ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ತಪ್ಪು ಮಾಡಿದ ಪ್ರಶಾಂತ್‌ಗೆ ಇಂಥಾ ಶಿಕ್ಷೆನಾ?

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಪ್ರಶಾಂತ್‌ ಹಲವು ಬಾರಿ ರೂಲ್ಸ್‌ ಬ್ರೇಕ್‌ ಮಾಡಿದ್ದಾರೆ. ಈ ಹಿಂದೆಯೂ ಪ್ರಶಾಂತ್‌ ತನ್ನ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟ ಪ್ರಶಾಂತ್ ಅವರಿಗೆ, ಆರಂಭದಲ್ಲೇ ಮನೆಮಂದಿಯನ್ನು ರೋಸ್ಟ್ ಮಾಡುವ ಟಾಸ್ಕ್ ನೀಡಲಾಗಿತ್ತು. ಆ ಟಾಸ್ಕ್ ಅನ್ನು ಯಶಸ್ವಿಯಾಗಿ ಮುಗಿಸಿದ ನಂತರ ಮನೆಯೊಳಗೆ ತೆರಳಿದ ಪ್ರಶಾಂತ್, ಕೆಲ ಸ್ಪರ್ಧಿಗಳ ಜೊತೆ ಆಪ್ತವಾಗಿ ಮಾತನಾಡತೊಡಗಿದರು.ಅಷ್ಟೇ ಅಲ್ಲ ಗಂಧರ್ವ ಟಾಸ್ಕ್‌ ಸಮಯದಲ್ಲೂ ಮೈಕ್‌ ನೀರಿಗೆ ಬೀಳಿಸಿಕೊಂಡಿದ್ದರು. ಇದೀಗ ಮತ್ತದೇ ರಿಪೀಟ್‌ ಆಗಿದೆ.

Bigg Boss Kannada 13: ತಪ್ಪು ಮಾಡಿದ ಪ್ರಶಾಂತ್‌ಗೆ ಇಂಥಾ ಶಿಕ್ಷೆನಾ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 15, 2026 10:42 AM

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ಪ್ರಶಾಂತ್‌ ಹಲವು ಬಾರಿ ರೂಲ್ಸ್‌ ಬ್ರೇಕ್‌ ಮಾಡಿದ್ದಾರೆ. ಈ ಹಿಂದೆಯೂ ಪ್ರಶಾಂತ್‌ (Prashanth) ತನ್ನ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟ ಪ್ರಶಾಂತ್ ಅವರಿಗೆ, ಆರಂಭದಲ್ಲೇ ಮನೆಮಂದಿಯನ್ನು ರೋಸ್ಟ್ ಮಾಡುವ ಟಾಸ್ಕ್ ನೀಡಲಾಗಿತ್ತು. ಆ ಟಾಸ್ಕ್ ಅನ್ನು ಯಶಸ್ವಿಯಾಗಿ ಮುಗಿಸಿದ ನಂತರ ಮನೆಯೊಳಗೆ ತೆರಳಿದ ಪ್ರಶಾಂತ್, ಕೆಲ ಸ್ಪರ್ಧಿಗಳ ಜೊತೆ ಆಪ್ತವಾಗಿ ಮಾತನಾಡತೊಡಗಿದರು. ‘ಜಗ್ಗ ಮಮ್ಮಿ’ ಖ್ಯಾತಿಯ ಜಗದೀಶ್ (Jagadeesh) ಅವರ ಬಳಿ ಕೂತು ತೀರಾ ಕ್ಲೋಸ್ ಆಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಶಾಂತ್ ಮೈಕ್‌ನಲ್ಲಿ ಸ್ಪಷ್ಟವಾಗಿ ಧ್ವನಿ ಕೇಳಿಸದಂತೆ, ಕಿವಿಯ ಬಳಿ ಅತ್ಯಂತ ರಹಸ್ಯವಾಗಿ ಗುಟ್ಟುಗುಟ್ಟಾಗಿ ಪಿಸುಮಾತಿನಲ್ಲಿ ಮಾತನಾಡಿದ್ದಾರೆ.

ಪ್ರಶಾಂತ್‌ ಹೈರಾಣ್‌

ಅಷ್ಟೇ ಅಲ್ಲ ಗಂಧರ್ವ ಟಾಸ್ಕ್‌ ಸಮಯದಲ್ಲೂ ಮೈಕ್‌ ನೀರಿಗೆ ಬೀಳಿಸಿಕೊಂಡಿದ್ದರು. ಇದೀಗ ಮತ್ತದೇ ರಿಪೀಟ್‌ ಆಗಿದೆ. ನಿನ್ನ ಪಝಲ್‌ ಗೇಮ್‌ನಲ್ಲಿ ಮೈಕ್‌ ಧರಿಸಿ ನೀರಿಗೆ ಬಿದ್ದಿದ್ದಾರೆ. ಹೀಗಾಗಿ ಬಿಗ್‌ ಬಾಸ್‌ ಪನಿಶ್‌ಮೆಂಟ್‌ ಕೊಟ್ಟಿದ್ದಾರೆ. ಪ್ರಶಾಂತ್‌ ಟೇಪ್‌ ಅನ್ನು ಬಾಯಿಗೆ ಅಂಟಿಸಿಕೊಳ್ಳಬೇಕು. ಯಾರೋಬ್ಬರು ಅವರ ಜೊತೆ ಮಾತನಾಡಬಾರದು ಎಂದು ಬಿಗ್‌ ಬಾಸ್‌ ಆದೇಶಿಸಿದ್ದಾರೆ. ಒಟ್ಟಿನಲ್ಲಿ ಯಾರೊಂದಿಗೂ ಮಾತನಾಡಲಾರದೇ ಪ್ರಶಾಂತ್‌ ಹೈರಾಣ್‌ ಆಗಿದ್ದಾರೆ.

ಇದನ್ನೂ ಓದಿ: Bigg Boss Kannada 13: ಗಾನವಿನ ನಂಬಿ ಕೆಟ್ರಾ ಒಂಟಿ ಪಂಟರ್ಸ್?

ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಸದಾ ಕಾಲ ಮೈಕ್ ಧರಿಸಿರಬೇಕು. ಯಾಕೆಂದರೆ, ಯಾವ ಸ್ಪರ್ಧಿಗಳು ಏನು ಮಾತನಾಡುತ್ತಾರೆ ಎಂಬುದು ವೀಕ್ಷಕರಿಗೆ ಮತ್ತು ಕಾರ್ಯಕ್ರಮದ ಆಯೋಜಕರಿಗೆ ಸ್ಪಷ್ಟವಾಗಿ ಕೇಳಿಸಬೇಕು. ಯಾವುದೇ ಸ್ಪರ್ಧಿ ಪಿಸುದನಿಯಲ್ಲಿ ಮಾತನಾಡಿದರೆ ಕೂಡಲೇ ಬಿಗ್ ಬಾಸ್ ಕಡೆಯಿಂದ ಎಚ್ಚರಿಕೆಯ ಸಂದೇಶ ಬರುತ್ತದೆ.

ಪಿಸುದನಿಯಲ್ಲಿ ಮಾತನಾಡುವ ಮೂಲಕ ಬಿಗ್ ಬಾಸ್ ಮನೆಯ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಆಸಿಯಾಗೂ ಎಚ್ಚರಿಕೆ ನೀಡಲಾಯಿತು. ತಪ್ಪು ಮಾಡಿದ್ದಕ್ಕಾಗಿ ಆಸಿಯಾಗೆ ಕ್ಯಾಪ್ಟನ್ ಧನುಷ್ ಅವರು ಶಿಕ್ಷೆ ನೀಡಿದರು. ಆದರೆ ಅದಕ್ಕೆ ಆಸಿಯಾ ತಕರಾರು ತೆಗೆದರು.

ಇದನ್ನೂ ಓದಿ: Bigg Boss Kannada 13: ಕ್ಯಾಪ್ಟನ್ಸಿ ಓಟದಿಂದ ಔಟ್‌; ಆಸಿಯಾ ಪರ ನಿಂತ ಸೌಂದರ್ಯ!

ನಿಯಮ ಉಲ್ಲಂಘನೆ ಮಾಡಿದ್ದರಿಂದ ಆಸಿಯಾ ಅವರು ಈ ದಿನ ಪಾತ್ರೆ ತೊಳೆಯಬೇಕು ಎಂದು ಧನುಷ್ ಅವರು ಹೇಳಿದರು. ಆದರೆ ಅದು ಆಸಿಯಾ ಅವರಿಗೆ ಸರಿ ಎನಿಸಲಿಲ್ಲ. ಮೊದಲನೆಯದಾಗಿ, ತಾವು ಪಿಸುದನಿಯಲ್ಲಿ ಮಾತನಾಡಿಯೇ ಇಲ್ಲ ಎಂದು ಅವರು ವಾದಿಸಿದರು. ಮೈಕ್ ಒತ್ತಿಕೊಂಡಿದ್ದರಿಂದ ಈ ರೀತಿ ಕೇಳಿಸಿದೆ ಎಂದು ಅವರು ಸಮರ್ಥನೆ ಮಾಡಿಕೊಂಡರು.