ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆದವರು ಯಾರೆಲ್ಲ? ಡೇಂಜರ್ ಝೋನ್‌ನಲ್ಲಿ ಆಸಿಯಾ

Bigg Boss Kannada 13: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಕಾಮನ್‌ ಮ್ಯಾನ್‌ ಹಾಗೂ ಸೆಲೆಬ್ರಿಟಿಗಳಿಗೆ ಜಿದ್ದಾಜಿದ್ದಿ ಇರುವಂತಿದೆ. ಮನೆಯಲ್ಲಿ ಕೆಲವೇ ಗಂಟೆಗಳಲ್ಲಿ ಮೊದಲ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ವಿಮಾನದೊಳಗೆ ಉಳಿದುಕೊಂಡಿರುವ ಎಲ್ಲ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಆದರೆ ಅವರು ಕೂಡ ಸೇಫ ಆಗಬಹುದು.

ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆದವರು ಯಾರೆಲ್ಲ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 9, 2026 10:00 AM

ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ಕಾಮನ್‌ ಮ್ಯಾನ್‌ ಹಾಗೂ ಸೆಲೆಬ್ರಿಟಿಗಳಿಗೆ ಜಿದ್ದಾಜಿದ್ದಿ ಇರುವಂತಿದೆ. ಮನೆಯಲ್ಲಿ ಕೆಲವೇ ಗಂಟೆಗಳಲ್ಲಿ ಮೊದಲ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ವಿಮಾನದೊಳಗೆ (Flight) ಉಳಿದುಕೊಂಡಿರುವ ಎಲ್ಲ ಸ್ಪರ್ಧಿಗಳು ನಾಮಿನೇಟ್ (Nominate) ಆಗಿದ್ದಾರೆ. ಆದರೆ ಅವರು ಕೂಡ ಸೇಫ ಆಗಬಹುದು.

ನಾಮಿನೇಟ್ ಆಗಿದ್ಯಾರು?

ಮಂಜ, ಅವಿನಾಶ್, ಲಿಖಿತ್, ಧನುಷ್, ಕಿರಣ್ ಶಾಸ್ತ್ರಿ, ವೈಷ್ಣವಿ, ಸೌಂದರ್ಯಾ ಶೆಟ್ಟಿ, ಪ್ರಥಮಾ ಪ್ರಸಾದ್ ಅವರು ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ಒಬ್ಬರು ಬಿಗ್ ಬಾಸ್ ಮನೆಯೊಳಗೆ ಕಾಲಿಡದೆಯೇ ಎಲಿಮಿನೇಟ್ ಆಗಲಿದ್ದಾರೆ ಎಂದು ಬಿಗ್‌ ಬಾಸ್‌ ಅನೌನ್ಸ್‌ ಮಾಡಿದರು. ಕಾವ್ಯಾ, ಸಂಗೀತಾ ಭಟ್, ಓಂ ಪ್ರಕಾಶ್ ರಾವ್, ಜಗ್ಗ ಮಮ್ಮಿ, ಗಗನ ಚಿನ್ನಪ್ಪ, ಆಸಿಯಾ, ತಾಂಡವ್ ರಾಮ್, ಯಶಸ್ ಕೃಷ್ಣ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದಾರೆ.

ಇದನ್ನೂ ಓದಿ: Bigg Boss Kannada 13: ಅಧಿಕಪ್ರಸಂಗ ಮಾತನಾಡಬೇಡ; ಗಗನ್-ಮಂಜು ಜಗಳಕ್ಕೆ 'BASE' ಜೋರಾಗೇ ಇದೆ

ಬಿಗ್ ಬಾಸ್ ಮನೆಗೆ ಈಗಾಗಲೇ ಎಂಟ್ರಿ ಪಡೆದಿರುವ ಸ್ಪರ್ಧಿಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ವಿಫಲವಾದರೆ ಅಂಥವರನ್ನು ಮತ್ತೆ ವಿಮಾನದ ಒಳಗೆ ಕಳಿಸಲಾಗುತ್ತದೆ. ಆಗ ಅವರು ಕೂಡ ನಾಮಿನೇಟ್ ಆಗುತ್ತಾರೆ. ವಿಮಾನದಲ್ಲೇ ಉಳಿದಿರುವ ಸ್ಪರ್ಧಿಗಳು ಹೆಚ್ಚು ಶ್ರಮ ಹಾಕಬೇಕಿದೆ.

ಆಸಿಯಾ ಡೇಂಜರ್ ಝೋನ್‌

ಬಿಗ್‌ ಬಾಸ್‌ ಮನೆಯ ಸದಸ್ಯರಿಗೆ ಒಂದು ಟಾಸ್ಕ್‌ ನೀಡಲಾಗಿತ್ತು. ಬಾಕ್ಸ್ ಒಂದನ್ನ ನೀಡಲಾಗಿದ್ದು, ಅದರಲ್ಲಿ ಡೈಮಂಡ್‌ ಮತ್ತು ನೇರವಾಗಿ ನಾಮಿನೇಟ್‌ ಆಗುವ ಬಿಗ್‌ ಸೀಕ್ರೆಟ್‌ನ್ನ ಬಚ್ಚಿಡಲಾಗಿತ್ತು. ಈ ಟಾಸ್ಕ್‌ನಲ್ಲಿ ಯಾರು ಚಾಣಕ್ಷತನ ತೋರುತ್ತಾರೋ ಅವರಿಗೆ ದೊಡ್ಡ ಅಡ್ವಾಂಟೆಜ್‌ ಕೂಡ ಸಿಗಲಿತ್ತು.



ವಜ್ರ ತಮ್ಮ ಹತ್ತಿರ ಇರುವ ಬಗ್ಗೆ ಯಾರ ಬಳಿಯೂ ಸೀಕ್ರೆಟ್‌ ಬಿಟ್ಟುಕೊಡುವಂತಿಲ್ಲ. “ಒಂದು ವೇಳೆ ವಜ್ರ ಇರುವ ಬಾಕ್ಸ್‌ನ ಸೀಕ್ರೆಟ್‌ ಹೊರಬಂದರೇ ಆ ಬಾಕ್ಸ್‌ನ ಮಾಲೀಕ ನೇರವಾಗಿ ನಾಮಿನೇಷನ್ ಪಟ್ಟಿಯನ್ನು ಸೇರಿಕೊಳ್ಳುತ್ತಾರೆ”.ಗಗನ್‌ ಚಿನ್ನಪ್ಪ ಅವರಿಗೆ ಡೈಮಂಡ್‌ ಇರುವ ಬಾಕ್ಸ್‌ ಸಿಕ್ಕಿತ್ತು. ಆದರೆ, ಈ ಗುಟ್ಟನ್ನ ಅವರು ಕಾಪಾಡಿಕೊಳ್ಳಬೇಕು ತಮ್ಮ ಬಳಿ ಯಾವ ಡೈಮಂಡ್‌ ಇಲ್ಲ ಎನ್ನುವಂತೆ ಹೇಳಿಕೊಳ್ಳುತ್ತಿದ್ದಾರೆ. ಗಗನ್ ಚಿನ್ನಪ್ಪ ತಮ್ಮ ಬಳಿಯಿದ್ದ ಡೈಮಂಡ್ ಅನ್ನು ಮುಚ್ಚಿಟ್ಟು ಆಸಿಯಾ ಮೇಲೆ ಅನುಮಾನ ಬರುವಂತೆ ಮಾಡುತ್ತಾರೆ.

ಇದನ್ನೂ ಓದಿ: Bigg Boss kannada 13: ನಾಮಿನೇಷನ್ ಕಾವು! ತಾಂಡವ್ - ಗಗನ್ ಟಾರ್ಗೆಟ್‌ಗೆ ಟ್ರಿಗರ್ ಆದ ಆಸಿಯಾ

ಕೊಹಿನೂರ್’ ಚಾಲೆಂಜ್‌ನಲ್ಲಿ ಗಗನ್ ಚಿನ್ನಪ್ಪ ಗೆದ್ದು ವಿಐಪಿ ಆದರು. ಇತ್ತ ಆಸಿಯಾ ಫಿರ್ದೋಸ್ ಸೋತು ಮತ್ತೆ ವಿಮಾನ ಏರಿದರು. ಹೀಗಾಗಿ, ಪ್ರಸ್ತುತ ಆಸಿಯಾ ಫಿರ್ದೋಸ್‌ ಸಹ ಡೇಂಜರ್ ಝೋನ್‌ನಲ್ಲಿದ್ದಾರೆ.