ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ದೊಡ್ಮನೆಯಿಂದ ಎಲಿಮಿನೇಟ್ ಆದ ಸೋನಿಕಾ ಗೌಡ ಫಸ್ಟ್ ರಿಯಾಕ್ಷನ್ ಏನು? ಫಿನಾಲೆ ತಲುಪೋದು ಯಾರಂತೆ ಗೊತ್ತಾ?

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಸುಮಾರು 50 ದಿನಗಳಿದ್ದು, ಇದೀಗ ಎಲಿಮಿನೇಟ್ ಆಗಿ ಹೊರಬಂದಿರುವ ವೈಲ್ಡ್ ಕಾರ್ಡ್ ಸ್ಪರ್ಧಿ ಸೋನಿಕಾ ಗೌಡ ತಮ್ಮ ಆಟದ ಹಾದಿಯನ್ನು ಮೆಲುಕು ಹಾಕಿದ್ದಾರೆ. ತಮ್ಮ ಎಲಿಮಿನೇಷನ್‌ಗೆ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ರೋಚಕ ಪಯಣದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಸೋನಿಕಾ ಗೌಡ ದೊಡ್ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಸುಮಾರು 50 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದು, ತಮ್ಮದೇ ಆದ ಆಟದ ಮೂಲಕ ಗಮನ ಸೆಳೆದಿದ್ದ ಸೋನಿಕಾ, ಇದೀಗ ಮನೆಯಿಂದ ಆಚೆ ಬಂದ ನಂತರ ನೀಡಿದ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. "ಬಿಗ್ ಬಾಸ್ ಮನೆಯನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇಷ್ಟು ಬೇಗ ಹೊರಬರುತ್ತೇನೆ ಎಂದು ಖಂಡಿತಾ ನಿರೀಕ್ಷಿಸಿರಲಿಲ್ಲ, ಈ ನಿರ್ಧಾರವನ್ನು ನಾನು ಇನ್ನೂ ಅರಗಿಸಿಕೊಳ್ಳುತ್ತಿದ್ದೇನೆ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಸಾರಿ ಕೇಳಬಾರದಿತ್ತು!

ತಮ್ಮ ಎಲಿಮಿನೇಷನ್‌ಗೆ ಕಾರಣವಾದ ಟಾಸ್ಕ್ ಮತ್ತು ನಾಮಿನೇಷನ್ ಪ್ರಕ್ರಿಯೆಯ ಬಗ್ಗೆ ಮಾತನಾಡಿದ ಸೋನಿಕಾ, "ಆ ಸಂದರ್ಭದಲ್ಲಿ ನಾನು 'ಸಾರಿ' ಕೇಳದೆ ಇದ್ದಿದ್ದರೆ ಬಹುಶಃ ಈ ವಾರ ನಾಮಿನೇಟ್ ಆಗುತ್ತಿರಲಿಲ್ಲ. ನನ್ನ ಎದುರು ಧನುಷ್ ಇದ್ದಿದ್ದರಿಂದ ನಾನು ಸಾರಿ ಕೇಳಿದೆ, ಬೇರೆಯವರಾಗಿದ್ದರೆ ಕೇಳುತ್ತಿರಲಿಲ್ಲವೇನೋ. ಧನು ಮುಖದಲ್ಲಿನ ಆ ಒಂದು ಎಕ್ಸ್‌ಪ್ರೆಶನ್ ನೋಡಿ ನನ್ನ ಬಾಯಿಂದ ತಕ್ಷಣ ಕ್ಷಮೆ ಬಂದುಬಿಟ್ಟಿತು. ಇನ್ನೊಂದು ಐದು ನಿಮಿಷ ಕಾದಿದ್ದರೂ ಪರಿಸ್ಥಿತಿ ಬದಲಾಗುತ್ತಿತ್ತು. ಆ ಒಂದು ಕಾರಣದಿಂದ ನಾಮಿನೇಟ್ ಆಗಿ ಇಂದು ಹೊರಗೆ ಕೂರುವಂತಾಗಿದೆ" ಎಂದು ತಮ್ಮ ಆಟದ ತಪ್ಪನ್ನು ವಿಶ್ಲೇಷಿಸಿದ್ದಾರೆ.

ನಾನು ಯಾರ ಸಹಾಯವನ್ನು ಪಡೆದುಕೊಂಡಿಲ್ಲ

ಮನೆಯಲ್ಲಿನ ಸ್ನೇಹ ಸಂಬಂಧಗಳ ಬಗ್ಗೆಯೂ ಮನಬಿಚ್ಚಿ ಮಾತನಾಡಿದ ಅವರು, "ಇಡೀ ಮನೆಯಲ್ಲಿ ನನಗೆ ತುಂಬಾ ಆಪ್ತರಾಗಿದ್ದವರು ಎಂದರೆ ಅದು ಧನು ಮತ್ತು ಪ್ರಶಾಂತ್. ನಾವು ಹೆಚ್ಚಿನ ಸಮಯವನ್ನು ಒಟ್ಟಿಗೇ ಕಳೆಯುತ್ತಿದ್ದೆವು. ಅವರಿಬ್ಬರನ್ನು ನೋಯಿಸುವ ಬಗ್ಗೆ ನಾನು ಕನಸಲ್ಲೂ ಯೋಚಿಸಿರಲಿಲ್ಲ. ಆದರೆ ಆ ದಿನ ಧನು ವಿಷಯದಲ್ಲಿ ನಾನು ತುಂಬಾ ಮಾತನಾಡಿಬಿಟ್ಟೆ, ಅದರಿಂದ ನನಗೂ ಬೇಸರವಾಯಿತು. ನಾನು ಎದುರಿಗೆ ನಿಂತಿದ್ದೆ ಎಂಬ ಕಾರಣಕ್ಕೆ ಧನು ಕೂಡ ನನಗೆ ತಿರುಗಿಸಿ ಮಾತನಾಡಲು ಆಗಲಿಲ್ಲ. ಬೇರೆಯವರಾಗಿದ್ದರೆ ಧನು ಖಂಡಿತಾ ವಾದಿಸಿ ಗೆಲ್ಲುತ್ತಿದ್ದರು, ಆಸಿಯಾ ವಿಷಯದಲ್ಲೂ ಹಾಗೇ ಆಗಿತ್ತು. ನಮ್ಮಿಬ್ಬರ ನಡುವಿನ ಆ ಗಾಢ ಸ್ನೇಹವೇ ನನಗೆ ಎಲ್ಲೋ ಒಂದು ಕಡೆ ಹಿನ್ನಡೆಯಾಯಿತು" ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಮನೆಯಲ್ಲಿ ಫ್ರೆಂಡ್ಸ್ ಸರ್ಕಲ್ ಇದ್ದರೂ ತಾವು ಯಾರ ಸಹಾಯವನ್ನೂ ಪಡೆದು ಆಟವಾಡಿಲ್ಲ ಮತ್ತು ನಾಮಿನೇಷನ್ ಎಲ್ಲವೂ ಪ್ರಾಮಾಣಿಕವಾಗಿಯೇ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Bigg Boss Kannada 12: Bigg Boss 12 Finale: ಕುಚಿಕು ದೋಸ್ತಿಗಳೇ ವಿನ್ನರ್‌, ರನ್ನರ್‌! ಗೆದ್ದ ಗಿಲ್ಲಿ ಪಕ್ಕಾ ನಿಂತ ಪಟಾಕಿ ರಕ್ಷಿತಾ

ಧನು ಗೆಲ್ಲಬೇಕು ಎಂದ ಸೋನಿಕಾ

ಇದೇ ವೇಳೆ ಬಿಗ್ ಬಾಸ್ ಕನ್ನಡ ಸೀಸನ್ 13ರ ಟಾಪ್ 4 ಸ್ಪರ್ಧಿಗಳು ಯಾರಾಗಬಹುದು ಮತ್ತು ಯಾರು ಗೆಲ್ಲಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಸೋನಿಕಾ, "ನನ್ನ ಪ್ರಕಾರ ಮನೆಯಲ್ಲಿ ಸೋಲೋ ಆಟವನ್ನು ತುಂಬಾ ಚೆನ್ನಾಗಿ ಆಡುತ್ತಿರುವವರು ಎಂದರೆ ಧನು, ತಾಂಡವ್, ಸೌಂದರ್ಯ ಮತ್ತು ಗಗನ್. ಉಳಿದವರೆಲ್ಲರ ಆಟ ಅಷ್ಟಕ್ಕಷ್ಟೇ ಇದೆ. ಈ ನಾಲ್ವರು ಖಂಡಿತವಾಗಿಯೂ ಫಿನಾಲೆ ತಲುಪುತ್ತಾರೆ. ಇನ್ನು ಟ್ರೋಫಿ ಗೆಲ್ಲುವ ವಿಚಾರಕ್ಕೆ ಬಂದರೆ, ನಾನು ಆಟವನ್ನು ಒಳಗಡೆಯಿಂದ ಬಹಳ ಹತ್ತಿರದಿಂದ ನೋಡಿರುವುದರಿಂದ ನನ್ನ ಪ್ರಕಾರ ಧನು ಈ ಸೀಸನ್ ಗೆಲ್ಲಬೇಕು" ಎಂದು ಹೇಳಿದ್ಧಾರೆ.

BBK 13 Elimination: ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಿಂದ ಸೋನಿಕಾ ಗೌಡ ಎಲಿಮಿನೇಟ್; ಅರ್ಧದಲ್ಲೇ ಆಟ ಮುಗಿಸಿದ ವೈಲ್ಡ್ ಕಾರ್ಡ್ ಸ್ಪರ್ಧಿಗೆ ಸಿಕ್ಕ ನಗದು ಬಹುಮಾನ ಎಷ್ಟು?

ನನಗೆ 50 ಲಕ್ಷ ರೂ. ಸಿಕ್ಕಿದ್ದರೆ....

ಕೊನೆಯದಾಗಿ ಬಿಗ್ ಬಾಸ್ ಕನಸು ಮತ್ತು ಮುಂದಿನ ಯೋಜನೆಗಳ ಬಗ್ಗೆ ಹಂಚಿಕೊಂಡ ಸೋನಿಕಾ, "ನನಗೆ ಕಪ್ ಗೆಲ್ಲುವುದಕ್ಕಿಂತ ಹೆಚ್ಚಾಗಿ ಬಿಗ್ ಬಾಸ್ ಮನೆಗೆ ಹೋಗಬೇಕು ಎಂಬ ದೊಡ್ಡ ಆಸೆ ಇತ್ತು. ಈ ಬಾರಿ ಕಂಬ್ಯಾಕ್ ಮಾಡಿ ಟಾಪ್ 5 ತಲುಪುವ ನಿರೀಕ್ಷೆಯೂ ಇತ್ತು. ಒಂದು ವೇಳೆ 50 ಲಕ್ಷ ರೂಪಾಯಿ ಬಹುಮಾನ ಗೆದ್ದಿದ್ದರೆ, ಮತ್ತೊಂದು ಹೊಸ ಬಿಸಿನೆಸ್ ಆರಂಭಿಸಲು ಅದನ್ನು ಬಳಸಿಕೊಳ್ಳುತ್ತಿದ್ದೆ. ಹಣಕ್ಕಿಂತ ಹೆಚ್ಚಾಗಿ ಕಿಚ್ಚ ಸುದೀಪ್ ಅವರಿಂದ ಒಂದು 'ಕಿಚ್ಚನ ಚಪ್ಪಾಳೆ' ಪಡೆಯಬೇಕು ಎಂಬ ಆಸೆಯಿತ್ತು. ಇನ್ನಷ್ಟು ದಿನ ಇದ್ದು ನನ್ನನ್ನು ನಾನು ಸಾಬೀತುಪಡಿಸಿಕೊಂಡಿದ್ದರೆ ಅದಕ್ಕೆ ಹೆಚ್ಚಿನ ಮೌಲ್ಯ ಸಿಗುತ್ತಿತ್ತು. ಆದರೂ ಮೊದಲ ದಿನದಿಂದ ಕೊನೆಯ ದಿನದವರೆಗೂ ನಾನು ನಾನಾಗಿಯೇ, ನನ್ನ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳದೆ ಇದ್ದೆ ಎಂಬ ತೃಪ್ತಿ ನನಗಿದೆ" ಎಂದು ಹೇಳಿದ್ದಾರೆ.