ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss kannada 13: ವಿನಯ್ ಪ್ರಸಾದ್ ಪುತ್ರಿ ಬಿಗ್‌ ಬಾಸ್‌ಗೆ ಎಂಟ್ರಿ!

Bigg Boss kannada 13: ಬಿಗ್​​ ಬಾಸ್ ಕನ್ನಡ ಸೀಸನ್ 13ರ ಮೊದಲ ಸ್ಪರ್ಧೆಯಾಗಿ ‘ಲವ್ ಮಾಕ್ಟೆಲ್ 3’ ಸಿನಿಮಾದ ಹಾಸ್ಯನಟ ಜಗ್ಗು ಮಮ್ಮಿ ಬಂದಿದ್ದಾರೆ. ಮಂಗಳೂರು ಮೂಲದ ಮಾಡೆಲ್ ಸೌಂದರ್ಯಾ ಶೆಟ್ಟಿ 'ಬಿಗ್ ಬಾಸ್ ಕನ್ನಡ ಸೀಸನ್ 13'ಕ್ಕೆ ಎರಡನೇ ಸ್ಪರ್ಧಿಯಾಗಿ, ಅವಿನಾಶ್‌ ಷಠಮರ್ಷಣ ಮೂರನೇ ಸ್ಪರ್ಧಿಯಾಗಿ ಬಂದರು. ಈಗ ವಿನಯ್ ಪ್ರಸಾದ್ ಅವರ ಪುತ್ರಿ ಪ್ರಥಮ ಪ್ರಸಾದ್ ಎಂಟ್ರಿ ಕೊಟ್ಟಿದ್ದಾರೆ.

ವಿನಯ್ ಪ್ರಸಾದ್ ಪುತ್ರಿ ಬಿಗ್‌ ಬಾಸ್‌ಗೆ ಎಂಟ್ರಿ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 6, 2026 8:36 PM

ಬಿಗ್​​ ಬಾಸ್ ಕನ್ನಡ ಸೀಸನ್ 13ರ (Bigg Boss Kannada 13) ಮೊದಲ ಸ್ಪರ್ಧೆಯಾಗಿ ‘ಲವ್ ಮಾಕ್ಟೆಲ್ 3’ ಸಿನಿಮಾದ ಹಾಸ್ಯನಟ ಜಗ್ಗು ಮಮ್ಮಿ ಬಂದಿದ್ದಾರೆ. ಮಂಗಳೂರು ಮೂಲದ ಮಾಡೆಲ್ ಸೌಂದರ್ಯಾ ಶೆಟ್ಟಿ 'ಬಿಗ್ ಬಾಸ್ ಕನ್ನಡ ಸೀಸನ್ 13'ಕ್ಕೆ ಎರಡನೇ ಸ್ಪರ್ಧಿಯಾಗಿ, ಅವಿನಾಶ್‌ ಷಠಮರ್ಷಣ ಮೂರನೇ ಸ್ಪರ್ಧಿಯಾಗಿ ಬಂದರು. ಈಗ ವಿನಯ್ ಪ್ರಸಾದ್ (Vinay Prasad) ಅವರ ಪುತ್ರಿ ಪ್ರಥಮ ಪ್ರಸಾದ್ (Prathama Prasad) ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚ ಬೋರ್ಡಿಂಗ್‌ ಪಾಸ್‌ ಕೊಟ್ಟಿದ್ದಾರೆ.

ವಿನಯ್ ಪ್ರಸಾದ್ ಅವರ ಪುತ್ರಿ

ಪ್ರಥಮ ಪ್ರಸಾದ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ. ಇವರು ಕನ್ನಡದ ಖ್ಯಾತ ನಟಿ ವಿನಯ್ ಪ್ರಸಾದ್ ಅವರ ಪುತ್ರಿ. ಪ್ರಥಮ್ ಅವರು ತೆರೆಕಂಡ ಎಂಎಂಸಿಹೆಚ್, ಚೌಕ ಬಾರ' ಚಿತ್ರದಲ್ಲಿ ಅಭಿನಯಿಸಿದ್ದಾರೆ .

ಇದನ್ನೂ ಓದಿ: BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಯೊಳಗೆ ಎಂಟ್ರಿ ಕೊಡೋದು ಯಾರು? 'ಬಿಗ್‌ ಬಾಸ್‌ ಕನ್ನಡ‌' ಟೀಮ್‌ನಿಂದ ಬಿಗ್‌ ಅಪ್ಡೇಟ್‌!

ಸುಮಾರು 10 ವರ್ಷಗಳಿಗೂ ಹೆಚ್ಚು ಸಮಯದಿಂದ ಕಿರುತೆರೆ (Small Screen) ಹಾಗೂ ಬೆಳ್ಳಿ ತೆರೆಯಲ್ಲಿ ವಿವಿಧ ಪಾತ್ರದಲ್ಲಿ ಮಿಂಚುತ್ತಿರುವ ನಟಿ, ಜನರ ಫೇವರೇಟ್​ ಆಗಿದ್ದಾರೆ ಇನ್ನೊಂದು ಮುಖ್ಯವಾದ ವಿಚಾರ ಎಂದರೆ ಇವರು ಕಥಕ್ ನೃತ್ಯದಲ್ಲಿ ಪರಿಣಿತಿ ಹೊಂದಿದ್ದು, ವಿಧೂಷಿ ಪ್ರಥಮಾ ಪ್ರಸಾದ್ ರಾವ್ ಆಗಿದ್ದು, ಕಥಕ್​ನಲ್ಲಿ ವಿದ್ವತ್ ಮಾಡಿದ್ದಾರೆ.

ನಾಲ್ಕು ವರ್ಷದ ಮಗುವಿದ್ದಾಗ ಅವರ ತಾಯಿಯ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರಂತೆ. ನಟಿ ಮೊದಲು ನಿರೂಪಕಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೈ ಟು ಡ್ಯಾನ್ ಸೀಸನ್ 2 ನಲ್ಲಿ ಸೃಜನ್ ಲೋಕೇಶ್​ ಜೊತೆ ನಿರೂಪಕಿಯಾಗಿ ಪ್ರಥಮಾ ಅವರು ಕಿರುತೆರೆ ಪ್ರವೇಶ ಮಾಡಿದ್ದಾರೆ.

ಕೆಲ ವರ್ಷಗಳ ಹಿಂದೆ ಪ್ರಸಾರವಾಗಿದ್ದ ಬಹು ಪ್ರಸಿದ್ದ ಧಾರಾವಾಹಿ ದೇವಿಯಲ್ಲಿ ಕೊಲ್ಲುರು ಮೂಕಾಂಬಿಕೆಯ ಪಾತ್ರಗಳಲ್ಲಿ ಇವರು ಮಿಂಚಿದ್ದರು. ಜನ ನನ್ನನ್ನು ವಿನಯಾ ಪ್ರಸಾದ್ ಮಗಳು ಎಂದು ಗುರುತಿಸುವುದಕ್ಕಿಂತ ಹೆಚ್ಚಾಗಿ ನಟಿಯಾಗಿ ಗುರುತಿಸುತ್ತಾರೆ ಎಂದು ಹೇಳಿಕೊಂಡಿದ್ದೂ ಇದೆ.

ಇದನ್ನೂ ಓದಿ: Bigg Boss Kannada 12: Bigg Boss 12 Finale: ಕುಚಿಕು ದೋಸ್ತಿಗಳೇ ವಿನ್ನರ್‌, ರನ್ನರ್‌! ಗೆದ್ದ ಗಿಲ್ಲಿ ಪಕ್ಕಾ ನಿಂತ ಪಟಾಕಿ ರಕ್ಷಿತಾ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಮೇಶ್​ ಇಂದಿರಾ ನಿರ್ದೇಶನದ ಒಲವಿನ ನಿಲ್ದಾಣ ಎನ್ನುವ ಧಾರಾವಾಹಿಯಲ್ಲಿ ಸಹ ಪ್ರಥಮಾ ಅವರು ಬಹಳ ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.