ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ದುರಹಂಕಾರ ಇಟ್ಟುಕೊಳ್ಳಬೇಡಿ ಎಂದ ಗಗನ್‌ ಮೇಲೆ ಧನುಷ್‌ ಕೆಂಡಾಮಂಡಲ

Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಹಲವು ನಿಯಮಗಳಿದ್ದು, ಅವುಗಳನ್ನು ಪ್ರತಿಯೊಬ್ಬ ಸ್ಪರ್ಧಿಯೂ ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಅದರಲ್ಲೂ ಮನೆಯ ಮೂಲ ನಿಯಮಗಳನ್ನು ಉಲ್ಲಂಘಿಸಿದರೆ ವಾರಾಂತ್ಯದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ (Sudeep) ಅವರಿಂದ ಕ್ಲಾಸ್ ಸಿಗುವುದು ಖಚಿತ. ಗಗನ್‌ ಈ ವಿಚಾರದಲ್ಲಿ ಕಿಚ್ಚನಿಂದ ಕ್ಲಾಸ್‌ ತೆಗೆದುಕೊಳ್ಳೋದು ಗ್ಯಾರಂಟಿ ಆದಂತಿದೆ. ಇದರ ಬೆನ್ನಲ್ಲೇ ಹೊಸ ಗಲಾಟೆ ಆಗಿದೆ.

ದುರಹಂಕಾರ ಇಟ್ಟುಕೊಳ್ಳಬೇಡಿ ಎಂದ ಗಗನ್‌ ಮೇಲೆ ಧನುಷ್‌ ಕೆಂಡಾಮಂಡಲ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 9, 2026 3:58 PM

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ಗಗನ್‌ ಸಖತ್‌ ಸೌಂಡ್‌ ಮಾಡುತ್ತಿದ್ದಾರೆ. . ಬಿಗ್ ಬಾಸ್ ಮನೆಯಲ್ಲಿ ಹಲವು ನಿಯಮಗಳಿದ್ದು, ಅವುಗಳನ್ನು ಪ್ರತಿಯೊಬ್ಬ ಸ್ಪರ್ಧಿಯೂ ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಅದರಲ್ಲೂ ಮನೆಯ ಮೂಲ ನಿಯಮಗಳನ್ನು ಉಲ್ಲಂಘಿಸಿದರೆ ವಾರಾಂತ್ಯದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ (Sudeep) ಅವರಿಂದ ಕ್ಲಾಸ್ ಸಿಗುವುದು ಖಚಿತ. ಗಗನ್‌ ಈ ವಿಚಾರದಲ್ಲಿ ಕಿಚ್ಚನಿಂದ ಕ್ಲಾಸ್‌ ತೆಗೆದುಕೊಳ್ಳೋದು ಗ್ಯಾರಂಟಿ ಆದಂತಿದೆ. ಇದರ ಬೆನ್ನಲ್ಲೇ ಹೊಸ ಗಲಾಟೆ ಆಗಿದೆ.

ವಿಮಾ ಪ್ರಯಾಣದಲ್ಲಿ ಯಾರೂ ಮನೆಗೆ ಬರಲು ಅರ್ಹರಲ್ಲ ಎಂದು ಪ್ರಶ್ನೆ ಇಟ್ಟಿದ್ದಾರೆ. ಆಗ ಗಗನ್‌ ಧನು ಅವರ ಹೆಸರು ತೆಗೆದುಕೊಂಡರು. ಧನುಷ್‌ ಮಾತಲ್ಲಿ ಯಾವಾಗಲೂ ಮರ್ಯಾದೆ ಇರಬೇಕು. ದುರಹಂಕಾರ ಅಹಂಕಾರ ಇಟ್ಟುಕೊಳ್ಳಬೇಡಿ ಎಂದಿದ್ದಾರೆ. ಅದನ್ನು ಧನುಷ್‌ ಅವರು ಖಂಡಿಸಿದರು. ಇವರು ಪರ್ಸನಲ್‌ ಟಾರ್ಗೆಟ್‌ ಮಾಡುತ್ತಿದ್ದಾರೆ. ಇಎಈ ಕರ್ನಾಟಕ ಜನತೆ ನೋಡುತ್ತಿದೆ. ಇಲ್ಲಿ ಕಾಮನ್‌ ಮ್ಯಾನ್‌ಗಳಿಗೆ ಪರ್ಸನಲ್‌ ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಧನುಷ್‌ ಅವರು ಕೂಗಾಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ಅಧಿಕಪ್ರಸಂಗ ಮಾತನಾಡಬೇಡ; ಗಗನ್-ಮಂಜು ಜಗಳಕ್ಕೆ 'BASE' ಜೋರಾಗೇ ಇದೆ

ಗಗನ್‌ಗೆ ಈ ವಾರ ಕ್ಲಾಸ್‌ ಫಿಕ್ಸ್‌

ಈಗಾಗಲೇ ಗಗನ್ ಹಾಗೂ ತಾಂಡವ್ ಮನೆಯೊಳಗೆ ಒಂದು ತಂಡದಂತೆ ಕಾಣಿಸಿಕೊಂಡಿದ್ದು, ಆಟದ ವಿಚಾರದಲ್ಲಿ ಹಲವು ತಂತ್ರಗಳನ್ನು ರೂಪಿಸುತ್ತಿದ್ದಾರೆ.

ಈ ವಾರ ಯಾರನ್ನು ನಾಮಿನೇಟ್ ಮಾಡಬೇಕು ಎಂಬುದರ ಬಗ್ಗೆ ಗಗನ್‌ ತಾಂಡವ್‌ ಮಾತುಕತೆ ನಡೆಸಿದ್ದು, ತಮ್ಮ ಆಯ್ಕೆಗೆ ಮನೆಯ ಇತರ ಸ್ಪರ್ಧಿಗಳ ಬೆಂಬಲ ಪಡೆಯುವ ಬಗ್ಗೆಯೂ ಯೋಜನೆ ರೂಪಿಸಿದ್ದಾರೆ. ‘ನೀನು ಯಾರನ್ನು ನಾಮಿನೇಟ್ ಮಾಡ್ತೀಯಾ?’ ಎಂದು ಗಗನ್ ಅವರು ತಾಂಡವ್ ಬಳಿ ಪ್ರಶ್ನಿಸಿದ್ದಾರೆ. ಇದಕ್ಕೆ ತಾಂಡವ್ ಅವರು ‘ಮಾಡರ್ನ್ ಮಹಾಕವಿ ಮಂಜು’ ಅವರ ಹೆಸರನ್ನು ಹೇಳಿದ್ದಾರೆ.

ಬಳಿಕ ಮಂಜು ಅವರನ್ನು ನಾಮಿನೇಟ್ ಮಾಡುವಂತೆ ಸಂಗೀತಾ ಸೇರಿದಂತೆ ಇತರ ಸ್ಪರ್ಧಿಗಳನ್ನು ಒಲಿಸಿಕೊಳ್ಳುವ ಕುರಿತು ಇಬ್ಬರೂ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: Bigg Boss Kannada 13: ನಾಮಿನೇಷನ್ ಬಗ್ಗೆ ಓಪನ್ ಗೇಮ್ ಪ್ಲ್ಯಾನ್‌! ಗಗನ್ -ತಾಂಡವ್ ರೂಲ್ಸ್‌ ಬ್ರೇಕ್‌

ಆದರೆ, ನಾಮಿನೇಷನ್ ವಿಚಾರದಲ್ಲಿ ಈ ರೀತಿಯ ಚರ್ಚೆ ನಡೆಸಿರುವುದು ಬಿಗ್ ಬಾಸ್ ಮನೆಯ ಮೂಲ ನಿಯಮಕ್ಕೆ ವಿರುದ್ಧವಾಗಿದ್ದು, ಈ ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಈ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವೀಕ್ಷಕರು ಅಭಿಪ್ರಾಪಡುತ್ತಿದ್ದಾರೆ.