Aishwaraya Shindogi: ನಾವು ಮದುವೆಯಾಗುತ್ತಿದ್ದೇವೆ; ಅನೌನ್ಸ್ ಮಾಡಿದ್ರು ಶಿಶಿರ್ -ಐಶ್ವರ್ಯಾ ಶಿಂಧೋಗಿ ಜೋಡಿ
Aishwaraya Shindogi: ʻಬಿಗ್ ಬಾಸ್ ಕನ್ನಡ ಸೀಸನ್ 11ʼರ ಮೂಲಕ ಜನಪ್ರಿಯತೆ ಗಳಿಸಿದ್ದ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯಾ ಸಿಂದೋಗಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನ ನೀಡಿದ್ದಾರೆ. ಈ ಜೋಡಿ ಪ್ರೀತಿಯನ್ನು ಅಧಿಕೃತಗೊಳಿಸಿದೆ. ಬ್ರೇಕಪ್ ಟ್ರೋಲ್‌ಗಳಿಗೆ (Brekup Troll) ವಿಡಿಯೋ ಮೂಲಕ ಖಡಕ್ ಉತ್ತರ ನೀಡಿದ್ದು, ಹೊಸ ಬಾಳಿಗೆ ಹೆಜ್ಜೆ ಇಡುತ್ತಿರುವ ಜೋಡಿಗೆ ಶುಭ ಹಾರೈಸುತ್ತಿದ್ದಾರೆ ಅಭಿಮಾನಿಗಳು.
ಐಶ್ವರ್ಯಾ ಶಿಶಿರ್ -
ʻಬಿಗ್ ಬಾಸ್ ಕನ್ನಡ ಸೀಸನ್ 11ʼರ (Bigg Boss Kannada 13) ಮೂಲಕ ಜನಪ್ರಿಯತೆ ಗಳಿಸಿದ್ದ ನಟ ಶಿಶಿರ್ ಶಾಸ್ತ್ರಿ (Shishir shastri) ಹಾಗೂ ನಟಿ ಐಶ್ವರ್ಯಾ ಸಿಂದೋಗಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನ ನೀಡಿದ್ದಾರೆ. ಈ ಜೋಡಿ ಪ್ರೀತಿಯನ್ನು ಅಧಿಕೃತಗೊಳಿಸಿದೆ. ಬ್ರೇಕಪ್ ಟ್ರೋಲ್‌ಗಳಿಗೆ (Brekup Troll) ವಿಡಿಯೋ ಮೂಲಕ ಖಡಕ್ ಉತ್ತರ ನೀಡಿದ್ದು, ಹೊಸ ಬಾಳಿಗೆ ಹೆಜ್ಜೆ ಇಡುತ್ತಿರುವ ಜೋಡಿಗೆ ಶುಭ ಹಾರೈಸುತ್ತಿದ್ದಾರೆ ಅಭಿಮಾನಿಗಳು.
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದ ವೇಳೆ ಇವರಿಬ್ಬರ ನಡುವೆ ಮೊದಲ ಬಾರಿಗೆ ಪರಿಚಯವಾಗಿತ್ತು. ಶೋ ಮುಗಿದ ನಂತರವೂ ಇವರ ಬಾಂಧವ್ಯ ಮುಂದುವರಿದು, ಕಾಲಕ್ರಮೇಣ ಗಾಢವಾದ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಕಳೆದ ಕೆಲವು ಸಮಯದಿಂದ ಈ ಜೋಡಿ ವಿವಿಧ ಸಮಾರಂಭಗಳಲ್ಲಿ, ಪ್ರವಾಸಗಳಲ್ಲಿ ಸದಾ ಒಟ್ಟಿಗೆ ಸುತ್ತಾಡುತ್ತಾ ಕಾಣಿಸಿಕೊಳ್ಳುತ್ತಿತ್ತು.
ಇದನ್ನೂ ಓದಿ: Ramayana Movie: ‘ರಾಮಾಯಣʼ ಅದ್ಧೂರಿ ಬಿಡುಗಡೆ; ಮೊದಲ ದಿನವೇ ₹100 ಕೋಟಿ ಗಳಿಸುವ ನಿರೀಕ್ಷೆ
ಊಹೆಗಳ ಹಿಂದೆ ಒಂದು ಕಥೆಯಿತ್ತು, ನಗುವಿನ ಹಿಂದೆ ಒಂದು ಪ್ರೀತಿಯಿತ್ತು. ಕಮೆಂಟ್‌ಗಳ ಹಿಂದೆ ನಿಮ್ಮ ಕುತೂಹಲವಿತ್ತು. ಇಂದು ಆ ಕಥೆಗೆ ಒಂದು ಸುಂದರವಾದ ಹೆಸರಿದೆ - ʻAISHIRʼ (ಐಶಿರ್). ಇಷ್ಟು ದಿನ ನಮ್ಮ ಕಥೆಯನ್ನ ನಿಮ್ಮದೇ ಕಥೆಯಂತೆ ಪ್ರೀತಿಸಿದ ಎಲ್ಲರಿಗೂ ಧನ್ಯವಾದಗಳು. ಇದು ಬರಿ ವದಂತಿಯಲ್ಲ, ನಮ್ಮ ಹೊಸ ಜೀವನದ ಸುಂದರ ಆರಂಭ..” ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ನೀಡಿದ್ದಾರೆ. ಇನ್ನು ವಿಡಿಯೋದ ಕೊನೆಯಲ್ಲಿ ಮದುವೆ ದಿನಾಂಕದ ಬಗ್ಗೆ ಇರುವ ಗೊಂದಲ್ಲೂ ತೆರೆ ತೆಳೆದಿದ್ದಾರೆ.
ಇದನ್ನೂ ಓದಿ: Ramayana Twitter review: ‘ರಾಮಾಯಣ’ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ; ಯಶ್ ನಟನೆಗೆ ಫಿದಾ ಆದ್ರು ಫ್ಯಾನ್ಸ್
ಇನ್ನು ಜನ ನಮ್ಮ ಮದುವೆ ಯಾವಾಗ ಅಂತಾ ಕೇಳ್ತಾರೆ ಅನ್ನೋದಕ್ಕೆ. ಎಲ್ಲವನ್ನೂ ಒಂದೊಂದಾಗಿಯೇ ಹೇಳೋಣ. ನಿಮ್ಮ AISHIR ಪ್ರಯಾಣ ಇಲ್ಲಿಗೆ ಕ್ಲೋಸ್ ಆಗಿಲ್ಲ. ಇಲ್ಲಿಂದಲೇ ಆರಂಭ ಎಂದು ತಿಳಿಸಿದ್ದಾರೆ..