ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಬರೀ ಮಾತೇ ಆಯ್ತು ಫರ್ಫಾರ್ಮೆನ್ಸ್ ಏನಿಲ್ಲ! ಕಾವ್ಯಾಗೆ ಕುಮಾರಿ ಬಾಣದಂಥಾ ಮಾತು

Bigg Boss Kannada 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳ ಮಧ್ಯೆ ವೈಮನಸ್ಸು ಹೆಚ್ಚಾಗಿದೆ. ತಾಂಡವ್‌ ರಾಮ್‌ ಅವರು ಕಿರಣ್‌ ಅವರಿಗೆ ಕಳಪೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಕುಮಾರಿ, ಕಾವ್ಯ ಅವರನ್ನು ನೇರವಾಗಿ ಟಾರ್ಗೆಟ್‌ ಮಾಡಿದ್ದಾರೆ. ಯಶಸ್‌ ಕೂಡ ಕಿರಣ್‌ ಅವರನ್ನು ಟಾರ್ಗೆಟ್‌ ಮಾಡಿ ಮಾತು ಮಾತಿಗೂ ಸುಳ್ಳು ಹೇಳ್ತಾರೆ ಎಂದಿದ್ದಾರೆ.

ಬಿಗ್‌ ಬಾಸ್‌ ಕನ್ನಡ

‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada13) ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳ ಮಧ್ಯೆ ವೈಮನಸ್ಸು ಹೆಚ್ಚಾಗಿದೆ. ತಾಂಡವ್‌ ರಾಮ್‌ ಅವರು ಕಿರಣ್‌ ಅವರಿಗೆ ಕಳಪೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಕುಮಾರಿ (Kumari), ಕಾವ್ಯ ಅವರನ್ನು ನೇರವಾಗಿ ಟಾರ್ಗೆಟ್‌ ಮಾಡಿದ್ದಾರೆ. ಯಶಸ್‌ ಕೂಡ ಕಿರಣ್‌ ಅವರನ್ನು ಟಾರ್ಗೆಟ್‌ ಮಾಡಿ ಮಾತು ಮಾತಿಗೂ ಸುಳ್ಳು ಹೇಳ್ತಾರೆ ಎಂದಿದ್ದಾರೆ.

ಕುಮಾರಿ ಇದ್ದವರು ಕಾವ್ಯ ಅವರು ಕಳಪೆ ಎಂದರು. ಫಸ್ಟ್‌ ವಾರದಿಂದ ಇದ್ದೀರಾ. ರೂಲ್ಸ್‌ ಚೇಂಜ್‌ ಮಾಡದೇ ಆಡಬೇಕು ಅನ್ನೋ ಕಾಮನ್‌ಸೆನ್ಸ್‌ ಇಲ್ಲ. ಬರೀ ಮಾತೇ ಆಯ್ತು ಫರ್‌ಫಾರ್ಮೆನ್ಸ್‌ ಏನಿಲ್ಲ ಎಂದರು. ಕಾವ್ಯ ಅವರು ಕೋಪಗೊಂಡು ನಾನು ಹೇಗೆ ಇರಬೇಕು ಅಂತ ಹೇಳಿಕೊಡೋ ಅವಶ್ಯಕತೆ ಇಲ್ಲ. ಅಷ್ಟೇ ಅಲ್ಲ ನಿಮ್ಮ ಮನಸ್ಸಿಂದ, ಬುದ್ಧಿವಂತಿಕೆಯಿಂದ ಏನಿಲ್ಲ ಎಂದು ಕಾವ್ಯಗೆ ನೇರವಾಗಿ ಹೇಳಿದರು ಕುಮಾರಿ.

ಇದನ್ನೂ ಓದಿ: Bigg Boss Kannada 13: ‘ಇಷ್ಟು ಕೆಳಮಟ್ಟಕ್ಕೆ ಇಳಿದು ಗೆಲ್ಲಬಾರದು’; ಗಾನವಿ ಬಗ್ಗೆ ಗಗನ್‌ ಅಸಮಾಧಾನ



ʻಪಜಲ್ ಪೈಪೋಟಿʼ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಮತ್ತು ಉಸ್ತುವಾರಿಗಳು ತೋರಿದ ಉಡಾಫೆಯ ಆಟ ʻಬಿಗ್ ಬಾಸ್ʼ ಕೆಂಗಣ್ಣಿಗೆ ಗುರಿಯಾಗಿದೆ. ಪರಿಣಾಮ ಇಡೀ ಟಾಸ್ಕ್ ರದ್ದಾಗಿದ್ದಷ್ಟೇ ಅಲ್ಲದೇ, ನಾಲ್ವರು ಸ್ಪರ್ಧಿಗಳು ಕ್ಯಾಪ್ಟನ್ಸಿ ರೇಸ್‌ನಿಂದಲೇ ಹೊರಬಿದ್ದಿದ್ದರು.

ಇದನ್ನೂ ಓದಿ: Bigg Boss Kannada 13: ತಪ್ಪು ಮಾಡಿದ ಪ್ರಶಾಂತ್‌ಗೆ ಇಂಥಾ ಶಿಕ್ಷೆನಾ?

ಕಾವ್ಯ ಮತ್ತು ಗಾನವಿ ಅವರು ʻಪಜಲ್‌ʼ ಟಾಸ್ಕ್‌ನ ಉಸ್ತುವಾರಿಗಳಾಗಿದ್ದರು. ಜಲ್ ಪೈಪೋಟಿ ಟಾಸ್ಕ್ ಶುರುವಾದಾಗಿನಿಂದ ತಂಡಗಳು ಹಾಗೂ ಉಸ್ತುವಾರಿಗಳು ನಿಮಗೆ ಇಷ್ಟ ಬಂದಂತೆ ಆಟದ ನಿಯಮಗಳನ್ನ ಬದಲಾಯಿಸಿಕೊಂಡು ಆಡಲು ಮುಂದಾದ್ರಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಟದ ರೂಪವನ್ನೇ ಬದಲಿಸಿಬಿಟ್ರಿ ಎಂದು ಬಿಗ್‌ ಬಾಸ್‌ ಹೇಳಿದ್ದರು.

Yashaswi Devadiga

View all posts by this author