ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಗಾನವಿಗೆ ಹುಚ್ಚಿ ಹುಚ್ಚಿ ಎಂದು ಕೂಗಾಡಿ ರಂಪಾಟ ಮಾಡಿದ ಜಗ್ಗ!

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಶನ್‌ ಶುರು ಆಗಿದೆ. ಇಬ್ಬರು ಸದಸ್ಯರ ಪಾಪದ ಕೊಡ ತುಂಬಿದೆ ಎಂದು ಗುರುತಿಸುವ ಚಟುವಟಿಕೆ ನೀಡಿದ್ದರು ಬಿಗ್‌ ಬಾಸ್‌. ಯಾರ ಆಟದಲ್ಲಿ ಹೆಚ್ಚು ತಪ್ಪುಗಳಿವೆ ಎಂಬುದನ್ನು ತಮ್ಮದೇ ಕಾರಣಗಳೊಂದಿಗೆ ವಿವರಿಸುವ ಅವಕಾಶವನ್ನು ಸದಸ್ಯರಿಗೆ ನೀಡಲಾಗಿದೆ. ಈ ವೇಳೆ ಜಗ್ಗಪ್ಪ , ಗಾನವಿ ಹೆಸರನ್ನು ತೆಗೆದುಕೊಂಡರು.

ಗಾನವಿಗೆ ಹುಚ್ಚಿ ಹುಚ್ಚಿ ಎಂದು ಕೂಗಾಡಿ ರಂಪಾಟ ಮಾಡಿದ ಜಗ್ಗ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 5, 2026 7:36 PM

ಬಿಗ್‌ ಬಾಸ್‌ (Bigg Boss kannaa 13) ಮನೆಯಲ್ಲಿ ನಾಮಿನೇಶನ್‌ (Nomination) ಶುರು ಆಗಿದೆ. ಇಬ್ಬರು ಸದಸ್ಯರ ಪಾಪದ ಕೊಡ ತುಂಬಿದೆ ಎಂದು ಗುರುತಿಸುವ ಚಟುವಟಿಕೆ ನೀಡಿದ್ದರು ಬಿಗ್‌ ಬಾಸ್‌. ಯಾರ ಆಟದಲ್ಲಿ ಹೆಚ್ಚು ತಪ್ಪುಗಳಿವೆ ಎಂಬುದನ್ನು ತಮ್ಮದೇ ಕಾರಣಗಳೊಂದಿಗೆ ವಿವರಿಸುವ ಅವಕಾಶವನ್ನು ಸದಸ್ಯರಿಗೆ ನೀಡಲಾಗಿದೆ. ಈ ವೇಳೆ ಜಗ್ಗಪ್ಪ (Jaggappa) , ಗಾನವಿ (Ganavi) ಹೆಸರನ್ನು ತೆಗೆದುಕೊಂಡರು.

ಜಗ್ಗ ಕಾರಣ ನೀಡಿ, ಗಾನವಿ ಹೇಳ್ತಾರೆ, ಬರೀ ಮೊಟ್ಟೆಗೆ ಜಗಳ ಆಡ್ತೀನಿ ಅದು ಇದು ಅಂತ, ನಿಮ್ಮದು ಈಗಾಗಲೇ ಮುಖವಾಡ ಕಳಚಿ ಹೋಗಿದೆ. ಜಗದೀಶ್‌ ಹೇಗ ಇರಬೇಕು ಹಾಗೇ ಇರಬೇಕು ಅಂತ ಬಂದೆ. ಆದರೆ ಕೆಟ್ಟ ಮನಸ್ಥಿಗಳು ನೋಡಿದಾಗ ಕೆಟ್ಟ ಜಗದೀಶ್‌ ಆದೆ. ನಾನು ನಿನ್ನ ಮನೆಗೆ ಕಳಿಸಿ, ಟ್ರೋಫಿ ತೆಗೆದುಕೊಂಡು ಹೋಗ್ತೀನಿ. ಹುಚ್ಚಿ ಹುಚ್ಚಿ ಎಂದು ಗಾನವಿ ಮೇಲೆ ಕೆಂಡ ಕಾರಿದ್ದಾರೆ ಜಗ್ಗ.

ಮತ್ತೊಂದೆಡೆ ಮಂಜ , ಪ್ರಶಾಂತ್ ಗುರಿಯಾಗಿಸಿಕೊಂಡಿದ್ದಾರೆ. ಪ್ರಶಾಂತ್ ವೈಲ್ಡ್‌ಕಾರ್ಡ್ ಮೂಲಕ ಬಂದಿದ್ದಾರೆ ಎಂದುಕೊಂಡಿದ್ದೆ. ಆದರೆ ಅವರು ಚೈಲ್ಡ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬ ಕಾರಣವನ್ನು ಮಂಜ ನೀಡಿದ್ದಾರೆ. ಸೋನಿಕಾ, ತಾಂಡವ್ ಸೇರಿದಂತೆ ಕೆಲವರು ಯಶಸ್ ಹೆಸರನ್ನು ಪಾಪದ ಕೊಡ ಚಟುವಟಿಕೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 13: ಬಿಗ್​ ಬಾಸ್ ಮನೆಯಿಂದ ‘ಅಗ್ನಿಪರೀಕ್ಷೆ’ ದಾಟಿ ಬಂದ ಲಿಖಿತ್‌ ಔಟ್‌!

ಯಶಸ್ ಆಟದ ಬಗ್ಗೆ ತಾಂಡವ್ ಗಂಭೀರ ಆರೋಪ ಮಾಡಿದ್ದಾರೆ. ಯಾವುದೋ ಒಂದು ದೈಹಿಕ ಸಮಸ್ಯೆಯನ್ನು ಮುಂದಿಟ್ಟುಕೊಂಡು ಸಿಂಪತಿ ಪಡೆದು ಆಟದಲ್ಲಿ ಮುಂದೆ ಸಾಗುತ್ತಿದ್ದಾರೆ ಎಂದು ತಾಂಡವ್ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 13: 'ಪಾಪದ ಕೊಡ' ಟಾಸ್ಕ್‌ನಲ್ಲಿ ಯಶಸ್‌- ತಾಂಡವ್‌ ನಡುವೆ ಟಾಕ್‌ ಫೈಟ್‌!

ಆಟಕ್ಕೆ ಮೋಸ ಮಾಡುವುದು ಕೂಡ ಒಂದು ಪಾಪ ಎಂದು ಆರೋಪಿಸಿದ್ದಾರೆ. ಯಶಸ್ ಕೂಡ ಆಟದಲ್ಲಿ ಪಾಪದ ಬಗ್ಗೆ ಹೇಳುವಷ್ಟು ದೊಡ್ಡ ವ್ಯಕ್ತಿಗಳೇನೂ ನೀವಲ್ಲ ಎಂದು ತಿರುಗೇಟು ನೀಡಿದ್ದಾರೆ.