ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2027: ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಶರ್ಮಾ ಮತ್ತೆ ನಾಯಕ? ಹಾರ್ದಿಕ್ ಪಾಂಡ್ಯ ನಿರ್ಗಮನದ ಸುಳಿವು ನೀಡಿದ ಅಶ್ವಿನ್!

ಮಾಜಿ ಸ್ಪಿನ್ನರ್‌ ಆರ್ ಅಶ್ವಿನ್ ಅವರು ಸೂರ್ಯಕುಮಾರ್ ಯಾದವ್ ಅವರ ಹೆಸರನ್ನು ಪರಿಗಣಿಸದೆ, ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕನನ್ನಾಗಿ ನೇಮಿಸುವುದಕ್ಕೆ ಬೆಂಬಲ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ತಂಡವನ್ನು ತೊರೆಯುವ ಸಾಧ್ಯತೆ ಇರುವುದರಿಂದ, 2027ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ತಂಡಕ್ಕೆ ಹೊಸ ನಾಯಕ ನೇಮಕವಾಗುವ ನಿರೀಕ್ಷೆಯಿದೆ.

ಮುಂಬೈ ಇಂಡಿಯನ್ಸ್‌ಗೆ ರೋಹಿತ್‌ ಶರ್ಮಾ ನಾಯಕನಾಗಬೇಕೆಂದ ಅಶ್ವಿನ್‌!

ಮುಂಬೈ ಇಂಡಿಯನ್ಸ್‌ಗೆ ರೋಹಿತ್‌ ನಾಯಕನಾಗಬೇಕೆಂದ ಅಶ್ವಿನ್‌. -

Profile
Ramesh Kote Oct 25, 2026 8:43 PM

ನವದೆಹಲಿ: ಮುಂಬರುವ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2027) ಟೂರ್ನಿಗೂ ಮುನ್ನ ಐದು ಬಾರಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್ (MI) ತಂಡದಲ್ಲಿ ನಾಯಕತ್ವ ಬದಲಾವಣೆಯಾಗುವ ಸಾಧ್ಯತೆ ಇದೆ. ಹಾರ್ದಿಕ್ ಪಾಂಡ್ಯ ತಂಡವನ್ನು ತೊರೆಯುವ ಸಾಧ್ಯತೆ ಹೆಚ್ಚಿದೆ ಎಂಬ ವರದಿಗಳ ನಡುವೆ, ಭಾರತದ ಮಾಜಿ ಸ್ಪಿನ್ನರ್‌ ಆರ್ ಅಶ್ವಿನ್ ಅವರು ರೋಹಿತ್ ಶರ್ಮಾ ಅವರನ್ನು ಮತ್ತೆ ನಾಯಕನನ್ನಾಗಿ ನೇಮಿಸುವಂತೆ ಬೆಂಬಲಿಸಿದ್ದಾರೆ. ಆದರೆ, ಈ ಕುರಿತು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಮುಂಬೈ ಇಂಡಿಯನ್ಸ್ ಈಗಾಗಲೇ ಕೈರೊನ್ ಪೊಲಾರ್ಡ್ ಅವರನ್ನು ತನ್ನ ಹೊಸ ಕೋಚ್ ಆಗಿ ನೇಮಿಸಿದೆ. ಹೀಗಾಗಿ, ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ತಂಡದ ಹೊಸ ನಾಯಕನ ಹೆಸರನ್ನು ಪ್ರಕಟಿಸುವ ನಿರೀಕ್ಷೆಯಿದೆ. ಆಟಗಾರರನ್ನು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಪಟ್ಟಿಯನ್ನು ಪ್ರಕಟಿಸಲು ಐಪಿಎಲ್ ಫ್ರಾಂಚೈಸಿಗಳಿಗೆ ನವೆಂಬರ್ ಮಧ್ಯದವರೆಗೆ ಸಮಯ ನೀಡಲಾಗಿದೆ.

ವಿರಾಟ್‌ ಕೊಹ್ಲಿ ಔಟ್‌; ಭಾರತ ತಂಡದ ಸಾರ್ವಕಾಲಿಕ ಟೆಸ್ಟ್‌ ಪ್ಲೇಯಿಂಗ್‌ XI ಆರಿಸಿದ ಅಜಿಂಕ್ಯ ರಹಾನೆ!

ರೋಹಿತ್ ಶರ್ಮಾ ನಾಯಕತ್ವಕ್ಕೆ ಅಶ್ವಿನ್ ಬೆಂಬಲ

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆರ್ ಅಶ್ವಿನ್, ರೋಹಿತ್ ಶರ್ಮಾ ಮತ್ತು ಕೈರೊನ್ ಪೊಲಾರ್ಡ್ ಅವರ ಸಂಯೋಜನೆ ಮುಂಬೈ ಇಂಡಿಯನ್ಸ್ ತಂಡಕ್ಕೆ ನೆರವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

“ರೋಹಿತ್ ಮತ್ತು ಪೊಲಾರ್ಡ್ ಉತ್ತಮ ಸಂಯೋಜನೆಯಾಗಬಹುದು ಎಂದು ನಾನು ಭಾವಿಸುತ್ತೇನೆ. ಇದು ನಡೆಯಬಹುದು, ಆದರೆ ನನಗೆ ಖಚಿತವಾಗಿ ತಿಳಿದಿಲ್ಲ. ಹಾರ್ದಿಕ್ ತಂಡದಲ್ಲಿ ಉಳಿಯುವ ಸಾಧ್ಯತೆ ತುಂಬಾ ಕಡಿಮೆ ಎಂದು ನನಗೆ ಅನಿಸುತ್ತದೆ. ಸೂರ್ಯಕುಮಾರ್ ಯಾದವ್ ಅವರನ್ನು ಮುಂಬೈ ತಂಡದ ನಾಯಕನಾಗಿ ನೋಡುವುದಿಲ್ಲ. ಈ ತಂಡದಲ್ಲಿ ಸರಿಪಡಿಸಬೇಕಾದ ಹಲವು ವಿಚಾರಗಳಿವೆ. ಮೆಗಾ ಹರಾಜಿಗೆ ಇನ್ನು ಒಂದು ವರ್ಷ ಮಾತ್ರ ಬಾಕಿಯಿದೆ. ಇಷ್ಟು ಕಡಿಮೆ ಅವಧಿಯಲ್ಲಿ ತಂಡವನ್ನು ಸರಿಪಡಿಸುವ ಅನುಭವ ಯಾರಿಗಿದೆ?” ಎಂದು ಅಶ್ವಿನ್ ಹೇಳಿದ್ದಾರೆ.

“ಅದು ರೋಹಿತ್ ಶರ್ಮಾ. ಹಾಗಾಗಿ, ಕನಿಷ್ಠ ಈ ವರ್ಷದ ಮಟ್ಟಿಗೆ ರೋಹಿತ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡುವುದು ಸಹಜ ನಿರ್ಧಾರವಾಗಿರಬಹುದು. ನನ್ನ ಪ್ರಕಾರ, ಅವರು ನಾಯಕತ್ವದ ಮುಂಚೂಣಿಯಲ್ಲಿದ್ದಾರೆ. ಪೊಲಾರ್ಡ್ ಜೊತೆಗೂ ಅವರಿಗೆ ಉತ್ತಮ ಬಾಂಧವ್ಯವಿದೆ,” ಎಂದು ಅಶ್ವಿನ್ ತಿಳಿಸಿದ್ದಾರೆ.

ಭುವನೇಶ್ವರ್‌, ಸೂರ್ಯವಂಶಿ ಔಟ್‌; ಮೂರನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಸೂರ್ಯಕುಮಾರ್ ಯಾದವ್ ಬಗ್ಗೆಯೂ ಚರ್ಚೆ

ಭಾರತ ತಂಡವನ್ನು 2026ರ ಟಿ20 ವಿಶ್ವಕಪ್ ಪ್ರಶಸ್ತಿಯತ್ತ ಮುನ್ನಡೆಸಿದ ಸೂರ್ಯಕುಮಾರ್ ಯಾದವ್ ಅವರ ಹೆಸರನ್ನು ಅಶ್ವಿನ್ ನಾಯಕತ್ವದ ಆಯ್ಕೆಯಾಗಿ ಪರಿಗಣಿಸಿಲ್ಲ. ಸೂರ್ಯಕುಮಾರ್ 2023ರಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ಗುಂಪಿನ ಭಾಗವಾಗಿದ್ದಾರೆ. ಆದರೆ, ಅವರು ಪೂರ್ಣಾವಧಿ ನಾಯಕನಾಗಿ ತಂಡವನ್ನು ಮುನ್ನಡೆಸಿಲ್ಲ. ಬದಲಿ ನಾಯಕನಾಗಿ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದ ಐದು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಎರಡು ಗೆಲುವು ಮತ್ತು ಮೂರು ಸೋಲುಗಳನ್ನು ದಾಖಲಿಸಿದೆ.

ರೋಹಿತ್ ನಾಯಕತ್ವದಲ್ಲಿ ಮುಂಬೈಗೆ ಐದು ಐಪಿಎಲ್ ಟ್ರೋಫಿಗಳು

ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. 2013ರ ಐಪಿಎಲ್ ಆವೃತ್ತಿಯ ಮಧ್ಯದಲ್ಲಿ ನಾಯಕತ್ವ ವಹಿಸಿಕೊಂಡ ರೋಹಿತ್, ಅದೇ ವರ್ಷ ಮುಂಬೈ ತಂಡಕ್ಕೆ ಚೊಚ್ಚಲ ಐಪಿಎಲ್ ಪ್ರಶಸ್ತಿ ತಂದುಕೊಟ್ಟಿದ್ದರು. ನಂತರ 2015, 2017, 2019 ಮತ್ತು 2020ರಲ್ಲಿಯೂ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಗೆದ್ದಿತು. 2013ರಲ್ಲಿ ರೋಹಿತ್ ನಾಯಕತ್ವದಲ್ಲೇ ತಂಡ ಚಾಂಪಿಯನ್ಸ್ ಲೀಗ್ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿತ್ತು.

ಆದರೆ, ಐಪಿಎಲ್ 2024ಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ಜವಾಬ್ದಾರಿ ನೀಡಿತ್ತು. ಹಾರ್ದಿಕ್ ನಾಯಕತ್ವದಲ್ಲಿ ಕಳೆದ ಮೂರು ಆವೃತ್ತಿಗಳಲ್ಲೂ ಮುಂಬೈ ಇಂಡಿಯನ್ಸ್ ಫೈನಲ್ ತಲುಪಲು ಸಾಧ್ಯವಾಗಿಲ್ಲ.