ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rakshita Shetty: ಗಿಲ್ಲಿ- ಕಾವ್ಯ ಜೋಡಿ ಆಗೋದು ರಕ್ಷಿತಾಗೆ ಇಷ್ಟಾನಾ? ಪಟಾಕಿ ಹುಡುಗಿ ಸಖತ್‌ ಮಾತು

Gilli Nata: ಬಿಗ್‌ ಬಾಸ್‌ ಸೀಸನ್‌ 12ನೇ ಸೀಸನ್‌ನ ವಿನ್ನರ್ ಆಗಿ ಗಿಲ್ಲಿ ನಟ ಗೆದ್ದು ಬೀಗಿದ್ದಾರೆ. ಇನ್ನೊಂದು ಕಡೆ ಮಂಗಳೂರು ಮೂಲದ ರಕ್ಷಿತಾ ಶೆಟ್ಟಿ ರನ್ನರ್‌ಅಪ್ ಆಗಿ ಹೊರ ಹೊಮ್ಮಿದ್ದಾರೆ. ಗೆದ್ದವರಿಗೆ ಮೆರವಣಿಗೆ, ಸನ್ಮಾನಗಳು ಜೋರಾಗಿಯೇ ನಡೆಯುತ್ತಿವೆ. ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ರಕ್ಷಿತಾ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಸೀಸನ್‌ 12ನೇ ಸೀಸನ್‌ನ (Bigg Boss Kannada 12) ವಿನ್ನರ್ ಆಗಿ ಗಿಲ್ಲಿ ನಟ (Gilli Nata) ಗೆದ್ದು ಬೀಗಿದ್ದಾರೆ. ಇನ್ನೊಂದು ಕಡೆ ಮಂಗಳೂರು ಮೂಲದ ರಕ್ಷಿತಾ ಶೆಟ್ಟಿ (Rakshitha Shetty) ರನ್ನರ್‌ಅಪ್ (Runner Up) ಆಗಿ ಹೊರ ಹೊಮ್ಮಿದ್ದಾರೆ. ಗೆದ್ದವರಿಗೆ ಮೆರವಣಿಗೆ, ಸನ್ಮಾನಗಳು ಜೋರಾಗಿಯೇ ನಡೆಯುತ್ತಿವೆ. ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ರಕ್ಷಿತಾ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಧ್ರುವಂತ್‌ ಬಗ್ಗೆ ರಕ್ಷಿತಾ ಹೇಳಿದ್ದೇನು?

ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲರೂ ತುಂಬಾ ಮಜವಾಗಿ ಇದ್ದರು ಆದರೆ ನನಗೆ ಹಾಗೆ ಇರಲಿಲ್ಲ. ಒಂದು ರೂಮ್‌ನಲ್ಲಿ ಒಬ್ಬರೆ ಇರೋದು ಅಂದರೆ ಕಷ್ಟ. ಧ್ರುವಂತ್‌ ಅವರು ನಾನು ಇಬ್ಬರದ್ದು ಒಂದೇ ರಾಶಿ. ಮಿಥುನ ರಾಶಿ ಆಗಿತ್ತು. ನನಗೆ ಅವರಿಗೆ ಏನು ಆಗಬೇಕಿತ್ತು ಅದೇ ಆಗಬೇಕಿತ್ತು.ಆದರೂ ಕೂಡ ಹೇಗೋ ಸುಧಾರಿಸಿಕೊಂಡರು. ಕೊನೆಗೆ ಬಿಗ್‌ ಬಾಸ್‌ ಅವರು ಅಂತಿಮ ನಿರ್ಧಾರ ಹೇಳಬೇಕು ಅಂದಾಗ ಅವರು ಅಲ್ಲಿ ಟ್ರ್ಯಾಕ್‌ಗೆ ಬಂದರು ಎಂದಿದ್ದಾರೆ.

ಇದನ್ನೂ ಓದಿ: Ashwini Gowda: ಗಿಲ್ಲಿ ನಿಜವಾದ ಬಡವನಾ? ಬಡವನ ಥರ ಗೆಟಪ್‌ ಹಾಕ್ಕೊಂಡು ಬದುಕೋದು ಬೇರೆ! ಅಶ್ವಿನಿ ಗೌಡ

ತುಂಬಾ ತಾಳ್ಮೆ ಕಲಿತಿದ್ದೇನೆ

ಮೊದಲ ವಾರದಲ್ಲಿ ತುಂಬಾ ಆರಾಮದಾಯಕವಾಗಿ ಬಂದೆ. ಹದಿನೈದು ನಿಮಿಷದಲ್ಲಿ ಎಲ್ಲರನ್ನು ಕನ್ವಿನ್ಸ್‌ ಮಾಡಬೇಕಿತ್ತು. ಆದರೆ ಅದು ಕಷ್ಟಕರವಾಗಿತ್ತು. ಬೇಸರ ಯಾಕಿತ್ತು ಅಂದರೆ ಅವಕಾಶ ಸಿಕ್ಕಿರಲಿಲ್ಲ. ಆ ನಂತರ ನನಗೆ ಹೊರಗೆ ಹಾಕಿದರು. ಏಳು ದಿನ ನಾನು ರೂಮ್‌ನಲ್ಲಿ ಇರುವಾಗ, ನನ್ನ ಸ್ಟ್ಯಾಂಡ್‌ ಯಾಕೆ ತೆಗೆದುಕೊಂಡಿಲ್ಲ ಅನ್ನಿಸಿತ್ತು. ಆದರೆ ಒಂದು ಕಡೆ ಅದು ಒಳ್ಳೆದೇ ಆಯ್ತು. ಬಿಗ್‌ ಬಾಸ್‌ ಮನೆಯಲ್ಲಿ ನಾನು ತುಂಬಾ ತಾಳ್ಮೆ ಕಲಿತಿದ್ದೇನೆ ಎಂದರು.



ಅದು ಇಷ್ಟ ಆಗ್ತಾ ಇರಲಿಲ್ಲ!

ಬಿಗ್‌ ಬಾಸ್‌ ಮನೆಗೆ ಬಂದಾಗ ರಿಯಾಲಿಟಿ ಶೋ ಅಂತ ಮಾತ್ರ ಅಂದುಕೊಂಡು ಬಂದೆ. ಜೀವಿಸಬೇಕು ಅಂತ ಬಂದೆ. ಸೋಲಬೇಕು, ಕಾಂಪಿಟೇಶನ್‌ ಕೊಡಬೇಕು ಅಂತ ಬಂದೇ ಇಲ್ಲ. ಹುಡುಗಿಯರು ಆಗಲ್ಲ ಅಂತಲ್ಲ. ನ್ಯಾಚುರಲ್‌ ಕನೆಕ್ಷನ್‌ ಆಗಬೇಕು. ಮಾಳು, ಮಲ್ಲಮ್ಮ ಹೀಗೆ ಎಲ್ಲರ ಜೊತೆ ಕನೆಕ್ಟ್‌ ಆದೆ. ಆದರೆ ರಾಶಿಕಾ, ಕಾವ್ಯ ಮಧ್ಯೆ ನನಗೆ ಆಗಲಿಲ್ಲ. ಅವರೆಲ್ಲ ಒಂದಲ್ಲ ಒಂದು ಗಾಸಿಪ್‌ ಮಾಡುವಾಗ ನನಗೆ ಅದು ಇಷ್ಟ ಆಗ್ತಾ ಇರಲಿಲ್ಲ.

ಗಿಲ್ಲಿ ಹೇಗೆ?

ಗಿಲ್ಲಿ ತುಂಬಾ ಬೋಲ್ಡ್‌. ಏನೇ ಇದ್ದರೂ ನೇರವಾಗಿ ಹೇಳ್ತಾರೆ. ಮನಸ್ಸಲ್ಲಿ ಕಲ್ಮಶ ಇಲ್ಲ. ಗಿಲ್ಲಿಗೆ ಮಾತಿನಲ್ಲಿ ಕಲೆ ಇದೆ. ಯಾರೇ ಆಗಿರಲಿ ನಗಲು ತುಂಬಾ ಇಷ್ಟ. ಸ್ವಲ್ಪ ಸ್ವಲ್ಪ ಜಾಸ್ತಿ ಮಾಡ್ತಾರೆ. ಮಾತಿನ ಕಲೆಯಲ್ಲೇ ಜನಗಳ ಗೆದ್ದಿದ್ದಾರೆ.

ಗಿಲ್ಲಿ-ಕಾವ್ಯ ಪ್ರೀತಿ ಮಾಡ್ತಾ ಇದ್ದಾರಾ ಗೊತ್ತಿಲ್ಲ. ಗಿಲ್ಲಿ ಅಂದರೆ ಕಾವ್ಯಗೆ ಇಷ್ಟ. ನಾನು ಫ್ರೆಂಡ್‌ಶಿಪ್‌ ಬಾಂಡ್‌ ಇಟ್ಟಿದ್ದೆ. ನನ್ನ ಮನಸಲ್ಲಿ ಗಿಲ್ಲಿ ಬಗ್ಗೆ ಒಳ್ಳೆ ಫ್ರೆಂಡ್‌ಶಿಪ್‌ ಭಾವನೆ ಇದೆ. ಗಿಲ್ಲಿಗೆ ಗೊತ್ತು, ಗಿಲ್ಲಿಗೆ ಏನು ಮನಸಲ್ಲಿ ಏನಿದೆ ಅಂತ. ಗಿಲ್ಲಿ ಮತ್ತು ಕಾವ್ಯಾಗೆ ನಾನು ಸಪೋರ್ಟ್‌ ಮಾಡಲ್ಲ. ಆದರೆ ಎಲ್ಲವೂ ಅವರಿಷ್ಟ. ಅದು ಮಾತು ಈಗ ಬೇಡ ಎಂದಿದ್ದಾರೆ. ಅವರ ಅವರದ್ದೇ ಆದ ವ್ಯಕ್ತಿತ್ವ ಇರುತ್ತದೆ. ದೃಷ್ಟಿಕೋನದ ಮೇಲೆ ಎಲ್ಲವೂ ಹೋಗತ್ತೆ ಎಂದಿದ್ದಾರೆ.

ಕಾವ್ಯ ಮೇಲಿನ ಜಲಸಿಗೆ ಅಲ್ಲ

ನಾಮಿನೇಟ್‌ ಮಾಡಿದ್ದು ಬೇರೆ ಕಾರಣಕ್ಕೆ. ಕಾವ್ಯ ಮೇಲಿನ ಜಲಸಿಗೆ ಅಲ್ಲ. ಜಾಹ್ನವಿ ಅವರ ಕಾರಣಕ್ಕೆ ಮಾಡಿದ್ದು ಎಂದರು.

ಇದನ್ನೂ ಓದಿ: Bigg Boss Kannada 12: ನಿಮ್ಮನ್ನು ಕಳಿಸಿಯೇ ನಾನು ಹೊರಕ್ಕೆ ಹೋಗೋದು! ಅಶ್ವಿನಿ ವಿರುದ್ಧದ ಚಾಲೆಂಜ್​​ನಲ್ಲಿ ರಕ್ಷಿತಾಗೆ ಗೆಲುವು

ಅಶ್ವಿನಿ ಅವರ ಜಗಳ ವಿಚಾರಕ್ಕೆ ಮಾತನಾಡಿ, ಜಗಳ ಆಗುತ್ತೆ. ಆದರೆ ಅದೆಲ್ಲ ಆ ಕ್ಷಣಕ್ಕೆ. ಮತ್ತೆ ನಾವು ಅದನ್ನು ಮರೆತು ಮುಂದೆ ಹೋಗುತ್ತೇವೆ. ನನ್ನ ಆಟಕ್ಕೆ ಅಶ್ವಿನಿ ಅವರ ಮಾತು ಎಫೆಕ್ಟ್‌ ಆಗಿಲ್ಲ. ನನಗೆ ರಘು ಅವರು ಮೂರನೇ ಸ್ಥಾನ ಇರಬೇಕಿತ್ತು. ಜನರು ತಪ್ಪು ಅಂತ ಹೇಳ್ತಿಲ್ಲ ನಾನು. ಅದೆಲ್ಲ ಅವರ ಅವರ ದೃಷ್ಟಿಕೋನ ಎಂದರು.

Yashaswi Devadiga

View all posts by this author