ಬಿಗ್ ಬಾಸ್ ಮನೆಯಲ್ಲಿ (Bigg Boss Kannada 13) ಕ್ಯಾಪ್ಟನ್ಸಿ ಟಾಸ್ಕ್ ಓಟ ಜೋರಾಗಿದೆ. ಗಾನವಿ (Ganavi) ಆಟದ ಬಗ್ಗೆ ಸ್ಪರ್ಧಿಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಗಗನ್ ಚಿನ್ನಪ್ಪ (Gagan Chinnappa) ಮತ್ತು ಗಾನವಿ ನಡುವೆ ಉಂಟಾದ ಮನಸ್ತಾಪ ಮುಂದುವರಿಯುತ್ತಲೇ ಇದೆ. ಟಾಸ್ಕ್ ವಿಚಾರದಲ್ಲಿಯೂ ಅವರಿಬ್ಬರ ನಡುವೆ ಕಿರಿಕ್ ಆಗಿದೆ.
. ‘ನಾನು ಇಲ್ಲಿ ಬಂದಿರುವುದು ನನ್ನ ಆಟ ಆಡೋಕೆ. ನಾನು ಗೆಲ್ಲಬೇಕು. ನನಗಿಂತ ನೀವು ಮುಂದೆ ಹೋಗಿ ಅಂತ ಬಿಟ್ಟುಕೊಡುವುದು ಆಟ ಅಲ್ಲ. ನಾನು ಟಾಪ್ನಲ್ಲಿ ಇರಬೇಕು ಎಂಬುದೇ ಆಟ’ ಎಂದು ಗಾನವಿ ಅವರು ಹೇಳಿದ್ದಾರೆ. ‘ಇಷ್ಟು ಕೆಳಮಟ್ಟಕ್ಕೆ ಇಳಿದು ಗೆಲ್ಲಬಾರದು’ ಎಂದು ಗಗನ್ ಚಿನ್ನಪ್ಪ ಅವರು ಹೇಳಿದ್ದಾರೆ. ‘
ತಮ್ಮದೇ ರೂಲ್ಸ್
ಬಿಗ್ ಬಾಸ್ (Bigg Boss Kannada 13) ಮನೆಯಲ್ಲಿ ಗಾನವಿ (Ganavi) ಸದ್ಯ ರೂಲ್ಸ್ ಬ್ರೇಕ್ ಜೊತೆ ಮೋಸದ ಆಟ ಶುರು ಮಾಡಿದ್ದಾರೆ. ನಿನ್ನೆಯ ಉಸ್ತುವಾರಿಯಲ್ಲಿಯೂ ತಮ್ಮದೇ ರೂಲ್ಸ್ ಮಾಡಿಕೊಂಡು ಆಟವನ್ನೇ ಚೇಂಜ್ ಮಾಡಿದ್ದರು. ಇದೀಗ ಟೀಂಗೆ ಮೋಸ ಮಾಡಿದ್ದಾರೆ. ಹೊಸ ಪ್ರೋಮೋ ಔಟ್ ಆಗಿದೆ.
ಇದನ್ನೂ ಓದಿ: Bigg Boss Kannada 13: Puzzle ಪೈಪೋಟಿ; ಹೆಜ್ಜೆ ಹೆಜ್ಜೆಗೂ ಸವಾಲ್!
ಒಂಟಿ ತಂಡ 30 ಕಾಯಿನ್ಗಳನ್ನು ಗಳಿಸಿತ್ತು. ಹಾಗಾಗಿ ಅದನ್ನು ಶೇರ್ ಮಾಡುವಂತೆ ಬಿಗ್ ಬಾಸ್ ಆದೇಶಿಸಿದ್ದರು. ಈ ವೇಳೆ ಒಂಟಿ ತಂಡ ಮಾತನಾಡುವಾಗ, ಗಾನವಿ ತಮ್ಮ ತಂಡಕ್ಕೆ ಮನವಿ ಮಾಡಿದರು. ಬಹುಮತದಲ್ಲಿ ನನ್ನ ಹೆಸರು ಯಾವಾಗಲೂ ಬರೋದಿಲ್ಲ. ಇದು ಒಂದು ಸಲ ನನಗೆ ಚಾನ್ಸ್ ಕೊಡಿ. ಆಗ ಗಗನ್ ಇದ್ದವರು ನಾನು ಹೋಗುವೆ ಎಲ್ಲರಿಗೂ 6 ಕಾಯಿನ್ಸ್ ಕೊಡುವೆ ಎಂದಿದ್ದಾರೆ. ಅದಕ್ಕೆ ಗಾನವಿ ಇದ್ದವರು ನಾನು ಕೂಡ ಪ್ರಾಮಿಸ್ ಮಾಡುವೆ ನಿಂಗೆ ೬..೬ ಅಂತ ಹೇಳಿದ್ದಾರೆ. ಹಾಗಾಗಿ ಅವರನ್ನ ನಂಬಿ ತಂಡ ಗಾನವಿ ಅವರನ್ನು ಕಳಿಸುತ್ತಾರೆ.
ಇದನ್ನೂ ಓದಿ: Bigg Boss Kannada 13: ಗಾನವಿನ ನಂಬಿ ಕೆಟ್ರಾ ಒಂಟಿ ಪಂಟರ್ಸ್?
ಗಾನವಿ ಕನ್ಫೇಷನ್ ರೂಮ್ನಲ್ಲಿ ಕೊನೆಗೆ ಉಲ್ಟಾ ಹೊಡೆದಿದ್ದಾರೆ. ನನಗೆ ನಾನು 15 ಪವರ್ ಕಾಯಿನ್ಸ್ ಪಡೆದುಕೊಳ್ಳಲು ಇಷ್ಟ ಪಡುತ್ತೇನೆ ಎಂದಿದ್ದಾರೆ. ಗಾನವಿನ ನಂಬಿ ಕೆಟ್ರಾ ಒಂಟಿ ಪಂಟರ್ಸ್? ಎನ್ನೋದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.ಸಸ