Daali Dhananjaya: ಗಂಡು ಮಗುವಿನ ತಂದೆಯಾದ ನಟ ಡಾಲಿ ಧನಂಜಯ್; ಮಗುವಿನ ಕ್ಯೂಟ್ ಫೋಟೋ ಕಂಡು ಫ್ಯಾನ್ಸ್ ಸಂತಸ
Daali Dhananjaya: ಕೆಲವು ದಿನಗಳ ಹಿಂದೆ ಧನ್ಯತಾ ಅವರು ಬೇಬಿ ಬಂಪ್ ಫೋಟೊಶೂಟ್ ಮಾಡಿಸಿದ್ದು, ಪತಿ ಡಾಲಿ ಸಹ ಪತ್ನಿಯ ಫೋಟೋಶೂಟ್ನಲ್ಲಿ ಜೊತೆಯಾಗಿದ್ದರು. ಡಾಲಿ ಹಾಗೂ ಧನ್ಯತಾ ಅವರು ಪ್ರಕೃತಿಯ ನಡುವೆ ಫೋಟೊಶೂಟ್ ಮಾಡಿಸಿದ್ದು, ಡಾಲಿ, ಗರ್ಭಿಣಿ ಪತ್ನಿಯ ಕೈ ಹಿಡಿದು ನಡೆಸುತ್ತಿರುವ ಚಿತ್ರ ಸುಂದರವಾಗಿತ್ತು.
ಡಾಲಿ ಧನಂಜಯ್ -
ನಟ, ನಿರ್ಮಾಪಕ ಡಾಲಿ ಧನಂಜಯ್ (Daali Dhananjaya) ಅವರು ಇದೀಗ ತಂದೆ ಗಂಡು (baby Boy) ಮಗುವಿನ ತಂದೆಯಾಗಿದ್ದಾರೆ. ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನೆಗಳ ಮಳೆ ಹರಿಸಿದ್ದಾರೆ. ಧನಂಜಯ್ ಹಾಗೂ ಅವರ ಪತ್ನಿ ಧನ್ಯತಾ (Dhanyatha) ಈಗ ಸಂಭ್ರಮದಲ್ಲಿದ್ದಾರೆ.
ಮಗುವಿನ ಬೆರಳನ್ನು ಹಿಡಿದು ಸೂರ್ಯ ಉದಯಿಸುತ್ತಿದ್ದಂತೆ, ಅತ್ಯಂತ ಸಂತೋಷ, ನಮ್ಮ ಗಂಡು ಮಗುವೂ ಉದಯಿಸಿತು ಎಂದು ಬರೆದುಕೊಂಡಿದ್ದಾರೆ ಡಾಲಿ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಬರೆದುಕೊಂಡಿದ್ದಾರೆ. ಇದೀಗ ಫ್ಯಾನ್ಸ್ ಜ್ಯೂನಿಯರ್ ಡಾಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಧನ್ಯತಾ ಅವರು ಬೇಬಿ ಬಂಪ್ ಫೋಟೊಶೂಟ್ ಮಾಡಿಸಿದ್ದು, ಪತಿ ಡಾಲಿ ಸಹ ಪತ್ನಿಯ ಫೋಟೋಶೂಟ್ನಲ್ಲಿ ಜೊತೆಯಾಗಿದ್ದರು. ಡಾಲಿ ಹಾಗೂ ಧನ್ಯತಾ ಅವರು ಪ್ರಕೃತಿಯ ನಡುವೆ ಫೋಟೊಶೂಟ್ ಮಾಡಿಸಿದ್ದು, ಡಾಲಿ, ಗರ್ಭಿಣಿ ಪತ್ನಿಯ ಕೈ ಹಿಡಿದು ನಡೆಸುತ್ತಿರುವ ಚಿತ್ರ ಸುಂದರವಾಗಿತ್ತು.
ಇದನ್ನೂ ಓದಿ: Niveditha Gowda: ನಾನು ಮತ್ತು ಚಂದನ್ ದೂರ ಆಗಿರೋ ಕಾರಣ ಇದೇ! ನಿವೇದಿತಾ ಗೌಡ ಹೇಳಿದ್ದೇನು?
ಕೆಲ ತಿಂಗಳ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದ ಡಾಲಿ ಧನಂಜಯ್ ತಂದೆಯಾಗುತ್ತಿರುವ ಖುಷಿಯ ಬಗ್ಗೆ ಮಾತನಾಡಿದ್ದರು. ಇದೊಂದು ಹೊಸ ಅನುಭವ ಎಂದು ಹೇಳಿಕೊಂಡಿದ್ದರು. ಕಳೆದ ವರ್ಷ ಫೆಬ್ರವರಿಯಲ್ಲಿ ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ಅವರು ಮೈಸೂರಿನಲ್ಲಿ ಬಲು ಅದ್ಧೂರಿಯಾಗಿ ವಿವಾಹವಾಗಿದ್ದರು. ಇದೀಗ ಮೊದಲ ಮಗುವಿನ ಪೋಷಕರಾಗಿದ್ದಾರೆ.
ಡಾಲಿ ಧನಂಜಯ್ ಪತ್ನಿ ಧನ್ಯತಾ ಅವರು ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ. ಧನ್ಯತಾ ಅವರು ತಮ್ಮ ಹಾಗೂ ಡಾಲಿ ಧನಂಜಯ್ ಅವರ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ತಿಂಗಳ ಹಿಂದೆ ಉದಯ ಕನ್ನಡಿಗ 2025 ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ತಾವು ತಂದೆ ಆಗುತ್ತಿರುವ ಖುಷಿಯ ವಿಚಾರವನ್ನು ಡಾಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡ ನಟ ಧನಂಜಯ್ ಪತ್ನಿ ಧನ್ಯತಾ; ಮಗುವಿನ ನಿರೀಕ್ಷೆಯಲ್ಲಿ ʻಡಾಲಿʼ ದಂಪತಿ
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟ ಧನಂಜಯ್ ಅವರು ಜೊತೆಗೆ ಫ್ಯಾಮಿಲಿಗೂ ಸಮಯವನ್ನು ನೀಡುತ್ತಿದ್ದಾರೆ.