ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gilli Nata: ಈ ಕಾರಣಕ್ಕೆ ತಮ್ಮದೇ ಸಿನಿಮಾ ಪ್ರಚಾರಕ್ಕೆ ಹೋಗಿಲ್ಲ ಗಿಲ್ಲಿ! ಸ್ಪಷ್ಟನೆ ಕೊಟ್ಟ ನಟ

Gilli Nata Bigg Boss : ಬಿಗ್​​ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟ (Gilli Nata) ಕರ್ನಾಟಕದಲ್ಲಿ ಸದ್ಯ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಗಿಲ್ಲಿ ನಟನಿಗೆ ಅವಕಾಶಗಳು ಸಿಗುತ್ತಿವೆ. ಅಲ್ಲದೆ ಬಿಗ್ ಬಾಗ್ ಗೂ ಮುನ್ನವೇ ಹಲವು ಚಿತ್ರಗಳಲ್ಲಿ ಗಿಲ್ಲಿ ನಟ ಅಭಿನಯಿಸಿದ್ದರು. ಸರ್ಕಾರಿ ಶಾಲೆ ಎಚ್​​8 ಹೆಸರಿನ ಸಿನಿಮಾನಲ್ಲಿ ಗಿಲ್ಲಿ ನಟ ನಟಿಸಿದ್ದು, ಬಿಡುಗಡೆ ಕೂಡ ಕಂಡಿತ್ತು.

ಈ ಕಾರಣಕ್ಕೆ ತಮ್ಮದೇ ಸಿನಿಮಾ ಪ್ರಚಾರಕ್ಕೆ ಹೋಗಿಲ್ಲ ಗಿಲ್ಲಿ!

ಗಿಲ್ಲಿ ನಟ -

Yashaswi Devadiga
Yashaswi Devadiga Feb 9, 2026 6:10 PM

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada 12) ವಿನ್ನರ್ ಗಿಲ್ಲಿ ನಟ (Gilli Nata) ಕರ್ನಾಟಕದಲ್ಲಿ ಸದ್ಯ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಗಿಲ್ಲಿ ನಟನಿಗೆ ಅವಕಾಶಗಳು ಸಿಗುತ್ತಿವೆ. ಅಲ್ಲದೆ ಬಿಗ್ ಬಾಗ್ ಗೂ ಮುನ್ನವೇ ಹಲವು ಚಿತ್ರಗಳಲ್ಲಿ ಗಿಲ್ಲಿ ನಟ ಅಭಿನಯಿಸಿದ್ದರು. ಸರ್ಕಾರಿ ಶಾಲೆ ಎಚ್​​8 (sarkari shale H8) ಹೆಸರಿನ ಸಿನಿಮಾನಲ್ಲಿ ಗಿಲ್ಲಿ ನಟ ನಟಿಸಿದ್ದು, ಬಿಡುಗಡೆ ಕೂಡ ಕಂಡಿತ್ತು. ಸಂಭಾವನೆ ಪಡೆದು ಸಿನಿಮಾದಲ್ಲಿ ನಟಿಸಿರುವ ಗಿಲ್ಲಿ ನಟ ಸಿನಿಮಾದ ಪ್ರಚಾರಕ್ಕೆ ಬರುತ್ತಿಲ್ಲ ಎಂದು ನಿರ್ಮಾಪಕ ತೇಜಸ್ವಿ ಅವರು ಫಿಲಂ ಚೇಂಬರ್​​ಗೆ ದೂರು ನೀಡಿದ್ದರು. ಈ ಬಗ್ಗೆ ಗಿಲ್ಲಿ ನಟ ಕ್ಲಾರಿಟಿ (Clarity) ಕೊಟ್ಟಿದ್ದಾರೆ.

ಅವರದ್ದು ತಪ್ಪಿಲ್ಲ

ಸಿನಿಮಾ ಈಗ ಬಿಡುಗಡೆಗೆ ಗಿಲ್ಲಿ ನಟ ಪ್ರಮುಖ ಪಾತ್ರ ಮಾಡಿರುವ ‘ಸೂಪರ್ ಸ್ಟಾರ್ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಗಿಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ. ‘ಸರ್ಕಾರಿ ಶಾಲೆ ಹೆಚ್​8 ಸಿನಿಮಾ ಮಾಡಿ ನನ್ನ ಪ್ರಕಾರ 2ರಿಂದ ಎರಡೂವರೆ ವರ್ಷ ಆಗಿರಬಹುದು. ಅದರಲ್ಲಿ ನಟನೆ ಮಾಡಿದ್ದೇನೆ. ನಾನು ನನ್ನ ಬೈಟ್ಸ್ ಕಳಿಸಿದ್ದೇನೆ.

ಇದನ್ನೂ ಓದಿ: Dhanveerah: ದೊಡ್ಡವರು ಮಾತನಾಡೋದು ಕೇಳಿ ಖುಷಿ ಆಯ್ತು! ಸುದೀಪ್‌ ಬಗ್ಗೆ ಧನ್ವೀರ್ ಹೇಳಿದ್ದೇನು?

ಹಾಗಿದ್ದರೂ ಕೂಡ ಅವರು ಯಾಕೆ ದೂರು ನೀಡಿದರೋ ಗೊತ್ತಿಲ್ಲ. ನನಗೂ ಒಂದಷ್ಟು ಕೆಲಸಗಳ ಒತ್ತಡ ಇತ್ತು. ನಾನು ಫೋನ್ ಎತ್ತಿಲ್ಲ ಎಂಬ ಕಾರಣಕ್ಕೆ ಪಾಪ ಅವರಿಗೆ ಆ ರೀತಿ ಆಗಿರಬಹುದು. ಅವರದ್ದು ತಪ್ಪಿಲ್ಲ’ ಎಂದು ಗಿಲ್ಲಿ ನಟ ಹೇಳಿದ್ದಾರೆ.’ ವಾಣಿಜ್ಯ ಮಂಡಳಿಗೆ ನಾನು ಉತ್ತರ ಕೊಡಬೇಕಿತ್ತು. ಅದನ್ನು ನೀಡಿದ್ದೇನೆ’ ಎಂದು ಗಿಲ್ಲಿ ನಟ ಅವರು ಸ್ಪಷ್ಟನೆ ನೀಡಿದ್ದಾರೆ.



'ಸರ್ಕಾರಿ ಶಾಲೆ H8' ಸಿನಿಮಾ ತೆರೆಗೆ

ಫೆ.6ರಂದು 'ಸರ್ಕಾರಿ ಶಾಲೆ H8' ಸಿನಿಮಾ ತೆರೆಕಂಡಿದೆ. ಸಿನಿಮಾ ಬಿಡುಗಡೆಯಾಗಿದೆ. ಆದರೆ, ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರಾದ ಗಿಲ್ಲಿ ಅವರು ಪ್ರಮೋಷನ್‌ಗೆ ಬರುತ್ತಿಲ್ಲ ಎಂದು ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Naveen Polishetty: ನವೀನ್ ಪೊಲಿಶೆಟ್ಟಿ ಒಂದೊಳ್ಳೆ ಹಾಸ್ಯ ಮೂವಿ; ಸ್ಟ್ರೀಮಿಂಗ್‌ ಎಲ್ಲಿ?

"ಅವರು ಕೇಳಿದಷ್ಟು ಸಂಭಾವನೆಯನ್ನು ನಾವು ಕೊಟ್ಟಿದ್ದೇವೆ. ಆದರೆ ಈಗ ನಮ್ಮ ಕರೆಗಳನ್ನೂ ಸ್ವೀಕರಿಸುತ್ತಿಲ್ಲ. ಫೋನ್ ಮಾಡಿದರೆ ಪಿಕ್ ಮಾಡುತ್ತಿಲ್ಲ. ಖುದ್ದಾಗಿ ಬಂದು ಪ್ರಚಾರ ಮಾಡುವುದಿರಲಿ, ಕನಿಷ್ಠಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ಒಂದು ಸಣ್ಣ ಪೋಸ್ಟ್ ಹಾಕುವ ಮೂಲಕವೂ ಬೆಂಬಲ ನೀಡುತ್ತಿಲ್ಲ" ಎಂದು ನಿರ್ಮಾಪಕರು ಫಿಲ್ಮ್‌ ಚೇಂಬರ್‌ಗೆ ನೀಡಿರುವ ದೂರಿನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದರು.