ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BBK 13 Elimination: ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಿಂದ ಸೋನಿಕಾ ಗೌಡ ಎಲಿಮಿನೇಟ್; ಅರ್ಧದಲ್ಲೇ ಆಟ ಮುಗಿಸಿದ ವೈಲ್ಡ್ ಕಾರ್ಡ್ ಸ್ಪರ್ಧಿಗೆ ಸಿಕ್ಕ ನಗದು ಬಹುಮಾನ ಎಷ್ಟು?

ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರ ರಿಯಾಲಿಟಿ ಶೋನಿಂದ ವೈಲ್ಡ್ ಕಾರ್ಡ್ ಸ್ಪರ್ಧಿ ಸೋನಿಕಾ ಗೌಡ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಬಾಟಮ್ 3 ಹಂತದಲ್ಲಿ ಪ್ರಶಾಂತ್ ಮತ್ತು ಜಗ್ಗ ಮಮ್ಮಿ ಜೊತೆಗಿದ್ದ ಸೋನಿಕಾ ಅವರಿಗೆ ಮತಗಳ ಕೊರತೆಯಿಂದ 50 ದಿನಗಳ ಪಯಣ ಅಂತ್ಯವಾಗಿದೆ.

BBK 13: ಅರ್ಧದಲ್ಲೇ ಆಟ ಮುಗಿಸಿದ ಸೋನಿಕಾ ಗೌಡ! ಸಿಕ್ಕ ಬಹುಮಾನ ಏನು?

-

Avinash GR
Avinash GR Nov 15, 2026 10:38 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಿಂದ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದ ನಟಿ ಸೋನಿಕಾ ಗೌಡ ಈ ವಾರ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಬಾಟಮ್ 3 ಹಂತದಲ್ಲಿ ಪ್ರಶಾಂತ್, ಜಗ್ಗ ಮಮ್ಮಿ ಹಾಗೂ ಸೋನಿಕಾ ಗೌಡ ಉಳಿದುಕೊಂಡಿದ್ದರು.

ತೀವ್ರ ಕುತೂಹಲ ಮೂಡಿಸಿದ್ದ ಈ ಹಂತದಲ್ಲಿ ಕಡಿಮೆ ಮತಗಳನ್ನು ಪಡೆದ ಕಾರಣ ಸೋನಿಕಾ ಗೌಡ ಅವರ ಬಿಗ್ ಬಾಸ್ ಪಯಣಕ್ಕೆ ತೆರೆ ಬಿದ್ದಿದೆ. ಸುಮಾರು 50 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಕಾಲ ಕಳೆದಿದ್ದ ಸೋನಿಕಾ, ಈ ವಾರ ಅದೃಷ್ಟ ಕೈಕೊಟ್ಟ ಕಾರಣ ಮನೆಯಿಂದ ಹೊರನಡೆಯಬೇಕಾಯಿತು.

Bigg Boss Kannada 13: ಯಾರಿಗೆ ಯಾರು ಮಿತ್ರ? ಯಾರಿಗೆ ಯಾರು ಶತ್ರು? ಆಸಿಯಾಗೆ ಟಾಂಗ್ ಕೊಟ್ಟ ಸೋನಿಕಾ

ಸೋನಿಕಾ ಗೌಡ ಎಲಿಮಿನೇಟ್ ಆಗಲು ಪ್ರಮುಖ ಕಾರಣಗಳೇನು ಎಂಬುದನ್ನು ಗಮನಿಸುವುದಾದರೆ, ಅವರು ಮನೆಯಲ್ಲಿ ಅನಗತ್ಯ ಗಲಾಟೆ ಅಥವಾ ವಾದ-ವಿವಾದಗಳಿಗೆ ಇಳಿಯದೆ ಬಹಳ ತಾಳ್ಮೆಯಿಂದ ವರ್ತಿಸುತ್ತಿದ್ದರು. ಅವರ ಈ ಶಾಂತ ಸ್ವಭಾವವೇ ಕೆಲವು ವೀಕ್ಷಕರಿಗೆ ಅವರು ಮನೆಯಲ್ಲಿ ತುಂಬಾ ಸೈಲೆಂಟ್ ಆಗಿದ್ದಾರೆ ಎಂಬ ಅಭಿಪ್ರಾಯ ಮೂಡಲು ಕಾರಣವಾಯಿತು. ಆದರೂ, ದೈಹಿಕ ಮತ್ತು ಮಾನಸಿಕ ಟಾಸ್ಕ್‌ಗಳಲ್ಲಿ ತಮ್ಮ ಕೈಲಾದ ಉತ್ತಮ ಪ್ರಯತ್ನ ನೀಡುತ್ತಿದ್ದ ಅವರು, ತಮ್ಮ ನಗು ಮತ್ತು ಗ್ಲಾಮರ್ ಮೂಲಕ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಉಳಿಸಿಕೊಳ್ಳಲು ಶ್ರಮಿಸಿದ್ದರು.

ಮನೆಯಲ್ಲಿ ಸಹ-ಸ್ಪರ್ಧಿಗಳಾದ ಗಗನ್ ಚಿನ್ನಪ್ಪ, ತಾಂಡವ್ ಮತ್ತು ಕಿರಣ್ ಶಾಸ್ತ್ರಿ ಅವರೊಂದಿಗೆ ಉತ್ತಮ ಸ್ನೇಹ ಬೆಳೆಸಿಕೊಂಡಿದ್ದ ಸೋನಿಕಾ, ವಿಶೇಷವಾಗಿ ಗಗನ್ ಅವರೊಂದಿಗಿನ ಒಡನಾಟದ ಮೂಲಕ ವೀಕ್ಷಕರ ಗಮನ ಸೆಳೆದಿದ್ದರು. ವೈಲ್ಡ್ ಕಾರ್ಡ್ ಮೂಲಕ ಬಂದ ನಂತರ ಹಲವು ಬಾರಿ ನಾಮಿನೇಟ್ ಆಗಿ ಬಾಟಮ್ ಹಂತ ತಲುಪಿದ್ದರೂ ಪ್ರೇಕ್ಷಕರ ಬೆಂಬಲದಿಂದ ಪಾರಾಗುತ್ತಿದ್ದ ಅವರಿಗೆ ಈ ವಾರ ಮತಗಳ ಕೊರತೆ ಎದುರಾಗಿದೆ.

ಸೋನಿಕಾ ಗೌಡ ಅವರ ಹಿನ್ನೆಲೆಯತ್ತ ನೋಡುವುದಾದರೆ, ಇವರ ಮೂಲ ಹೆಸರು ಸೋನು ಗೌಡ. ಆದರೆ ಚಿತ್ರರಂಗದಲ್ಲಿ ಈಗಾಗಲೇ ಸೋನು ಎಂಬ ಹೆಸರಿನವರು ಹಲವರಿದ್ದ ಕಾರಣ, ಇವರು ತಮ್ಮ ಹೆಸರನ್ನು ಸೋನಿಕಾ ಗೌಡ ಎಂದು ಬದಲಾಯಿಸಿಕೊಂಡರು. ಮೂಲತಃ ಕೇರಳದವರಾದ ಇವರು ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ ಹಾಗೂ ಕಳೆದ ಒಂದು ದಶಕದಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕೇರಳದ ಸಂಪ್ರದಾಯ, ಮುಂಬೈನ ತಳುಕು-ಬಳುಕು ಮತ್ತು ಬೆಂಗಳೂರಿನ ಫ್ಯಾಷನ್ ಚೈತನ್ಯವನ್ನು ಮೈಗೂಡಿಸಿಕೊಂಡಿರುವ ಸೋನಿಕಾ, ಒಬ್ಬ ಉದಯೋನ್ಮುಖ ಉದ್ಯಮಿಯೂ ಹೌದು! ಬೆಂಗಳೂರಿನಲ್ಲಿ ತಮ್ಮದೇ ಆದ ಬಟ್ಟೆಯ ಬೂಟಿಕ್ ನಡೆಸುತ್ತಿದ್ದಾರೆ.

ಈ ಹಿಂದಿನ ಮೂರು ಬಿಗ್ ಬಾಸ್ ಸೀಸನ್‌ಗಳಿಗೆ ಅವಕಾಶ ಬಂದಿದ್ದರೂ ನಿರಾಕರಿಸಿದ್ದ ಸೋನಿಕಾ ಗೌಡ, ಈ ಬಾರಿಯ ಸೀಸನ್ 13ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕಾಲಿಟ್ಟು ಹೊಸ ನಿರೀಕ್ಷೆ ಹುಟ್ಟಿಸಿದ್ದರು. ಆದರೆ ಫಿನಾಲೆ ತಲುಪುವ ಮುನ್ನವೇ ಅರ್ಧದಲ್ಲೇ ಆಟದಿಂದ ಹೊರಬಿದ್ದಿದ್ದಾರೆ. ಅಂದಹಾಗೆ, ಸುಮಾರು 50 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಸಿ ಹೊರಬಂದಿರುವ ಸೋನಿಕಾ ಗೌಡ ಅವರಿಗೆ ಆಯೋಜಕರಿಂದ ಸುಮಾರು 2.50 ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡಲಾಗಿದೆ.