Bollywood's Richest Man: ಶಾರುಖ್ ಖಾನ್ ಆದಾಯವನ್ನೇ ಮೀರಿಸಿದ ಬಾಲಿವುಡ್‌ನ ಈ ನಿರ್ಮಾಪಕ ಯಾರು?
ನಟ ಶಾರುಖ್ ಖಾನ್ ಭಾರತದ ಶ್ರೀಮಂತ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಇವರನ್ನು ಮೀರಿಸಿದ್ದ ವ್ಯಕ್ತಿಯೊಬ್ಬರು ಬಾಲಿವುಡ್‌ನಲ್ಲೇ ಇದ್ದಾರೆ. ಅವರು ಎಂದಿಗೂ ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ, ಯಾವ ಸಿನಿಮಾವನ್ನು ನಿರ್ದೇಶಿಸಿಲ್ಲ ಹಾಗಿದ್ದರೂ ಬಾಲಿವುಡ್ ನ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಅವರು ಖ್ಯಾತಿ ಪಡೆಯುವ ಮೂಲಕ ನಟ ಶಾರುಖ್ ಖಾನ್ ಅವರ ಆದಾಯವನ್ನು ಕೂಡ ಮೀರಿಸಿದ್ದಾರೆ. ಹಾಗಾದರೆ ಅವರು ಯಾರು? ಆದಾಯ ಎಷ್ಟು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Bollywood's richest man -

ಮುಂಬೈ: ಸಿನಿಮಾ ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿಗಳು ತಮ್ಮ ಬೇಡಿಕೆಗೆ ತಕ್ಕಂತೆ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಸಿನಿಮಾ, ಜಾಹೀರಾತು, ನಿರ್ಮಾಣ ಸಂಸ್ಥೆ ಸೇರಿ ಇತರ ಉದ್ಯಮಗಳನ್ನು ನಡೆಸುವ ಮೂಲಕ ಕೆಲವು ಸ್ಟಾರ್‌ಗಳು ಕೋಟಿ ಕೋಟಿ ಹಣ ಗಳಿಕೆ ಮಾಡುತ್ತಾರೆ. ಬಾಲಿವುಡ್‌ನ ಸಿರಿವಂತರು ಎಂದಾಗ ನಮಗೆ ನಟ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್ ಅಥವಾ ಕರಣ್ ಜೋಹರ್ ಅವರಂತಹ ಸೆಲೆಬ್ರಿಟಿಗಳ ಹೆಸರು ಥಟ್ಟನೆ ನೆನಪಾಗುತ್ತದೆ. ಇತ್ತೀಚೆಗಷ್ಟೇ ಹುರುನ್ ಇಂಡಿಯಾ ವತಿಯಿಂದ ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಬಾಲಿವುಡ್ ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಮುಂಚೂಣಿಯಲ್ಲಿದ್ದಾರೆ. ಅವರ ನಿವ್ವಳ ಆದಾಯವು ಬರೋಬ್ಬರಿ 1.4 ಬಿಲಿಯನ್. ಆದರೆ ಅವರನ್ನು ಮೀರಿಸಿರುವ ವ್ಯಕ್ತಿಯೊಬ್ಬರು ಬಾಲಿವುಡ್‌ನಲ್ಲೇ ಇದ್ದಾರೆ. ಅವರು ಎಂದಿಗೂ ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ, ಯಾವ ಸಿನಿಮಾವನ್ನು ನಿರ್ದೇಶಿಸಿಲ್ಲ. ಹಾಗಿದ್ದರೂ ಬಾಲಿವುಡ್‌ನ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಅವರು ಖ್ಯಾತಿ ಪಡೆಯುವ ಮೂಲಕ ನಟ ಶಾರುಖ್ ಖಾನ್ ಅವರ ಆದಾಯವನ್ನು ಕೂಡ ಮೀರಿಸಿದ್ದಾರೆ. ಹಾಗಾದರೆ ಅವರು ಯಾರು? ಇಲ್ಲಿದೆ ಮಾಹಿತಿ.
ಹುರುನ್ ಇಂಡಿಯಾ ರಿಚ್ ಲಿಸ್ಟ್ 2025 ಮತ್ತು ಫೋರ್ಬ್ಸ್ ಎರಡು ವರದಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಅದರ ಪ್ರಕಾರ ಶಾರುಖ್ ಖಾನ್ ಅವರ ಆದಾಯವನ್ನು ನಿರ್ಮಾಪಕರೊಬ್ಬರು ಬೀಟ್ ಮಾಡಿದ್ದಾರೆ. ನಿರ್ಮಾಪಕ ಮತ್ತು ಉದ್ಯಮಿ ರೋನಿ ಸ್ಕ್ರೂವಾಲಾ ಅವರು ಶಾರುಖ್ ಖಾನ್ ಅವರ ನಿವ್ವಳ ಆದಾಯಕ್ಕಿಂತ ಅಧಿಕ ಸಂಪತ್ತು ಹೊಂದಿದ್ದಾರೆ. ಅವರ ನಿವ್ವಳ ಮೌಲ್ಯ 1.5 ಬಿಲಿಯನ್ (ಸುಮಾರು 13,300 ಕೋಟಿ ರೂ.) ಎಂದು ವರದಿ ತಿಳಿಸಿದೆ. ಶಾರುಖ್ ಖಾನ್ ವಿಶ್ವದ ಶ್ರೀಮಂತ ನಟರ ಸಾಲಿನಲ್ಲಿ ಒಬ್ಬರಾಗಿದ್ದಾರೆ. ಅದಾಗ್ಯೂ ಹಿಂದಿ ಸಿನಿಮಾ ರಂಗದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗುರುತಿಗೆ ನಿರ್ಮಾಪಕ ರೋನಿ ಸ್ಕ್ರೂವಾಲಾ ಪಾತ್ರರಾಗಿದ್ದಾರೆ.
ಹುರುನ್ ರಿಚ್ ಪಟ್ಟಿ ಪ್ರಕಾರ ಕರಣ್ ಜೋಹರ್ ನಿವ್ವಳ ಆದಾಯ ಮೌಲ್ಯ 1,880 ಕೋಟಿ ರೂಪಾಯಿ ಮತ್ತು ಅಮಿತಾಬ್ ಬಚ್ಚನ್ 1,630 ಕೋಟಿ ರೂಪಾಯಿ ನಿವ್ವಳ ಆದಾಯ ಹೊಂದಿದ್ದಾರೆ. ಬಾಲಿವುಡ್ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಭೂಷಣ್ ಕುಮಾರ್ 8,000 ಕೋಟಿ ರೂ. ಹಾಗೂ ಆದಿತ್ಯ ಚೋಪ್ರಾ 10,000 ಕೋಟಿ ರೂ.ನಿವ್ವಳ ಆದಾಯ ಹೊಂದಿದ್ದಾರೆ.
ಭಾರತದಲ್ಲಿ ಕೇಬಲ್ ಟೆಲಿವಿಷನ್ ಕ್ರಾಂತಿಯ ಪ್ರವರ್ತಕ ಎನಿಸಿಕೊಂಡಿರುವ ರೋನಿ ಸ್ಕ್ರೂವಾಲಾ ನಿರ್ಮಾಪಕರಾಗಿ ಪ್ರಸಿದ್ಧರಾಗಿದ್ದಾರೆ. 80ರ ದಶಕದಲ್ಲಿ ಟೂತ್ ಬ್ರಷ್‌ಗಳ ಉದ್ದಿಮೆಗೆ ಬಂಡವಾಳ ಹೂಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಲ್ಲಿಂದ ಅವರು ಕೇಬಲ್ ಟಿವಿ ನೆಟ್‌ವರ್ಕ್ ಸ್ಥಾಪಿಸಿದರು. 1990 ಲ್ಲಿ ಅವರು ಯುಟಿವಿಯನ್ನು ಸ್ಥಾಪಿಸಿ ಒಂದು ಟಿವಿ ಸ್ಟುಡಿಯೋದ ಮಾಲಕರಾದರು. ಅನಂತರ ಚಲನಚಿತ್ರ ನಿರ್ಮಾಣಕ್ಕೆ ಮುಂದಾದರು. ʼಲಕ್ಷ್ಯʼ, ʼಸ್ವದೇಶ್ʼ, ʼರಂಗ್ ದೇ ಬಸಂತಿʼ, ʼಜೋಧಾ ಅಕ್ಬರ್ʼ ಮತ್ತು ʼಫ್ಯಾಷನ್ʼ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.
2012ರಲ್ಲಿ ಯುಟಿವಿಯನ್ನು ಡಿಸ್ನಿ ಬ್ರ್ಯಾಂಡ್ ಶತಕೋಟಿ ಡಾಲರ್ ಒಪ್ಪಂದದಲ್ಲಿ ಸ್ವಾಧೀನ ಪಡಿಸಿಕೊಂಡಿತು. ಅನಂತರ ಅವರು ಸ್ಕ್ರೂವಾಲಾ ಆರ್‌ಎಸ್‌ವಿಪಿ ಮೂವೀಸ್ ಅನ್ನು ಸ್ಥಾಪಿಸಿದರು. ಅದರ ಅಡಿಯಲ್ಲಿ ಅವರು ʼಕೇದಾರನಾಥʼ, ʼಉರಿʼ ಮತ್ತು ʼಸ್ಯಾಮ್ ಬಹದ್ದೂರ್ʼ ಸಿನಿಮಾ ನಿರ್ಮಿಸಿದ್ದಾರೆ. ಉದ್ದಿಮೆ ಹೂಡಿಕೆ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಮಾಡಿದ್ದ ಎಲ್ಲ ಗಳಿಕೆ ಒಟ್ಟು ಸೇರಿ 1.5 ಬಿಲಿಯನ್ ನಿವ್ವಳ ಆದಾಯ ಹೊಂದಿದ್ದಾರೆ.