ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಕಾವ್ಯ ವಿರುದ್ಧದ ರಕ್ಷಿತಾ ಶೆಟ್ಟಿಯ ದ್ವೇಷ ಅತಿರೇಕಕ್ಕೆ ಹೋಯ್ತಾ? ರಜತ್‌ ಕೊಟ್ಟ ತಿರುಗೇಟಿಗೆ ಗಿಲ್ಲಿ ವಂಶದ ಕುಡಿ ಫುಲ್‌ ಸೈಲೆಂಟ್‌!

BBK 12: ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಶೈವ ಕ್ಯಾಪ್ಟನ್ ಆಗಿ ಆಯ್ಕೆಯಾದದ್ದನ್ನು ರಕ್ಷಿತಾ ಶೆಟ್ಟಿ ಮುಕ್ತವಾಗಿ ವಿರೋಧಿಸಿದ್ದಾರೆ. "ಕಾವ್ಯಗೆ ಕ್ಯಾಪ್ಟನ್ ಆಗುವ ಅರ್ಹತೆ ಇಲ್ಲ, ಮನೆಯವರು ಸೇರಿ ಅವರನ್ನು ಗೆಲ್ಲಿಸಿದ್ದಾರೆ" ಎಂದು ರಕ್ಷಿತಾ ವಾದಿಸಿದರು. ಆದರೆ ಈ ವಾದಕ್ಕೆ ರಜತ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ರಕ್ಷಿತಾ ಶೆಟ್ಟಿ ಮತ್ತು ಕಾವ್ಯ ಶೈವ ನಡುವೆ ಕೋಲ್ಡ್‌ ವಾರ್‌ ಇದ್ದೇ ಇದೆ. ಅದು ಇತ್ತೀಚಿನ ದಿನಗಳಲ್ಲಿ ಎದ್ದು ಕಾಣುತ್ತಿದೆ. ಕಾವ್ಯ ಅದನ್ನು ಹೈಲೈಟ್‌ ಮಾಡುತ್ತಿಲ್ಲವಾದರೂ, ರಕ್ಷಿತಾ ಮಾತ್ರ ಕೊಂಚ ಜಾಸ್ತಿಯೇ ಅದನ್ನು ತೋರಿಸಿಕೊಳ್ಳುತ್ತಿದ್ದಾರೆ. ಅವರ ಎಲ್ಲಾ ಆಟದ ಕಾರ್ಯತಂತ್ರಗಳಲ್ಲೂ ಕಾವ್ಯ ಅವರನ್ನು ತುಳಿಯುವುದಕ್ಕೆ ಪ್ರಯತ್ನಿಸುತ್ತಿರುತ್ತಾರೆ. ಸದ್ಯ ಆ ಕುರಿತ ಚರ್ಚೆಯೊಂದು ಸುದೀಪ್ ನಡೆದಿದೆ.‌

ಕಾವ್ಯ ಕ್ಯಾಪ್ಟನ್‌ ಆಗಿದ್ದರ ಬಗ್ಗೆ ರಕ್ಷಿತಾ ಮಾತು!

"ಕಾವ್ಯ ಗೆಲ್ಲಲೇಬಾರದು ಎಂದು ಪ್ಲಾನ್‌ ಮಾಡಿದ್ರಿ, ಈಗ ವಾಪಸ್‌ ಬಂದಿದ್ದೀರಿ, ಆದರೆ ಕಾವ್ಯ ಅವರೇ ಕ್ಯಾಪ್ಟನ್‌ ಆಗಿದ್ದಾರೆ.." ಎಂದು ರಕ್ಷಿತಾಗೆ ಸುದೀಪ್‌ ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ರಕ್ಷಿತಾ, "ಕಾವ್ಯ ಕ್ಯಾಪ್ಟನ್‌ ಆಗಿದ್ದು ನನಗೆ ವಾವ್‌ ಅಂತ ಏನೂ ಅನ್ನಿಸಲಿಲ್ಲ. ಎಲ್ಲರೂ ಸಪೋರ್ಟ್‌ ಮಾಡಿ ಗೆಲ್ಲಸಿದ್ದು ರಾಂಗ್.‌ ಕಳೆದ ವಾರ ನಾಮಿನೇಟ್‌ ಮಾಡಿದವರೇ ಈಗ ಅವರನ್ನು ಕ್ಯಾಪ್ಟನ್‌ ಮಾಡಿದ್ದಾರೆ. ವೋಟ್‌ ಮಾಡಿದ ಅಭಿಪ್ರಾಯದಲ್ಲಿ ಸತ್ಯ ಇಲ್ಲ ಎಂದು ನನಗೆ ಅನ್ನಿಸುತ್ತದೆ. ಕಾವ್ಯಗೆ ಕ್ಯಾಪ್ಟನ್‌ ಆದರೂ ಅವರಲ್ಲಿ ಕಾನ್ಫಿಡೆನ್ಸ್‌ ಕಾಣಿಸುತ್ತಿಲ್ಲ. ಇವರೆಲ್ಲಾ ಸೇರಿ ಕ್ಯಾಪ್ಟನ್‌ ಮಾಡಿದ್ದಾರೆ. ಆದರೂ ಅವರಲ್ಲಿ ನನಗೆ ಖುಷಿ ಕಾಣಿಸುತ್ತಿಲ್ಲ" ಎಂದು ಹೇಳಿದ್ದಾರೆ.

BBK 12: ದೊಡ್ಮನೆ ಮನೆಯಿಂದ ಹೊರಬಿದ್ದ ಧ್ರುವಂತ್‌ - ರಕ್ಷಿತಾ ಶೆಟ್ಟಿ; ಈ ವಾರ ಬಿಗ್‌ ಟ್ವಿಸ್ಟ್‌ ಕೊಡ್ತಿದ್ದಾರೆ ಬಿಗ್‌ ಬಾಸ್‌! ಏನದು?

ನಿಮ್ಮ ಆಯ್ಕೆ ಸರಿ ಇಲ್ವಾ?

ಮನೆಯವರ ಆಯ್ಕೆ ಬಗ್ಗೆ ರಕ್ಷಿತಾ ಮಾತನಾಡಿದ್ದರಿಂದ, ಆ ಬಗ್ಗೆ ಮನೆಯ ಸದಸ್ಯರಿಗೆ ಸುದೀಪ್‌ ಪ್ರಶ್ನೆ ಮಾಡಿದರು. ಸೂರಜ್‌, ರಘು, ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ, ಚೈತ್ರಾ, ಗಿಲ್ಲಿ ನಟ, ಮಾಳು ಯಾರೂ ಕೂಡ ರಕ್ಷಿತಾ ಮಾತನ್ನು ಒಪ್ಪಲಿಲ್ಲ. ಆಗ ರಕ್ಷಿತಾ, "ಇವರಿಗೆಲ್ಲಾ ಓಪನ್‌ ಆಗಿ ಹೇಳಲಿಕ್ಕೆ ಮನಸ್ಸುಂಟು. ಆದರೆ ಯಾರಿಗೂ ನೋವಾಗಬಾರದು ಎಂದು ಹೇಳುತ್ತಿಲ್ಲ. ಕ್ಯಾಪ್ಟನ್‌ ಆಗಿದ್ದಾರೆ, ನಮ್ಮನ್ನು ನಾಮಿನೇಷನ್‌ನಿಂದ ಸೇವ್ ಮಾಡಬಹುದು ಎಂಬ ನಿರೀಕ್ಷೆ ಇದೆ ಇವರಿಗೆಲ್ಲಾ. ಕಾವ್ಯಗೆ ಉತ್ತಮ ಕೊಟ್ಟಿದ್ದು ಕೂಡ ನಾನು ಒಪ್ಪುವುದಿಲ್ಲ. ಸೂರಜ್‌ ಬೇಡ ಅನ್ನೋ ಕಾರಣಕ್ಕೂ ಕಾವ್ಯಗೆ ವೋಟ್‌ ಹಾಕಿರಬಹುದು. ಆದರೆ ನನಗೆ ಕಾವ್ಯಗಿಂತ ಸೂರಜ್‌ ಬೆಸ್ಟ್‌ ಎಂದು ಅನ್ನಿಸುತ್ತಿದೆ" ಎಂದು ರಕ್ಷಿತಾ ಶೆಟ್ಟಿ.

Bigg Boss Kannada 12: ಗಿಲ್ಲಿ ಬಗ್ಗೆ 'ವಂಶದ ಕುಡಿ' ಹೀಗೆ ಹೇಳೋದಾ? ಚಿಕ್ಕ ಕೆಲ್ಸ ಅಂದಿದಕ್ಕೆ ಚಳಿ ಬಿಡಿಸಿದ ರಕ್ಷಿತಾ ಶೆಟ್ಟಿ

ಆಗ ರಕ್ಷಿತಾ ಮಾತಿಗೆ ಕೌಂಟರ್‌ ಕೊಡಲು ಆರಂಭಿಸಿದ ರಜತ್‌, "ರಕ್ಷಿತಾ ಯಾರು ಎಂದು ನೇರವಾಗಿ ಹೇಳಬೇಕು. ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ಮಾತನಾಡೋದು ಸರಿ ಅಲ್ಲ ಅಂತ ಅನ್ನಿಸುತ್ತದೆ. ನನಗ ಒಂದು ಪ್ರಶ್ನೆ ಇದೆ. ಒಂದು ವೇಳೆ ಕ್ಯಾಪ್ಟನ್ಸಿ ರೇಸ್‌ನಲ್ಲಿ ಸೂರಜ್‌ ಮತ್ತು ಮಾಳು ಇದ್ದಾಗ ರಕ್ಷಿತಾ ಯಾರನ್ನು ಸೆಲೆಕ್ಟ್‌ ಮಾಡ್ತಾ ಇದ್ರು ಎಂಬುದನ್ನು ನಾನು ತಿಳಿಯಲು ಬಯಸುತ್ತೇನೆ" ಎಂದು ಕೇಳಿದರು. ಆಗ ರಕ್ಷಿತಾ, "ಮಾಳು ಅಣ್ಣ" ಎಂದು ಹೇಳಿದರು.

"ಇಷ್ಟೇ ಸಾರ್ ಉತ್ತರ.. ಅದು ಅವಳ ದೃಷ್ಟಿಕೋನ. ಇದು ನಮ್ಮ ದೃಷ್ಟಿಕೋನ, ನಾವು ಕಾವ್ಯಗೆ ವೋಟ್‌ ಹಾಕಿದ್ವಿ ಅಷ್ಟೇ. ನನಗೆ ಮಾಳುಗಿಂತ ಸೂರಜ್‌ ಬೆಸ್ಟ್‌ ಎಂದು ಅನ್ನಿಸುತ್ತಾನೆ. ನನಗೆ ನನ್ನದೇ ಆದ ಕಾರಣಗಳು ಇರುತ್ತವೆ. ಅವಳಿಗೆ ಅವಳದ್ದೇ ಆದ ಕಾರಣಗಳು ಇರುತ್ತವೆ. ಅದನ್ನು ಹೋಲಿಕೆ ಮಾಡುವುದು ಬೇಡ. ನಮ್ಮೆಲ್ಲರ ತೀರ್ಮಾನವನ್ನು ಕಳಪೆ ಎಂದರೆ ತಪ್ಪಾಗುತ್ತದೆ" ಎಂದು ಟಾಂಗ್‌ ಕೊಟ್ಟಿದ್ದಾರೆ ರಜತ್.

ನಂತರ ಮಾತನಾಡಿದ ಸುದೀಪ್‌, "ವಾರದಿಂದ ವಾರಕ್ಕೆ ಅವರ ಅಭಿಪ್ರಾಯಗಳು ಚೇಂಜ್‌ ಆದರೆ ಅವರು ವೇಸ್ಟ್..‌ ನಿಮ್ಮ ಅಭಿಪ್ರಾಯಗಳು ಗ್ರೇಟಾ? ನಿಮಗೆ ಯಾರಾದರೂ ಗೌರವ ಕೊಡಬೇಕು ಎಂದರೆ, ಮೊದಲು ಅವರ ಅಭಿಪ್ರಾಯಗಳಿಗೆ ಗೌರವ ಕೊಡಿ" ಎಂದು ಹೇಳಿದರು.