Cannes 2025: ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಈ ಹಿಂದೆ ಕಂಗೊಳಿಸಿದ ಬಾಲಿವುಡ್ ನಟಿಯರು
ವಿಶ್ವದ ಅತಿದೊಡ್ಡ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮ ಎಂದು ಖ್ಯಾತಿಯನ್ನು ಪಡೆದಿರುವ ಕಾನ್ಸ್ ಚಲನಚಿತ್ರೋತ್ಸವ 2025 (Cannes Film Festival 2025) ಪ್ರಾರಂಭವಾಗಿದೆ. ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವುದು ಕಾನ್ ಚಿತ್ರೋತ್ಸವದ ಒಂದು ವಿಶೇಷ ಆಕರ್ಷಣೆಯಾಗಿದ್ದು ಪ್ರತಿ ವರ್ಷದಂತೆ ಈ ವರ್ಷವೂ ಈ ಕಾರ್ಯಕ್ರಮದಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮಿಂಚಲಿದ್ದಾರೆ.



ಐಶ್ವರ್ಯಾ ರೈ: ಪ್ರತೀ ಬಾರಿಯಂತೆ ಈ ಬಾರಿಯೂ ಕಾನ್ಸ್ ಚಲನಚಿತ್ರೋತ್ಸದಲ್ಲಿ ಸ್ಟಾರ್ ನಟ-ನಟಿಯರು ಭಾಗಿಯಾಗಲಿದ್ದಾರೆ. ಬಾಲಿವುಡ್ನ ಅನೇಕ ಖ್ಯಾತ ತಾರೆಯರು ರೆಡ್ ಕಾರ್ಪೆಟ್ ಅನ್ನು ಅಲಂಕರಿಸಲಿದ್ದಾರೆ. ಈ ವರ್ಷದಲ್ಲಿ ಐಶ್ವರ್ಯಾ ರೈ ಬಚ್ಚನ್ ಅಲಿಯಾ ಭಟ್ ಮತ್ತು ಜಾಹ್ನವಿ ಕಪೂರ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ನಿರೀಕ್ಷೆಯಿದೆ. ಕಳೆದ ಕೆಲವು ವರ್ಷಗಳಲ್ಲಿ ಕಾನ್ಸ್ ಚಲಚಿತ್ರೋತ್ಸವ ರೆಡ್ ಕಾರ್ಪೆಟ್ ಮೇಲೆ ಅನೇಕ ಬಾಲಿವುಡ್ ನಟಿಯರು ಡಿಫರೆಂಟ್ ಲುಕ್ ನಲ್ಲಿ ಮಿಂಚಿದ್ದರು. ಐಶ್ವರ್ಯಾ ರೈ ಕಾನ್ಸ್ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ 2002ರಲ್ಲಿ ಕಾಣಿಸಿಕೊಂಡರು. ನಟಿ 2023 ರ ಕಾನ್ಸ್ ಕಾರ್ಯಕ್ರಮದಲ್ಲಿ ಸೋಫಿ ಕೂಟೂರ್ ವಿನ್ಯಾಸದ ಸಿಲ್ವರ್ ಕೆಪ್ ಗೌನ್ ಧರಿಸಿ ಡಿಪ್ರೆಂಟ್ ಲುಕ್ನಲ್ಲಿ ಕಾಣಿಸಿಕೊಂಡರು.

ದೀಪಿಕಾ ಪಡುಕೋಣೆ;
ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಸಖತ್ ಕಲರ್ಫುಲ್ ಆಗಿ ಹೆಜ್ಜೆಹಾಕಿದ ದೀಪಿಕಾ ಪಡುಕೋಣೆ ಈ ಹಿಂದೆ ನಡೆದ ಕಾನ್ಸ್ ಕಾರ್ಯಕ್ರಮದಲ್ಲಿ ಎಲ್ಲರ ಮನಗೆದ್ದಿದ್ದರು..ಬ್ಲಾಕ್ ಅಂಡ್ ಗೋಲ್ಡ್ ಬಣ್ಣದ ರೆಟ್ರೋ ಸ್ಯಾರಿಯಲ್ಲಿ ಕಾಣಿಸಿ ಕೊಂಡ ದೀಪಿಕಾ ಪಡುಕೋಣೆ ಆರ್ಟ್ ಡೆಕೋ ಶೈಲಿಯ ಜುಮ್ಕಾ ಇಯರಿಂಗ್ ಧರಿಸಿ ಸ್ಟನಿಂಗ್ ಸ್ಮೈಲ್ ನೊಂದಿಗೆ ಮಿಂಚಿದ್ದರು.

ಪ್ರಿಯಾಂಕಾ ಚೋಪ್ರಾ
2019 ರಲ್ಲಿ ಸ್ಟ್ರಾಪ್ಲೆಸ್ ಗೌನ್ ಧರಿಸಿ ತಮ್ಮ ಲುಕ್ ಅನ್ನು ನಟಿ ಪ್ರಿಯಾಂಕಾ ಪೂರ್ಣಗೊಳಿಸಿದರು. ಈ ಈವೆಂಟ್ನಲ್ಲಿ ಪ್ರಿಯಾಂಕಾ ಅವರ ಅದ್ಭುತ ನೋಟವು ಜನರ ಮನ ಗೆದ್ದಿತ್ತು.

ಸೋನಮ್ ಕಪೂರ್;
ಐವೊರಿ ವೈಟ್ ಟಕ್ಸೆಡೋ ಡ್ರೆಸ್ ನಲ್ಲಿ ಗೋರ್ಜಿಯಸ್ ಆಗಿ ನಟಿ ಸೋನಮ್ ಕಪೂರ್ 2019ರಲ್ಲಿ ಕಾಣಿಸಿ ಕೊಂಡಿದ್ದರು. ನಟಿ ಸ್ಟೇಟ್ಮೆಂಟ್ ನೆಕ್ಲೇಸ್ ಮತ್ತು ಅದಕ್ಕೆ ಹೊಂದಿಕೊಳ್ಳುವ ಜ್ಯುವೆಲ್ಲರಿ ಧರಿಸಿದ್ದರು.

ಕಿಯಾರಾ ಅಡ್ವಾನಿ :
ಪಿಂಕ್-ಬ್ಲಾಕ್ ಕಾರ್ಸೆಟ್ ಟಾಪ್ ಮತ್ತು ಫಿಷ್ಟೇಲ್ ಸ್ಕರ್ಟ್ ಹೊಂದಿದ್ದ ಮಾಡರ್ನ್ ವಿನ್ಯಾಸದ ಔಟ್ಫಿಟ್ ನಲ್ಲಿ ನಟಿ ಕಿಯಾರಾ ಕಾಣಿಸಿಕೊಂಡಿದ್ದರು. ಕಪ್ಪು ಲೇಸ್ ಗ್ಲೋವ್ಸ್, ಹೈ ಟಾಪ್ ಬನ್ ಮತ್ತು ಡೈಮಂಡ್ ನೆಕ್ಲೇಸ್ ಈ ಲುಕ್ಗೆ ಅತಿ ಹೆಚ್ಚು ಗ್ಲಾಮರ್ ಲುಕ್ ನೀಡಿದ್ದವು.

ವಿದ್ಯಾ ಬಾಲನ್:
ಒಲಿವ್ ಗ್ರೀನ್ ಸಿಲ್ಕ್ ಸೀರೆ ಮತ್ತು ಕೆಂಪು ಬ್ಲೌಸ್ನಲ್ಲಿ ವಿದ್ಯಾ ಬಾಲನ್ ಕ್ಯೂಟ್ ಆಗಿ ಕಾಣಿಸಿಕೊಂಡರು. ಅವರು 2013ರಲ್ಲಿ ಕಾನ್ ಜೂರಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದರು.

ಅನುಷ್ಕಾ ಶರ್ಮಾ:
ಅನುಷ್ಕಾ ಶರ್ಮಾ ರಿಚರ್ಡ್ ಕ್ವಿನ್ ವಿನ್ಯಾಸದ ವೈಟ್ ಗೌನ್ ಧರಿಸಿ ಕಂಗೊಳಿಸಿದ್ದರು. ಈ ಉಡುಪಿನಲ್ಲಿ ಥ್ರೆಡ್ ಲುಕ್ ನ ಹೂವಿನ ವಿನ್ಯಾಸ ದಿಂದ ಅಲಂಕರಿಸಲ್ಪಟ್ಟಿದ್ದು ಚೋಪಾರ್ಡ್ ಇಯರಿಂಗ್ಗಳು ಮತ್ತು ಸ್ಪಾರ್ಕ್ಲಿ ರಿಂಗ್ಸ್ಗಳು ಇವರ ಲುಕ್ಗೆ ಮತ್ತಷ್ಟು ಮೆರುಗು ನೀಡಿದವು.