ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಅಡುಗೆ ಮಾಡೋದು ದೊಡ್ಡ ಕೆಲ್ಸನಾ? ಸಂಗೀತಾ ಮೇಲೆ ಓಂ ಪ್ರಕಾಶ್ ಗರಂ

Bigg Boss Kannada 13: ಟಾಸ್ಕ್‌ನಲ್ಲಿ ಮಂಜ ಹಾಗೂ ಲಿಖಿತ್ ಗೆದ್ದಿದ್ದಾರೆ. ವಿಮಾನದಲ್ಲಿದ್ದ ಮಂಜ ‘ಬಿಗ್ ಬಾಸ್’ ಮನೆಗೆ ಕಾಲಿಟ್ಟು ಸೇಫ್ ಆಗಿದ್ದಾರೆ. ಇತ್ತ ಓಂ ಪ್ರಕಾಶ್ ರಾವ್ ಮತ್ತೆ ವಿಮಾನ ಏರಿ ಡೇಂಜರ್ ಝೋನ್‌ನಲ್ಲಿದ್ದಾರೆ. ಇದೀಗ ಓಂ ಪ್ರಕಾಶ್‌ ತಕರಾರು ಎತ್ತಿದ್ದಾರೆ. ಅಷ್ಟೇ ಅಲ್ಲ ಮನೆಯಲ್ಲಿ ಯಾರೂ ಅರ್ಹರಲ್ಲ ವ್ಯಕ್ತಿ ಮತ್ತೆ ಕಳಿಸಬೇಕಿತ್ತು. ಧನುಷ್‌ ಅವರನ್ನು ಮತ್ತೆ ವಿಮಾನಕ್ಕೆ ಕಳಿಸಲಾಗಿದೆ.

ಬಿಗ್‌ ಬಾಸ್‌ ಕನ್ನಡ

ವಿಮಾನದಲ್ಲಿರುವ ಪ್ರಯಾಣಿಕರಿಗೆ ಹಾಗೂ ಬಿಗ್ ಬಾಸ್ (Bigg Boss Kannada) ಮನೆಯೊಳಗಿರುವ ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ಟಾಸ್ಕ್‌ ನೀಡಿದ್ದಾರೆ. ತಮಗೆ ಮೀಸಲಿರುವ ಎಲ್ಲಾ ತಿಂಡಿಗಳನ್ನು ತಿಂದು ಮೊದಲು ಖಾಲಿ ಮಾಡುವ ಭೋಜಕರ ತಂಡ ಟಾಸ್ಕ್ ಗೆದ್ದಂತೆ. ಸ್ಪರ್ಧಿಗಳ ತಂಡದಿಂದ ಜಗದೀಶ್ ಹಾಗೂ ಓಂ ಪ್ರಕಾಶ್ (Om Prakash) ರಾವ್ ಪ್ರಯಾಣಿಕರ ತಂಡದಿಂದ ಕೆಟ್ಟದಾಗಿ ತಯಾರು ಮಾಡಿರುವ ತಿಂಡಿ ತಿನ್ನಲು ಲಿಖಿತ್ ಹಾಗೂ ಮಂಜ ಇದ್ದರು. ಈ ಟಾಸ್ಕ್‌ನಲ್ಲಿ ಮಂಜ ಹಾಗೂ ಲಿಖಿತ್ ಗೆದ್ದಿದ್ದಾರೆ. ವಿಮಾನದಲ್ಲಿದ್ದ ಮಂಜ ‘ಬಿಗ್ ಬಾಸ್’ ಮನೆಗೆ ಕಾಲಿಟ್ಟು ಸೇಫ್ ಆಗಿದ್ದಾರೆ. ಇತ್ತ ಓಂ ಪ್ರಕಾಶ್ ರಾವ್ ಮತ್ತೆ ವಿಮಾನ ಏರಿ ಡೇಂಜರ್ ಝೋನ್‌ನಲ್ಲಿದ್ದಾರೆ. ಇದೀಗ ಓಂ ಪ್ರಕಾಶ್‌ ತಕರಾರು ಎತ್ತಿದ್ದಾರೆ. ಅಷ್ಟೇ ಅಲ್ಲ ಮನೆಯಲ್ಲಿ ಯಾರೂ ಅರ್ಹರಲ್ಲ ವ್ಯಕ್ತಿ ಮತ್ತೆ ಕಳಿಸಬೇಕಿತ್ತು. ಧನುಷ್‌ ಅವರನ್ನು ಮತ್ತೆ ವಿಮಾನಕ್ಕೆ ಕಳಿಸಲಾಗಿದೆ.

ಅಡುಗೆ ಮಾಡೋದು ದೊಡ್ಡ ಕೆಲಸವೇ?

ಇದೀಗ ಓಂ ಪ್ರಕಾಶ್‌ ಟಾಸ್ಕ್‌ ಬಗ್ಗೆ ಮಾತನಾಡಿದ್ದಾರೆ. ಸ್ಕೇಟಿಂಗ್‌ ಕೂಡ ನಮ್ಮ ತಂಡದಲ್ಲಿ ಡಬ್ಬ ತರ ಆಡಿದರು. ನಾನು ಅವರಿಗಿಂತ ಚೆನ್ನಾಗಿ ಮಾಡ್ತಿದ್ದೆ. ನಾವು ಮಾಡೋ ಕೆಲಸ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಳ್ಳಬೇಕು. ಸಂಗೀತಾ ಹೇಳಿದ್ರು ನಾವೂ ಏಫರ್ಟ್‌ ಹಾಕಿದ್ದೀವಿ ಅಂತ. ಅಡುಗೆ ಮಾಡೋದು ದೊಡ್ಡ ಕೆಲಸವೇ? ಜಗ್ಗು ನೋಡಿ ಪಾಪ ಅನ್ಸುತ್ತು. ಅವನ ಕಳಿಸೋಕೆ ನೋಡ್ತಾ ಇದ್ದರು ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆದವರು ಯಾರೆಲ್ಲ? ಡೇಂಜರ್ ಝೋನ್‌ನಲ್ಲಿ ಆಸಿಯಾ



ದುರಹಂಕಾರ ಅಹಂಕಾರ ಇಟ್ಟುಕೊಳ್ಳಬೇಡಿ

ಇನ್ನು ವಿಮಾನ ಪ್ರಯಾಣದಲ್ಲಿ ಇರೋರು ಯಾರೂ ಮನೆಗೆ ಬರಲು ಅರ್ಹರಲ್ಲ ಎಂದು ಪ್ರಶ್ನೆ ಇಟ್ಟಿದ್ದಾರೆ. ಆಗ ಗಗನ್‌ ಧನು ಅವರ ಹೆಸರು ತೆಗೆದುಕೊಂಡರು. ಧನುಷ್‌ ಮಾತಲ್ಲಿ ಯಾವಾಗಲೂ ಮರ್ಯಾದೆ ಇರಬೇಕು. ದುರಹಂಕಾರ ಅಹಂಕಾರ ಇಟ್ಟುಕೊಳ್ಳಬೇಡಿ ಎಂದಿದ್ದಾರೆ. ಅದನ್ನು ಧನುಷ್‌ ಅವರು ಖಂಡಿಸಿದರು. ಇವರು ಪರ್ಸನಲ್‌ ಟಾರ್ಗೆಟ್‌ ಮಾಡುತ್ತಿದ್ದಾರೆ. ಇಡೀ ಕರ್ನಾಟಕ ಜನತೆ ನೋಡುತ್ತಿದೆ. ಇಲ್ಲಿ ಕಾಮನ್‌ ಮ್ಯಾನ್‌ಗಳಿಗೆ ಪರ್ಸನಲ್‌ ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಧನುಷ್‌ ಅವರು ಕೂಗಾಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ದುರಹಂಕಾರ ಇಟ್ಟುಕೊಳ್ಳಬೇಡಿ ಎಂದ ಗಗನ್‌ ಮೇಲೆ ಧನುಷ್‌ ಕೆಂಡಾಮಂಡಲ

ಈ ಟಾಸ್ಕ್‌ನ ಉಸ್ತುವಾರಿ ಹೊತ್ತಿರೋದು ವಿಐಪಿ ಸ್ಟೇಟಸ್ ಪಡೆದ ಗಗನ್ ಚಿನ್ನಪ್ಪ. ಟಾಸ್ಕ್ ವೇಳೆ ಗಗನ್ ಚಿನ್ನಪ್ಪ ಹಾಗೂ ಮಂಜ ಮತ್ತು ಧನು ನಡುವೆ ಮಾತಿನ ಚಕಮಕಿ ನಡೆದಿದೆ. ಮೊದಲ ದಿನವೇ ಮಂಜ, ಕಿರಣ್ ಶಾಸ್ತ್ರಿ ಹಾಗೂ ಲಿಖಿತ್ ಗೊಂದಿ ವಿರುದ್ಧ ಇತರೆ ಸ್ಪರ್ಧಿಗಳು ತಮ್ಮ ಅಸಮಾಧಾನವನ್ನ ಹೊರಹಾಕಿದರು.

Yashaswi Devadiga

View all posts by this author