Bigg Boss Kannada 13: ಆತ್ಮೀಯ ಗೆಳೆಯ ತಾಂಡವ್ಗೆ `ಕುನ್ನಿ' ಎಂದ ಗಗನ್! ದೋಸ್ತಿಗಳಲ್ಲಿ ಬಿರುಕು
Bigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13 (Bigg Boss Kannada 13) ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮನೆಯೊಳಗೆ ಸ್ನೇಹಿತರಾಗಿದ್ದವರು ಶತ್ರುಗಳಾಗುವುದು, ಶತ್ರುಗಳಾಗಿದ್ದವರು ಮತ್ತೆ ಒಂದಾಗುವುದು ಸಾಮಾನ್ಯವಾಗಿದೆ. ಆದರೆ ಇದೀಗ ಎಲ್ಲರ ಗಮನ ಸೆಳೆದಿರುವುದು ಆತ್ಮೀಯ ಗೆಳೆಯರಾಗಿದ್ದ ಗಗನ್ ಚಿನ್ನಪ್ಪ (Gagan Chinnappa) ಮತ್ತು ತಾಂಡವ್ ರಾಮ್ (Thandav Ram) ನಡುವಿನ ಭಾರೀ ಜಗಳ. ಟಾಸ್ಕ್ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಇದೀಗ ವೈಯಕ್ತಿಕ ನಿಂದನೆ ಮತ್ತು ಎಚ್ಚರಿಕೆ ನೀಡುವ ಹಂತಕ್ಕೆ ತಲುಪಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಕನ್ನಡ ಸೀಸನ್ 13 (Bigg Boss Kannada 13) ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮನೆಯೊಳಗೆ ಸ್ನೇಹಿತರಾಗಿದ್ದವರು ಶತ್ರುಗಳಾಗುವುದು, ಶತ್ರುಗಳಾಗಿದ್ದವರು ಮತ್ತೆ ಒಂದಾಗುವುದು ಸಾಮಾನ್ಯವಾಗಿದೆ. ಆದರೆ ಇದೀಗ ಎಲ್ಲರ ಗಮನ ಸೆಳೆದಿರುವುದು ಆತ್ಮೀಯ ಗೆಳೆಯರಾಗಿದ್ದ ಗಗನ್ ಚಿನ್ನಪ್ಪ (Gagan Chinnappa) ಮತ್ತು ತಾಂಡವ್ ರಾಮ್ (Thandav Ram) ನಡುವಿನ ಭಾರೀ ಜಗಳ. ಟಾಸ್ಕ್ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಇದೀಗ ವೈಯಕ್ತಿಕ ನಿಂದನೆ ಮತ್ತು ಎಚ್ಚರಿಕೆ ನೀಡುವ ಹಂತಕ್ಕೆ ತಲುಪಿದೆ.
ಆತ್ಮೀಯ ಗೆಳೆಯರಾಗಿದ್ದ ಗಗನ್ ಮತ್ತು ತಾಂಡವ್!
ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭವಾದಾಗಿನಿಂದಲೂ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಮನೆಯೊಳಗೆ ಆತ್ಮೀಯ ಗೆಳೆಯರಾಗಿ ಗುರುತಿಸಿಕೊಂಡಿದ್ದರು. ಇಬ್ಬರೂ ಒಟ್ಟಿಗೆ ಕಾಲ ಕಳೆಯುತ್ತಾ, ಟಾಸ್ಕ್ಗಳಲ್ಲಿಯೂ ಪರಸ್ಪರ ಬೆಂಬಲ ನೀಡುತ್ತಿದ್ದರು. ಇವರ ಸ್ನೇಹವನ್ನು ಕಂಡು ಆರಂಭದಲ್ಲಿ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Bigg Boss Kannada 13: ಯಶಸ್ ವಿರುದ್ಧ ಆಸಿಯಾ ಗರಂ; ಸ್ನೇಹ ಅಂತ್ಯ!
ಗೆಳೆಯನಿಗೆ 'ಕುನ್ನಿ' ಎಂದ ಗಗನ್!
ಇದೀಗ ಈ ಆತ್ಮೀಯ ಗೆಳೆಯರ ನಡುವೆಯೇ ದೊಡ್ಡ ಮಟ್ಟದ ಮನಸ್ತಾಪ ಉಂಟಾಗಿದೆ. ಬಿಗ್ ಬಾಸ್ ನೀಡಿದ ಟಾಸ್ಕ್ವೊಂದರ ವಿಚಾರವಾಗಿ ಗಗನ್ ಮತ್ತು ತಾಂಡವ್ ನಡುವೆ ವಾಗ್ವಾದ ಶುರುವಾಗಿದೆ. ಆಟದ ಭರದಲ್ಲಿ ತಾಳ್ಮೆ ಕಳೆದುಕೊಂಡ ಗಗನ್ ಚಿನ್ನಪ್ಪ, ತಾಂಡವ್ ರಾಮ್ ಅವರನ್ನು 'ಕುನ್ನಿ' ಎಂದು ಕರೆದಿದ್ದಾರೆ.
ಗಗನ್ ಮಾತಿನಿಂದ ಕೆರಳಿದ ತಾಂಡವ್ ರಾಮ್, ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. "ನಾನು ರೊಚ್ಚಿಗೆದ್ದರೆ ತಿಂದು ಹಾಕಿಬಿಡುತ್ತೇನೆ" ಎಂದು ಗಗನ್ಗೆ ನೇರವಾಗಿಯೇ ಹೇಳಿದ್ದಾರೆ. ಇದರಿಂದ ಇಬ್ಬರ ನಡುವಿನ ವಾಗ್ವಾದ ಮತ್ತಷ್ಟು ತಾರಕಕ್ಕೇರಿದೆ.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯ ಹಾವು ಗಾನವಿ! ಸೌಂದರ್ಯ ಶೆಟ್ಟಿ ವಿಡಿಯೋ ಭರ್ಜರಿ ವೈರಲ್
ಒಂದು ಟಾಸ್ಕ್ನಿಂದ ಆರಂಭವಾದ ಗಲಾಟೆ ಇದೀಗ ಗಗನ್ ಮತ್ತು ತಾಂಡವ್ ನಡುವಿನ ಸ್ನೇಹದಲ್ಲೇ ಬಿರುಕು ಮೂಡಿಸಿದಂತಿದೆ. ಆಟಕ್ಕಿಂತ ಸ್ನೇಹವೇ ಮುಖ್ಯ ಎಂಬಂತೆ ಕಾಣುತ್ತಿದ್ದ ಈ ಜೋಡಿ ಈಗ ಒಬ್ಬರಿಗೊಬ್ಬರು ಸವಾಲು ಹಾಕುವ ಮಟ್ಟಕ್ಕೆ ತಲುಪಿದೆ.