ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸದ್ದಿಲ್ಲದೇ ಬಂಪರ್‌ ನ್ಯೂಸ್‌ ಕೊಟ್ಟ ʻಬಿಗ್‌ ಬಾಸ್‌ʼ ವಿನ್ನರ್‌ ಗಿಲ್ಲಿ ನಟ; ಹೊಸ ಸಿನಿಮಾಕ್ಕೆ ಸಾಥ್‌ ನೀಡಿದ ʻಟಾಕ್ಸಿಕ್ʼ, ʻಜನ ನಾಯಗನ್‌ʼ ನಿರ್ಮಾಪಕರು

‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ವಿಜೇತ ‘ಗಿಲ್ಲಿ ನಟ’ (ನಟರಾಜ್) ಹೀರೋ ಆಗಿ ಚಿತ್ರರಂಗಕ್ಕೆ ಭರ್ಜರಿ ಪ್ರಮೋಷನ್ ಪಡೆದಿದ್ದಾರೆ. ‘ಟಾಕ್ಸಿಕ್’ ಹಾಗೂ ‘ಜನ ನಾಯಗನ್’ ಖ್ಯಾತಿಯ ‘ಕೆವಿಎನ್ ಪ್ರೊಡಕ್ಷನ್ಸ್’ ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದೆ. ನಿರ್ದೇಶಕ ಚಂದ್ರಮೋಹನ್ ಆ್ಯಕ್ಷನ್ ಕಟ್ ಹೇಳಲಿರುವ ಈ ಔಟ್ ಅಂಡ್ ಔಟ್ ಕಾಮಿಡಿ ಚಿತ್ರದ ಅದ್ಧೂರಿ ಮುಹೂರ್ತವು ಜೂನ್ 21ರಂದು ನೆರವೇರಲಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನ ವಿಜೇತ ‘ಗಿಲ್ಲಿ ನಟ’ (ನಟರಾಜ್) ಅವರು ಸದ್ದಿಲ್ಲದೇ ದೊಡ್ಡ ಬ್ರೇಕಿಂಗ್ ನ್ಯೂಸ್ ಒಂದನ್ನು ನೀಡಿದ್ದಾರೆ. ಈವರೆಗೂ ರಿಯಾಲಿಟಿ ಶೋ, ಹಾಸ್ಯ ಪಾತ್ರಗಳಲ್ಲಿ ಮಿಂಚುತ್ತಿದ್ದ ಗಿಲ್ಲಿ ನಟ ಅವರು ಇದೀಗ ನಾಯಕ ನಟನಾಗಿ ಪ್ರಮೋಷನ್ ಪಡೆದುಕೊಂಡಿದ್ದಾರೆ. ಅವರು ಚೊಚ್ಚಲ ಬಾರಿಗೆ ಹೀರೋ ಆಗುತ್ತಿರುವ ಹೊಸ ಸಿನಿಮಾದ ಘೋಷಣೆ ಆಗಿದ್ದು, ಚಿತ್ರದ ಅದ್ಧೂರಿ ಮುಹೂರ್ತಕ್ಕೆ ದಿನಗಣನೆ ಆರಂಭವಾಗಿದೆ.

ಸಾಥ್‌ ನೀಡಿದ ಕೆವಿಎನ್‌ ಪ್ರೊಡಕ್ಷನ್ಸ್

ವಿಶೇಷವೆಂದರೆ, ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’, ದಳಪತಿ ವಿಜಯ್‌ ಅವರ ‘ಜನ ನಾಯಗನ್’ನಂತಹ ಪ್ಯಾನ್ ಇಂಡಿಯಾ ಚಿತ್ರಗಳನ್ನು ನಿರ್ಮಾಣ ಮಾಡಿರುವ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ಗಿಲ್ಲಿ ನಟನ ಈ ಹೊಸ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿದೆ.‌ "ಹೊಸ ಪ್ರತಿಭೆಗಳಿಗೆ ನಾವು ಸದಾ ಬೆಂಬಲವಾಗಿ ನಿಂತಿರುತ್ತೇವೆ, ಅಂದುಕೊಂಡ ಬಜೆಟ್‌ನಲ್ಲಿ ಉತ್ತಮವಾಗಿ ಸಿನಿಮಾ ಮಾಡಿ" ಎಂದು ಕೆವಿಎನ್ ಪ್ರೊಡಕ್ಷನ್ಸ್‌ನ ವೆಂಕಟ್‌ ಕೆ.‌ ನಾರಾಯಣ್ ಅವರು ಹೇಳಿದ್ದಾರೆ.

Gilli Nata: ಗಿಲ್ಲಿ ನಟನಿಂದ ಇಂದು ಫ್ಯಾನ್ಸ್‌ಗೆ ಸರ್‌ಪ್ರೈಸ್‌! ಏನದು?

ಜೂನ್ 21ಕ್ಕೆ ಅದ್ಧೂರಿ ಮುಹೂರ್ತ

ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸುವ, ಈ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕರಾದ ನವೀನ್ ಮತ್ತು ಹರೀಶ್ ಅವರು ಚೊಚ್ಚಲ ಬಾರಿಗೆ ಜಂಟಿ ನಿರ್ಮಾಣ ಮಾಡುತ್ತಿರುವ ಈ ಹೊಸ ಚಿತ್ರದಲ್ಲಿ ಗಿಲ್ಲಿ ನಟ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮುಹೂರ್ತವು ಗಿಲ್ಲಿ ನಟ ಅವರ ಹುಟ್ಟುಹಬ್ಬವಾದ ಜೂನ್ 21ರಂದು ಜರುಗಲಿದ್ದು, ಅದಕ್ಕಾಗಿಯೇ ಚಿತ್ರತಂಡ ವಿಭಿನ್ನ ಹಾಗೂ ಮಸ್ತ್ ಆದ ಪ್ರೋಮೋವನ್ನು ಹಂಚಿಕೊಂಡಿದೆ.

ಈ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆಯುತ್ತಿದೆ. ಚಿತ್ರರಂಗದಲ್ಲಿ ಸದಾ ಹೊಸ ಹಾಗೂ ಕಷ್ಟಪಟ್ಟು ಬಂದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಸಂಸ್ಥಾಪಕರಾದ ಕೆ. ವೆಂಕಟ ನಾರಾಯಣ ಹಾಗೂ ಬ್ಯುಸಿನೆಸ್ ಹೆಡ್ ಸುಪ್ರಿತ್ ಅವರು ಈ ಯುವ ತಂಡದ ಬೆನ್ನಿಗೆ ನಿಂತು ಪ್ರೋತ್ಸಾಹಿಸುತ್ತಿದ್ದಾರೆ.

Gilli Nata: ʻಇನ್‌ಸ್ಟಾಗ್ರಾಮ್‌ನಲ್ಲಿ ರಘು ಅಣ್ಣ ಅನ್‌ಫಾಲೋ ಮಾಡಿದ್ದು ಗೊತ್ತೇ ಇರಲಿಲ್ಲʼ; ಅಚ್ಚರಿಯ ವಿಚಾರ ತಿಳಿಸಿದ ಗಿಲ್ಲಿ ನಟ!

ಈ ಸಿನಿಮಾಗೆ ನಿರ್ದೇಶಕರು ಯಾರು?

ಕನ್ನಡ ಚಿತ್ರರಂಗದಲ್ಲಿ ಔಟ್ ಅಂಡ್ ಔಟ್ ಕಾಮಿಡಿ ಮತ್ತು ಎಂಟರ್‌ಟೇನರ್ ಸಿನಿಮಾಗಳಿಗೆ ಬ್ರ್ಯಾಂಡ್ ಆಗಿರುವ, ಈ ಹಿಂದೆ ಚಿಕ್ಕಣ್ಣ ನಟನೆಯ ‘ಬೊಂಬೆ ಮಿಠಾಯಿ’, ‘ಡಬಲ್ ಇಂಜಿನ್’, ʻಫಾರೆಸ್ಟ್‌ʼ ಹಾಗೂ ಸತೀಶ್‌ ನೀನಾಸಂ ನಟನೆಯ ‘ಬ್ರಹ್ಮಚಾರಿ’ಯಂತಹ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ಚಂದ್ರಮೋಹನ್ ಈ ಹೊಸ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಮಂಡ್ಯ ಶೈಲಿಯ ವಿಶಿಷ್ಟ ಹಾಸ್ಯದ ಮೂಲಕವೇ ಮನೆಮಾತಾಗಿರುವ ಗಿಲ್ಲಿ ನಟ ಹಾಗೂ ನಿರ್ದೇಶಕ ಚಂದ್ರಮೋಹನ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಈ ಚಿತ್ರವು ಪಕ್ಕಾ ಕಾಮಿಡಿ ಎಂಟರ್‌ಟೇನರ್ ಆಗಿರಲಿದೆಯಂತೆ.

ಸದ್ಯದಲ್ಲೇ ಚಿತ್ರದ ಶೀರ್ಷಿಕೆ ಹಾಗೂ ನಾಯಕಿ ಯಾರು ಎಂಬ ಸಂಪೂರ್ಣ ವಿವರಗಳನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಲಿದೆ. ಬಿಗ್ ಬಾಸ್ ಗೆದ್ದ ನಂತರ ಗಿಲ್ಲಿ ನಟನಿಗೆ ಸಿಕ್ಕಿರುವ ಈ ಬಂಪರ್ ಆಫರ್ ಕಂಡು ಅವರ ಅಭಿಮಾನಿ ಬಳಗ ಫುಲ್ ಖುಷ್ ಆಗಿದೆ.