ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chand Mera Dil OTT release: ಅನನ್ಯಾ ಪಾಂಡೆ ನಟನೆಯ ಈ ರೊಮ್ಯಾಂಟಿಕ್‌ ಮೂವಿ ಒಟಿಟಿಗೆ ಎಂಟ್ರಿ!

Chand Mera Dil OTT release: "ಚಾಂದ್ ಮೇರಾ ದಿಲ್" ಚಿತ್ರವು (Chand Mera Dil OTT) ಮೇ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ವಿವೇಕ್ ಸೋನಿ ನಿರ್ದೇಶಿಸಿದ ಈ ರೊಮ್ಯಾಂಟಿಕ್‌ ಮೂವಿ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಅನನ್ಯಾ ಪಾಂಡೆ ಅವರ ಭರತನಾಟ್ಯ ಸನ್ನಿವೇಶ ಟ್ರೋಲ್ ಕೂಡ ಆಗಿತ್ತು. ಅವರ ಧರಿಸಿರುವ ಡಿಸೈನರ್ ಲೆಹೆಂಗಾ ಮತ್ತು ಮಾಡಿರುವ ನೃತ್ಯದ ಶೈಲಿಯು ಸಾಂಪ್ರದಾಯಿಕ ಕಲೆಗೆ ಅಪಮಾನವಾಗಿದೆ ಎಂದು ಹಲವು ನೃತ್ಯ ಪ್ರಿಯರು ಮತ್ತು ನೆಟ್ಟಿಗರು ಟೀಕಿಸಿದ್ದರು.

ಅನನ್ಯಾ ಪಾಂಡೆ ನಟನೆಯ ಈ ರೊಮ್ಯಾಂಟಿಕ್‌ ಮೂವಿ ಒಟಿಟಿಗೆ ಎಂಟ್ರಿ!

ಅನನ್ಯಾ ಪಾಂಡೆ -

Yashaswi Devadiga
Yashaswi Devadiga Jul 17, 2026 11:12 AM

ಅನನ್ಯಾ ಪಾಂಡೆ (Ananya Panday) ಮತ್ತು ಲಕ್ಷ್ಯ ಲಾಲ್ವಾನಿ ಅಭಿನಯದ "ಚಾಂದ್ ಮೇರಾ ದಿಲ್" ಚಿತ್ರವು (Chand Mera Dil OTT) ಮೇ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ವಿವೇಕ್ ಸೋನಿ ನಿರ್ದೇಶಿಸಿದ ಈ ರೊಮ್ಯಾಂಟಿಕ್‌ (Romantic movie) ಮೂವಿ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಯಿತು. ಈಗ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ.

ಸ್ಟ್ರೀಮಿಂಗ್‌ ಎಲ್ಲಿ?

ಚಿತ್ರಕಥೆಯನ್ನು ತುಷಾರ್ ಪರಾಂಜಪೆ ಮತ್ತು ವಿವೇಕ್ ಸೋನಿ ಬರೆದಿದ್ದಾರೆ ಮತ್ತು ಛಾಯಾಗ್ರಹಣವನ್ನು ದೇಬೋಜಿತ್ ರೇ ಮಾಡಿದ್ದಾರೆ. ಈಗ, ಎರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ, ಚಿತ್ರವು OTT ಪ್ಲಾಟ್‌ಫಾರ್ಮ್‌ಗೆ ಬಂದಿದೆ. ಚಾಂದ್ ಮೇರಾ ದಿಲ್ ಜುಲೈ 17, 2026 ರಿಂದ ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

ಇದನ್ನೂ ಓದಿ: Jason Sanjay: ಪರೋಕ್ಷವಾಗಿ ತಂದೆಯನ್ನು ದೂರಿದ್ರಾ ಸಿಎಂ ವಿಜಯ್ ಪುತ್ರ? ಜೇಸನ್ ಮುಕ್ತ ಮಾತು

ಚಂದ್ ಮೇರಾ ದಿಲ್" ಚಿತ್ರವನ್ನು ಕರಣ್ ಜೋಹರ್, ಆದರ್ ಪೂನಾವಲ್ಲ, ಅಪೂರ್ವ ಮೆಹ್ತಾ, ಸೋಮೆನ್ ಮಿಶ್ರಾ ಮತ್ತು ಮರಿಜ್ಕೆ ಡಿ'ಸೋಜಾ ಅವರು ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಕರಣ್ ಜೋಹರ್ ಈ ಯೋಜನೆಯನ್ನು ಬೆಂಬಲಿಸಿದರು.

ಚಿತ್ರದ ಕಥೆ ಏನು?

ಇದು ಭಾವನಾತ್ಮಕ ತಿರುವು ಹೊಂದಿರುವ ಆಧುನಿಕ ಪ್ರೇಮಕಥೆಯಾಗಲಿದೆ. ಈ ಚಿತ್ರವು ಆರವ್ (ಲಕ್ಷ್ಯ ಲಾಲ್ವಾನಿ) ಮತ್ತು ಚಾಂದನಿ (ಅನನ್ಯಾ ಪಾಂಡೆ) ಎಂಬ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕಥೆ. ಈ ಜೋಡಿ ಪ್ರೀತಿಯಲ್ಲಿ ಬೀಳುತ್ತೆ. ಚಾಂದನಿ ಗರ್ಭಿಣಿಯಾದಾಗ, ಅವಳ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ. ಮಗುವನ್ನು ಉಳಿಸಿಕೊಳ್ಳಲು ಮತ್ತು ಮದುವೆಯಾಗಲು ನಿರ್ಧರಿಸುತ್ತಾರೆ.ಈ ನಿರ್ಧಾರ ತೆಗೆದುಕೊಳ್ಳುವಾಗ ಅವರ ಸಂಬಂಧದಲ್ಲಿನ ಏರಿಳಿತಗಳು ಕಥೆಯಲ್ಲಿ ಪ್ರಮುಖ ತಿರುವು ಪಡೆಯುತ್ತವೆ. ಮುಂದೇನು ಆಗುತ್ತೆ ತಿಳಿಯಲು ಸಿನಿಮಾ ನೊಡಬೇಕು.

ಈ ಚಿತ್ರದಲ್ಲಿ ಅನನ್ಯಾ ಪಾಂಡೆ ಅವರು ಭರತನಾಟ್ಯದಲ್ಲಿ ತರಬೇತಿ ಪಡೆದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಚಾಂದನಿ ಪಾತ್ರ ಮಾಡಿದ್ದಾರೆ. ಚಾಂದ್ ಮೇರಾ ದಿಲ್ ಚಿತ್ರ ಬಿಡುಗಡೆಯಾದ ಮೂರನೇ ದಿನಕ್ಕೆ ಭಾರತದಲ್ಲಿ ಅಂದಾಜು 2.26 ಕೋಟಿ ರೂ. ಗಳಿಸಿತ್ತು.

ಇದನ್ನೂ ಓದಿ: Dhyan Sreenivasan: ದಳಪತಿ ವಿಜಯ್- ತ್ರಿಷಾ ಬಗ್ಗೆ ವೇದಿಕೆಯಲ್ಲೇ ಹಾಸ್ಯ ಮಾಡಿದ ಮಲಯಾಳಂ ನಟ

ಅನನ್ಯಾ ಪಾಂಡೆ ಅವರ ಭರತನಾಟ್ಯ ಸನ್ನಿವೇಶ ಟ್ರೋಲ್ ಕೂಡ ಆಗಿತ್ತು. ಅವರ ಧರಿಸಿರುವ ಡಿಸೈನರ್ ಲೆಹೆಂಗಾ ಮತ್ತು ಮಾಡಿರುವ ನೃತ್ಯದ ಶೈಲಿಯು ಸಾಂಪ್ರದಾಯಿಕ ಕಲೆಗೆ ಅಪಮಾನವಾಗಿದೆ ಎಂದು ಹಲವು ನೃತ್ಯ ಪ್ರಿಯರು ಮತ್ತು ನೆಟ್ಟಿಗರು ಟೀಕಿಸಿದ್ದರು.