ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಈ ಬಾರಿಯ ಬಿಗ್‌ ಬಾಸ್‌ ಪ್ರಪಂಚ ಹೇಗೆ ಇದೆ ಗೊತ್ತಾ? ಇಲ್ಲಿದೆ ಸಣ್ಣ ಝಲಕ್‌

Bigg Boss Kannada 13: ಸೆಪ್ಟೆಂಬರ್ 6ರಿಂದ ಸಂಜೆ 7 ಗಂಟೆಗೆ ಶೋ ಪ್ರಸಾರವಾಗಲಿದ್ದು, ಕಿಚ್ಚ ಸುದೀಪ್ ನಿರೂಪಿಸಲಿದ್ದಾರೆ. ಫ್ಲೈಟ್ ಹಾಗೂ ವರ್ಲ್ಡ್ ಟೂರ್ ಥೀಮ್ ಹೊಂದಿರುವ ಈ ಬಾರಿಯ ದೊಡ್ಮನೆಗೆ 18 ಸ್ಪರ್ಧಿಗಳು ಕಾಲಿಡುವ ನಿರೀಕ್ಷೆಯಿದೆ. ಇದೀಗ ಈ ಬಾರಿಯ ಬಿಗ್‌ ಬಾಸ್‌ ಮನೆಯ ಸಣ್ಣ ಝಲಕ್‌ ಔಟ್‌ ಆಗಿದೆ.

ಈ ಬಾರಿಯ ಬಿಗ್‌ ಬಾಸ್‌ ಪ್ರಪಂಚ ಹೇಗೆ ಇದೆ ಗೊತ್ತಾ? ಇಲ್ಲಿದೆ ಸಣ್ಣ ಝಲಕ್‌

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 5, 2026 7:14 PM

ಬಿಗ್​​ಬಾಸ್ ಕನ್ನಡ ಸೀಸನ್ 13 (Bigg Boss Kannada 13) ಶುರುವಾಗುತ್ತಿದೆ. ಹಲವಾರು ಮಂದಿ ಸ್ಪರ್ಧಿಗಳು ಈ ಬಾರಿಯೂ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಸೆಪ್ಟೆಂಬರ್ 6ರಿಂದ ಸಂಜೆ 7 ಗಂಟೆಗೆ ಶೋ ಪ್ರಸಾರವಾಗಲಿದ್ದು, ಕಿಚ್ಚ ಸುದೀಪ್ ನಿರೂಪಿಸಲಿದ್ದಾರೆ. ಫ್ಲೈಟ್ ಹಾಗೂ ವರ್ಲ್ಡ್ ಟೂರ್ ಥೀಮ್ ಹೊಂದಿರುವ ಈ ಬಾರಿಯ ದೊಡ್ಮನೆಗೆ 18 ಸ್ಪರ್ಧಿಗಳು ಕಾಲಿಡುವ ನಿರೀಕ್ಷೆಯಿದೆ. ಇದೀಗ ಈ ಬಾರಿಯ ಬಿಗ್‌ ಬಾಸ್‌ ಮನೆಯ ಸಣ್ಣ ಝಲಕ್‌ ಔಟ್‌ ಆಗಿದೆ.

16-18 ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸುವ ಸಾಧ್ಯತೆ ಇದೆ. ಈ ಬಾರಿಯ ಶೋ ಮತ್ತಷ್ಟು ರಂಗೇರಲಿದೆ. ಈಗ ಹೊಸ ಪ್ರೋಮೋ ಔಟ್‌ ಆಗಿದೆ. ಬಿಗ್‌ ಬಾಸ್‌ ಒಂದು ಪ್ರಪಂಚ. ಅದರ ಒಳಗಡೆ ಇಷ್ಟೊಂದು ಪ್ರಪಂಚ ಎಂದಿದ್ದಾರೆ ಕಿಚ್ಚ. ಇನ್ನು ಪ್ರೋಮೋದಲ್ಲಿ ಮನೆಯ ಸಣ್ಣ ಝಲಕ್‌ ಅನಾವರಣಗೊಂಡಿದೆ. ಮನೆಯನ್ನು ನೋಡಿ ವೀಕ್ಷಕರು ಫಿದಾ ಆಗಿದ್ದಾರೆ. ನಾಳೆಯ ಸಂಚಿಕೆಗೆ ಕಾಯ್ತಾ ಇದ್ದಾರೆ ವೀಕ್ಷಕರು.

ಇದನ್ನೂ ಓದಿ: Shine Shetty: ಶೈನ್ ಶೆಟ್ಟಿ ನಟನೆಯ'ಶಂಕರಾಭರಣ' ಸಿನಿಮಾದ ಟೀಸರ್ ರಿಲೀಸ್

4 ಸ್ಪರ್ಧಿಗಳು ಬರೋ ನಿರೀಕ್ಷೆ

ಈ ಬಾರಿ ಬಿಗ್ ಬಾಸ್ ಆರಂಭ ಆಗ್ತಿರೋದು 7 ಗಂಟೆಗೆ. ಭಾನುವಾರ (ಸೆಪ್ಟೆಂಬರ್ 6) ಸಂಜೆ 7 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಪ್ರಸಾರ ಶುರುವಾಗಲಿದೆ. ಈ ಶೋನ ಕಿಚ್ಚ ಸುದೀಪ್ ಅವರು ನಡೆಸಿಕೊಡಲಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್​ಸ್ಟಾರ್​​ನಲ್ಲಿ ಶೋ ಪ್ರಸಾರ ಕಾಣಲಿದೆ. ಅಗ್ನಿಪರೀಕ್ಷೆಯಿಂದ 4 ಸ್ಪರ್ಧಿಗಳು ಬರೋ ನಿರೀಕ್ಷೆ ಇದೆ. 3 ಸ್ಪರ್ಧಿಗಳು ಜನರು ವೋಟ್ ಮಾಡಿ ಕಳುಹಿಸಿದರೆ, ಇನ್ನೋರ್ವ ಸ್ಪರ್ಧಿಯನ್ನು ಜಡ್ಜ್​​ಗಳು ಆಯ್ಕೆ ಮಾಡಿ ಕಳುಹಿಸುವ ಸಾಧ್ಯತೆ ಇದೆ. ಈ ಬಾರಿ ಫ್ಲೈಟ್ ಥೀಮ್​ನೊಂದಿಗೆ ಬಿಗ್ ಬಾಸ್ ಬರುತ್ತಿದೆ.

ಈ ಬಾರಿಯ ಶೋಗೆ ಏವಿಯೇಷನ್ (ವಿಮಾನಯಾನ) ಥೀಮ್ ನೀಡಲಾಗಿದ್ದು, ಕಿಚ್ಚ ಸುದೀಪ್ 'ಕ್ಯಾಪ್ಟನ್' ಆಗಿ ಮಿಂಚಿದ್ದಾರೆ. 'ಫ್ಲೈಟ್ ನಂ. BB13' ಟೇಕ್ ಆಫ್‌ಗೆ ಸಜ್ಜಾಗಿದೆ ಎಂಬುದನ್ನು ಪ್ರೋಮೋಗಳು ಸಾರುತ್ತಿವೆ.

ಇದನ್ನೂ ಓದಿ: Bigg Boss: ಕೌಬಾಯ್ ಗೆಟಪ್‌ನಲ್ಲಿ ಸಲ್ಮಾನ್ ಖಾನ್‌; ಬಿಗ್‌ ಬಾಸ್‌ ಶೂಟಿಂಗ್‌ ಶುರು!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಈ ಬಾರಿಯ ವಾರಾಂತ್ಯ ಬಿಗ್ ಬಾಸ್ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡಲು ಸಜ್ಜಾಗಿದೆ.