ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಗೆ ಎಂಟ್ರಿ ಕೊಟ್ಟ ಲಿಖಿತ್‌ ಗೋಂದಿ

Bigg Boss Kannada 13: ಈ ಸಲ ಬಿಗ್‌ ಬಾಸ್‌ ಸೀಸನ್‌ ಆರಂಭಕ್ಕೂ ಮೊದಲೇ ಬಿಗ್‌ ಬಾಸ್‌ ಅಗ್ನಿಪರೀಕ್ಷೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ವಿಡಿಯೋಗಳನ್ನು ಕಳುಹಿಸಿದ್ದರು. ಇದರಲ್ಲಿ ಅಳೆದು ತೂಗಿ ಕೇವಲ 60 ಕಂಟೆಸ್ಟೆಂಟ್‌ಗಳನ್ನು ಬಿಗ್‌ ಬಾಸ್‌ ಅಗ್ನಿಪರೀಕ್ಷೆ ಕಾರ್ಯಕ್ರಮ ಆಯ್ಕೆ ಮಾಡಿತ್ತು. ಲಿಖಿತ್ ಅವರು ದೊಡ್ಮನೆಗೆ ಬಿಗ್‌ ಎಂಟ್ರಿ ಕೊಟ್ಟಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಕಿಚ್ಚ ಸುದೀಪ (Sudeep) ಅವರು ತಮ್ಮದೇ ಆದ ವಿಶೇಷ ನಿರೂಪಣೆಯಿಂದ ಬಿಗ್‌ ಬಾಸ್‌ ಶೋ ಅನ್ನು ನಾಡಿನ ತುಂಬಾ ಮನೆ ಮಾತಾಗಿಸಿದ್ದಾರೆ. ಈ ಸಲ ಬಿಗ್‌ ಬಾಸ್‌ ಸೀಸನ್‌ ಆರಂಭಕ್ಕೂ ಮೊದಲೇ ಬಿಗ್‌ ಬಾಸ್‌ ಅಗ್ನಿಪರೀಕ್ಷೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ವಿಡಿಯೋಗಳನ್ನು ಕಳುಹಿಸಿದ್ದರು. ಇದರಲ್ಲಿ ಅಳೆದು ತೂಗಿ ಕೇವಲ 60 ಕಂಟೆಸ್ಟೆಂಟ್‌ಗಳನ್ನು ಬಿಗ್‌ ಬಾಸ್‌ ಅಗ್ನಿಪರೀಕ್ಷೆ ಕಾರ್ಯಕ್ರಮ ಆಯ್ಕೆ ಮಾಡಿತ್ತು. ಲಿಖಿತ್ ಅವರು ದೊಡ್ಮನೆಗೆ ಬಿಗ್‌ ಎಂಟ್ರಿ ಕೊಟ್ಟಿದ್ದಾರೆ. ಲಿಖಿತ್ ಗೋಂದಿ (Likith Gondi) ಅವರು ಪ್ರಮುಖವಾಗಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದಾರೆ.

ಸದ್ಯ ಕಿರಣ್‌ ಶಾಸ್ತ್ರಿ ಕೂಡ ಎಂಟ್ರಿ ಕೊಟ್ಟಿದ್ದಾರೆ. ಈಗ ಲಿಖಿತ್‌ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ತಂದೆ ರಾಜೀವ್ ಗೋಂದಿ ಅವರೊಂದಿಗೆ ಸೇರಿ ಮಾಡುವ ಹಾಸ್ಯಭರಿತ, ವಿಶಿಷ್ಟವಾದ ಕಂಟೆಂಟ್‌ ಹಾಗೂ ರೀಲ್ಸ್‌ಗಳ ಮೂಲಕ ಇವರು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ತಂದೆ-ಮಗನ ಅದ್ಭುತ ಕೆಮಿಸ್ಟ್ರಿ ಮತ್ತು ಮೋಜಿನ ವಿಡಿಯೋಗಳು ನೆಟ್ಟಿಗರ ಗಮನ ಸೆಳೆದಿವೆ.

ಇದನ್ನೂ ಓದಿ: Bigg Boss Kannada 13: ದೊಡ್ಮನೆಗೆ ಬಂದ ʻಸೀತಾರಾಮʼ ಖ್ಯಾತಿಯ ಗಗನ್ ಚಿನ್ನಪ್ಪ



ಈಗಾಗಲೇ ಜಗದೀಶ್, ಸೌಂದರ್ಯ ಶೆಟ್ಟಿ, ಅವಿನಾಶ್, ಪ್ರಥಮ ಪ್ರಸಾದ್, ಗಗನ್ ಚಿನ್ನಪ್ಪ, ಸಂಗೀತಾ ಭಟ್ ಹಾಗೂ ಕಾವ್ಯಾ ಗೌಡ ಸೇರಿದಂತೆ ಹಲವು ಸ್ಪರ್ಧಿಗಳು ಬಿಗ್‌ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಎಲ್ಲರೂ ಫ್ಲೈಟ್‌ ಬೋರ್ಡಿಂಗ್ ಪಾಸ್ ಹಿಡಿದುಕೊಂಡೇ ‘ದೊಡ್ಮನೆ’ ಪ್ರಯಾಣ ಆರಂಭಿಸಿರುವುದು ಈ ಸೀಸನ್‌ನ ವಿಶೇಷತೆಯಾಗಿದೆ.

ಇದನ್ನೂ ಓದಿ: Bigg Boss kannada 13: ವಿನಯ್ ಪ್ರಸಾದ್ ಪುತ್ರಿ ಬಿಗ್‌ ಬಾಸ್‌ಗೆ ಎಂಟ್ರಿ!

ಮತ್ತೊಂದೆಡೆ, ‘ಅಗ್ನಿ ಪರೀಕ್ಷೆ’ ಕಾರ್ಯಕ್ರಮದ ಮೂಲಕ ವೀಕ್ಷಕರ ವೋಟಿಂಗ್ ಆಧಾರದ ಮೇಲೆ ಕಿರಣ್ ಶಾಸ್ತ್ರಿ ಬಿಗ್‌ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ ಕಿರಣ್, ವೀಕ್ಷಕರೇ ತಮ್ಮನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದ್ದಾರೆ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ.

Yashaswi Devadiga

View all posts by this author