ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಮುಚ್ಚೋ ಬಾಯಿ; ಶಾಸ್ತ್ರಿ ಕಿರಿಕ್, ಆಸಿಯಾ ಆವಾಜ್‌!

Bigg Boss Kannada 13:ಕಿರಣ್ ಶಾಸ್ತ್ರಿ ಹಾಗೂ ಆಸಿಯಾ ನಡುವೆ ಭಾರಿ ಹೈ-ವೋಲ್ಟೇಜ್ ಕಿತ್ತಾಟ ನಡೆದಿದೆ. ಕ್ಯಾಪ್ಟನ್ಸಿ ಹಾಗೂ ಗೇಮ್ ಟಾಸ್ಕ್ ವಿಚಾರವಾಗಿ ಮಾತುಕತೆ ನಡೆಯುವ ವೇಳೆ, ಕಿರಣ್ ಶಾಸ್ತ್ರಿ ಅವರು ಆಸಿಯಾ ಅವರನ್ನು ಉದ್ದೇಶಪೂರ್ವಕವಾಗಿ ಟ್ರಿಗರ್ ಮಾಡುವಂತಹ ಮಾತುಗಳನ್ನು ಆಡಿದ್ದಾರೆ.ಕೋ ಪೈಲೆಟ್‌ನಾ ಮನವೊಲಿಸಬೇಕಿತ್ತು. ಹೀಗಾಗಿ ಸ್ಪರ್ಧಿಗಳೆಲ್ಲರೂ ಆಸಿಯಾ ಮನವೊಲಿಸಲು ನೋಡಿದರು. ಆದರೆ ಕಿರಣ್‌ ಮಾತ್ರ ಪದೇ ಪದೇ ಟ್ರಿಗರ್‌ ಮಾಡುತ್ತಿದ್ದರು. ಇದೀಗ ಆಸಿಯಾ (Asia) ಅವರು ಕಿರಣ್‌ ಶಾಸ್ತ್ರಿ (kiran shastri) ಮೇಲೆ ಗರಂ ಆಗಿದ್ದಾರೆ. ಮುಚ್ಚೋ ಬಾಯಿ ಅಂತ ಕೂಗಾಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ಸ್ಪರ್ಧಿಗಳ ಮಧ್ಯೆ ಮಾರಾಮಾರಿ ಆಗುತ್ತಿದೆ. ಸಣ್ಣ ಪುಟ್ಟ ವಿಚಾರಕ್ಕೂ ಗಲಾಟೆ ಮಾಡುತ್ತಿದ್ದಾರೆ. ಇದೀಗ ಆಸಿಯಾ (Asia) ಅವರು ಕಿರಣ್‌ ಶಾಸ್ತ್ರಿ (kiran shastri) ಮೇಲೆ ಗರಂ ಆಗಿದ್ದಾರೆ. ಮುಚ್ಚೋ ಬಾಯಿ ಅಂತ ಕೂಗಾಡಿದ್ದಾರೆ.

ಹೈ-ವೋಲ್ಟೇಜ್ ಕಿತ್ತಾಟ

ಕಿರಣ್ ಶಾಸ್ತ್ರಿ ಹಾಗೂ ಆಸಿಯಾ ನಡುವೆ ಭಾರಿ ಹೈ-ವೋಲ್ಟೇಜ್ ಕಿತ್ತಾಟ ನಡೆದಿದೆ. ಕ್ಯಾಪ್ಟನ್ಸಿ ಹಾಗೂ ಗೇಮ್ ಟಾಸ್ಕ್ ವಿಚಾರವಾಗಿ ಮಾತುಕತೆ ನಡೆಯುವ ವೇಳೆ, ಕಿರಣ್ ಶಾಸ್ತ್ರಿ ಅವರು ಆಸಿಯಾ ಅವರನ್ನು ಉದ್ದೇಶಪೂರ್ವಕವಾಗಿ ಟ್ರಿಗರ್ ಮಾಡುವಂತಹ ಮಾತುಗಳನ್ನು ಆಡಿದ್ದಾರೆ.ಕೋ ಪೈಲೆಟ್‌ನಾ ಮನವೊಲಿಸಬೇಕಿತ್ತು. ಹೀಗಾಗಿ ಸ್ಪರ್ಧಿಗಳೆಲ್ಲರೂ ಆಸಿಯಾ ಮನವೊಲಿಸಲು ನೋಡಿದರು. ಆದರೆ ಕಿರಣ್‌ ಮಾತ್ರ ಪದೇ ಪದೇ ಟ್ರಿಗರ್‌ ಮಾಡುತ್ತಿದ್ದರು. ನನ್ನ ಮೈಂಡ್‌ ಗೇಮ್‌ ಸೋಲಿಸಲು ಸಾಧ್ಯವೆ ಇಲ್ಲ ಅಂತ ಪದೇ ಪದೇ ಕಿರಣ್‌ ಹೇಳುತ್ತಿದ್ದರು.

ಇದನ್ನೂ ಓದಿ: Bigg Boss kannada 13: ತಾಂಡವ್‌ ಲವ್‌ ಟ್ರ್ಯಾಕ್‌; ಎಲ್ಲವೂ 'ಕಾವ್ಯ'ಮಯ!

ಶಾಸ್ತ್ರಿ ಅವರ ಮಾತಿನಿಂದ ತೀವ್ರ ಕೆರಳಿದ ಆಸಿಯಾ, ತಮ್ಮ ಮೇಲಿನ ನಿಯಂತ್ರಣ ಕಳೆದುಕೊಂಡು, ನಿಮ್ಮತ್ರ ಮಾತಾಡ್ತಾ ಇಲ್ಲ. ಸುಮ್ನೆ ಇರಬೇಕು’ ಎಂದು ಕೂಗಾಡಿದ್ದಾರೆ. ಕಿರಣ್‌ ಶಾಸ್ತ್ರಿ ಅವರ ನಡವಳಿಕೆ ಬಗ್ಗೆಯೂ ವಿಕ್ಷಕರೂ ಖಂಡಿಸುತ್ತಿದ್ದಾರೆ.



ಸ್ಪರ್ಧಿಗಳು ಪದೇಪದೇ ನಿದ್ರೆ ಮಾಡಿರುವುದು ಬಿಗ್ ಬಾಸ್ ಗಮನಕ್ಕೆ ಬಂದಿದೆ. ಆದ್ದರಿಂದ ಸ್ಪರ್ಧಿಗಳು ತಮ್ಮಲ್ಲೇ ಚರ್ಚಿಸಿ ಇಬ್ಬರು ತಪ್ಪಿತಸ್ತರ ಹೆಸರನ್ನು ತಿಳಿಸುವಂತೆ ಸೂಚಿಸಲಾಯಿತು. ಎಲ್ಲರೂ ಸೇರಿ ಕಿರಣ್ ಶಾಸ್ತ್ರಿ ಮತ್ತು ಲಿಖಿತ್ ಹೆಸರನ್ನು ಅಂತಿಮಗೊಳಿಸಿದರು. ಹಾಗಾಗಿ ಈ ಇಬ್ಬರು ಸ್ಪರ್ಧಿಗಳಿಗೆ ಬಿಗ್​ ಬಾಸ್ ಒಂದು ಶಿಕ್ಷೆ ನೀಡಿದರು.ಕಿರಣ್ ಶಾಸ್ತ್ರಿ ಮತ್ತು ಲಿಖಿತ್ ಅವರ ಹಾಸಿಗೆ, ದಿಂಬು ಮತ್ತು ಹೊದಿಕೆಯನ್ನು ಹಿಂಪಡೆಯಲಾಗಿದೆ.

ಇದನ್ನೂ ಓದಿ: Bigg Boss Kannada 13: ಮಂಜ ನಡವಳಿಕೆಗೆ ಬೇಸತ್ತು ಬಿಗ್ ಬಾಸ್ ಶೋನಿಂದ ಹೊರಗೆ ಬರಲು ನಿರ್ಧರಿಸಿದ ಅವಿನಾಶ್

ಎಲ್ಲರೂ ಸೇರಿ ತಮ್ಮನ್ನು ಟಾರ್ಗೆಟ್ ಮಾಡಿದ್ದಕ್ಕೆ ಕಿರಣ್ ಶಾಸ್ತ್ರಿ ಅವರಿಗೆ ಬೇಸರ ಆಗಿದೆ. ಎಲ್ಲರ ಎದುರಲ್ಲಿ ಅವರು ಕಣ್ಣೀರು ಹಾಕಿದ್ದಾರೆ. ಸಂಗೀತಾ ಭಟ್, ಆಸಿಯಾ ಮುಂತಾದವರು ಶಾಸ್ತ್ರಿಯನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ.

Yashaswi Devadiga

View all posts by this author