ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಬಿಗ್‌ ಬಾಸ್‌ ನಿರೂಪಣೆಯಲ್ಲಿ ತಪ್ಪು ಕಂಡುಹಿಡಿಯೋರ ಬಗ್ಗೆ ಕಿಚ್ಚ ಹೇಳಿದ್ದೇನು?

Sudeep: ಹಿಂದಿ ಬಳಿಕ ಕನ್ನಡ, ತೆಲುಗು, ಮಲಯಾಳಂ, ತಮಿಳು ಸೇರಿ ಹಲವು ಭಾಷೆಗಳಲ್ಲಿ ಬಿಗ್‌ಬಾಸ್ ಕಾರ್ಯಕ್ರಮ ಶುರುವಾಯಿತು. ಆದರೆ ಕನ್ನಡದಲ್ಲಿ ಎಲ್ಲಾ ಸೀಸನ್‌ಗಳನ್ನು ಏಕಾಂಗಿಯಾಗಿ ನಿರೂಪಣೆ ಮಾಡುತ್ತಾ ಬರುತ್ತಿದ್ದಾರೆ ಸುದೀಪ್‌ . ಆದರೆ ಇತ್ತೀಚಿನ ಸೀಸನ್​​ಗಳಲ್ಲಿ ಕೆಲವರು ಸುದೀಪ್ ಅವರ ನಿರೂಪಣೆಯಲ್ಲಿ ತಪ್ಪು ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀಪ್‌ ಮಾತನಾಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಹಿಂದಿ ಬಳಿಕ ಕನ್ನಡ, ತೆಲುಗು, ಮಲಯಾಳಂ, ತಮಿಳು ಸೇರಿ ಹಲವು ಭಾಷೆಗಳಲ್ಲಿ ಬಿಗ್‌ಬಾಸ್ ಕಾರ್ಯಕ್ರಮ ಶುರುವಾಯಿತು. ಆದರೆ ಕನ್ನಡದಲ್ಲಿ (Bigg Boss Kannada 12) ಎಲ್ಲಾ ಸೀಸನ್‌ಗಳನ್ನು ಏಕಾಂಗಿಯಾಗಿ ನಿರೂಪಣೆ ಮಾಡುತ್ತಾ ಬರುತ್ತಿದ್ದಾರೆ ಸುದೀಪ್‌ (Sudeep). ಆದರೆ ಇತ್ತೀಚಿನ ಸೀಸನ್​​ಗಳಲ್ಲಿ ಕೆಲವರು ಸುದೀಪ್ ಅವರ ನಿರೂಪಣೆಯಲ್ಲಿ ತಪ್ಪು ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀಪ್‌ ಮಾತನಾಡಿದ್ದಾರೆ.

ಅನೇಕರಿಗೆ ಸ್ಫೂರ್ತಿ

ಬಿಗ್‌ ಬಾಸ್‌ ಶೋ ಅನೇಕರಿಗೆ ಸ್ಫೂರ್ತಿ ಆಗಿದೆ. ತುಂಬಾ ಜನ ನೋಡಲು ಶುರು ಮಾಡಿದ್ದಾರೆ. ಅನೇಕ ಪೇಜ್‌ಗಳು ಓಪನ್‌ ಆಗುತ್ತವೆ. ನಾನು ಕೆಲವೊಂದು ವಿಡಿಯೋಗಳನ್ನು ನೋಡುತ್ತೇನೆ. ಹಾಗೆಯೇ ಒಂದು ರಾಜ್ಯಕ್ಕೆ ಮುಖ್ಯಮಂತ್ರಿ ಮೇಲೆ ದೂರು ಇರುವುದು. ಪ್ರಧಾನ ಮಂತ್ರಿ ಮೇಲೆಯೂ ಜನರಿಗೆ ದೂರು ಇರುತ್ತದೆ. ಆದರೆ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಯಾಕೆ ಆ ರೀತಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ಅವರಿಗೆ ಮಾತ್ರ ಗೊತ್ತಿರುತ್ತದೆ ಎಂದರು.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ವರ್ತನೆಯಿಂದ ಕಾವ್ಯಾಗೆ ಕಿರಿಕಿರಿ ; ಮುಲಾಜಿಲ್ಲದೇ ಮಾನ, ಮರ್ಯಾದೆ ಇಲ್ಲ ಎಂದ ಕಾವು!

ತುಂಬಾ ಜನ ಆ್ಯಂಕರ್ ಆಗಿದ್ದಾರೆ

ಈ ಶೋವನ್ನು ಇಡೀ ಕರ್ನಾಟಕ ನೋಡಿತ್ತಿರುತ್ತೆ. ನಾನು ಲೈವ್‌ನಲ್ಲೇ ಸ್ಪರ್ಧಿಗಳ ಜೊತೆಗೆ ಮಾತಾಡೋದು. ನನಗೆ ಯಾರೂ ಏನೂ ಹೇಳಿಕೊಡಲ್ಲ. ಕೆಲವೊಮ್ಮೆ ಸ್ಪರ್ಧಿಗಳಿಗೆ ತಕ್ಷಣ ಸ್ಪಂದಿಸಬೇಕು. ಕೆಲವರಿಗೆ ಬೈಯುವ ಅಶ್ಯಕತೆ ಇರುತ್ತದೆ.

ಇನ್ನೂ ಕೆಲವರಿಗೆ ಬೈಯಲ್ಲ. ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುವುದು ಅವರವರ ಅಭಿಪ್ರಾಯ. ಅಷ್ಟು ಪೇಜ್ ಓಪನ್ ಆಗಿದೆ ಎಂದರೆ ಬಿಗ್ ಬಾಸ್ ಬಗ್ಗೆ ಅವರಿಗೆ ಆ ಪ್ರೀತಿ ಇದೆ. ಇಷ್ಟು ದಿನ ನಾನು ಒಬ್ಬನೇ ಆ್ಯಂಕರ್ ಆಗಿದ್ದೆ. ಈಗ ತುಂಬಾ ಜನ ಆ್ಯಂಕರ್ ಆಗಿದ್ದಾರೆ ಎಂದರು.



ಈ ಹಿಂದಿನ ಸಂದರ್ಶನದಲ್ಲಿ ಕೆಲವ್ರು ಹೇಳ್ತಾರೆ ಸುದೀಪ್ ತುಂಬಾ ಗರಂ ಆಗಿಬಿಟ್ರು, ಬೈದ್ಬಿಟ್ರು ಅಂತಾರೆ. ಕೆಲ ಎಪಿಸೋಡ್‌ಗಳಲ್ಲಿ ಬೈಯಲು ಕಾರಣ ಏನಂದ್ರೆ ಅವ್ರು ಚೆನ್ನಾಗಿ ಆಡಿಲ್ಲ ಅಂತಲ್ಲ, ಚೆನ್ನಾಗಿ ಆಡ್ತಿದ್ದೀರಿ ಅಂತ ಅರ್ಥ. ಇವತ್ತು ನಿಮಗೆ ಬೈದು ತಿದ್ದತ್ತಾಇದ್ದೀನಿ. ಅಲ್ಲಿ ವರೆಗೂ ಹೋಗಿ ಹಾಳಾಗಬೇಡಿ ಅಂತ ಹೇಳೋದು. ನಿಮ್ಮ ಮಧ್ಯೆದಲ್ಲಿ ಬರೋರು, ಗೊತ್ತಾದಾಗ ನಾವು ಏನು ಹೇಳೋಕೆ ಹೋಗಲ್ಲ. ಎನರ್ಜಿ ಹಾಕಲ್ಲ. ಬೇಜಾರು ಮಾಡಿಕೊಂಡಿರೂ ಪರವಾಗಿಲ್ಲ. ಇಷ್ಟು ವರ್ಷ ನಡೆಸಬೇಕಾದರೂ ಕಾರಣ ಇರುತ್ತೆ ಎಂದಿದ್ದರು.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ನಟ ದೊಡ್ಡ ಕುತಂತ್ರಿ ಎಂದು ನಾಮಿನೇಟ್‌ ಮಾಡಿದ ರಾಶಿಕಾ!

ಸೆಪ್ಟೆಂಬರ್ 28ರಂದು ಬಿಗ್‌ ಬಾಸ್‌ ಕನ್ನಡ ಶುರು ಆಯ್ತು. ಪ್ರತಿ ದಿನ ರಾತ್ರಿ 9.30ಕ್ಕೆ ಶೋ ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಆಗುದರ ಜೊತೆ ಜಿಯೋ ಹಾಟ್‌ ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತೆ.

ಕೆಲವು ವಿವಾದಗಳು ಆಗಿವೆ.ಅಷ್ಟೇ ಅಲ್ಲ ಈ ಬಾರಿ ಶೋನಲ್ಲಿ 24 ಜನರನ್ನು ತರಲಾಗಿದೆ. ಇದರ ಪೈಕಿ ಕೆಲವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು.ಕೆಲವು ವರದಿಗಳ ಪ್ರಕಾರ ಜನವರಿ 17 ಹಾಗೂ 18ರಂದು ಫಿನಾಲೆ ನಡೆಯಲಿದೆ ಎನ್ನಲಾಗುತ್ತಿದೆ.

Yashaswi Devadiga

View all posts by this author