ಬಿಗ್ ಬಾಸ್ ಮನೆಯಲ್ಲಿ (Bigg boss Kannada 13) ಗಂಧರ್ವರು ಮತ್ತು ರಾಕ್ಷಸರು (Gandharvaru vs Rakshasaru) ಎಂಬ ರೋಚಕವಾದ ಟಾಸ್ಕ್ ಅನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು. ತಾಂಡವ್ ಗಂಧರ್ವರಾದರೆ, ಮಂಜ ತಂಡ ರಾಕ್ಷಸ ವೇಷ ಹಾಕಿತ್ತು. ಗಂಧರ್ವರಿಗೆ ರಾಕ್ಷಸರು ಸರಿಯಾಗಿ ಕಾಟ ಕೊಟ್ಟಿದ್ದಾರೆ, ಸಿಟ್ಟು ಬರುವ ಹಾಗೆಯೂ ನಡೆದುಕೊಂಡಿದ್ದಾರೆ. ಟಾಸ್ಕ್ ಅಂತ ಬಂದಾಗ ಬೇರೆಯವರಿಗೆ ನೋವಾಗತ್ತೆ, ಕಷ್ಟ ಆಗತ್ತೆ, ಮುಂದೆ ಏನಾಗಬಹುದು ಎಂದು ನೋಡೋದೆ ಇಲ್ಲ ಮಂಜ. ಮಂಜ (Manja) ಕೂಡ ಕಾವ್ಯ , ತಾಂಡವ್‌ಗೆ ಕಾಟ ಕೊಟ್ಟು ಒಂದಷ್ಟು ಕೆಲಸ ಮಾಡಿಸಿಕೊಂಡು ರಣಕೇಕೆ ಹಾಕಿದ್ದಾರೆ. ಒಟ್ಟಿನಲ್ಲಿ ಎಪಿಸೋಡ್ ಸಿಕ್ಕಾಪಟ್ಟೆ ಮನರಂಜನೆಯಿಂದ ಕೂಡಿರಲಿದೆ.
ಹೌದು ಮಂಜ, ಸಂಗೀತಾ, ಗಗನ್ ರಾಕ್ಷಸರಾಗಿದ್ದಾರೆ. ತಾಂಡವ್, ಕಾವ್ಯ ಎಲ್ಲರೂ ಗಂಧರ್ವ ರಾಗಿದ್ದಾರೆ. ಸೋನಿಕಾ ಅವರಿಗೆ ಮೆಣಸಿನ ಕಾಯಿ ತಿನ್ನಿಸಿದ್ದಾರೆ ಮಂಜ, ತಾಂಡವ್ ಅವರಿಗೆ ಕಾಲಿಗೆ ಬೀಳಿಸಿಕೊಂಡಿದ್ದಾರೆ. ಕಾವ್ಯ ಮೇಲೂ ಆರ್ಭಟ ಮೆರೆದಿದ್ದಾರೆ ಮಂಜ.
ಇದನ್ನೂ ಓದಿ: Bigg Boss Kannada 13: ಗಾನವಿಗೆ ಹುಚ್ಚಿ ಹುಚ್ಚಿ ಎಂದು ಕೂಗಾಡಿ ರಂಪಾಟ ಮಾಡಿದ ಜಗ್ಗ!
ಇದನ್ನೂ ಓದಿ: Bigg Boss Kannada 13: `ಹೊರಡೋದಾದ್ರೆ ಹೊರಡಿ'; ಗಾನವಿಯ ಬಾಯಿ ಬಂದ್ ಮಾಡಿದ ಸುದೀಪ್!
ಪ್ರತಿ ಸೀಸನ್‌ನಲ್ಲೂ ಕೂಡ ಗಂಧರ್ವರು ಹಾಗೂ ರಾಕ್ಷಸರು ಎಂಬ ಟಾಸ್ಕ್ ಅನ್ನು ನೀಡಲಾಗುತ್ತದೆ. ಗಂಧರ್ವರಾಗಿದ್ದವರು ರಾಕ್ಷಸರಾಗುತ್ತಾರೆ ನಂತರ ರಾಕ್ಷಸರಾಗಿದ್ದವರು ಗಂಧರ್ವರಾಗುತ್ತಾರೆ. ಈ ವೇಳೆ ಗಂಧರ್ವರಾಗಿದ್ದವರಿಗೆ ರಾಕ್ಷಸರು ನೀಡುವ ಕಷ್ಟಗಳೆಲ್ಲವನ್ನು ಸಹಿಸಿಕೊಂಡಿರುತ್ತಾರೆ.ನಂತರ ತಾವು ರಾಕ್ಷಸರಾದಾಗ ಗಂಧರ್ವರಿಗೆ ಅವರು ಯಾವ ರೀತಿ ಟಾರ್ಚರ್ ಕೊಟ್ಟಿದ್ದರು. ಅದೇ ರೀತಿ ಟಾರ್ಚರ್ ಕೊಡಲು ಶುರು ಮಾಡುತ್ತಾರೆ.