ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss kannada 13: ತಾಂಡವ್‌ ಲವ್‌ ಟ್ರ್ಯಾಕ್‌; ಎಲ್ಲವೂ 'ಕಾವ್ಯ'ಮಯ!

Bigg Boss kannada 13:ಬಿಗ್​​ಬಾಸ್ ಮನೆಯಲ್ಲಿ ಕಳೆದ ಕೆಲ ದಿನಗಳಿಂದಲೂ ಬರೀ ಜಗಳ, ಸಿಟ್ಟು, ಕೂಗಾಟಗಳೇ ತುಂಬಿದ್ದವು. ಇದೀಗ ಸ್ಪರ್ಧಿಗಳು ಪರಸ್ಪರ ಸಂತಸದಲ್ಲಿ ಒಂದಷ್ಟು ಹೊತ್ತು ಕಾಲೆ ಕಳೆದಿದ್ದಾರೆ.ಕಾವ್ಯ ಅವರ ಬಗ್ಗೆ ತಾಂಡವ್ ಅವರು ತಮಾಷೆಯ ಮಾತುಗಳನ್ನಾಡಿದ್ದು, ಇದನ್ನು ಕೇಳಿ ಕಾವ್ಯ ಮುಗುಳು ನಕ್ಕಿದ್ದಾರೆ.

Yashaswi Devadiga
Yashaswi Devadiga Sep 17, 2026 5:10 PM

ಬಿಗ್​​ಬಾಸ್ ಮನೆಯಲ್ಲಿ ಕಳೆದ ಕೆಲ ದಿನಗಳಿಂದಲೂ ಬರೀ ಜಗಳ, ಸಿಟ್ಟು, ಕೂಗಾಟಗಳೇ ತುಂಬಿದ್ದವು. ಇದೀಗ ಸ್ಪರ್ಧಿಗಳು ಪರಸ್ಪರ ಸಂತಸದಲ್ಲಿ ಒಂದಷ್ಟು ಹೊತ್ತು ಕಾಲ ಕಳೆದಿದ್ದಾರೆ.ಕಾವ್ಯ ಅವರ ಬಗ್ಗೆ ತಾಂಡವ್ ಅವರು ತಮಾಷೆಯ ಮಾತುಗಳನ್ನಾಡಿದ್ದು, ಇದನ್ನು ಕೇಳಿ ಕಾವ್ಯ ಮುಗುಳು ನಕ್ಕಿದ್ದಾರೆ. ನನ್ನದೊಂದು ಸೀರೆ ಶಾಪ್ ಇದೆ. ಒಂದೊಳ್ಳೆ ಬ್ಯಾಂಡ್ ಅಂಬಾಸಿಡರ್ ಇದ್ರೆ ಹೇಳು' ಎಂದು ತಾಂಡವ್ ಅವರು ಗಗನ್ ಬಳಿ ಕೇಳಿದ್ದಾರೆ. ಇದಕ್ಕೆ ಗಗನ್ ನಮ್ ಕಾವ್ಯ ಇದ್ದಾರೆ ಅಲ್ವಾ. ಅವರು ದೇವತೆ ಕಣೋ ಎಂದಿದ್ದಾರೆ.ಒಳ್ಳೆ ಸಿಲ್ಕಿ ಅದ್ಭುತವಾದ ಹೇರ್ ಇರಬೇಕು. ಕಾಮನ ಬಿಲ್ಲಿನಂತಹ ಹುಬ್ಬು ಇರಬೇಕು. ಕಣ್ಣು ಹೇಗಿರಬೇಕಂದ್ರೆ ನಾನು ಮೀನಾಕ್ಷಿ ಅಂತಲೇ ಕರೆಯಬೇಕು ಎಂದು ತಾಂಡವ್ ಹೇಳಿದ್ದಾರೆ. ಇದಕ್ಕೆ ಗಗನ್ ಈ ಎಲ್ಲಾ ಲಕ್ಷಣ ಒಬ್ಬರಲ್ಲೇ ಇದ್ರೆ ಓಕೆನಾ? ಎಂದಿದ್ದಾರೆ. ಇದಕ್ಕೆ ತಾಂಡವ್ ಅವರ ಫೋಟೋ ಇದ್ರೆ ತೋರಿಸ್ತೀರಾ ಎಂದಿದ್ದಾರೆ. ಕಾವ್ಯ ಇದನ್ನು ಕೇಳಿ ನಾಚಿ ನೀರಾಗಿದ್ದಾರೆ. ಒಟ್ಟಾರೆ ಕಾವ್ಯಾ ಅನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.