Actor Dhanveer: ನಟ ಧನ್ವೀರ್ ಗೌಡಗೆ ಸಂಕಷ್ಟ; ಮತ್ತೊಂದು ದೂರು ದಾಖಲು
Actor Dhanveer:ಈಗಾಗಲೇ ಧನ್ವೀರ್ (Dhanveer Gowda) ವಿರುದ್ಧ ದೂರು ದಾಖಲಾಗಿರುವ ಬೆನ್ನಲ್ಲೇ, ಮತ್ತೊಂದು ಬೆದರಿಕೆ ಆರೋಪ ಕೇಳಿಬಂದಿದೆ. ಭೋಜರಾಜ್ ಎಂಬುವವರು ಧನ್ವೀರ್ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದ್ದು, ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ತಮಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವುದಾಗಿ ಬೋಜರಾಜ್ (bhojaraja) ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಧನ್ವೀರ್ ಗೌಡ -
ಈಗಾಗಲೇ ಧನ್ವೀರ್ (Dhanveer Gowda) ವಿರುದ್ಧ ದೂರು ದಾಖಲಾಗಿರುವ ಬೆನ್ನಲ್ಲೇ, ಮತ್ತೊಂದು ಬೆದರಿಕೆ ಆರೋಪ ಕೇಳಿಬಂದಿದೆ. ಭೋಜರಾಜ್ ಎಂಬುವವರು ಧನ್ವೀರ್ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದ್ದು, ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ತಮಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವುದಾಗಿ ಬೋಜರಾಜ್ (bhojaraja) ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಆಪ್ತ ಸಹಾಯಕ ನಾಗರಾಜ್ ನಡುವಿನ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ದೂರಿನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾದ ಮಾಹಿತಿಯ ಪ್ರಕಾರ, ನಾಗರಾಜ್ ಎಂಬುವವರು ಕರೆ ಮಾಡಿ ರಾಜಾಜಿನಗರದಲ್ಲಿರುವ ಧನ್ವೀರ್ ಮನೆಗೆ ಬರುವಂತೆ ತಿಳಿಸಿದ್ದರು. ಈಗಾಗಲೇ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಆಪ್ತ ಸಹಾಯಕ ನಾಗರಾಜ್ ನಡುವಿನ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಇದನ್ನೂ ಓದಿ: Bigg Boss Kannada 13: ಸೌಂದರ್ಯ ಕ್ವಾಟ್ಲೆಗೆ ಗಗನ್ ತಲೆ 'ಗಿರ ಗಿರ'!
ದೂರಿನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾದ ಮಾಹಿತಿಯ ಪ್ರಕಾರ, ನಾಗರಾಜ್ ಎಂಬುವವರು ಕರೆ ಮಾಡಿ ರಾಜಾಜಿನಗರದಲ್ಲಿರುವ ಧನ್ವೀರ್ ಮನೆಗೆ ಬರುವಂತೆ ತಿಳಿಸಿದ್ದರು. ಅವರ ಮನೆ ಬಳಿ ಹೋಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅವುಗಳನ್ನು ಧನ್ವೀರ್ ಹಾಗೂ ಅವರ ಕಡೆಯವರು ಅಳಿಸಿ ಹಾಕುವ ಸಂಭವ ಇದ್ದು, ಅವುಗಳನ್ನು ಕೂಡಲೇ ಪಡೆದುಕೊಂಡು ತನಿಖೆ ನಡೆಸಬೇಕೆಂದು ಬೋಜರಾಜ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Bigg Boss Kannada 13: ಅದ್ಭುತವಾಗಿ ಆಟ ಆಡಿದ ಸೌಂದರ್ಯಾ ಈ ವಾರದ ಕ್ಯಾಪ್ಟನ್, ʻಉತ್ತಮʼ ಪಟ್ಟ; ಕಿಚ್ಚನ ಚಪ್ಪಾಳೆ ಯಾರಿಗೆ?
ಇದರ ಬೆನ್ನಲ್ಲೇ ಧನ್ವೀರ್ ತಂದೆ ತಿಮ್ಮೇಗೌಡ ವಿಜಯಲಕ್ಷ್ಮೀ ಮತ್ತು ಆಪ್ತರ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ನೀಡಿದ್ದರು ಎಂದು ಆರೋಪಿಸಿದ್ದಾರೆ. ಧನ್ವೀರ್ ಮತ್ತು ವಿಜಯಲಕ್ಷ್ಮಿ ದರ್ಶನ್ ನಡುವೆ ಮುನಿಸು ಉಂಟಾಗಿದ್ದು, ಪರಸ್ಪರರ ಮೇಲೆ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ..