ʻಬಿಗ್ ಬಾಸ್ ಕನ್ನಡ ಸೀಸನ್ 13ʼರಲ್ಲಿ (Bigg Boss Kannada 13) ಯಶಸ್ ಅವರು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಟಾಸ್ಕ್ ಗೆಲ್ಲುವ ಮೂಲಕ ಅವರು ಈ ಪಟ್ಟ ಪಡೆದುಕೊಂಡರು.ಕ್ಯಾಪ್ಟನ್ಸಿ ಪಟ್ಟಕ್ಕಾಗಿ ಭಾರೀ ಪೈಪೋಟಿ ನಡೆಸಿದ್ದರು. ಅಂತಿಮವಾಗಿ ಗಾನವಿ ಗೌಡ (ganavi Gowda) ಹಾಗೂ ಯಶಸ್ ಗೌಡ ನಡುವೆ ಭಾರೀ ಫೈಟ್ ಇದ್ದು, ಯಶಸ್ ಈ ವಾರದ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ತಾಂಡವ್‌ಗೆ ಉತ್ತಮ ಪಟ್ಟ ಸಿಕ್ಕಿದೆ.
ಜಗದೀಶ್, ಗಗನ್ ಚಿನ್ನಪ್ಪ, ಪ್ರಶಾಂತ್ ಹಾಗೂ ಯಶಸ್ ಅವರು ಓಟ್ ಮಾಡಿದ್ದಕ್ಕಾಗಿ ತಾಂಡವ್ ರಾಮ್ ಅವರಿಗೆ ಉತ್ತಮ ಪಟ್ಟ ಸಿಕ್ಕಿದೆ. . ಯಶಸ್ ಅವರ ಈ ಗೆಲುವು ಮನೆಯಲ್ಲಿರುವ ಆಸಿಯಾ ಹಾಗೂ ಸೌಂದರ್ಯ ಶೆಟ್ಟಿ ಖುಷಿಪಟ್ಟರು.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಗೆಲ್ಲೋದು ಯಾರು?
ಮನೆಯವರಿಂದ ಪತ್ರ ಪಡೆಯುವ ಅವಕಾಶವನ್ನು ಈ ವಾರ ನೀಡಲಾಗಿತ್ತು. ಅದರ ಬೆನ್ನಲ್ಲೇ ಒಂದು ಟ್ವಿಸ್ಟ್ ಕೂಡ ಎದುರಾಗಿದೆ. ಈಗ ಮನೆಯೊಳಗೆ ಇರುವ ಸದಸ್ಯರು ತಮ್ಮ ಸಹ-ಸ್ಪರ್ಧಿಗಳಿಗೆ ಪತ್ರ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಪತ್ರ ಅನಾಮಧೇಯ ಆಗಿರುತ್ತದೆ. ಯಾರು ಬರೆದಿದ್ದಾರೆ ಎಂಬ ಗುರುತನ್ನು ಬಹಿರಂಗ ಮಾಡದೇ ಪತ್ರಗಳನ್ನು ನೀಡಲಾಗಿದೆ.
ಸೌಂದರ್ಯಾ, ಪ್ರಶಾಂತ್, ಕಿರಣ್ ಶಾಸ್ತ್ರಿ ಮುಂತಾದ ಸ್ಪರ್ಧಿಗಳ ಬಗ್ಗೆ ಕಟುವಾಗಿ ಟೀಕೆ ಮಾಡಲಾಗಿದೆ. ಆಸಿಯಾ ಫಿರ್ದೋಸ್, ತಾಂಡವ್ ಹಾಗೂ ಸೋನಿಕಾ ಅವರಿಗೆ ಕುಟುಂಬದ ಪತ್ರ ದೊರೆಯಲಿಲ್ಲ. ಪತ್ರ ಪಡೆಯದ ಈ ಸ್ಪರ್ಧಿಗಳ ಕೈಯಲ್ಲೇ ಕ್ಯಾಪ್ಟನ್ಸಿ ಓಟಕ್ಕೆ ಸ್ಪರ್ಧಿಗಳನ್ನ ಆಯ್ಕೆ ಮಾಡುವ ಪ್ರಮುಖ ಅಧಿಕಾರವನ್ನ ʻಬಿಗ್ ಬಾಸ್ʼ ನೀಡಿದ್ದರು.
ಇದನ್ನೂ ಓದಿ: Bigg Boss Kannada 13: ನೀನು ಲಫಂಗಾ, ಕಚಡಾ, ನಾಯಿ! ಸೌಂದರ್ಯ ಮೇಲೆ ಜಗ್ಗಣ್ಣ ಕೆಂಡಾಮಂಡಲ!
ಅಂತಿಮವಾಗಿ ಕ್ಯಾಪ್ಟನ್ ಪಟ್ಟಕ್ಕಾಗಿ ಯಶಸ್ ಮತ್ತು ಗಾನವಿ ಗೌಡ ಮುಖಾಮುಖಿಯಾದರು. ಇಬ್ಬರಿಗೂ ಇದು ಮೊದಲ ಬಾರಿ ಮನೆಯ ಕ್ಯಾಪ್ಟನ್ ಆಗುವ ಅವಕಾಶವಾಗಿತ್ತು.