ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಗೆ ಆಟ! ಕ್ಯಾಪ್ಟನ್‌ ಮಾಳುಗೆ ಪ್ರಾಣ ಸಂಕಟ

ಹೊಸ ಪ್ರೋಮೋ (Bigg boss Kannada 12 New Promo) ನೋಡಿದರೆ, ಗಿಲ್ಲಿ ಟಾಸ್ಕ್ (Gilli) ಅನ್ನು ಸೋತಿದ್ದಾರೆ. ಮಾತ್ರವಲ್ಲದೆ ತಮ್ಮ ತಂಡವನ್ನೂ ಸೋಲಿಸಿದ್ದಾರೆ. ಪದೇ ಪದೇ ಸೋಲ್ತಾ ಇದ್ದೇನೆ ಅಂದ್ರೆ ನನ್ನಲ್ಲೇ ಏನೋ ಸಮಸ್ಯೆ ಇದೆ ಇರಬೇಕು ಅಂತ ಮನೆಮಂದಿ ಮುಂದೆ ಹೇಳಿದ್ದಾರೆ. ಇನ್ನೊಂದು ಕಡೆ ಕ್ಯಾಪ್ಟನ್‌ (Captain Malu) ಮಾಳು ಅವರಿಗೆ , ಸಖತ್‌ ತಲೆ ನೋವಾಗಿದ್ದಾರೆ ರಿಷಾ (Risha). ಮಾಳು ಅವರ ಮಾತುಗಳನ್ನ ರಿಷಾ ಕೇಳುತ್ತಲೇ ಇಲ್ಲ.

ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಗೆ ಆಟ! ಕ್ಯಾಪ್ಟನ್‌ ಮಾಳುಗೆ ಪ್ರಾಣ ಸಂಕಟ

ಬಿಗ್‌ ಬಾಸ್‌ ಕನ್ನಡ ಗಿಲ್ಲಿ -

Yashaswi Devadiga
Yashaswi Devadiga Nov 12, 2025 6:40 PM

ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲಿ ಗಿಲ್ಲಿ ಸಖತ್‌ ತಮಾಷೆಯಾಗಿದ್ದರೂ ಟಾಸ್ಕ್‌ ಅಂತ ಬಂದರೆ ತುಂಬಾ ಸೀರಿಯೆಸ್‌ ಆಗಿ ಆಡುತ್ತಾರೆ. ನಿನ್ನೆ ಆಟ ಆಡದವರು ಸುಮ್ಮನೇ ಇರಿ ಅಂತ ಸ್ವತಃ ತಾನೇ ಆಟಕ್ಕೆ ಇಳಿದಿದ್ದಾರೆ ಗಿಲ್ಲಿ. ಆದರೆ ಗಿಲ್ಲಿ ಆಡುವಾಗ ಎಡವಿದಂತಿದೆ. ಪದೇ ಪದೇ ಸೋಲ್ತಾ ಇದ್ದೇನೆ ಅಂದ್ರೆ ನನ್ನಲ್ಲೇ ಏನೋ ಸಮಸ್ಯೆ ಇದೆ ಇರಬೇಕು ಅಂತ ಮನೆಮಂದಿ ಮುಂದೆ ಹೇಳಿದ್ದಾರೆ.

ಹೊಸ ಪ್ರೋಮೋ ನೋಡಿದರೆ, ಗಿಲ್ಲಿ ಟಾಸ್ಕ್ ಅನ್ನು ಸೋತಿದ್ದಾರೆ. ಮಾತ್ರವಲ್ಲದೆ ತಮ್ಮ ತಂಡವನ್ನೂ ಸೋಲಿಸಿದ್ದಾರೆ. ಇದೀಗ ತಂಡದ ಸದಸ್ಯರು ಗಿಲ್ಲಿ ಕುರಿತು ನಿರ್ಣಯವೊಂದನ್ನು ತೆಗೆದುಕೊಳ್ಳುತ್ತಿದ್ದಾರೆ. ಗಿಲ್ಲಿ ಹೀಗೆ ಹೇಳಿದ ಬಳಿಕ ಕಿಚನ್‌ ಕಡೆ ಅಭಿ ಅವರು ಸುಧಿ ಅವರ ಬಳಿ, ಗಿಲ್ಲಿ ಹೇಗೆ ಆಡಿದ್ರೂ ನಾಮಿನೇಟ್‌ ಆಗಲ್ಲಅನ್ನೋ ಕಾನ್ಫಿಡೆನ್ಸ್‌ ಇದೆ ಎಂದರು. ಇದೀಗ ಗಿಲ್ಲಿ ಬಗ್ಗೆ ಸ್ಪರ್ಧಿಗಳು ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಕ್ಯಾಪ್ಟನ್ ಮಾಳು ಮಾತಿಗೆ ಬೆಲೆನೇ ಇಲ್ವಾ?

ಇನ್ನೊಂದು ಕಡೆ ಕ್ಯಾಪ್ಟನ್‌ ಮಾಳು ಅವರಿಗೆ , ಸಖತ್‌ ತಲೆ ನೋವಾಗಿದ್ದಾರೆ ರಿಷಾ. ಮಾಳು ಅವರ ಮಾತುಗಳನ್ನ ರಿಷಾ ಕೇಳುತ್ತಲೇ ಇಲ್ಲ. ಮಾಳು ಅವರು ರಿಷಾ ಅವರಿಗೆ ವಾಷ್‌ರೂಮ್‌ ಕ್ಲೀನ್‌ ಮಾಡಲು ಹೇಳಿದ್ದರು. ಆದರೆ ರಿಷಾ ಅವರು ಮಾಡದೇ ಸುಮ್ಮನೇ ಕುಳಿತಿದ್ದರು. ಇದನ್ನ ಮಾಳು ಅವರು ರಿಷಾ ಅವರಿಗೆ ಪ್ರಶ್ನಿಸಿದ್ದಾರೆ. ಆದರೆ ರಿಷಾ ಮಾತ್ರ ಎಷ್ಟೋ ಹೇಳಿದ್ರೂ ನಾನು ಮಾತ್ರ ಕ್ಲೀನ್‌ ಮಾಡಲ್ಲ ಅಂತ ವಾದಿಸಿದ್ದಾರೆ. ಸುಮ್ಮನೆ ಹೋಗಿ ಮಲ್ಕೊಳ್ಳಿ ಅಂತ ಮಾಳುಗೆ ಗರಂ ಆಗಿ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ರಾಶಿಕಾ ಬಿಗ್‌ ಬಾಸ್‌ ಮನೆಯ ಕಸ ಆದರೆ ಸಗಣಿ ಧ್ರುವಂತೆ ಅಂತೆ; ಮಾಳು ಕೊಟ್ಟ ಕಾರಣ ಇದು

ರಕ್ಷಿತಾ ಜೊತೆ ಕಿತ್ತಾಟಕ್ಕೆ ನಿಂತ ಟೀಂ

ಈ ವಾರ ಮಾಳು ಅವರೇ ನಾಮಿನೇಷನ್‌ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಒಬ್ಬೊಬ್ಬರಿಗೆ ಒಂದೊಂದು ಕಾರಣ ನೀಡಿ ಮಾಳು ನಿಪನಾಳ ಅವರು 6 ಜನರನ್ನು ನಾಮಿನೇಟ್ ಮಾಡಬೇಕಿತ್ತು. ಹೀಗಾಗಿ ಅಶ್ವಿನಿ ಗೌಡ, ಜಾಹ್ನವಿ, ಕಾಕ್ರೋಚ್ ಸುಧಿ, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ, ಧ್ರುವಂತ್ ನಾಮಿನೇಷನ್‌ನಿಂದ ಸೇಫ್‌ ಮಾಡಬೇಕು ಎಂಬುದು ಬಿಗ್‌ ಬಾಸ್‌ ನಿಯಮವಾಗಿತ್ತು. ಈ ವೇಳೆ ರಾಶಿಕಾ ಹಾಗೂ ರಕ್ಷಿತಾ ನಡುವೆ ಮಾತಿನ ಚಕಮಕಿ ನಡೆದಿದೆ.

ಏನಿದು ಟಾಸ್ಕ್‌?

ನಿನ್ನೆಯ ಟಾಸ್ಕ್‌ನಲ್ಲಿ ಬಿಗ್‌ ಬಾಸ್‌ ಎರಡು ಗುಂಪುಗಳನ್ನಾಗಿ ಮಾಡಿದ್ದರು. ನಾಮಿನೇಟ್‌ ಆಗಿರುವ ಸ್ಪರ್ಧಿಗಳು, ಅಲ್ಲದೇ ಇರುವ ಸ್ಪರ್ಧಿಗಳ ಗುಂಪು. ಆದರೆ ಟಾಸ್ಕ್‌ ಮೂಲಕ ನಾಮಿನೇಟ್‌ ಆಗಿರುವವರು ಸೇಫ್‌ ಆಗಬಹುದು. ನಾಮಿನೇಟ್‌ ಆಗದೇ ಇರೋರು ನಾಮಿನೇಟ್‌ ಆಗಬಹುದು. ಅಶ್ವಿನಿ ಗೌಡ ಟೀಂ ನಿನ್ನೆಯ ಟಾಸ್ಕ್‌ನಲ್ಲಿ ಗೆದ್ದಿದೆ. ಹೀಗಾಗಿ ಆ ಗುಂಪಿನಲ್ಲಿ ಒಬ್ಬರನ್ನು ನಾಮಿನೇಷನ್‌ನಿಂದ ಸೇಫ್‌ ಮಾಡಬೇಕು. ಈ ವೇಳೆ ರಾಶಿಕಾ ಹಾಗೂ ರಕ್ಷಿತಾ ನಡುವೆ ಮಾತಿನ ಚಕಮಕಿ ನಡೆದಿದೆ.

ರಕ್ಷಿತಾ ಗರಂ

ಅಶ್ವಿನಿ ತಂಡದಲ್ಲಿ ಬಹುತೇಕರು ರಾಶಿಕಾ ಅವರನ್ನು ಸೇಫ್‌ ಮಾಡಲು ವೋಟ್‌ ಹಾಕಿದ್ದಾರೆ. ಆದರೆ ರಕ್ಷಿತಾ ಅವರು ಸುಧಿ ಅವರ ಹೆಸರನ್ನು ತೆಗೆದುಕೊಂಡರು. ಇದು ರಾಶಿಕಾ ಅವರಿಗೆ ಕೋಪ ಬರಿಸುವಂತೆ ಮಾಡಿದೆ. ರಾಶಿಕಾ ಈ ವೇಳೆ ಪ್ರತಿ ವಾರ ನಾನು ನಾಮಿನೇಟ್‌ ಆಗಿದ್ದೇನೆ ಎಂದರು. ಅದಕ್ಕೆ ಒಪ್ಪದ ರಕ್ಷಿತಾ, ನಾವು ಕೂಡ ನಾಮಿನೇಷನ್‌ ಫೇಸ್‌ ಮಾಡಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ನಾಮಿನೇಷ್​ನಿಂದ ಸೇಫ್‌ ಆಗಲು ರಾಶಿಕಾ ಪರದಾಟ; ರಕ್ಷಿತಾ ಜೊತೆ ಕಿತ್ತಾಟಕ್ಕೆ ನಿಂತ ಟೀಂ

ರಾಶಿಕಾ ಕೂಡ ಇಡೀ ತಂಡವೇ ಒಂದು ನಿರ್ಧಾರ ತೆಗೆದುಕೊಂಡಿರುವಾಗ, ರಕ್ಷಿತಾ ನಿರ್ಧಾರವನ್ನು ನಾನು ಒಪ್ಪುವುದಿಲ್ಲ ಎಂದರು. ರಾಶಿಕಾ ಸಿಟ್ಟಿನಿಂದ ಕೂಗಾಡಿದ್ದಾರೆ.