ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಲಾಂಗ್ ಡ್ರೈವ್ ಹೋಗಿ ಹಿಂತಿರುಗಿ ಬರುವಾಗಲೇ ಚಿಗುರಿತ್ತು ಪ್ರೀತಿ! ಲವ್ ಸ್ಟೋರಿ ಬಿಚ್ಚಿಟ್ಟ ಉಗ್ರಂ ಮಂಜು

Ugram Manju: ಕಳೆದ ಸೀಸನ್‌ನಲ್ಲಿ ಸುದೀಪ್‌ ಅವರು ಮಂಜು ಅವರ ತಂದೆ ತಾಯಿಯೊಂದಿಗೆ ಉಗ್ರಂ ಮಂಜು ಅವರ ಮದುವೆ ಬಗ್ಗೆ ಪ್ರಸ್ತಾಪ ಮಾಡಿರುವ ವಿಡಿಯೋ ಪ್ಲೇ ಮಾಡಿಸಿದ್ದಾರೆ. ಅಷ್ಟೇ ಅಲ್ಲ ಬಿಗ್‌ ಬಾಸ್‌ ಉಗ್ರಂ ಮಂಜು ಅವರಿಗೆ ಸರ್‌ಪ್ರೈಸ್‌ ನೀಡಿದ್ದಾರೆ. ಇತ್ತೀಚೆಗಷ್ಟೇ ಉಗ್ರಂ ಮಂಜು - ಸಂಧ್ಯಾ ಅವರ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿತು. ಅತೀ ಶೀಘ್ರದಲ್ಲೇ ಉಗ್ರಂ ಮಂಜು - ಸಂಧ್ಯಾ ಅವರ ವಿವಾಹ ಮಹೋತ್ಸವ ನಡೆಯಲಿದೆ.

ಬಿಗ್‌ ಬಾಸ್‌ ಕನ್ನಡ

`ಬಿಗ್ ಬಾಸ್’ ಮನೆ (Bigg Boss Kannada 12) ಈ ವಾರ ಟಾಸ್ಕ್ ಅನ್ವಯ ‘ಬಿಬಿ ಪ್ಯಾಲೇಸ್‌’ ಆಗಿ ಬದಲಾಗಿದೆ. ಪ್ಯಾಲೇಸ್‌ಗೆ ಅತಿಥಿಗಳಾಗಿ ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಉಗ್ರಂ ಮಂಜು (Ugram Manju), ರಜತ್, ತ್ರಿವಿಕ್ರಮ್, ಮೋಕ್ಷಿತಾ ಪೈ ಹಾಗೂ ಚೈತ್ರಾ ಕುಂದಾಪುರ ಬಂದಿದ್ದಾರೆ. ಇತ್ತೀಚೆಗಷ್ಟೇ ಉಗ್ರಂ ಮಂಜು - ಸಂಧ್ಯಾ ಅವರ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿತು. ಅತೀ ಶೀಘ್ರದಲ್ಲೇ ಉಗ್ರಂ ಮಂಜು - ಸಂಧ್ಯಾ ಅವರ ವಿವಾಹ ಮಹೋತ್ಸವ ನಡೆಯಲಿದೆ. ಬಿಗ್‌ ಬಾಸ್‌ ಉಗ್ರಂ ಮಂಜು ಬ್ಯಾಚುಲರ್ ಪಾರ್ಟಿಯನ್ನ (Bachelor Party) ಮಾಡಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಮಂಜು ಅವರ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ಸೀಸನ್‌ನಲ್ಲಿ ಮಂಜು ನಿಶ್ಚಿತಾರ್ಥ ಮಾಡಿಕೊಂಡು ಬಂದಿದ್ದಾರೆ.

ಉಗ್ರಂ ಮಂಜು ಅವರಿಗೆ ಸರ್‌ಪ್ರೈಸ್‌

ಕಳೆದ ಸೀಸನ್‌ನಲ್ಲಿ ಸುದೀಪ್‌ ಅವರು ಮಂಜು ಅವರ ತಂದೆ ತಾಯಿಯೊಂದಿಗೆ ಉಗ್ರಂ ಮಂಜು ಅವರ ಮದುವೆ ಬಗ್ಗೆ ಪ್ರಸ್ತಾಪ ಮಾಡಿರುವ ವಿಡಿಯೋ ಪ್ಲೇ ಮಾಡಿಸಿದ್ದಾರೆ. ಅಷ್ಟೇ ಅಲ್ಲ ಬಿಗ್‌ ಬಾಸ್‌ ಉಗ್ರಂ ಮಂಜು ಅವರಿಗೆ ಸರ್‌ಪ್ರೈಸ್‌ ನೀಡಿದ್ದಾರೆ. ಬಿಗ್ ಬಾಸ್ ಉಗ್ರಂ ಮಂಜುಗಾಗಿ ಒಂದು ಸೆಟಪ್ ಮಾಡಿತ್ತು.



ಇದನ್ನೂ ಓದಿ: Bigg Boss Kannada 12: ರಜತ್‌ ಎಂಟ್ರಿ ಕೊಟ್ಟ ಮೇಲೆ ರೆಸಾರ್ಟ್‌ ಲೋಕಲ್‌ ಬಾರ್‌ ಥರ ಆಗಿದೆ; ಕಿಚ್ಚನ ಹಳೆಯ ವಿಡಿಯೋ ವೈರಲ್‌

ಭಾವಿ ಪತ್ನಿ ಫೋಟೋಗಳನ್ನು ನೇತು ಬಿಡಲಾಗಿತ್ತು. ಅಷ್ಟೇ ಅಲ್ಲ ಮಂಜು ಅವರ ಲವ್‌ ಸ್ಟೋರಿ ಹೇಳುವ ಬಗ್ಗೆ ಕೇಳಿಕೊಂಡರು ಬಿಗ್‌ ಬಾಸ್‌.

ಉಗ್ರಂ ಮಂಜು ಅವರು ಮೊದಲಿಗೆ ಭಾವಿ ಪತ್ನಿ ಬಗ್ಗೆ ಹೊಗಳಿದ್ದಾರೆ. ಸಾಯಿ ಸಂಧ್ಯಾ ನಾನು ಮಾಡಿರುವ ಅದೃಷ್ಟನೋ, ನನ್ನ ತಂದೆ-ತಾಯಿ ಮಾಡಿರುವಂತಹ ಪುಣ್ಯನೋ, ಈ ನೇಚರ್ ಕಳಿಸಿಕೊಟ್ಟಿರುವ ಗಿಫ್ಟ್ ಇರಬಹುದಾ ನನಗೆ ಗೊತ್ತಿಲ್ಲ ಎಂದಿದ್ದಾರೆ.

ಲವ್‌ ಸ್ಟೋರಿ ಏನು?

ನನ್ನ ಲವ್‌ ಸ್ಟೋರಿ ಅಷ್ಟೇನೂ ಇಂಟ್ರಸ್ಟಿಂಗ್‌ ಇರಲಿಲ್ಲ. ಎರಡು ತಿಂಗಳ ಲವ್‌ ಸ್ಟೋರಿ ಅಷ್ಟೇ. ಎರಡು ತಿಂಗಳ ಪ್ರೀತಿ ಅಷ್ಟೇ. ಲಾಂಗ್ ಡ್ರೈವ್ ಒಂದು ಕಡೆ ಕರೆದುಕೊಂಡು ಹೋಗುತ್ತೇನೆ. ಮನೆಗೆ ಟೆಂಪಲ್‌ಗೆ ಹೋಗಿ ಬರುತ್ತೇನೆ ಎಂದು ಹೇಳಿ ಬಂದಿದ್ದರು. ಮಂಗಳೂರಿನ ವನ ದುರ್ಗ ಟೆಂಪಲ್‌ಗೆ ಲಾಂಗ್ ಡ್ರೈವ್. ಅಲ್ಲಿ ಆ ತಾಯಿಯ ಆಶೀರ್ವಾದ ಪಡೆದುಕೊಳ್ಳುತ್ತೇನೆ. ಅಲ್ಲಿನ ಗುರುಗಳ ಹತ್ತಿರ ಈತರ ವಿಚಾರವಿದೆ ಎಂದು ಹೇಳಿಕೊಳ್ಳುತ್ತೇನೆ. ಒಳ್ಳೆಯದಾಗುತ್ತೆ ಹೋಗು. ಒಳ್ಳೆಯ ಹುಡುಗಿ ಅಂತ ಹೇಳುತ್ತಾರೆ ಅಷ್ಟೇ. ತುಂಬಾ ಒಳ್ಳೆಯ ಹುಡುಗಿ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಂಡ ಇದ್ದರೆ ಇರ್ತಾರೆ, ಇಲ್ಲ ಅಂದ್ರೆ ಹೋಗ್ತಾರೆ! ವಿಡಿಯೋ ಮಾಡೋದು ನಿಲ್ಲಿಸಲ್ಲ ಎಂದ ರಕ್ಷಿತಾ

ಅಷ್ಟೇ ಅಲ್ಲ ಉಗ್ರಂ ಮಂಜು ಅವರು ಅವರಿಗೆ ಬಿಗ್‌ ಬಾಸ್‌ ಹೋಗುವಾಗ ಸಂಧ್ಯಾ ಅವರು ಅಶ್ವಿನಿಯವರಿಗೆ ಗೌರವ ಕೊಟ್ಟು, ರಾಶಿಕಾ, ಕಾವ್ಯಾ, ಸ್ಪಂದನಾ ಇವರೆಲ್ಲ ಇದ್ದಾರಲ್ಲ ನೋಡು ಪರ್ವಾಗಿಲ್ಲ. ಫ್ಲರ್ಟ್ ಮಾಡುತ್ತೀಯಾ ಮಾಡು. ಆದರೆ, ರಿಂಗ್ ಇದೆಯಲ್ಲ ಅದನ್ನು ಮರೆಯಬೇಡ ಎಂದಿದ್ದಾರಂತೆ. ಅಷ್ಟೆ ಅಲ್ಲ ಬಿಗ್‌ ಸರ್‌ಪ್ರೈಸ್‌ ಕೊಟ್ಟ ಬಿಗ್‌ ಬಾಸ್‌ಗೆ ಧನ್ಯವಾದ ಹೇಳಿದ್ದಾರೆ ಉಗ್ರಂ ಮಂಜು.

Yashaswi Devadiga

View all posts by this author