ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gilli Nata: ದರ್ಶನ್ ಭೇಟಿ ಆಗ್ತಾರಾ ಗಿಲ್ಲಿ ? ಕೊನೆಗೂ ಕ್ಲಾರಿಟಿ ಕೊಟ್ಟ ನಟ

Gilli Nata: ಬಿಗ್​​ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟನಿಗೆ ಸಾಲು ಸಾಲು ಚಿತ್ರಗಳಲ್ಲಿ ಅವಕಾಶಗಳು ಸಿಗುತ್ತಿವೆ. ಅಲ್ಲದೆ ಬಿಗ್ ಬಾಗ್ ಗೂ ಮುನ್ನವೇ ಹಲವು ಚಿತ್ರಗಳಲ್ಲಿ ಗಿಲ್ಲಿ ನಟ ಅಭಿನಯಿಸಿದ್ದರು. ಗಿಲ್ಲಿ ನಟ ಪ್ರಮುಖ ಪಾತ್ರ ಮಾಡಿರುವ ‘ಸೂಪರ್ ಸ್ಟಾರ್ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಗಿಲ್ಲಿ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಜೈಲಿನಲ್ಲಿರುವ ದರ್ಶನ್ ಭೇಟಿಗೆ ಹೋಗ್ತೀರಾ ಎನ್ನುವ ಪ್ರಶ್ನೆ ಕೂಡ ಎದುರಾಗಿತ್ತು. ಈ ಬಗ್ಗೆ ಗಿಲ್ಲಿ ಉತ್ತರ ನೀಡಿದ್ದು ಹೀಗೆ.

ದರ್ಶನ್ ಭೇಟಿ ಆಗ್ತಾರಾ ಗಿಲ್ಲಿ ? ಕೊನೆಗೂ ಕ್ಲಾರಿಟಿ ಕೊಟ್ಟ ನಟ

ಗಿಲ್ಲಿ ನಟ -

Yashaswi Devadiga
Yashaswi Devadiga Feb 9, 2026 6:46 PM

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada 12) ವಿನ್ನರ್ ಗಿಲ್ಲಿ ನಟನಿಗೆ (Gilli Nata) ಸಾಲು ಸಾಲು ಚಿತ್ರಗಳಲ್ಲಿ ಅವಕಾಶಗಳು ಸಿಗುತ್ತಿವೆ. ಅಲ್ಲದೆ ಬಿಗ್ ಬಾಗ್ ಗೂ ಮುನ್ನವೇ ಹಲವು ಚಿತ್ರಗಳಲ್ಲಿ ಗಿಲ್ಲಿ ನಟ ಅಭಿನಯಿಸಿದ್ದರು. ಗಿಲ್ಲಿ ನಟ ಪ್ರಮುಖ ಪಾತ್ರ ಮಾಡಿರುವ ‘ಸೂಪರ್ ಸ್ಟಾರ್ (Super star) ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಗಿಲ್ಲಿ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಜೈಲಿನಲ್ಲಿರುವ ದರ್ಶನ್ (Darshan) ಭೇಟಿಗೆ ಹೋಗ್ತೀರಾ ಎನ್ನುವ ಪ್ರಶ್ನೆ ಕೂಡ ಎದುರಾಗಿತ್ತು. ಈ ಬಗ್ಗೆ ಗಿಲ್ಲಿ ಉತ್ತರ ನೀಡಿದ್ದು ಹೀಗೆ.

ಸದ್ಯಕ್ಕೆ ಆ ಅವಕಾಶ ಇಲ್ಲ

ಮಾಧ್ಯಮದ ಮುಂದೆ ಗಿಲ್ಲಿ ನಟ ಮಾತನಾಡಿ, "ದರ್ಶನ್ ಸರ್ ಅವರನ್ನು ಭೇಟಿ ಮಾಡುವುದಕ್ಕೆ ಸಾಧ್ಯನಾ? ಎಂದು ಕೇಳಿ ನೋಡ್ದೆ. ಸದ್ಯಕ್ಕೆ ಆ ಅವಕಾಶ ಇಲ್ಲ ಅಂದ್ರು. ಪ್ರಯತ್ನಿಸಿದ್ದು ನಿಜ. ದರ್ಶನ್ ಅಣ್ಣನನ್ನು ಜೈಲಿನಲ್ಲಿ ನೋಡುವುದಕ್ಕಿಂತ ಅವರ ಮನೆಯಲ್ಲಿ ನೋಡಬೇಕು. ಮನೆಗೆ ಹೋಗಿ ಆಶೀರ್ವಾದ ಪಡೆಯಬೇಕು ಎನ್ನುವುದು ನನ್ನ ಆಸೆ" ಎಂದು ಗಿಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Spirit Movie: ದೀಪಿಕಾ ಬೆನ್ನಲ್ಲೇ ʻಸ್ಪಿರಿಟ್‌ʼನಿಂದ ಪ್ರಕಾಶ್‌ ರಾಜ್‌ ಔಟ್‌? ಕಾರಣ ಇದು

ಇನ್ನು ಡೆವಿಲ್‌ ಸಿನಿಮಾದಲ್ಲಿಯೂ ಗಿಲ್ಲಿ ನಟ ನಟಿಸಿದ್ದರು. 'ಡೆವಿಲ್' ಸಿನಿಮಾ ನೋಡುವಾಗ ನನ್ನ ದೃಶ್ಯಗಳನ್ನು ಪ್ರೇಕ್ಷಕರು ಎಂಜಾಯ್ ಮಾಡಿದ್ರು ಎಂದು ಗೊತ್ತಾಯ್ತು. ಚಿತ್ರಮಂದಿರದಲ್ಲಿ ಕೂತು ಅದನ್ನೆಲ್ಲಾ ಎಂಜಾಯ್ ಮಾಡಬೇಕಿತ್ತು ಎಂದು ಅನ್ನಿಸಿದ್ದು ನಿಜ. ಆ ವಿಚಾರಕ್ಕೆ ಬೇಸರವಾಯಿತು. ಹೊರಗಡೆ ಬಂದ ಮೇಲೆ ಫೋನ್ ಅಲ್ಲಿ ಆ ವಿಡಿಯೋಗಳನ್ನು ನೋಡಿ ಬಹಳ ಖುಷಿಯಾಯಿತು ಎಂದು ಗಿಲ್ಲಿ ಹೇಳಿದ್ದಾರೆ.

ಸಿನಿಮಾ ಪ್ರಚಾರಕ್ಕೆ ಹೋಗಿಲ್ಲ ಏಕೆ?

ಸರ್ಕಾರಿ ಶಾಲೆ ಎಚ್​​8 ಹೆಸರಿನ ಸಿನಿಮಾನಲ್ಲಿ ಗಿಲ್ಲಿ ನಟ ನಟಿಸಿದ್ದು, ಬಿಡುಗಡೆ ಕೂಡ ಕಂಡಿತ್ತು.ಸಂಭಾವನೆ ಪಡೆದು ಸಿನಿಮಾದಲ್ಲಿ ನಟಿಸಿರುವ ಗಿಲ್ಲಿ ನಟ ಸಿನಿಮಾದ ಪ್ರಚಾರಕ್ಕೆ ಬರುತ್ತಿಲ್ಲ ಎಂದು ನಿರ್ಮಾಪಕ ತೇಜಸ್ವಿ ಅವರು ಫಿಲಂ ಚೇಂಬರ್​​ಗೆ ದೂರು ನೀಡಿದ್ದರು. ಈ ಬಗ್ಗೆ ಗಿಲ್ಲಿ ನಟ ಕ್ಲಾರಿಟಿ (Clarity) ಕೊಟ್ಟಿದ್ದಾರೆ.ಸಿನಿಮಾ ಈಗ ಬಿಡುಗಡೆಗೆ ಗಿಲ್ಲಿ ನಟ ಪ್ರಮುಖ ಪಾತ್ರ ಮಾಡಿರುವ ‘ಸೂಪರ್ ಸ್ಟಾರ್ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ.



ಆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಗಿಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ. ‘ಸರ್ಕಾರಿ ಶಾಲೆ ಹೆಚ್​8 ಸಿನಿಮಾ ಮಾಡಿ ನನ್ನ ಪ್ರಕಾರ 2ರಿಂದ ಎರಡೂವರೆ ವರ್ಷ ಆಗಿರಬಹುದು. ಅದರಲ್ಲಿ ನಟನೆ ಮಾಡಿದ್ದೇನೆ. ನಾನು ನನ್ನ ಬೈಟ್ಸ್ ಕಳಿಸಿದ್ದೇನೆ.ಹಾಗಿದ್ದರೂ ಕೂಡ ಅವರು ಯಾಕೆ ದೂರು ನೀಡಿದರೋ ಗೊತ್ತಿಲ್ಲ. ನನಗೂ ಒಂದಷ್ಟು ಕೆಲಸಗಳ ಒತ್ತಡ ಇತ್ತು.

ಇದನ್ನೂ ಓದಿ: Gilli Nata: ಈ ಕಾರಣಕ್ಕೆ ತಮ್ಮದೇ ಸಿನಿಮಾ ಪ್ರಚಾರಕ್ಕೆ ಹೋಗಿಲ್ಲ ಗಿಲ್ಲಿ! ಸ್ಪಷ್ಟನೆ ಕೊಟ್ಟ ನಟ

ನಾನು ಫೋನ್ ಎತ್ತಿಲ್ಲ ಎಂಬ ಕಾರಣಕ್ಕೆ ಪಾಪ ಅವರಿಗೆ ಆ ರೀತಿ ಆಗಿರಬಹುದು. ಅವರದ್ದು ತಪ್ಪಿಲ್ಲ’ ಎಂದು ಗಿಲ್ಲಿ ನಟ ಹೇಳಿದ್ದಾರೆ.’ ವಾಣಿಜ್ಯ ಮಂಡಳಿಗೆ ನಾನು ಉತ್ತರ ಕೊಡಬೇಕಿತ್ತು. ಅದನ್ನು ನೀಡಿದ್ದೇನೆ’ ಎಂದು ಗಿಲ್ಲಿ ನಟ ಅವರು ಸ್ಪಷ್ಟನೆ ನೀಡಿದ್ದಾರೆ.