ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ವೀಕ್ಷಕರ ಮಾತು ನಿಜವಾಯ್ತು! ಈ ಇಬ್ಬರಿಗೆ ಕಿಚ್ಚನ ಚಪ್ಪಾಳೆ

Bigg Boss Kannada 13: ಈ ವಾರ ಲೂಟಿಕಾರರ ತಂಡದಲ್ಲಿ ತಾಂಡವ್ ಹಾಗೂ ಸೌಂದರ್ಯ ಶೆಟ್ಟಿ ಇದ್ದರು. ವೈಯಕ್ತಿಕ ಭಿನ್ನಾಭಿಪ್ರಾಯಗಳು, ಮನಸ್ತಾಪವನ್ನ ಬದಿಗಿಟ್ಟು ತಾಂಡವ್ ಹಾಗೂ ಸೌಂದರ್ಯ ಶೆಟ್ಟಿ ಹೈಸ್ಟ್ ಟಾಸ್ಕ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಇದೀಗ ವಾರದ ಪಂಚಾಯಿತಿಯಲ್ಲಿ ಸುದೀಪ್ ಬಂದಿದ್ದು, ವಾರದ ಚಪ್ಪಾಳೆ ತಾಂಡವ್‌ ಹಾಗೂ ಸೌಂದರ್ಯಗೆ ನೀಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಈ ವಾರ ಲೂಟಿಕಾರರ ತಂಡದಲ್ಲಿ ತಾಂಡವ್ (Thandav ram) ಹಾಗೂ ಸೌಂದರ್ಯ ಶೆಟ್ಟಿ (Soundarya shetty) ಇದ್ದರು. ವೈಯಕ್ತಿಕ ಭಿನ್ನಾಭಿಪ್ರಾಯಗಳು, ಮನಸ್ತಾಪವನ್ನ ಬದಿಗಿಟ್ಟು ತಾಂಡವ್ ಹಾಗೂ ಸೌಂದರ್ಯ ಶೆಟ್ಟಿ ಹೈಸ್ಟ್ ಟಾಸ್ಕ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಇದೀಗ ವಾರದ ಪಂಚಾಯಿತಿಯಲ್ಲಿ ಸುದೀಪ್ ಬಂದಿದ್ದು, ವಾರದ ಚಪ್ಪಾಳೆ ತಾಂಡವ್‌ ಹಾಗೂ ಸೌಂದರ್ಯಗೆ ನೀಡಿದ್ದಾರೆ.

ಈ ಟಾಸ್ಕ್​​ನಲ್ಲಿ ದರೋಡೆಕೋರರ ತಂಡ ಅತ್ಯುತ್ತಮವಾಗಿ ಆಡಿತು. ಇನ್ನು, ರಕ್ಷಕರ ತಂಡ ಸಂಪೂರ್ಣವಾಗಿ ವಿಫಲರಾಗಿ ಟಾಸ್ಕ್​​ನಲ್ಲಿ ಸೋತಿತು. ಈ ವಿಷಯದಲ್ಲಿ ಸುದೀಪ್ ಅವರು ಪಂಚಾಯ್ತಿ ನಡೆಸಲಿದ್ದಾರೆ.

ನಿಮ್ಮ ಇಗೋಗಳನ್ನ ಪಕ್ಕ ಇಟ್ಟು ಟೀಂ ಆಗಿ ವರ್ಕ್‌ ಮಾಡಿದ್ರಿ. ಬ್ಲಾಕ್‌ ಬಸ್ಟರ್‌, ಎಂಟರ್‌ಟೇನ್ಮೆಂಟ್‌ ಆಫ್‌ ದ ವೀಕ್‌ ಸೌಂದರ್ಯ ಎಂದರು ಕಿಚ್ಚ. ಇನ್ನು ಯಾರೂ ಕೂಡ ನಮ್ಮನ್ನ ಗುರುತು ಮಾಡ್ತಿಲ್ಲ ಅಂತ ಗೊತ್ತಿದ್ದರು, ಅದೆಲ್ಲ ಪಕ್ಕ ಇಟ್ಟು ಅಧ್ಭುತವಾಗಿ ಆಡ್ತಿರಲ್ಲ. ಈ ಎಲ್ಲ ಅಂಶಗಳು ಸೇರಿ ಈ ವಾರದ ಕಿಚ್ಚನ ಚಪ್ಪಾಳೆ ಸೌಂದರ್ಯ ಹಾಗೂ ತಾಂಡವ್‌ಗೆ ಎಂದರು ಕಿಚ್ಚ,

ಇದನ್ನೂ ಓದಿ: Actor Dhanveer: ನಟ ಧನ್ವೀರ್ ಗೌಡಗೆ ಸಂಕಷ್ಟ; ಮತ್ತೊಂದು ದೂರು ದಾಖಲು



ಇದನ್ನೂ ಓದಿ: Bigg Boss Kannada 13: ಅದ್ಭುತವಾಗಿ ಆಟ ಆಡಿದ ಸೌಂದರ್ಯಾ ಈ ವಾರದ ಕ್ಯಾಪ್ಟನ್‌, ʻಉತ್ತಮʼ ಪಟ್ಟ; ಕಿಚ್ಚನ ಚಪ್ಪಾಳೆ ಯಾರಿಗೆ?

ಬಿಗ್​​ಬಾಸ್ ಮನೆಯಲ್ಲಿ ಮೆಚ್ಚುಗೆ ಪಡೆದ ಟಾಸ್ಕ್‌ ‘ಲೂಟಿಕೋರರು ಮತ್ತು ರಕ್ಷಕರು’. . ಲೂಟಿಕೋರರು, ಮತ್ತು ಕಾವಲುಗಾರರ ನಡುವೆ ನಡೆದ ಟಾಸ್ಕ್​​ನಲ್ಲಿ ಅಂತಿಮವಾಗಿ ಲೂಟಿಕೋರರು ಗೆದ್ದರು. ಡೈಮಂಡ್‌ ಹಾಗೂ ಕಿರೀಟ ಕದ್ದು ತಾಂಡವ್ , ಆಸಿಯಾ, ಸೌಂದರ್ಯಾ, ಲಕ್ಷ್ಮಿ ಮತ್ತು ಸೋನಿಕಾ ಅವರ ನಡುವೆ ಕ್ಯಾಪ್ಟೆನ್ಸಿಗೆ ಸ್ಪರ್ಧೆ ನಡೆಯಿತು. ಕೊನೆಗೆ ಸೌಂದರ್ಯ ಶೆಟ್ಟಿ ಕ್ಯಾಪ್ಟನ್ ಆಗಿದ್ದಾರೆ. ಸ್ಪೆನ್ಸ್‌, ಥ್ರಿಲ್ಲಿಂಗ್‌ ಅಂಶಗಳಿಂದ ಕೂಡಿದ್ದ ಟಾಸ್ಕ್‌ನ್ನ ಸ್ಪರ್ಧಿಗಳ ಜೊತೆಗೆ ವೀಕ್ಷಕರು ಕೂಡ ಬಹಳ ಎಂಜಾಯ್ ಮಾಡಿದ್ದಾರೆ.

Yashaswi Devadiga

View all posts by this author