ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಬಾರೋ ದೂದ್ ಪೇಡಾ, ಒಬ್ಬೊಬ್ಬರನ್ನು ಬಿಡಲ್ಲ! ರೊಚ್ಚಿಗೆದ್ದ ಕಿರಣ್‌

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಶನ್‌ ಕಾವು ಜೋರಾಗಿದೆ. ಭಾವಚಿತ್ರಕ್ಕೆ ಕೊಡಲಿಯನ್ನು ಚುಚ್ಚಿ ನಾಮಿನೇಟ್‌ ಮಾಡಬೇಕು. ಆಗ ಆಸಿಯಾ ಅವರ ಭಾವಚಿತ್ರಕ್ಕೆ ಗಾನವಿ ಚುಚ್ಚಿ ನಾಮಿನೇಟ್‌ ಮಾಡಿದರು. ಇನ್ನು ಕಿರಣ್‌ ಅವರನ್ನು ಸೋನಿಕಾ ಸೇರಿದಂತೆ ಅನೇಕರು ನಾಮಿನೇಟ್‌ ಮಾಡಿದರು.

ಬಾರೋ ದೂದ್ ಪೇಡಾ, ಒಬ್ಬೊಬ್ಬರನ್ನು ಬಿಡಲ್ಲ! ರೊಚ್ಚಿಗೆದ್ದ ಕಿರಣ್‌

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 2, 2026 7:42 PM

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ನಾಮಿನೇಶನ್‌ ಕಾವು ಜೋರಾಗಿದೆ. ಭಾವಚಿತ್ರಕ್ಕೆ ಕೊಡಲಿಯನ್ನು ಚುಚ್ಚಿ ನಾಮಿನೇಟ್‌ ಮಾಡಬೇಕು. ಆಗ ಆಸಿಯಾ ಅವರ ಭಾವಚಿತ್ರಕ್ಕೆ ಗಾನವಿ ಚುಚ್ಚಿ ನಾಮಿನೇಟ್‌ ಮಾಡಿದರು. ಇನ್ನು ಕಿರಣ್‌ (Kiran shastri) ಅವರನ್ನು ಸೋನಿಕಾ ಸೇರಿದಂತೆ ಅನೇಕರು ನಾಮಿನೇಟ್‌ ಮಾಡಿದರು.

ಇನ್ನು ಸೋನಿಕಾ ಅವರು ಕಿರಣ್‌ ಬಗ್ಗೆ ಇಂತವರು ಮನೆಯಲ್ಲಿ ಇರಲು ಯೊಗ್ಯರಲ್ಲ ಎಂದಿದ್ದಾರೆ. ಗೇಮ್‌ನಲ್ಲಿ ಸೀರೆಯೆಸ್‌ನೆಸ್‌ ಇಲ್ಲ ಎಂದು ತಾಂಡವ್‌ ಅವರು ಕಿರಣ್‌ ಬಗ್ಗೆ ಕಾರಣ ಕೊಟ್ಟರು. ವಾಪಸ್ ಮೊದಲಿನ ಕಿರಣ್ ಶಾಸ್ತ್ರಿಯಾಗಿ ಬರಲಿ ಎಂದು ಯಶಸ್ ಕಾರಣವನ್ನು ನೀಡಿದ್ದಾರೆ.

ನಿಮ್ಮಗೆಲ್ಲರಿಗಿಂತ ಮಸ್ತ್ ಆಗಿ ನಾನು ಆಡಿದ್ದೀನಿ. ಮೊದಲಿನ ತರ ಅಲ್ಲ, ಅವರಪ್ಪ ಬರುತ್ತಾನೆ ಈಗ ತೊಡೆ ತಟ್ಟಿ ನಿಲ್ಲುತ್ತೇನೆ. ಬಾರೋ ದೂದ್ ಪೇಡಾ. ಒಬ್ಬೊಬ್ಬರನ್ನು ಬಿಡಲ್ಲವೆಂದುನ ಕಿರಣ್ ಕೋಪದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 13: ಪ್ರಶಾಂತ್​-ತಾಂಡವ್‌ಗೆ ಕಿಚ್ಚನ ಚಪ್ಪಾಳೆ ಸಿಗದಿದ್ದೇಕೆ? ಸುದೀಪ್‌ ಹೇಳಿದ್ದೇನು?

ಗಾನವಿ ಅವರು ಕಾರಣ ನೀಡಿ, ಆಸಿಯಾ ಅವರ ಆಟ ಅವರ ಕೊಡಗೆ ಈ ಮನೆಯಲ್ಲಿ ಕಡಿಮೆ ಇದೆ ಅನ್ಸತ್ತೆ ಎಂದರು. ಆಗ ಆಸಿಯಾ ಕೋಪದಲ್ಲಿ, ನಾನು ಆಡಿರೋ ಟಾಸ್ಕ್‌ನಲ್ಲಿ ನೀನು ಆಡೇ ಇಲ್ಲ ಎಂದಿದ್ದಾರೆ. ಹೊರಗಡೆ ನಿಮ್ಮ ಬಗ್ಗೆ ಚೆನ್ನಾಗಿ ಗೊತ್ತು. ಒಂದೊಂದು ಬಿಚ್ಚಿಟ್ಟರೆ ಎಂದಿದ್ದಾರೆ ಗಾನವಿ. ಬಿಚ್ಚಿಡು ನೋಡೋಣ. ಧಮ್‌ ಇದ್ರೆ ಬಿಚ್ಚಿಡು ಎಂದು ಆಸಿಯಾ ಅವರು ಗಾನವಿಗೆ ನೇರ ಸವಾಲ್‌ ಹಾಕಿದರು.