ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಇದೇ ನಿಜವಾದ ಸ್ನೇಹ! ಕಾವುಗೋಸ್ಕರ ಪತ್ರ ತ್ಯಾಗ ಮಾಡಿದ ಗಿಲ್ಲಿ

ಬಿಗ್‌ಬಾಸ್‌ನಲ್ಲಿ (Bigg Boss Kannada 12) ಈ ವಾರ ಟಾಸ್ಕ್‌ಗಳಿಲ್ಲ. ಹೀಗಾಗಿ ಮನೆಯಿಂದ ಪತ್ರದ ಮೂಲಕ ನಾಮಿನೇಷನ್‌ನಿಂದ ಪಾರಾಗಬೇಕು. ಬಿಗ್‌ ಬಾಸ್‌ ಕಾವ್ಯ ಮತ್ತು ಗಿಲ್ಲಿಗೆ ಒಂದು ಟ್ವಿಸ್ಟ್‌ ಕೊಟ್ಟಿದ್ದರು.ಬಿಗ್‌ಬಾಸ್‌ ಗಿಲ್ಲಿಯ ಎದುರು ಕಾವ್ಯ ಮನೆಯಿಂದ ಬಂದ ಪತ್ರವನ್ನೂ ಕಾವ್ಯಳ ಎದುರು ಗಿಲ್ಲಿ ಮನೆಯಿಂದ ಬಂದ ಪತ್ರವನ್ನೂ ಇಟ್ಟಿದ್ದಾರೆ.ಗಿಲ್ಲಿಗೆ ಕಾವ್ಯ ತನ್ನ ಮೇಲೆ ಇಟ್ಟಿರೋ ನಂಬಿಕೆಯನ್ನು ಉಳಿಸಿಕೊಳ್ಳಬೇಕೆಂಬ ತವಕವಾದರೆ, ಕಾವ್ಯ (Gillio Kavya ) ತಾನೇನು ಮಾಡಲಿ ಅನ್ನೋ ಕನ್‌ಫ್ಯೂಶನ್‌ನಲ್ಲಿದ್ದರು.

bigg boss kannada

ಬಿಗ್‌ ಬಾಸ್‌ ಸೀಸನ್‌ 12 (BBK 12) ಶುರುವಾದಾಗಿನಿಂದ ಹೈಲೈಟ್‌ ಆಗಿದ್ದು ಕಾವ್ಯ (Kavya Shaiva) ಹಾಗೂ ಗಿಲ್ಲಿ (Gilli) ಜೋಡಿ. ಇವರಿಬ್ಬರ ಫ್ರೆಂಡ್‌ಶಿಫ್‌ಗೆ (Friendship) ಫಿದಾ ಆಗದೇ ಇರದವರು ಯಾರೂ ಇಲ್ಲ. ತಮ್ಮ ಬಗ್ಗೆ ಏನೇನೋ ರೂಮರ್‌ಗಳು ಬಂದ್ರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಫ್ರೆಂಡ್‌ಶಿಪ್‌ ಮುಂದುವರಿಸಿದ್ದ ಈ ಜೋಡಿಗೆ ಬಹುದೊಡ್ಡ ಟ್ವಿಸ್ಟ್‌ ಕೊಟ್ಟಿದ್ದರು ಬಿಗ್‌ ಬಾಸ್‌. ಆದರೂ ಈ ಟಾಸ್ಕ್‌ನ್ನು (Task) ಗೆದ್ದು ಮತ್ತೆ ಫ್ರೆಂಡ್‌ಶಿಫ್‌ನ್ನ ಪ್ರೂ ಮಾಡಿದೆ ಈ ಜೋಡಿ.

ಏನದು ಟ್ವಿಸ್ಟ್‌?

ಬಿಗ್‌ಬಾಸ್‌ನಲ್ಲಿ ಈ ವಾರ ಟಾಸ್ಕ್‌ಗಳಿಲ್ಲ. ಹೀಗಾಗಿ ಮನೆಯಿಂದ ಪತ್ರದ ಮೂಲಕ ನಾಮಿನೇಷನ್‌ನಿಂದ ಪಾರಾಗಬೇಕು. ಬಿಗ್‌ ಬಾಸ್‌ ಕಾವ್ಯ ಮತ್ತು ಗಿಲ್ಲಿಗೆ ಒಂದು ಟ್ವಿಸ್ಟ್‌ ಕೊಟ್ಟಿದ್ದರು.ಬಿಗ್‌ಬಾಸ್‌ ಗಿಲ್ಲಿಯ ಎದುರು ಕಾವ್ಯ ಮನೆಯಿಂದ ಬಂದ ಪತ್ರವನ್ನೂ ಕಾವ್ಯಳ ಎದುರು ಗಿಲ್ಲಿ ಮನೆಯಿಂದ ಬಂದ ಪತ್ರವನ್ನೂ ಇಟ್ಟಿದ್ದಾರೆ.

ಅಷ್ಟೇ ಅಲ್ಲದೆ ಪತ್ರವನ್ನು ಎತ್ತಿಕೊಂಡು ಹೋಗಬಹುದು ಅಥವಾ ಅಲ್ಲೇ ಬಿಟ್ಟೂ ಹೋಗಬಹುದು. ಹಾಗೇ ಒಬ್ಬರು ಲೆಟರ್‌ ತಂದರೆ ಇನ್ನೊಬ್ಬರಿಗೆ ಇಮ್ಯುನಿಟಿ ಸಿಗುತ್ತೆ. ಇಬ್ಬರೂ ತಂದರೆ ಯಾರಿಗೂ ಸಿಗಲ್ಲ ಎಂದು ಆಪ್ಶನ್‌ ಬೇರೆ ಕೊಟ್ಟಿದ್ದರು. ಜೋಡಿ ಈ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿತ್ತು. ಅಂತೂ ಗಿಲ್ಲಿ ಲೆಟರ್‌ ತೆಗೆದುಕೊಳ್ಳುತ್ತಾನೆ. ಕಾವ್ಯ ಲೆಟರ್‌ ಅಲ್ಲಿಯೇ ಬಿಡುತ್ತಾರೆ. ಗಿಲ್ಲಿಯಿಂದಾಗಿ ಕಾವ್ಯ ಅವರು ಲೆಟರ್‌ ಪಡೆದುಕೊಳ್ಳುತ್ತಾರೆ. ನಾಮಿನೇಷನ್‌ನಿಂದ ಪಾರಾಗುತ್ತಾರೆ. ಆದರೆ ಗಿಲ್ಲಿ ನಾಮಿನೇಷನ್‌ ಲಿಸ್ಟ್‌ನಲ್ಲಿಯೇ ಉಳಿಯುತ್ತಾರೆ.

ಇದನ್ನೂ ಓದಿ: BBK 12: ಜಾಹ್ನವಿ-ಅಶ್ವಿನಿನ ಹತ್ತಿರ ಮಾಡ್ತಾ ಪತ್ರ? ಅಪ್ಪನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ

ನಂಬಿಕೆಯನ್ನು ಉಳಿಸಿಕೊಂಡ ಗಿಲ್ಲಿ

ಗಿಲ್ಲಿಗೆ ಕಾವ್ಯ ತನ್ನ ಮೇಲೆ ಇಟ್ಟಿರೋ ನಂಬಿಕೆಯನ್ನು ಉಳಿಸಿಕೊಳ್ಳಬೇಕೆಂಬ ತವಕವಾದರೆ, ಕಾವ್ಯ ತಾನೇನು ಮಾಡಲಿ ಅನ್ನೋ ಕನ್‌ಫ್ಯೂಶನ್‌ನಲ್ಲಿದ್ದರು. ಗಿಲ್ಲಿ ಕಾವ್ಯಳ ಮೇಲಿಟ್ಟಿರೋ ನಂಬಿಕೆ ಕಾವ್ಯ ಗಿಲ್ಲಿ ಮೇಲೆ ಇಟ್ಟಿರೋ ಸ್ನೇಹ ಕೊನೆಗೂ ಉಳಿದಿದೆ. ಇವರ ಸ್ನೇಹಕ್ಕೆ ಫ್ಯಾನ್ಸ್‌ ಬಹುಪರಾಕ್‌ ಎಂದಿದ್ದಾರೆ. ಹ್ಯಾಟ್ಸ್ ಆಫ್ ಗಿಲ್ಲ, ನೀನು ನಿಜಕ್ಕೂ ಗ್ರೇಟ್ ಕಣಪ್ಪ ಎಂದು ಟ್ರೋಲ್‌ ಪೇಜ್‌, ಫ್ಯಾನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆ.

ಕಮೆಂಟ್‌ ಮೂಲಕ ಫ್ಯಾನ್ಸ್‌, ಸೂಪರ್... ಇದನ್ನೇ ನಿಜವಾದ ಸ್ನೇಹ ಅಂತ ಹೇಳ್ತಾರೆ... ಕಾವ್ಯ ಗಿಲ್ಲಿ ಮೇಲೆ ಇಟ್ಟಿರುವ ನಂಬಿಕೆ ಮತ್ತು ಗಿಲ್ಲಿ ಇಟ್ಟಿರುವ ನಂಬಿಕೆ... ಅದ್ಭುತ... ಇಬ್ಬರೂ ಫೈನಲ್‌ಗೆ ಅರ್ಹರು.

ಇದನ್ನೂ ಓದಿ: BBK 12: ಹಾಕೋ ಬನಿಯನ್‌ ಕೂಡ ಕಂಡವರದ್ದೇ, ಎಲ್ಲರನ್ನ ಗಿಲ್ಲಿ ತುಳಿತಿದ್ರು; ಡಾಗ್‌ ಸತೀಶ್‌ ಆರೋಪ

ಜಾನ್ವಿ ಜೊತೆ ಅಶ್ವಿನಿ ಗೌಡ ನಾಟಕ ತುಂಬಾ ನಾಟಕೀಯವಾಗಿತ್ತು...

ಅಶ್ವಿನಿ ಪಕ್ಕಾ 420..ರಾಜ ಮಾತೆ...



ಎಂಥಾ ನಾಟಕ... ಬಿಬಿ ವೀಕ್ಷಕರನ್ನು ಅಂತಹ ಅಶ್ವಿನಿ ನಾಟಕ ನೋಡಲು ಪ್ಯಾಚ್ ಮಾಡಲು ಪ್ರಯತ್ನಿಸುತ್ತಿದ್ದಾರೆ... ಮತ್ತು ಅವರನ್ನು ಸ್ವೀಕರಿಸಲು... ರಾಜ ಮಾತೆ ಅವರ ಪಾತ್ರದ ದಿನದಿಂದ ನಾವು ನೋಡುತ್ತಿರುವ ವೀಕ್ಷಕರು ಯಾರೂ ಅವರನ್ನು ಬೆಂಬಲಿಸುವುದಿಲ್ಲ... ಬಿಬಿ ಮತ್ತು ಕಿಚ್ಚ ಮಾತ್ರ ಅವರನ್ನು ಕ್ಲಾಸ್‌ ತೆಗೆದುಕೊಳ್ಳಬೇಕು ಅಂತ ಕಮೆಂಟ್‌ ಮಾಡ್ತಾ ಇದ್ದಾರೆ.

ಕಾವ್ಯ ಕ್ಯಾಪ್ಟನ್‌

ಗಿಲ್ಲಿ ಲೆಟರ್ ತಂದೇ ತರುತ್ತಾನೆ ಎಂಬ ಭರವಸೆಯಲ್ಲಿ ಕಾವ್ಯಾ ಅವರು ಯಾವುದೇ ಲೆಟರ್ ತರಲು ಹೋಗಿಲ್ಲ. ನೋಡಿದರೆ ಅದು ನಿಜವೇ ಆಗಿದೆ. ಗಿಲ್ಲಿ ಲೆಟರ್ ತಂದಿದ್ದಕ್ಕೆ ಕಾವ್ಯಾ ಅವರು ಸಂತೋಷಪಟ್ಟರು. ಕಾವ್ಯಾ ಕೂಡ ಗಿಲ್ಲಿ ತ್ಯಾಗವನ್ನು ಕೊಂಡಾಡಿದರು. ಈ ವಾರ ಒಂದಷ್ಟು ಪ್ರೇಕ್ಷಕರನ್ನು ಕರೆಸಿ ವೋಟಿಂಗ್ ಮಾಡಿಸಲಾಗಿದೆ. ಈ ವೇಳೆ ಕಾವ್ಯಾಗೆ ಹೆಚ್ಚು ಮತ ಬಿದ್ದರೆ ಅವರು ಈ ವಾರದ ಕ್ಯಾಪ್ಟನ್ ಕೂಡ ಆಗಲಿದ್ದಾರೆ.

Yashaswi Devadiga

View all posts by this author