ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಕ್ಕಳ ಪ್ರಾರ್ಥನಾ ಗೀತೆ ಬರೆದ ʻಡಾಲಿʼ ಧನಂಜಯ; ಸಿದ್ದಗಂಗಾ ಮಠದ ಅಂಗಳದಲ್ಲಿ ನಡೆಯಿತು ‘ಮದರ್‌ ಪ್ರಾಮಿಸ್‌’ ಚಿತ್ರೀಕರಣ

ನಟ ʻಡಾಲಿʼ ಧನಂಜಯ ಅವರು 'ಮದರ್ ಪ್ರಾಮಿಸ್' ಚಿತ್ರಕ್ಕಾಗಿ ಮೊದಲ ಬಾರಿಗೆ ಮಕ್ಕಳ ಭಾವನಾತ್ಮಕ ಪ್ರಾರ್ಥನಾ ಗೀತೆಯೊಂದನ್ನು ಬರೆದಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಚಿತ್ರೀಕರಿಸಲಾದ ಈ ಹಾಡಿಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಪೂರ್ಣ ಮೈಸೂರು ನಿರ್ದೇಶನದ, ಈ ಕಾಮಿಡಿ ಥ್ರಿಲ್ಲರ್ ಸಿನಿಮಾವು ಜುಲೈ 10 ರಂದು ತೆರೆಗೆ ಬರಲಿದೆ.

ಮಕ್ಕಳಿಗಾಗಿ ಪ್ರಾರ್ಥನಾ ಗೀತೆ ಬರೆದ ಧನಂಜಯ; ಸಿದ್ದಗಂಗಾ ಮಠದಲ್ಲಿ ಶೂಟಿಂಗ್!

-

Avinash GR
Avinash GR Jul 2, 2026 12:02 PM

ವಿಭಿನ್ನ ಪ್ರಚಾರ ಶೈಲಿ ಹಾಗೂ ವಿಶಿಷ್ಟ ಕಂಟೆಂಟ್‌ ಮೂಲಕ ಈಗಾಗಲೇ ಸದ್ದು ಮಾಡುತ್ತಿರುವ 'ಮದರ್ ಪ್ರಾಮಿಸ್' ಚಿತ್ರದ ಮತ್ತೊಂದು ವಿಶೇಷ ಹಾಡು ಬಿಡುಗಡೆಯಾಗಿದೆ. ಸದಾ ಕಮರ್ಷಿಯಲ್ ಮತ್ತು ರೊಮ್ಯಾಂಟಿಕ್ ಹಾಡುಗಳ ಸಾಹಿತ್ಯ ಬರೆಯುತ್ತಿದ್ದ ನಟ, ನಿರ್ಮಾಪಕ ‘ಡಾಲಿ’ ಧನಂಜಯ, ಈ ಚಿತ್ರಕ್ಕಾಗಿ ಮೊದಲ ಬಾರಿಗೆ ಮಕ್ಕಳ ಭಾವನಾತ್ಮಕ ಪ್ರಾರ್ಥನಾ ಗೀತೆಯೊಂದನ್ನು ರಚಿಸಿದ್ದಾರೆ.

ಸಿದ್ದಗಂಗಾ ಮಠದಲ್ಲಿ ಚಿತ್ರೀಕರಣ

"ಓ ಬೆಳಕೆ ಬಾ ಬೆಳಕೆ" ಎಂದು ಸಾಗುವ ಈ ಸುಂದರ ಪ್ರಾರ್ಥನಾ ಗೀತೆಯನ್ನು ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಅಂಗಳದಲ್ಲಿ ಮಕ್ಕಳೊಂದಿಗೆ ಚಿತ್ರೀಕರಿಸಲಾಗಿದೆ. ಮಠದ ಅಂಗಳ, ಶಾಲೆ ಹಾಗೂ ಅಡುಗೆ ಕೋಣೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಇಡೀ ದಿನ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತ ಚಿತ್ರತಂಡ, ಈ ಹಾಡನ್ನು ಅತ್ಯಂತ ಅರ್ಥಪೂರ್ಣವಾಗಿ ಸೆರೆಹಿಡಿದಿದೆ. ಸದ್ಯ ಬಿಡುಗಡೆಯಾಗಿರುವ ಈ ಪ್ರಾರ್ಥನಾ ಗೀತೆಗೆ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಕ್ಕಾ ಕನ್ನಡದ ಪ್ಯಾನ್ ಎಮೋಷನಲ್ ಸಿನಿಮಾ

‘ಮದರ್ ಪ್ರಾಮಿಸ್’ ಹೆಸರೇ ಸೂಚಿಸುವಂತೆ ಇದೊಂದು ಅಪ್ಪಟ ಭಾವನಾತ್ಮಕ ಚಿತ್ರವಾಗಿದ್ದು, ಕಥೆಯಲ್ಲಿ ಕಾಮಿಡಿ ಮತ್ತು ಥ್ರಿಲ್ಲರ್ ಅಂಶಗಳೂ ಸಮ್ಮಿಳಿತಗೊಂಡಿವೆ. ಚಿತ್ರದಲ್ಲಿ ಡಾಲಿ ಧನಂಜಯ ಅವರೊಂದಿಗೆ ನಾಗಭೂಷಣ್, ಹಿರಿಯ ನಟಿ ವಿನಯಪ್ರಸಾದ್, ಗೀತಾ, ಪ್ರಕಾಶ್ ಬೆಳವಾಡಿ, ಗುರುದತ್ ಹಾಗೂ ದೊಡ್ಡ ಹೊಸ ಕಲಾವಿದರ ದಂಡೇ ನಟಿಸಿದೆ.

Daali Dhananjaya: ಗಂಡು ಮಗುವಿನ ತಂದೆಯಾದ ನಟ ಡಾಲಿ ಧನಂಜಯ್‌; ಮಗುವಿನ ಕ್ಯೂಟ್‌ ಫೋಟೋ ಕಂಡು ಫ್ಯಾನ್ಸ್‌ ಸಂತಸ

ನಿರ್ದೇಶನಕ್ಕಿಳಿದ ಪೂರ್ಣ ಮೈಸೂರು

ಈ ಚಿತ್ರದ ಮೂಲಕ ಧನಂಜಯ ಅವರ ಆಪ್ತ ಗೆಳೆಯ ಹರ್ಷ ಮುರುಂಡಿ ಶಿವಲಿಂಗಪ್ಪ ಅವರು ‘ಡಾಲಿ ಪಿಕ್ಚರ್ಸ್’ ಸಹಯೋಗದೊಂದಿಗೆ ಅಧಿಕೃತವಾಗಿ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಪೂರ್ಣ ಮೈಸೂರು ನಿರ್ದೇಶನ ಮಾಡಿದ್ದರೆ, 'ಡೇರ್ ಡೆವಿಲ್ ಮುಸ್ತಾಫಾ' ಖ್ಯಾತಿಯ ಶಶಾಂಕ್ ಸೋಹಲ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಉಳಿದಂತೆ ರಾಹುಲ್ ರಾಯ್ ಅವರ ಛಾಯಾಗ್ರಹಣ ಹಾಗೂ ನವನೀತ್ ಶ್ಯಾಮ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

Daali Dhananjay: ಗುರಿ ಸಾಧನೆಗೆ ಶ್ರಮ ಮತ್ತು ಸಮಯ ಅಗತ್ಯ : ನಟ ಡಾಲಿ ಧನಂಜಯ್

ಜುಲೈ 10ರಂದು ತೆರೆಗೆ ಬರಲಿದೆ ‘ಮದರ್ ಪ್ರಾಮಿಸ್’

ಬ್ಯಾಕ್ ಟು ಬ್ಯಾಕ್ ಇಂಟರೆಸ್ಟಿಂಗ್ ಕಂಟೆಂಟ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ‘ಮದರ್ ಪ್ರಾಮಿಸ್’ ಚಿತ್ರವು ಜುಲೈ 10 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ.