ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಇದರ ಅರ್ಥ ತಾಂಡವ್‌ ಜರ್ನಿ ಕಂಪ್ಲೀಟ್‌ ಆಗಿಲ್ಲ; ಶಾಕ್‌ ಕೊಟ್ಟೇ ಬಿಟ್ರು ಕಿಚ್ಚ

Bigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13’ ಮನೆಯಿಂದ ಸ್ಪರ್ಧಿ ತಾಂಡವ್ ರಾಮ್ ನಿರ್ಗಮನದ ವಿಚಾರವೇ ಬಿಗ್ ಬಾಸ್ ಪ್ರೇಕ್ಷಕರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ತಾಂಡವ್ ಮನೆಯಿಂದ ಹೊರಬಂದಿರುವುದು ಕೆಲ ವೀಕ್ಷಕರಿಗೆ ಬೇಸರ ತಂದಿದ್ದರೆ, ಇನ್ನೊಂದೆಡೆ ಅವರ ಮುಂದಿನ ಹೆಜ್ಜೆ ಏನು ಎಂಬ ಕುತೂಹಲವೂ ಹೆಚ್ಚಾಗಿತ್ತು. ‘ನಿಂತುಹೋಗಿರುವ ಗಡಿಯಾರಕ್ಕೆ ಮತ್ತೆ ಜೀವ ಬರುತ್ತಾ? ಅಥವಾ ಅದನ್ನು ಗೋಡೆಯಿಂದ ಶಾಶ್ವತವಾಗಿ ತೆಗೆದುಹಾಕುವ ಸಮಯ ಬಂತಾ?’ ಎಂಬ ಅರ್ಥದಲ್ಲಿ ಸುದೀಪ್ ಹೇಳಿದ್ದರು ಅಂತೂ ಉತ್ತರ ಸಿಕ್ಕಿದೆ.

ಬಿಗ್‌ ಬಾಸ್‌ ಕನ್ನಡ

ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ಮನೆಯಿಂದ ಸ್ಪರ್ಧಿ ತಾಂಡವ್ ರಾಮ್ (Thandav Ram) ನಿರ್ಗಮನದ ವಿಚಾರವೇ ಬಿಗ್ ಬಾಸ್ ಪ್ರೇಕ್ಷಕರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ತಾಂಡವ್ ಮನೆಯಿಂದ ಹೊರಬಂದಿರುವುದು ಕೆಲ ವೀಕ್ಷಕರಿಗೆ ಬೇಸರ ತಂದಿದ್ದರೆ, ಇನ್ನೊಂದೆಡೆ ಅವರ ಮುಂದಿನ ಹೆಜ್ಜೆ ಏನು ಎಂಬ ಕುತೂಹಲವೂ ಹೆಚ್ಚಾಗಿತ್ತು. ‘ನಿಂತುಹೋಗಿರುವ ಗಡಿಯಾರಕ್ಕೆ ಮತ್ತೆ ಜೀವ ಬರುತ್ತಾ? ಅಥವಾ ಅದನ್ನು ಗೋಡೆಯಿಂದ ಶಾಶ್ವತವಾಗಿ ತೆಗೆದುಹಾಕುವ ಸಮಯ ಬಂತಾ?’ ಎಂಬ ಅರ್ಥದಲ್ಲಿ ಸುದೀಪ್ ಹೇಳಿದ್ದರು ಅಂತೂ ಉತ್ತರ ಸಿಕ್ಕಿದೆ.

ವೇದಿಕೆ ಮೇಲೆ ತಾಂಡವ್‌ ಅವರನ್ನು ಕರೆಸುತ್ತಾರೆ ಕಿಚ್ಚ ಸುದೀಪ್‌. ಅಷ್ಟು ಕಾನ್‌ಫಿಡೆಂಟ್‌ ಆಗಿ ವೇದಿಕೆ ಮೇಲೆ ಹೋದ್ರಿ. ಆದರೆ ಏನು ಮಾಡಿದ್ರಿ ಎಡವಟ್ಟು? ಹೋದ ವಾರ ಬಂದಾಗ ಏನು ಮಾಡಬೇಡಿ ಎಂದಿದ್ದೆ?ಎಂದು ಕಿವಿ ಹಿಂಡಿದ್ದಾರೆ ಕಿಚ್ಚ. ಆ ಬಳಿಕ VT ಪ್ಲೇ ಮಾಡಲು ಹೇಳಿದ್ದಾರೆ. ಆದರೆ VT ಪ್ಲೇ ಆಗಲೇ ಇಲ್ಲ. ಅದರೆ ತಾಂಡವ್‌ ಜರ್ನಿ ಇನ್ನೂ ಕಂಪ್ಲೀಟ್‌ ಆಗಿಲ್ಲ ಎಂದರ್ಥ ಎಂದು ಶಾಕ್‌ ಕೊಟ್ಟರು ಸುದೀಪ್.

ಇದನ್ನೂ ಓದಿ: Bigg Boss Kannada 13: ಮನೆ ಕೆಲಸ ಮಾಡೋದಕ್ಕೆ ಕಿರಣ್ ಶಾಸ್ತ್ರೀ ತಕರಾರು!



ಮತ್ತೆ ಮನೆಯೊಳಗೆ ಪ್ರವೇಶಿಸಿದರೆ ಈಗಿನ ಆಟದ ಲೆಕ್ಕಾಚಾರಗಳು ಬದಲಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಯನ್ನ ಉಳಿಸಿಕೊಳ್ಳಲು ಹಗಲು-ರಾತ್ರಿ ಅಭಿಮಾನದಿಂದ ವೋಟ್ ಹಾಕ್ತಾರೆ. ಆದರೆ, ʻಬಿಗ್‌ ಬಾಸ್‌ʼ ಮನೆಯೊಳಗಿನ ಅಗತ್ಯಕ್ಕೆ ತಕ್ಕಂತೆ ಅಥವಾ ಅಲ್ಲಿನ ಸ್ಪರ್ಧಿಗಳ ನಿರ್ಧಾರಕ್ಕೆ ಅನುಗುಣವಾಗಿ ಉತ್ತಮವಾಗಿ ಆಡುತ್ತಿದ್ದ ಆಟಗಾರನನ್ನ ಹೊರದಬ್ಬುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಅಭಿಮಾನಿಗಳ ನೇರ ಪ್ರಶ್ನೆಯಾಗಿತ್ತು.

ಇದನ್ನೂ ಓದಿ: Bigg Boss Kannada 12: Bigg Boss 12 Finale: ಕುಚಿಕು ದೋಸ್ತಿಗಳೇ ವಿನ್ನರ್‌, ರನ್ನರ್‌! ಗೆದ್ದ ಗಿಲ್ಲಿ ಪಕ್ಕಾ ನಿಂತ ಪಟಾಕಿ ರಕ್ಷಿತಾ

ಅಂದಹಾಗೆ, ಕಳೆದ ಸೀಸನ್‌ನಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಮನೆಗೆ ಎಂಟ್ರಿ ಕೊಟ್ಟ ಮೊದಲ ದಿನವೇ ರಕ್ಷಿತಾ ಶೆಟ್ಟಿಯನ್ನ ಎಲಿಮಿನೇಟ್‌ ಮಾಡಲಾಗಿತ್ತು. ಆದರೆ, ಇದು ಎನ್‌ಫೇರ್‌, ರಕ್ಷಿತಾ ಶೆಟ್ಟಿಯನ್ನ ಮತ್ತೆ ಕರೆಸಿ ಎಂದು ಪ್ರೇಕ್ಷಕರು ಪಟ್ಟು ಹಿಡಿದಿದ್ದರು. ಒಂದು ವಾರದ ಬಳಿಕ ರಕ್ಷಿತಾ ಶೆಟ್ಟಿಯನ್ನ ʻಬಿಗ್‌ ಬಾಸ್‌ʼ ವಾಪಸ್‌ ಕರೆಸಿದ್ರು.ಇದೀಗ ಅದೇ ರೀತಿ ಮತ್ತೆ ಆಗಿದೆ.

Yashaswi Devadiga

View all posts by this author