅವರು ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡಿದ್ದರು. ಈ ವಿಚಾರವನ್ನ ಕಿಚ್ಚ ಸುದೀಪ್‌ ಹೇಳಿದ್ದಾರೆ. ಆ ಬಗ್ಗೆ ಪ್ರಶ್ನೆ ಬಂದಾಗ, ಗಿಲ್ಲಿ ಅವರು , ʻಆ ರೂಮ್‌ನಲ್ಲಿ ನಾವು ಮಲಗಿದ್ದೆವು. ಸಖತ್‌ ನೆಗೆಟಿವ್‌ ಎನರ್ಜಿ ಎಂದಿದ್ದಾರೆ. ಅಲ್ಲಿ ಯಾರು ಕ್ಲೋಸ್‌ ಆಗ್ತಾರೆ ಅವರೆಲ್ಲರೂ ಮನೆಯಿಂದ ಆಚೆ ಹೋಗ್ತಾರೆ ಎಂದಿದ್ದಾರೆ. ಅದು ಅಲ್ಲದೇ ಅಶ್ವಿನಿ ಅವರು ಮನೆಯಿಂದ ಆಚೆ ಹೋಗ್ತಿನಿ ಅಂತ ಕೂಗಾಡಲು ಶುರು ಮಾಡಿದ್ದರು. ದೃಷ್ಟಿ ತೆಗೆದಿದ್ದು ಎಷ್ಟು ಎಫೆಕ್ಟ್‌ ಆಗಿದೆʼ ನೋಡಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಸುದೀಪ್‌ ಅವರು ಜಾಹ್ನವಿ ಅವರ ಬಳಿ ಎಲ್ಲರಿಗೂ ದೃಷ್ಟಿ ತೆಗೆಸಿದ್ದಾರೆ.

ಇದನ್ನೂ ಓದಿ:Bigg Boss Kannada 12: ರಕ್ಷಿತಾ ಶೆಟ್ಟಿಗೆ ಈ ವಾರದ ಕಿಚ್ಚನ ಚಪ್ಪಾಳೆ!

ಕಲರ್ಸ್‌ ಕನ್ನಡ ಪ್ರೋಮೋ



ದೃಷ್ಟಿ ತೆಗೆದುಕೊಂಡಿದ್ದ ಅಶ್ವಿನಿ

ಮೊದಲಿಗೆ ಅಶ್ವಿನಿ ಅವರು ಜಾಹ್ನವಿ ಅವರಿಗೆ ದೃಷ್ಟಿ ತೆಗೆದಿದ್ದರು. ಕಾವ್ಯ ಕಣ್ಣು, ಅಭಿ ಕಣ್ಣು, ರಕ್ಷಿತಾ ಕಣ್ಣು,ಬಿಗ್‌ ಬಾಸ್‌ ಕಣ್ಣು, ಎಲ್ಲರ ಕಣ್ಣು ಹೋಗಲಿ ಎಂದು ದೃಷ್ಟಿ ತೆಗೆದಿದ್ದರು. ಜಾಹ್ನವಿ ಅವರು ಅಶ್ವಿನಿ ಅವರಿಗೆ ದೃಷ್ಟಿ ತೆಗೆಯುತ್ತಾ, ಗಿಲ್ಲಿ ಕಣ್ಣು, ರಘು ಕಣ್ಣು, ರಾಶಿಕಾ, ರಿಷಾ ಕಣ್ಣು , ಬಿಗ್‌ ಬಾಸ್‌ ಮನೆಯವರ ಎಲ್ಲ ಕಣ್ಣು ಹೋಗಲಿ ಅಂತ ದೃಷ್ಟಿ ತೆಗೆದಿದ್ದರು.

ಅಶ್ವಿನಿ ಬಳಸಿದ ಕೆಟ್ಟ ಪದಗಳ ಆಡಿಯೋ ಪ್ಲೇ

ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ 'ವುಮೆನ್ ಕಾರ್ಡ್' ಬಳಸುತ್ತಿರುವ ಬಗ್ಗೆ ಚರ್ಚೆ ಜೋರಾಗಿಯೇ ನಡೆದಿತ್ತು. ಹೆಣ್ಣು ಮಕ್ಕಳಿಗೆ ಗೌರವವಿಲ್ಲ ಎಂದು ಸದಾ ಆರೋಪಿಸುತ್ತಲೇ ಬಂದಿದ್ದರು.

ತಾವು ಯಾರಗೆ ಬೇಕಾದರೂ ಏಕವಚನ ಬಳಕೆ ಮಾಡಬಹುದು. ಇತರರನ್ನು ಅವಮಾನಿಸುವ ವರ್ತನೆ ತೋರಿದ್ದರು. ಈ ಬಗ್ಗೆ ಕಿಚ್ಚ ಖಡಕ್‌ ಆಗಿಯೇ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಈ ಮನೆಯಲ್ಲಿ ವುಮನ್‌ ಕಾರ್ಡ್‌ ಬೇಡ ಎಂದು ಅಶ್ವಿನಿಗೆ ಖಡಕ್‌ ಆಗಿ ಹೇಳಿದ್ದಾರೆ ಕಿಚ್ಚ ಸುದೀಪ್‌. ಸುದೀಪ್ ಅವರು ಅಶ್ವಿನಿ ಗೌಡ ಬಳಿ ಪ್ರಶ್ನೆ ಒಂದನ್ನು ಮಾಡಿದ್ದರು.

‘ರಘು ಅವರು ಕ್ಯಾಪ್ಟನ್ ಆಗಿದ್ದಾರೆ. ಅದಕ್ಕೆ ಗೌರವ ಕೊಡಬಹುದಿತ್ತಲ್ಲ’ ಎಂದು ಸುದೀಪ್ ಕೇಳಿದರು. ಉಪವಾಸ ವಿಚಾರಕ್ಕೆ ‘ಮಹಿಳೆಯರಿಗೆ ಅವಮಾನ ಆಗುತ್ತಿಲ್ಲ. ಆ ರೀತಿ ಆದರೆ, ಬಿಗ್ ಬಾಸ್ ಮಧ್ಯ ಬರುತ್ತಾರೆ. ಆ ಬಗ್ಗೆ ಪ್ರಶ್ನೆ ಮಾಡಬೇಡಿ. ಪದೇ ಪದೇ ಇದನ್ನು ಹೇಳಬೇಡಿ’ ಎಂದು ಸುದೀಪ್ ಅವರು ಅಶ್ವಿನಿಗೆ ಹೇಳಿದರು.

ಇದನ್ನೂ ಓದಿ: Bigg Boss Kannada 12: ಆತ್ಮೀಯರಾದ ಅಶ್ವಿನಿ ಅವರೇ ಸೇಫ್‌ ಆಗಬೇಕು ಎಂದ ಗಿಲ್ಲಿ! ಕಾರಣ ಏನು?

ಇನ್ನು, ಅಶ್ವಿನಿ ಬಳಸಿದ ಕೆಟ್ಟ ಪದಗಳ ಆಡಿಯೋಗಳನ್ನು ಹಾಕಿದರು. ಅಮಾವಾಸ್ಯೆ, ಜೋಕರ್, ಕಾರ್ಟೂನ್, ಫ್ರೀ ಪ್ರಾಡಕ್ಟ್, ಯಾವನೋ ನೀನು, ಹೋಗಲೋ, ಮುಚ್ಕೊಂಡು ಮಲ್ಕೊ, ಬೇಜಾನ್ ಐತಿ ಗಾಂಚಲಿ, ಯೋಗ್ಯತೆ, ದುರಂಹಂಕಾರ ಈ ರೀತಿಯ ಪದಗಳನ್ನು ಅಶ್ವಿನಿ ಅವರು ಬಳಸಿದ್ದರು.

Yashaswi Devadiga

View all posts by this author