ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರುನಾಡ ಮನೆಮಗಳ ಸಾಧನೆಗೆ ವೇದಿಕೆಯಾಗಲಿದೆ ʻಕಲರ್ಸ್‌ ಕನ್ನಡತಿʼ; ಮಹಿಳೆಯರ ನಿಸ್ವಾರ್ಥ ಸೇವೆಗೆ ಸಿಗಲಿದೆ ಗೌರವ

Colors Kannadathi Campaign: ಕಲರ್ಸ್ ಕನ್ನಡ ವಾಹಿನಿಯು ನಾಡಿನ ಸಾಮಾನ್ಯ ಮಹಿಳೆಯರ ಅಸಾಮಾನ್ಯ ಬದುಕನ್ನು ಸಂಭ್ರಮಿಸಲು ಹೊಸ ವೇದಿಕೆ ಕಲ್ಪಿಸಿದೆ. ಕುಟುಂಬಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲೆಮರೆಯ ಸಾಧಕಿಯರನ್ನು ಗುರುತಿಸಿ ಗೌರವಿಸುವ ಈ ಅಭಿಯಾನ ರಾಜ್ಯಾದ್ಯಂತ ನಡೆಯಲಿದೆ. ಧಾರಾವಾಹಿಯ ಪಾತ್ರಗಳಿಂದ ಸ್ಫೂರ್ತಿ ಪಡೆದ ಈ ರಿಯಲ್ ಲೈಫ್ ನಾಯಕಿಯರ ಸ್ಫೂರ್ತಿದಾಯಕ ಕಥೆಗಳನ್ನು ಜಗತ್ತಿಗೆ ಪರಿಚಯಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ.

ದಶಕಗಳಿಂದ ದೈನಿಕ ಧಾರಾವಾಹಿಗಳ ಮೂಲಕ ಹೆಣ್ಣಿನ ಬದುಕಿನ ವಿವಿಧ ಆಯಾಮಗಳನ್ನು ಕಟ್ಟಿಕೊಡುತ್ತಿರುವ ಹೆಮ್ಮೆಯ ‘ಕಲರ್ಸ್ ಕನ್ನಡ’ ವಾಹಿನಿ, ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ನಾಡಿನ ಸಾಮಾನ್ಯ ಮಹಿಳೆಯರ ಅಸಾಮಾನ್ಯ ಬದುಕನ್ನು ಸಂಭ್ರಮಿಸಲು ಸಜ್ಜಾಗಿದೆ. ತನ್ನ ವಿನೂತನ ಅಭಿಯಾನ ‘ಕಲರ್ಸ್ ಕನ್ನಡತಿ’ ಮೂಲಕ ವಾಹಿನಿಯು ಈಗ ಜನರ ಮನೆಬಾಗಿಲಿಗೆ ಬರುತ್ತಿದೆ.

ಕಲರ್ಸ್ ಕನ್ನಡ ವಾಹಿನಿಯ 'ಕಲರ್ಸ್ ಕನ್ನಡತಿ' ಗೌರವ

ಕುಟುಂಬದ ನಿರ್ವಹಣೆಗಾಗಿ ಮಹಿಳೆಯೊಬ್ಬಳು ಮುಂಜಾನೆಯಿಂದ ಮುಸ್ಸಂಜೆಯವರೆಗೂ ನಿರ್ವಹಿಸುವ ನಿಸ್ವಾರ್ಥ ಕೆಲಸಗಳು ಸಾಮಾನ್ಯವಾಗಿ ಯಾವುದೇ ಪ್ರಶಸ್ತಿ-ಪುರಸ್ಕಾರಗಳಿಗೆ ಒಳಪಡುವುದಿಲ್ಲ. ಅಡುಗೆ ಮನೆ ಮತ್ತು ಮಕ್ಕಳ ಶಿಕ್ಷಣ ಸೇರಿದಂತೆ ಆಕೆ ನಿಭಾಯಿಸುವ 'ಮಲ್ಟಿ-ಟಾಸ್ಕಿಂಗ್' ಕೌಶಲವೇ ಒಂದು ಸಾಧನೆ. ಈ ಅಸಾಮಾನ್ಯ ಸಾಧನೆಯನ್ನು ಗುರುತಿಸುವ ನಿಟ್ಟಿನಲ್ಲಿ ಕಲರ್ಸ್ ಕನ್ನಡ ವಾಹಿನಿಯು 'ಕಲರ್ಸ್ ಕನ್ನಡತಿ' ಎಂಬ ಗೌರವವನ್ನು ನೀಡುತ್ತಿದೆ. ಇಷ್ಟು ದಿನ ತನ್ನ ಧಾರಾವಾಹಿಗಳ ಮೂಲಕ ಕಾಲ್ಪನಿಕ ಪಾತ್ರಗಳ ಕಥೆಯನ್ನು ಹೇಳುತ್ತಿದ್ದ ವಾಹಿನಿಯ ಉದ್ದೇಶ ಈ ಬಾರಿ ವಿಭಿನ್ನವಾಗಿದೆ. ಇದು ಕೇವಲ ಟಿವಿ ಪಾತ್ರಗಳ ಉತ್ಸವವಲ್ಲ, ಬದಲಿಗೆ ಕರುನಾಡಿನ ಪ್ರತಿ ಮನೆಯಲ್ಲೂ ಎಲೆಮರೆಯ ಕಾಯಿಯಂತೆ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಯರಿಗಾಗಿಯೇ ಮೀಸಲಾದ ವೇದಿಕೆಯಾಗಿದೆ.

Colours Kannada: ಕಲರ್ಸ್ ಕನ್ನಡ ಧಾರಾವಾಹಿಗಳಲ್ಲಿ ಕನ್ನಡ ಹಬ್ಬದ ಮನರಂಜನೆಯ ಸಂಭ್ರಮ!.

ಧಾರಾವಾಹಿಗಳ ಪಾತ್ರಗಳೇ ಸ್ಫೂರ್ತಿ

ನಮ್ಮ ಕಣ್ಣಮುಂದಿರುವ 'ಭಾಗ್ಯಲಕ್ಷ್ಮೀ'ಯ ಮುಗ್ಧ ಮನಸ್ಸಿನ ಗಟ್ಟಿಗಿತ್ತಿ ಭಾಗ್ಯ, 'ಮುದ್ದು ಸೊಸೆ'ಯ ಧೈರ್ಯವಂತ ವಿದ್ಯಾ, ಅಥವಾ 'ಭಾರ್ಗವಿ ಎಲ್‌ಎಲ್‌ಬಿ'ಯ ನ್ಯಾಯನಿಷ್ಠ ಭಾರ್ಗವಿ... ಇವರೆಲ್ಲರೂ ಕೇವಲ ಉದಾಹರಣೆಗಳಷ್ಟೇ. ಇವರ ಸಾಧನೆ ಜಗತ್ತಿನ ದೃಷ್ಟಿಯಲ್ಲಿ ಚಿಕ್ಕದಾಗಿ ಕಾಣಬಹುದು; ಆದರೆ ಅವರು ಮುನ್ನಡೆಸುವ ಕುಟುಂಬಕ್ಕೆ ಅದು ಅತ್ಯಮೂಲ್ಯ. ಧಾರಾವಾಹಿಯ ಈ ಪಾತ್ರಗಳು ಕೇವಲ ಕಾಲ್ಪನಿಕವಲ್ಲ, ಅವು ನಮ್ಮ ಮನೆಯ ಹೆಣ್ಣುಮಕ್ಕಳ ನೈಜ ಪ್ರತಿಬಿಂಬ. ತೆರೆಯ ಮೇಲಿನ ಪಾತ್ರಗಳಿಗೆ ಸ್ಫೂರ್ತಿಯಾಗಿರುವ, ನಮ್ಮ ನಡುವೆಯೇ ಇರುವ ನಿಜ ಜೀವನದ ನಾಯಕಿಯರನ್ನು ಹುಡುಕುವ ಪ್ರಯತ್ನವಿದು. ಅಂತಹ ಕೋಟಿ ಕೋಟಿ ಮಹಿಳೆಯರ ಎಲೆಮರೆಯ ಸಾಧನೆಗಳಿಗೆ ಮತ್ತು ಅವರು ನಿಭಾಯಿಸುವ ಗುರುತರ ಜವಾಬ್ದಾರಿಗಳಿಗೆ ‘ದನಿಯಾಗಲು’ ಕಲರ್ಸ್ ಕನ್ನಡ ಈ ವಿನೂತನ ವೇದಿಕೆಯನ್ನು ಕಲ್ಪಿಸಿದೆ.

Ninagagi: ಕಲರ್ಸ್ ಕನ್ನಡದಲ್ಲಿ ದಿಢೀರ್ ಮುಕ್ತಾಯವಾಯಿತು ಮತ್ತೊಂದು ಧಾರಾವಾಹಿ

ಸಾಮಾನ್ಯ ಮಹಿಳೆಯರಿಗಾಗಿ ಇಲ್ಲಿದೆ ಬೃಹತ್ ವೇದಿಕೆ

ʻನಿಮ್ಮೂರಿನ ನಿಜ ಜೀವನದ ಕಲರ್ಸ್ ಕನ್ನಡತಿ ಯಾರು?’ ಎಂಬ ಒಂದೇ ಪ್ರಶ್ನೆಯೊಂದಿಗೆ ಶುರುವಾದ ಈ ಅಭಿಯಾನ, ಈಗ ಟಿವಿಯ ಚೌಕಟ್ಟು ಮೀರಿ ಬೆಳೆದಿದೆ. ಇದೀಗ ಇದೊಂದು ಬೃಹತ್ ಸಾಮಾಜಿಕ ವೇದಿಕೆಯಾಗಿ ಮಾರ್ಪಟ್ಟಿದೆ. ಕಷ್ಟದ ಹಾದಿ, ಪಟ್ಟ ಪಾಡು, ಕುಟುಂಬಕ್ಕಾಗಿ ಮಾಡಿದ ತ್ಯಾಗ, ಎದುರಿಸಿದ ಅವಮಾನ... ಹೀಗೆ ಎಲ್ಲವನ್ನೂ ಮೆಟ್ಟಿ ನಿಂತು ಬದುಕು ಕಟ್ಟಿಕೊಂಡ ಛಲದ ಮಹಿಳೆಯರು, ತಮ್ಮ ಸ್ಪೂರ್ತಿದಾಯಕ ಅನುಭವಗಳನ್ನು ಇಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದು.

ಮೊದಲ ಕಾರ್ಯಕ್ರಮ ಎಲ್ಲಿ ನಡೆದಿದೆ?

ರಾಜ್ಯಾದ್ಯಂತ ಸಂಚರಿಸಲಿರುವ ಈ 'ಸಂಭ್ರಮದ ಸಾರೋಟು' ಯಾತ್ರೆಗೆ ರಾಜಧಾನಿ ಬೆಂಗಳೂರಿನಿಂದಲೇ ಚಾಲನೆ ಸಿಕ್ಕಿದೆ. ಇದರ ಮೊದಲ ಹಂತವಾಗಿ, ಫೆಬ್ರವರಿ 7ರಂದು ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.