ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ರಕ್ಷಿತಾ ಶೆಟ್ಟಿಗೆ ಈ ವಾರದ ಕಿಚ್ಚನ ಚಪ್ಪಾಳೆ!

Rakshitha Shetty: ಈ ವಾರ ಕಿಚ್ಚ, ರಕ್ಷಿತಾ ಆಡಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ರಕ್ಷಿತಾ ಕೂಡ ಈ ಬಗ್ಗೆ ಮಾತನಾಡಿ, ಈ ಹಿಂದೆ ಕೆಲವೊಮ್ಮೆ ಅನಗತ್ಯ ವಿಚಾರಗಳಿಗೆ ನಾನು ಪ್ರಾಮುಖ್ಯತೆ ಕೊಟ್ಟು ತಪ್ಪು ಮಾಡಿದ್ದೆ. ಆದರೆ ನೀವು ಹೇಳಿದ ಮೇಲೆ ಮನವರಿಕೆ ಆಯ್ತು ಎಂದಿದ್ದಾರೆ. ಕಿಚ್ಚ ಸುದೀಪ್‌ ಅವರು ರಕ್ಷಿತಾ ಅವರ ಆಟದ ಕುರಿತಾಗಿಯೂ ಹೊಗಳಿದ್ದಾರೆ.

ರಕ್ಷಿತಾ ಶೆಟ್ಟಿಗೆ ಈ ವಾರದ ಕಿಚ್ಚನ ಚಪ್ಪಾಳೆ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 22, 2025 11:15 PM

ಬಿಗ್‌ ಬಾಸ್‌ ಸೀಸನ್‌ 12ರ (Bigg Boss Kannada 12) ಈ ವಾರ ಕಿಚ್ಚನ ಚಪ್ಪಾಳೆ (kichcha sudeepa) ರಕ್ಷಿತಾ ಅವರಿಗೆ ಸಿಕ್ಕಿದೆ. ತಮ್ಮ ವ್ಯಕ್ತಿತ್ವದ ಮೂಲಕ ಮನೆಯ ಸದಸ್ಯರ ಮನಸ್ಸು ಗೆದ್ದ ರಕ್ಷಿತಾ (Rakshitha Setty) ಅವರನ್ನ ಹೊಗಳಿ ಕೊಂಡಾಡಿದ್ದಾರೆ ಕಿಚ್ಚ ಸುದೀಪ್‌. ಕೊನೆಯ ಎಪಿಸೋಡ್‌ನಲ್ಲಿ ಕೆಲವು ಬುದ್ಧಿ ಮಾತುಗಳನ್ನು ನಾನು ಹೇಳಿದೆ. ಅದನ್ನ ರಕ್ಷಿತಾ ಅವರು ಸುಧಾರಿಸಿಕೊಂಡು, ಪ್ರಬುದ್ಧತೆಯಿಂದ ಆಡಿದ್ದಾರೆ ಎಂದು ಕಿಚ್ಚ ಹೇಳಿದರು.

ಕಳೆದ 12 ಸೀಸನ್​​ಗಳಲ್ಲಿ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ಶೋ ನಿರೂಪಣೆ ಮಾಡಿದ್ದಾರೆ. ನೂರಾರು ಸ್ಪರ್ಧಿಗಳನ್ನು ಅವರು ನೋಡಿದ್ದಾರೆ. ಸ್ಪರ್ಧಿಗಳು ತಪ್ಪು ಮಾಡಿದಾಗ ಅವರು ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇತ್ತೀಚೆಗೆ ಅವರು ರಕ್ಷಿತಾ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡರು. ಆಗ ‘ಪಿತ್ತ ನೆತ್ತಿಗೆ ಏರುತ್ತದೆ’ ಎಂದು ಹೇಳಿದ್ದರು.

ಇದನ್ನೂ ಓದಿ: Bigg Boss Kannada 12: ಆಡಿದ ಮಾತಿಗೆ ಅಶ್ವಿನಿ ಬಳಿ ಕೈ ಮುಗಿದು ಕ್ಷಮೆ ಕೇಳಿದ ಗಿಲ್ಲಿ

ಆಟವನ್ನು ಅದ್ಭುತವಾಗಿ ಆಡಿದ ರಕ್ಷಿತಾ!

ಆದರೆ ಈ ಬಾರಿ ಕಿಚ್ಚ ಹೇಳಿದ್ದು ಹೀಗೆ, ʻತಮ್ಮ ಆಟವನ್ನು ಬದಲಾಯಿಸಿಕೊಂಡು, ಮತ್ತೆ ತಮ್ಮ ವ್ಯಕ್ತಿತ್ವಕ್ಕೆ ವಾಪಸ್‌ ಬಂದು, ಆಟವನ್ನು ಅದ್ಭುತವಾಗಿ ಆಡಿ, ತಿದ್ದುಕೊಂಡು ಮಾನವೀಯತೆಯನ್ನು ತೋರಿಸಿ, ಯಾರ ಹತ್ತಿರ ಬೈಸ್‌ಕೊಳ್ತಾ ಇದ್ದರೋ ಅವರ ಹತ್ತಿರಾನೇ ಉತ್ತಮ ಎಂದು ಪಡೆದುಕೊಂಡ ರಕ್ಷಿತಾ ಅವರಿಗೆ ಕಿಚ್ಚನ ಚಪ್ಪಾಳೆʼ ಎಂದರು ಕಿಚ್ಚ.

ಆದರೆ ಈ ವಾರ ಕಿಚ್ಚ, ರಕ್ಷಿತಾ ಆಡಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ರಕ್ಷಿತಾ ಕೂಡ ಈ ಬಗ್ಗೆ ಮಾತನಾಡಿ, ಈ ಹಿಂದೆ ಕೆಲವೊಮ್ಮೆ ಅನಗತ್ಯ ವಿಚಾರಗಳಿಗೆ ನಾನು ಪ್ರಾಮುಖ್ಯತೆ ಕೊಟ್ಟು ತಪ್ಪು ಮಾಡಿದ್ದೆ. ಆದರೆ ನೀವು ಹೇಳಿದ ಮೇಲೆ ಮನವರಿಕೆ ಆಯ್ತು ಎಂದಿದ್ದಾರೆ. ಕಿಚ್ಚ ಸುದೀಪ್‌ ಅವರು ರಕ್ಷಿತಾ ಅವರ ಆಟದ ಕುರಿತಾಗಿಯೂ ಹೊಗಳಿದ್ದಾರೆ.

ಅಷ್ಟೇ ಅಲ್ಲ ರಕ್ಷಿತಾ ಅವರು ಎಲ್ಲಿಯೂ ನಾನು ಹಾಗೆ ಮಾಡಿದೆ, ಹೀಗೆ ಮಾಡಿದೆ ಎಂದು ತೋರಿಸಿಕೊಂಡಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಮಾನವೀಯತೆ ತೋರಿಸಿದರು ಎಂದು ಕಿಚ್ಚ ಹೇಳಿದರು.



ರಘು ಜೊತೆಗಿನ ಜಗಳದಿಂದಾಗಿ ಅಶ್ವಿನಿ ಗೌಡ ಉಪವಾಸ ಸತ್ಯಾಗ್ರಹ ಮಾಡಿದ್ದರು. ಉಪವಾಸಕ್ಕೆ ಮುಂದಾಗಿರುವ ಕ್ಯಾಪ್ಟನ್ ರಘು ಅವರಿಂದ ಅಶ್ವಿನಿ ಗೌಡ ಕ್ಷಮೆ ಬಯಸುತ್ತಿರುವಂತೆ ಕಂಡಿತ್ತು. ಊಟ ಮಾಡದೇ ಕುಳಿತ ಅಶ್ವಿನಿ ಗೌಡ ಅವರ ಮನವೊಲಿಸಲು ಜಾನ್ವಿ ಸೇರಿದಂತೆ ಎಲ್ಲಾ ಸದಸ್ಯರು ಪ್ರಯತ್ನಿಸಿದ್ದರು.

ಇದನ್ನೂ ಓದಿ: Bigg Boss Kannada 12: ಎಮೋಷನಲ್ ಬ್ಲಾಕ್​​ಮೇಲ್ ಮಾಡ್ತೀದ್ದೀರಾ? ಊಟ ಬಿಟ್ಟಿದ್ದು ಯಾಕೆ? ಅಶ್ವಿನಿಗೆ ಕಿಚ್ಚನ ಕ್ಲಾಸ್‌

ಆ ಸಮಯದಲ್ಲಿ ರಕ್ಷಿತಾ ರಘು ಅವರ ತಪ್ಪನ್ನು ನೇರವಾಗಿ ಹೇಳುವ ಧೈರ್ಯವನ್ನು ಮಾಡಿದ್ದರು. ರಘು ತಮ್ಮನ್ನು ನೇರವಾಗಿ ನಾಮಿನೇಟ್ ಮಾಡಿದ್ದನ್ನು ಸಹ ರಕ್ಷಿತಾ ಅದನ್ನು ಪಾಸಿಟಿವ್ ಆಗಿ ಸ್ವೀಕರಿಸಿದ್ದರು. ಕೆಲವರು ನಮಗ್ಯಾಕೆ ಈ ವಿಷಯ ಅಂತ ಅಂತರ ಕಾಯ್ದುಕೊಂಡಿದ್ದರೆ. ಈ ಎಲ್ಲಾ ಸದಸ್ಯರ ನಡುವೆ ರಘು ಮುಂದೆ ಬಂದು ರಕ್ಷಿತಾ ಹೇಳಿದ ಮಾತುಗಳಿಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.