Bigg Boss Kannada 12: ಗಿಲ್ಲಿ ಗಡ್ಡಕ್ಕೇ ಕೈಯಿಟ್ಟ 'ಉಗ್ರಂ' ಮಂಜು; ಇಷ್ಟೊಂದು ಪರ್ಸನಲ್ ಅಟ್ಯಾಕ್ ಸರೀನಾ 'ಬಿಗ್ ಬಾಸ್'? ವೀಕ್ಷಕರಿಂದ ಭಾರೀ ಟೀಕೆ!
Gilli Nata: ನಿನ್ನೆಯ ಎಪಿಸೋಡ್‌ನಲ್ಲಿ ಗಿಲ್ಲಿಯನ್ನ ಒಂದು ಶೂ ಬಿಚ್ಚಿ ನಡೆಯಲು ಹೇಳಿದ್ರು ರಜತ್. ಅಷ್ಟೇ ಅಲ್ಲ ಮಂಜು ಕೂಡ ಬೇಕಂತಲೇ ಗಿಲ್ಲಿಯಿಂದ ಕೆಲಸ ಮಾಡಿಸಿದ್ದರು. ಅದು ಸಾಲದೇ ಈಗ ಗಡ್ಡ ಬೋಳಿಸಿದ್ದಾರೆ. ಉಗ್ರಂ ಮಂಜು ಮತ್ತು ರಜತ್, ಗಿಲ್ಲಿಯನ್ನ ತಮ್ಮ ಮುಖ್ಯ ಟಾರ್ಗೆಟ್ ಮಾಡಿಕೊಂಡಿದ್ದಾರೆ ಎಂದು ಗಿಲ್ಲಿ ಫ್ಯಾನ್ಸ್ ಕೆಂಡ ಆಗಿದ್ದಾರೆ. ಇದೀಗ ಉಗ್ರಂ ಮಂಜು ಇನ್ನಷ್ಟು ಗಿಲ್ಲಿ ಮೇಲೆ ಟಾರ್ಗೆಟ್ ಮಾಡಿದಂತಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಸೀಸನ್11ರ (Bigg Boss Kannada 11) ಮಾಜಿ ಸ್ಪರ್ಧಿಗಳು ಗೆಸ್ಟ್ (Guest) ಆಗಿ ಬಂದಿದ್ದಾರೆ. ಗಿಲ್ಲಿ ಮೇಲೆ ಅತಿಥಿಗಳ ದರ್ಪ ಹೆಚ್ಚಾಗಿದೆ. ಉಗ್ರಂ ಮಂಜು (Ugram Manju) ಮತ್ತು ರಜತ್, ಗಿಲ್ಲಿಯನ್ನ ತಮ್ಮ ಮುಖ್ಯ ಟಾರ್ಗೆಟ್ ಮಾಡಿಕೊಂಡಿದ್ದಾರೆ ಎಂದು ಗಿಲ್ಲಿ ಫ್ಯಾನ್ಸ್ ಕೆಂಡ ಆಗಿದ್ದಾರೆ. ಇದೀಗ ಉಗ್ರಂ ಮಂಜು (Ugram Manju) ಇನ್ನಷ್ಟು ಗಿಲ್ಲಿ ಮೇಲೆ ಟಾರ್ಗೆಟ್ ಮಾಡಿದಂತಿದೆ. ಮಂಜು ಅವರು ಗಿಲ್ಲಿ ಅವರ ಗಡ್ಡವನ್ನ ಬೋಳಿಸಿ, ಸ್ತ್ರೀ ವೇಷ ಧರಿಸಲು ಹೇಳಿದ್ದಾರೆ ಎನ್ನಲಾಗಿದೆ.
ನಿನ್ನೆಯ ಎಪಿಸೋಡ್‌ನಲ್ಲಿ ಗಿಲ್ಲಿಯನ್ನ ಒಂದು ಶೂ ಬಿಚ್ಚಿ ನಡೆಯಲು ಹೇಳಿದ್ರು ರಜತ್. ಅಷ್ಟೇ ಅಲ್ಲ ಮಂಜು ಕೂಡ ಬೇಕಂತಲೇ ಗಿಲ್ಲಿಯಿಂದ ಕೆಲಸ ಮಾಡಿಸಿದ್ದರು. ಅದು ಸಾಲದೇ ಈಗ ಗಡ್ಡ ಬೋಳಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಟೀಕೆಗೆ ಗುರಿಯಾಗಿದ್ದಾರೆ ಮಂಜು.
ಇದನ್ನೂ ಓದಿ: Bigg Boss Kannada 12: ಹಿಂಸೆ ಆದರೆ ಕರಿ ಜೊತೆಗೆ ಬರ್ತೀನಿ! ಗಿಲ್ಲಿಗೆ ಸಾಥ್ ಕೊಟ್ಟ ಅಶ್ವಿನಿ
ಗಿಲ್ಲಿಯನ್ನ ಕೆಣಕೋದು ಮಾತ್ರ ಬಿಟ್ಟಿಲ್ಲ
ನಿನ್ನೆ ರೋಸ್ಟ್ ಮಾಡುವ ಟಾಸ್ಕ್ ಬಿಗ್ ಬಾಸ್ ನೀಡಿದ್ದರು. ಆದರೆ ಇದೇ ಬಿಗ್ ಬಾಸ್ ಅದನ್ನ ತಡೆದು ಗಿಲ್ಲಿಯದ್ದೇ ತಪ್ಪು ಅನ್ನೋ ರೀತಿ ಹೇಳಿದ್ದಾರೆ.ಅದಾದ ನಂತರ ಗಿಲ್ಲಿ ಸೈಲೆಂಟ್ ಆದರು. ಗಿಲ್ಲಿ ಸುಮ್ಮನಿದ್ರೂ ಬಿಗ್ ಬಾಸ್ ಅತಿಥಿಗಳು ಗಿಲ್ಲಿಯನ್ನ ಕೆಣಕೋದು ಮಾತ್ರ ಬಿಟ್ಟಿಲ್ಲ. ಒಂದಲ್ಲ ಒಂದು ರೀತಿ ಗಿಲ್ಲಿಯನ್ನ ಕೆಣಕಿ ತಮಾಷೆ ನೋಡಿ ಮಜಾ ತಗೊಳ್ತಿದ್ದಾರೆ.
ವೈರಲ್ ವಿಡಿಯೋ
A real talent never hesitates to change his looks. People like him for his spontaneity and punchlines and he knows it.
— ಅಲ್ಪಸಂಖ್ಯಾತ (@alpasankhyata) November 27, 2025
Beauty ಇರೋನು ಕನ್ನಡಿ ಮಾತ್ರ ನೋಡ್ತಾನೆ
Talent ಇರೋನು ಇಡೀ ಜಗತ್ತನೇ ನೋಡ್ತಾನೆ#BBK12#Gilli
pic.twitter.com/zrakTTXwdy
ಗಿಲ್ಲಿ ನಟನ ಗಡ್ಡವನ್ನ ಸ್ವತಃ ಉಗ್ರಂ ಮಂಜು ಟ್ರಿಮ್ ಮಾಡಿ, ಸ್ರ್ತೀ ವೇಷ ತೊಟ್ಟು ಎಂಟರ್‌ಟೈನ್ ಮಾಡುವಂತೆ ಗಿಲ್ಲಿಗೆ ಹೇಳಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೆಂಪೇಗೌಡ ಸ್ಟೈಲ್ನಲ್ಲಿ ಮಿಂಚಿದ್ದ ಗಿಲ್ಲಿ
ಈ ಹಿಂದೆ ಕಾವ್ಯ ಮಾತು ಕೇಳಿ ಕೆಂಪೇಗೌಡ ಸ್ಟೈಲ್ನಲ್ಲಿ ಮೀಸೆ ಬಿಟ್ಟು ಗಡ್ಡ ತೆಗೆದಿದ್ರು. ಮಜವಾಗಿ ಕಂಡಿದ್ದರು ಗಿಲ್ಲಿ. ಆದರೀಗ ಮಂಜು ಅವರು ಟಾರ್ಗೆಟ್ ಮಾಡಿಯೇ ಗಿಲ್ಲಿ ಗಡ್ಡ ತೆಗೆದಿದ್ದಾರೆ. ಗಿಲ್ಲಿಯ ಮುಖ ಸಪ್ಪೆ ಆಗಿದೆ. ಈ ಬಗ್ಗೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಬ್ಯೂಟಿ ಇರೋನು ಕನ್ನಡಿ ಮಾತ್ರ ನೋಡ್ತಾನೆ. ಟ್ಯಾಲೆಂಟ್ ಇರೋನು ಇಡೀ ಜಗತ್ತನೇ ನೋಡ್ತಾನೆ ಎಂದು ಕಮೆಂಟ್ ಮಾಡಿದ್ದಾರೆ. ಗಿಲ್ಲಿ ನಾವು ನಿಮ್ಮೊಂದಿಗೆ ಇದ್ದೀವಿ ಎಂದು ಕಮೆಂಟ್ ಮಾಡಿದ್ದಾರೆ.
ಸೈಲೆಂಟ್ ಆದ ಗಿಲ್ಲಿ ನಟ
ಗೆಸ್ಟ್‌ಗಳು ಮನೆಯೊಳಗೆ ಕಾಲಿಟ್ಟ ದಿನದಿಂದಲೂ ಅವರಿಗೆ ಸರಿಸಮಾನಾಗಿ ನಿಂತವರು ಗಿಲ್ಲಿ ನಟ. ರಜತ್ ಮತ್ತು ಮಂಜುಗೆ ಆಗಾಗ ಕೌಂಟರ್ ಕೊಡುತ್ತಾ ಆಟದ ಮಜಾವನ್ನು ಗಿಲ್ಲಿ ನಟ ಜಾಸ್ತಿ ಮಾಡಿದ್ದರು. ಸಹಜವಾಗಿಯೇ ಇದು ಮಂಜು ಮತ್ತು ರಜತ್‌ಗೆ ಕಿರಿ ಕಿರಿ ಉಂಟು ಮಾಡಿತ್ತು. ಗಿಲ್ಲಿಯನ್ನು ಕಟ್ಟಿಹಾಕಬೇಕು ಎಂದು ನಾನಾ ರೀತಿಯಲ್ಲಿ ಟಾರ್ಗೆಟ್ ಮಾಡುತ್ತಿದ್ದರು.
ಇದನ್ನೂ ಓದಿ: Bigg Boss Kannada 12: ಗಂಡ ಇದ್ದರೆ ಇರ್ತಾರೆ, ಇಲ್ಲ ಅಂದ್ರೆ ಹೋಗ್ತಾರೆ! ವಿಡಿಯೋ ಮಾಡೋದು ನಿಲ್ಲಿಸಲ್ಲ ಎಂದ ರಕ್ಷಿತಾ
ಗಿಲ್ಲಿಯನ್ನು ಸಕತ್ ಟಾರ್ಗೆಟ್ ಮಾಡಿರುವ ಮಂಜು ಮತ್ತು ರಜತ್, ಆರಂಭದಿಂದಲೂ ಅದನ್ನು ಮುಂದುವರಿಸಿದ್ದಾರೆ. ಗಿಲ್ಲಿಯನ್ನು ಕುಕ್ಕರುಗಾಲಿನಲ್ಲಿ ಕೂರಿಸಿ, ಬಾಯಿಗೆ ಆಲೂಗಡ್ಡೆ ತುರುಕಿದ್ದು, ಬೇಕೆಂದೇ ನೀರನ್ನು ಚೆಲ್ಲಿ, ಅದನ್ನು ಒರೆಸುವಂತೆ ಸೂಚಿಸಿದ್ದು ಕೂಡ ಈ ಚರ್ಚೆ ಆಗುತ್ತಿದೆ.