ಈ ವಾರ ಬಿಗ್ ಬಾಸ್ (Bigg Boss Kannada 12) ಒಂದು ದೊಡ್ಡ ಟ್ವಿಸ್ಟ್ (Twist) ಕೊಟ್ಟಿದ್ದರು. ತಮ್ಮ ಮಾತು ಮತ್ತು ಸ್ವಭಾವಗಳಿಂದ ಸ್ಪರ್ಧಿಗಳಿಂದಲೇ ಈ ವಾರ ಎಲಿಮಿನೇಷನ್‌ನಿಂದ (Elimination) ಬಚಾವ್ ಆಗಬೇಕಿದೆ. ಸದ್ಯ ಫ್ಯಾಮಿಲಿಗಳಿಂದ ಪತ್ರಗಳು (Family Letter) ಮನೆಯೊಳಗೆ ಬರುತ್ತಿದೆ. ಅದೇ ರೀತಿ ಈಗ ರಕ್ಷಿತಾ ಹಾಗೂ ರಾಶಿಕಾ (Rakshita Rashika) ಅವರಿಗೂ ಮನೆಯವರಿಂದ ಪತ್ರ ಬಂದಿದೆ. ಆದರೆ ಬಿಗ್ ಬಾಸ್ ಒಂದು ಟ್ವಿಸ್ಟ್ ಇಟ್ಟಿದ್ದಾರೆ. ಮನೆಯವರ ಒಮ್ಮತ ನಿರ್ಧಾರ ಮಾಡಿ, ಒಬ್ಬರಿಗೆ ಲೆಟರ್ ನೀಡುವಂತೆ ಆದೇಶಿಸಿದೆ. ಇದರಲ್ಲಿ ಅಶ್ವಿನಿ ಗೌಡ ಅವರು ಮತ್ತೆ ರಕ್ಷಿತಾ ಬಗ್ಗೆ ಬೇಕಾಬಿಟ್ಟಿ ಮಾತನಾಡಿದ್ದಾರೆ.
ರಾಶಿಕಾಗೆ ಪತ್ರ ಸಿಗಬೇಕು ಎಂದು ವಾದ
ಅಶ್ವಿನಿ, ರಿಷಾ ಮೊದಲಾದವರು ರಾಶಿಕಾಗೆ ಪತ್ರ ಸಿಗಬೇಕು ಎಂದು ವಾದಿಸಿದರು. ಆದರೆ, ಅಂತಿಮವಾಗಿ ಯಾವುದೇ ಒಮ್ಮತ ಬಂದಿಲ್ಲ. ಹೀಗಾಗಿ, ಇಬ್ಬರಿಗೂ ಪತ್ರ ಕೈ ತಪ್ಪಿದೆ. ಮನೆಯ ಪತ್ರ ಕೈ ತಪ್ಪಿದ್ದರಿಂದ ಅವರು ಕಣ್ಣೀರು ಹಾಕಿದರು.
ಇದನ್ನೂ ಓದಿ: Bigg Boss Kannada 12: ಇದೇ ನಿಜವಾದ ಸ್ನೇಹ! ಕಾವುಗೋಸ್ಕರ ಪತ್ರ ತ್ಯಾಗ ಮಾಡಿದ ಗಿಲ್ಲಿ
ಧ್ರುವಂತ್ ನಡವಳಿಕೆಗೆ ಛೀಮಾರಿ!
ಇನ್ನು ನಿನ್ನೆಯ ಸಂಚಿಕೆಯಲ್ಲಿ ಅಶ್ವಿನಿ ತಂಡ ಗ್ರೂಪಿಸಮ್ ಎಂಬ ಹಣೆಪಟ್ಟಿ ಕೂಡ ನೀಡಿತು. ಬಹುತೇಕರು ರಕ್ಷಿತಾ ಅವರಿಗೆ ಲೆಟರ್ ವಿಚಾರವಾಗಿ ಸಮಾಧಾನ ಮಾಡಿದರೆ, ಧ್ರುವಂತ್ ಅವರು ದೂರ ನಿಂತು ನೋಡುತ್ತಲೇ ಇದ್ದರು. ಅಣ್ಣ ಅಣ್ಣ ಎಂದು ಕರೆಯುತ್ತಿದ್ದ ಧ್ರುವಂತ್ ರಕ್ಷಿತಾ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದ ಅವರ ವರ್ತನೆ ಕಂಡೇ ವೀಕ್ಷಕರು ಗರಂ ಆಗಿದ್ದಾರೆ.
ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಗಿ ಮಲ್ಲಮ್ಮ ಮತ್ತು ಧ್ರುವಂತ್ ಜೊತೆ ಇರುತ್ತಿದ್ದಳು. ಧ್ರುವಂತ್ ನನ್ನು ಅಣ್ಣ ಅಂತಾನೆ ಕರೆಯುತ್ತಿದ್ದಳು. ರಿಷಾ ಧ್ರುವಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಸ್ಟಾಂಡ್ ತೆಗೆದುಕೊಂಡು ಮಾತನಾಡಿದ್ದು ಕೂಡ ಇದೇ ರಕ್ಷಿತಾ.
ಇದನ್ನೂ ಓದಿ: BBK 12: ಜಾಹ್ನವಿ-ಅಶ್ವಿನಿನ ಹತ್ತಿರ ಮಾಡ್ತಾ ಪತ್ರ? ಅಪ್ಪನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ
ಧ್ರುವಂತ್ ಹೊಸ ಆರೋಪ
ಇದಕ್ಕೂ ಮುಂಚೆ ಧ್ರುವಂತ್ ಅವರು ರಾತ್ರಿ ರಕ್ಷಿತಾ ಬಗ್ಗೆ ಕೆಲವು ಆರೋಪ ಮಾಡಿದ್ದರು. ಮನೆಯಲ್ಲಿ ನಾನೇ ಅಡುಗೆ ಮಾಡ್ತಿನಿ, ನಾನೇ ಪಾತ್ರೆ ತೊಳೆಯುತ್ತೇನೆ ಎಂದು ಮುಂದೆ ಬಂದು ಮಾಡ್ತಾಳೆ. ಆದರೆ ಅದು ಸರಿ ಆಗಿರಲ್ಲ. ಇಡೀ ಮನೆಯನ್ನು ನಾನೇ ನೋಡಿಕೊಳ್ಳೋದು, ರಕ್ಷಿತಾ ಬಿಟ್ಟರೆ ಇಲ್ಲಿ ಯಾರೂ ಇಲ್ಲ ಅನ್ನೋ ಥರ ಆಡ್ತಾಳೆ. ಮಂಗಳೂರು ಕಡೆ ಅವಳ ರೀತಿ ಕನ್ನಡ ಮಾತನಾಡಲ್ಲ. ಅವಳಿಗೆ ಕನ್ನಡ ಬಂದರೂ ಬೇಕು ಎಂದೇ ಮಾತನಾಡುವುದಿಲ್ಲ ಎಂದು ಆರೋಪ ಮಾಡಿದ್ದರು.