ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಗಿಲ್ಲಿ ವಿರುದ್ಧ ನೆಗೆಟಿವ್‌ ಪ್ರಚಾರ ನಡೆಯುತ್ತಿದೆಯಾ? ಸ್ಪರ್ಧಿಗಳ ಪಿಆರ್‌ ಸ್ಟ್ರಾಟೆಜಿ ಬಗ್ಗೆ ವಿನಯ್‌ ಗೌಡ ಖಡಕ್‌ ಮಾತು

Vinay Gowda on BBK 12: ಬಿಗ್ ಬಾಸ್ ಕನ್ನಡ ಸೀಸನ್ 10ರ ಮಾಜಿ ಸ್ಪರ್ಧಿ ವಿನಯ್ ಗೌಡ ಅವರು ಸೀಸನ್ 12ರ ಸ್ಪರ್ಧಿಗಳ ಬಗ್ಗೆ ನಡೆಯುತ್ತಿರುವ 'ಪಿಆರ್ ಸ್ಟ್ರಾಟೆಜಿ'ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ನಟ ಗಿಲ್ಲಿ ಅವರನ್ನು ಗುರಿಯಾಗಿಸಿಕೊಂಡು ಕೆಲವು ಪಿಆರ್ ಏಜೆನ್ಸಿಗಳು ನೆಗೆಟಿವ್ ಪ್ರಚಾರ ಮಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಖಡಕ್‌ ಸ್ಪರ್ಧಿಯಾಗಿದ್ದ ವಿನಯ್‌ ಗೌಡ ಅವರು ಸದ್ಯ ಸೀಸನ್‌ 12ರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಅವರು, ಬಿಗ್‌ ಬಾಸ್‌ ಸ್ಪರ್ಧಿಗಳು ನೇಮಿಸಿಕೊಳ್ಳುವ ಪಿಆರ್‌ಗಳು ಮತ್ತು ಅವರ ಸ್ಟ್ರಾಟೆಜಿಗಳ ಬಗ್ಗೆ ಮಾತನಾಡಿದ್ದಾರೆ. ಒಬ್ಬರನ್ನು ಹೈಲೈಟ್ ಮಾಡುವುದಕ್ಕಾಗಿ, ಮತ್ತೊಬ್ಬರ ಬಗ್ಗೆ ನೆಗೆಟಿವ್‌ ಮಾಡೋದು ಎಷ್ಟು ಸರಿ ಎಂಬುದನ್ನು ವಿನಯ್‌ ಗೌಡ ಅವರು ಪ್ರಶ್ನೆ ಮಾಡಿದ್ದಾರೆ. ಸದ್ಯ ಬಿಗ್‌ ಬಾಸ್‌ ಮನೆಯಲ್ಲಿ ಅತ್ಯುತ್ತಮವಾಗಿ ಆಟ ಆಡುತ್ತಿರುವ ಗಿಲ್ಲಿ ನಟ ವಿರುದ್ಧ ಪಿಆರ್‌ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ವಿನಯ್‌ ತಿಳಿಸಿದ್ದಾರೆ.

ಗಿಲ್ಲಿಯನ್ನು ಜನರು ಇಷ್ಟಪಡ್ತಾ ಇದ್ದಾರೆ

"ಕೆಲವು ಪಿಆರ್‌ಗಳು ಮಾತ್ರ ಬೇರೆಯವರನ್ನು ಕೆಳಗೆ ಹಾಕಿ, ನೆಗೆಟಿವ್‌ ಮಾಡ್ತಾ ಇದ್ದಾರೆ. ಎಲ್ರೂ ಹೀಗೆ ಮಾಡಲ್ಲ. ಉದಾಹರಣೆಗೆ ಗಿಲ್ಲಿ ಅವರ ಬಗ್ಗೆ ಹೇಳೋದಾದರೆ, ಅವರನ್ನು ನೆಗೆಟಿವ್‌ ಮಾಡೋದಕ್ಕೆ ಒಂದಷ್ಟು ಪಿಆರ್‌ಓಗಳು ಕೆಲಸ ಮಾಡುತ್ತಿದ್ದಾರೆ. ನನಗೆ ಪಿಆರ್‌ ಮಾಡಿ ಎಂದು ದುಡ್ಡು ಕೊಡುವಂತಹ ವ್ಯಕ್ತಿ ಗಿಲ್ಲಿ ಅಲ್ಲ. ಅವನು ಪಿಆರ್‌ ಇಟ್ಟುಕೊಂಡಿದ್ದಾನಾ ಇಲ್ವಾ ಅನ್ನೋದು ನನಗೆ ಗೊತ್ತಿಲ್ಲ. ಬಟ್‌ ಅವನು ಏನ್‌ ಮಾಡ್ತಾ ಇದ್ದಾನೆ, ಕಾಮಿಡಿ, ಜೋಕ್ಸ್‌, ಬಾಡಿ ಲ್ಯಾಂಗ್ವೇಜ್.‌.. ಅದು ವೈರಲ್‌ ಆಗ್ತಿದೆ. ಜನರು ಅದನ್ನು ಇಷ್ಟಪಡ್ತಾ ಇದ್ದಾರೆ" ಎಂದು ವಿನಯ್‌ ಗೌಡ ತಿಳಿಸಿದ್ದಾರೆ.

Bigg Boss Kannada 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಗೆ ಆಟ! ಕ್ಯಾಪ್ಟನ್‌ ಮಾಳುಗೆ ಪ್ರಾಣ ಸಂಕಟ

ಗಿಲ್ಲಿಗೆ ನೆಗೆಟಿವ್‌ ಆಗೋ ಥರ ಮಾಡ್ತಿದ್ದಾರೆ

"ಎಲ್ಲಿ ನೋಡಿದರೂ ಗಿಲ್ಲಿ ಗಿಲ್ಲಿ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಅದನ್ನೇ ಓವರ್‌ ಹೈಪ್ ಮಾಡಿ, ಅದು ಗಿಲ್ಲಿಗೆ ನೆಗೆಟಿವ್‌ ಆಗೋ ಥರ ಮಾಡ್ತಾ ಇದ್ದಾರೆ. ಅದು ಗಿಲ್ಲಿಗೆನೇ ಗೊತ್ತಿರುವುದಿಲ್ಲ. ಇದು ನಡೆಯಬಾರದು. ಎಲ್ಲರಿಗೂ ಕುಟುಂಬ ಇರುತ್ತದೆ. ಪ್ರತಿಯೊಬ್ಬರಿಗೂ ಕುಟುಂಬ ಇರುತ್ತದೆ. ಹೆಂಡತಿ, ಮಕ್ಕಳು ಇರುತ್ತಾರೆ. ಗಂಡ, ತಂದೆ, ತಾಯಿ ಇರ್ತಾರೆ. ಅವರೆಲ್ಲಾ ಹೊರಗೆ ಇರುತ್ತಾರೆ. ಇದನ್ನೆಲ್ಲಾ ನೋಡಿದಾಗ, ಅವರಿಗೆ ಆಗುವ ನೋವು, ತೊಂದರೆಗಳ ಬಗ್ಗೆ ಪಿಆರ್‌ ಏಜೆಂಟ್ಸ್‌ ಗಮನಿಸಬೇಕು. ನಾವು ಏನು ಡ್ಯಾಮೇಜ್‌ ಮಾಡ್ತಿದ್ದೇವೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು" ಎಂದು ವಿನಯ್‌ ಗೌಡ ಹೇಳಿದ್ದಾರೆ.

Bigg Boss Kannada 12: ಬಿಗ್‌ ಬಾಸ್‌ ಜಂಟಿ ಕ್ಯಾಪ್ಟನ್‌ ಆದ ಜೋಡಿ ಇದೇ! ಗಿಲ್ಲಿ-ಕಾವ್ಯಗೆ ಹೀನಾಯ ಸೋಲು

ಸ್ಪರ್ಧಿಗಳಿಗೆ ಗೇಮ್‌ ಆಡೋದಕ್ಕೆ ಬಿಡಿ

"ಈ ಥರ ಟ್ರೆಂಡ್‌ ಮಾಡೋದ್ರಿಂದ ಕುಟುಂಬದವರು ತುಂಬಾ ಮೆಂಟಲಿ ಸ್ಟ್ರೆಸ್‌ ಆಗ್ತಾರೆ. ಅದೊಂದು ಸರಿಯಾಯ್ತು ಅಂದ್ರೆ ಎಲ್ಲದೂ ಸರಿ ಹೋಗತ್ತದೆ. ಇದೊಂದು ಗೇಮ್‌ ಅಷ್ಟೇ. ಒಳಗಡೆ ಇರುವ ಸ್ಪರ್ಧಿಗಳು ಗೇಮ್‌ ಆಡೋದಕ್ಕೆ ಬಿಡಿ, ಹೊರಗೆ ಇರುವ ಪಿಆರ್‌ಗಳು ಗೇಮ್‌ ಆಡೋದಕ್ಕೆ ಹೋಗಬೇಡಿ" ಎಂದು ವಿನಯ್‌ ಗೌಡ ಹೇಳಿದ್ದಾರೆ.