ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: `ಹೊರಡೋದಾದ್ರೆ ಹೊರಡಿ'; ಗಾನವಿಯ ಬಾಯಿ ಬಂದ್ ಮಾಡಿದ ಸುದೀಪ್!

Bigg Boss Kannada 13: ಬಿಗ್ ಬಾಸ್ ಕನ್ನಡ 13’ ಕಾರ್ಯಕ್ರಮಕ್ಕೆ ‘ಹಳ್ಳಿ ಪವರ್’ ಖ್ಯಾತಿಯ ಘಾಟಿ ಗಾನವಿ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿದ್ದಾರೆ. ಕಿಚ್ಚ ಸುದೀಪ್‌ಗೆ ಎದುರು ಮಾತಾಡಿದ್ದಾರೆ. ಗಾನವಿಗೆ ಕಿಚ್ಚ ಸುದೀಪ್ ವಾರಾಂತ್ಯದ ಪಂಚಾಯಿತಿಯಲ್ಲಿ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೊರಗೆ ಹೋಗುವುದಾದರೆ ಹೊರಡಿ, ತಕ್ಷಣವೇ ಮನೆಯ ಮುಖ್ಯ ಬಾಗಿಲು ಓಪನ್ ಮಾಡಿಸುವುದಾಗಿ ತಿಳಿಸಿದ್ದಾರೆ.

`ಹೊರಡೋದಾದ್ರೆ ಹೊರಡಿ'; ಗಾನವಿಯ ಬಾಯಿ ಬಂದ್ ಮಾಡಿದ ಸುದೀಪ್!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 4, 2026 10:47 AM

`ಬಿಗ್ ಬಾಸ್ ಕನ್ನಡ 13’ ಕಾರ್ಯಕ್ರಮಕ್ಕೆ (bigg Boss Kannada 13) ‘ಹಳ್ಳಿ ಪವರ್’ ಖ್ಯಾತಿಯ ಘಾಟಿ ಗಾನವಿ ವೈಲ್ಡ್ ಕಾರ್ಡ್ (Ghati Ganavi) ಎಂಟ್ರಿಕೊಟ್ಟಿದ್ದಾರೆ. ಕಿಚ್ಚ ಸುದೀಪ್‌ಗೆ ಎದುರು ಮಾತಾಡಿದ್ದಾರೆ. ಗಾನವಿಗೆ ಕಿಚ್ಚ ಸುದೀಪ್ (Sudeep) ವಾರಾಂತ್ಯದ ಪಂಚಾಯಿತಿಯಲ್ಲಿ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೊರಗೆ ಹೋಗುವುದಾದರೆ ಹೊರಡಿ, ತಕ್ಷಣವೇ ಮನೆಯ ಮುಖ್ಯ ಬಾಗಿಲು ಓಪನ್ ಮಾಡಿಸುವುದಾಗಿ ತಿಳಿಸಿದ್ದಾರೆ.

ಮೊದಲಿಗೆ ಕಟಕಟೆಯಲ್ಲಿ ಗಾನವಿ ನಿಲ್ಲಿಸಿದ ಕಿಚ್ಚ, ಗಾನವಿ ಅತಿರೇಕದ ವರ್ತನೆಯಿಂದಾಗಿ ನಿರೂಪಣೆ ಬಿಟ್ಟು ವೇದಿಕೆಯಿಂದ ಹೊರನಡೆದಿದ್ದಾರೆ. ಕಾವ್ಯ ಹಾಗೂ ಗಾನವಿ ಗಲಾಟೆಗೆ ಸೋತು ಹೋದರು.

ವಾದಕ್ಕಿಳಿದ ಗಾನವಿ ನಡೆಗೆ ಅಸಮಾಧಾನ

ಬಳಿಕ ಟಾಸ್ಕ್‌ ವಿಚಾರವಾಗಿ VT ಪ್ಲೇ ಮಾಡಿಸಿದ್ದಾರೆ. ಟಾಸ್ಕ್‌ನಲ್ಲಿ ತಪ್ಪು ಮಾಡಿ ಅದನ್ನು ಒಪ್ಪಿಕೊಳ್ಳದೆ ವಾದಕ್ಕಿಳಿದ ಗಾನವಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಸುದೀಪ್, ‘ಹೊರ ಹೋಗ್ತೀರಾ ಅಂದ್ರೆ ಹೊರಡಿ, ಡೋರ್ ಓಪನ್ ಮಾಡಿಸ್ತೀನಿ’ ಎಂದು ನೇರವಾಗಿಯೇ ಹೇಳಿದರು.ʼ

ಇದನ್ನೂ ಓದಿ: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ಪತ್ರಕರ್ತ ಎನ್.ಎಸ್. ಶಂಕರ್ ಇನ್ನಿಲ್ಲ

‘’ಮೊದಲ ತಂಡ ಬಾಕ್ಸ್ ಒಳಗೆ ಇರಬೇಕಿತ್ತು. ಸಂಗೀತಾ ಪೋರ್ಟ್ ತಗೊಂಡಿದ್ದರು. ಅದಕ್ಕೆ ಉಸ್ತುವಾರಿ ನಮಗೂ ಸಪೋರ್ಟ್ ತೆಗೆದುಕೊಳ್ಳಬಹುದು ಅಂತ ಹೇಳಿದರು’’ ಎಂದು ಸಮರ್ಥಿಸಿಕೊಂಡರು. ಆಗ, ‘’ರೂಲ್ಸ್ ಇತ್ತು. ರೂಲ್ಸ್ ಪ್ರಕಾರ ಚೆನ್ನಾಗಿ ಆಡಿದ್ರಾ? ಅಥವಾ ಎಡವಟ್ಟಾಗಿ ಗೆದ್ರಾ?’’ ಎಂದು ಮರು ಪ್ರಶ್ನೆ ಮಾಡಿದರು. ‘’ಎಡವಟ್ಟಾಗಿ ಗೆದ್ದಿದ್ದು’’ ಎಂದು ಗಾನವಿ ಒಪ್ಪಿಕೊಂಡರು.



ಸಂಗೀತಾ ಕೂಡ ಸಪೋರ್ಟ್ ತಗೊಂಡಿದ್ದರು’’ ಎಂದು ಗಾನವಿ ಮೊಂಡು ವಾದ ಮಾಡಲು ಆರಂಭಿಸಿದರು. ಪದೇ ಪದೇ ಸುದೀಪ್‌ ಅವರಿಗೆ ಗಾನವಿ ಅಬ್ಸರ್ವ್‌ ಮಾಡಿದ್ರಾ? ಎಂದು ಕೇಳಿದ್ದಾರೆ. ‘’ನಾನೇನು ಅಬ್ಸರ್ವ್ ಮಾಡಬೇಕು ಅಂತ ನಿಮ್ಮಿಂದ ಕಲಿಯಬೇಕಾಗಿಲ್ಲ. ನಾನೇನು ಅಬ್ಸರ್ವ್ ಮಾಡ್ತೀನಿ ಅಂತ ನಿಮಗೆ ಹೇಳಬೇಕಾಗಿಲ್ಲ. ಯಾರ ಬುಡ ಎಲ್ಲಿತ್ತು ಅಂತ ನನಗೆ ಗೊತ್ತು. ‘ಬಿಗ್ ಬಾಸ್’ ನನಗೆ ಸುಮ್ಮನೆ ದುಡ್ಡು ಕೊಟ್ಟು ಇಲ್ಲಿಗೆ ಕರ್ಕೊಂಡು ಬಂದ್ರಾ? ಏನೂ ನೋಡದೆ ನಾನು ಇಲ್ಲಿಗೆ ಬಂದು ಮಾತಾಡ್ತೀನಾ?’’ ಎಂದು ಸುದೀಪ್ ಗರಂ ಆದರು.

ಇದನ್ನೂ ಓದಿ: Bigg Boss Kannada 13: ಎಲ್ಲರೂ ಮನೆ ಬಿಟ್ಟು ಹೊರಡಿ, ವೀಕ್ಷಕರನ್ನು ನಾನು ರಂಜಿಸುವೆ ಎಂದ ಕಿಚ್ಚ

ಆ ಬಳಿಕ ಗಾನವಿ ಕೊಟ್ಟ ರಿಯಾಕ್ಷನ್‌ ಕಂಡು ನಿಮಗೆ ಇಂಟ್ರೆಸ್ಟ್ ಇದ್ದರೆ ಇರಿ. ಇಲ್ಲಾಂದ್ರೆ ಹೊರಡಿ. ಈಗಲೇ ಡೋರ್‌ ತೆಗೆಸುತ್ತೇನೆ. ಶೋಗೆ ಅವಮಾನ ಮಾಡಬೇಡಿ ಎಂದರು. ನಂದು ತಪ್ಪೇ ಇಲ್ಲ ಅಂದಾಗ ವಾದ ಮಾಡಬೇಕು. ಅವರು ಮಾಡಿದ್ದಾರೆ ಅಂತ ನಾವು ಮಾಡಿದಾಗ ಅಲ್ಲಈ ರೀತಿ ಸಮಜಾಯಿಷಿ ನೀಡುವುದು ಸರಿಯಲ್ಲ’ ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.