ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ದೊಡ್ಮನೆಗೆ ಬಂದ ʻಸೀತಾರಾಮʼ ಖ್ಯಾತಿಯ ಗಗನ್ ಚಿನ್ನಪ್ಪ

Bigg Boss Kannada 13: ಗಗನ್ ಚಿನ್ನಪ್ಪ (gagan chinnappa), ಕನ್ನಡ ಕಿರುತೆರೆಯ ʻಸೀತಾರಾಮʼ ಧಾರಾವಾಹಿಯ ಮೂಲಕ ಜನಪ್ರಿಯತೆ ಗಳಿಸಿದ ನಟ. ಈ ಧಾರಾವಾಹಿಯಲ್ಲಿನ ರಾಮ್‌ ಪಾತ್ರವು ಅವರಿಗೆ ದೊಡ್ಡ ಮಟ್ಟಿಗೆ ಖ್ಯಾತಿ ತಂದುಕೊಟ್ಟಿತು. ಇದೀಗ ಗಗನ್‌ ಬಿಗ್‌ ಬಾಸ್‌ಗೆ (Bigg Boss kannada 13) ಎಂಟ್ರಿ ಕೊಟ್ಟಿದ್ದಾರೆ. ಮನೆ ಕಟ್ಟುವ ಜವಬ್ದಾರಿ ಹೊತ್ತಿರೋ ನಟ, ಮನರಂಜನೆ ಕೊಡೋದು ಗ್ಯಾರಂಟಿ ಅಂತ ಎಂಟ್ರಿ ಕೊಟ್ಟಿದ್ದಾರೆ.

ದೊಡ್ಮನೆಗೆ ಬಂದ  ʻಸೀತಾರಾಮʼ  ಖ್ಯಾತಿಯ ಗಗನ್ ಚಿನ್ನಪ್ಪ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 6, 2026 8:52 PM

ಗಗನ್ ಚಿನ್ನಪ್ಪ (gagan chinnappa), ಕನ್ನಡ ಕಿರುತೆರೆಯ ʻಸೀತಾರಾಮʼ ಧಾರಾವಾಹಿಯ ಮೂಲಕ ಜನಪ್ರಿಯತೆ ಗಳಿಸಿದ ನಟ. ಈ ಧಾರಾವಾಹಿಯಲ್ಲಿನ ರಾಮ್‌ ಪಾತ್ರವು ಅವರಿಗೆ ದೊಡ್ಡ ಮಟ್ಟಿಗೆ ಖ್ಯಾತಿ ತಂದುಕೊಟ್ಟಿತು. ಇದೀಗ ಗಗನ್‌ ಬಿಗ್‌ ಬಾಸ್‌ಗೆ (Bigg Boss kannada 13) ಎಂಟ್ರಿ ಕೊಟ್ಟಿದ್ದಾರೆ. ಮನೆ ಕಟ್ಟುವ ಜವಬ್ದಾರಿ ಹೊತ್ತಿರೋ ನಟ, ಮನರಂಜನೆ ಕೊಡೋದು ಗ್ಯಾರಂಟಿ ಅಂತ ಎಂಟ್ರಿ ಕೊಟ್ಟಿದ್ದಾರೆ.

ಗಗನ್ ಚಿನ್ನಪ್ಪ ಕನ್ನಡ ಕಿರುತೆರೆಯ ಜನಪ್ರಿಯ ನಟ. ಮೂಲತಃ ಕೊಡಗಿನವರು. . ಮೂರು ವರ್ಷ ಜರ್ಮನಿ ಮತ್ತು ಓಮನ್‌ನಲ್ಲಿ ಕೆಲಸ ಮಾಡಿದ್ದರು. ಮುಂದೆ ಭಾರತಕ್ಕೆ ಮರಳಿದ ಗಗನ್, ಐಟಿ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡರು.

ಇದನ್ನೂ ಓದಿ: Bigg Boss Kannada 13: ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸೌಂದರ್ಯ ಶೆಟ್ಟಿ; ಯಾರಿಗೂ ಹೆದರದ ಕುಡ್ಲದ ಬೆಡಗಿಯ ಹಿನ್ನೆಲೆ ಏನು?

'ಮಂಗಳಗೌರಿ ಮದುವೆ' ಧಾರಾವಾಹಿಯ ಆಡಿಶನ್‌ಗೆ ಹೋದ ಗಗನ್ ಚಿನ್ನಪ್ಪ ಆಯ್ಕೆಯೂ ಆದರು. ಈ ಧಾರಾವಾಹಿಯಲ್ಲಿ ರಾಜೀವನ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ತೆಲುಗು ಧಾರಾವಾಹಿಗಳಲ್ಲೂ ಅಭಿನಯಿಸಿರುವ ಇವರು, ಜೀ ಕನ್ನಡ ವಾಹಿಯ ಸೀತಾರಾಮ ಧಾರಾವಾಹಿಯಲ್ಲಿ ನಟಿಸಿದ್ದರು. ಸಿನಿಮಾ ಅಂದರೆ ತುಂಬಾ ಇಷ್ಟಪಡುವ ಗಗನ್, ಅಲೆಗ್ಸಾಂಡರ್ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ.

ಗಗನ್ ಚಿನ್ನಪ್ಪ ಅವರು ಕಿಚ್ಚ ಸುದೀಪ್ ನಿರೂಪಣೆ ಬಿಗ್‌ಬಾಸ್ ಕನ್ನಡ ಮಿನಿ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈಗ ಬಿಗ್‌ ಬಾಸ್‌ ಸೀಸನ್‌ 13ಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: Bigg Boss kannada 13: ವಿನಯ್ ಪ್ರಸಾದ್ ಪುತ್ರಿ ಬಿಗ್‌ ಬಾಸ್‌ಗೆ ಎಂಟ್ರಿ!

ಗಗನ್‌ ಕೂಡ ವೇದಿಕೆಯಲ್ಲಿ ತಾನು ನಡೆದು ಬಂದ ಹಾದಿಯನ್ನು ವಿವರಿಸಿದರು. ಎಷ್ಟೆಲ್ಲ ಕಷ್ಟ ಪಟ್ಟು ಬಂದೆ. ಮನೆಗಾಗಿ ಹೇಗೆ ಹಣ ಹೊಂದಿಸುತ್ತಿದ್ದೇನೆ ಎಂದು ಮುಕ್ತವಾಗಿ ಮಾತನಾಡಿದರು. ಸುದೀಪ್‌ ಕೂಡ ನಟನಿಗೆ ಶುಭ ಹಾರೈಸಿದ್ದಾರೆ.

ಇದೀಗ ಮೆಚ್ಚಿನ ನಟ , ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಕ್ಕೆ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.