ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಈ ವರ್ಷದ ಮೊದಲ ಬ್ಲಾಕ್‌ ಬಸ್ಟರ್‌ ಹಿಟ್‌ ʻಲವ್‌ ಮಾಕ್ಟೇಲ್‌ 3ʼ; ವಿದೇಶದಲ್ಲೂ ರಿಲೀಸ್‌ ಆಯ್ತು ಕನ್ನಡ ಸಿನಿಮಾ

Love Mocktail 3: ಡಾರ್ಲಿಂಗ್ ಕೃಷ್ಣ ನಿರ್ದೇಶನದ 'ಲವ್ ಮಾಕ್ಟೇಲ್ 3' ಸಿನಿಮಾ 2026ರ ಮೊದಲ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೆ ಮಾಡಿರುವ ಈ ಸಿನಿಮಾ ಈಗ ಅಮೆರಿಕ, ಆಸ್ಟ್ರೇಲಿಯಾ ಮತ್ತು ಜರ್ಮನಿಯಂತಹ ದೇಶಗಳಲ್ಲೂ ಬಿಡುಗಡೆಯಾಗಿದೆ.

ಯುಎಸ್‌ಎ, ಆಸ್ಟ್ರೇಲಿಯಾದಲ್ಲಿ 'ಲವ್ ಮಾಕ್ಟೇಲ್ 3' ಕ್ರೇಜ್ ಶುರು

-

Avinash GR
Avinash GR Mar 29, 2026 12:14 PM

ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ, ನಾಯಕನಾಗಿ ನಟಿರುವ ʻಲವ್ ಮಾಕ್ಟೇಲ್ 3ʼ ಸಿನಿಮಾವು ಸದ್ಯ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಮೊದಲ ಎರಡು ಭಾಗಗಳಿಗಿಂತ ʻಲವ್ ಮಾಕ್ಟೇಲ್ 3ʼ ಸಿನಿಮಾವು ಹೆಚ್ಚಿನ ಗಳಿಕೆ ಮಾಡುತ್ತಿರುವುದು ವಿಶೇಷ. ಈ ನಡುವೆ ಈ ಚಿತ್ರವನ್ನು ವಿದೇಶದಲ್ಲೂ ರಿಲೀಸ್ ಮಾಡಲು‌ ಚಿತ್ರತಂಡ ಸಜ್ಜಾಗಿದೆ.

ವಿತರಕರು ಹೇಳಿದ್ದೇನು?

ʻಲವ್ ಮಾಕ್ಟೇಲ್ 3ʼ ಸಿನಿಮಾದ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಸುಪ್ರೀತ್, "ಈ ವರ್ಷದ ಮೊದಲ ಹಿಟ್ ಚಿತ್ರ ಲವ್‌ ಮಾಕ್ಟೇಲ್‌ 3. ಡಾರ್ಲಿಂಗ್ ಕೃಷ್ಣ ಬಿಡುಗಡೆಗೂ ಒಂದಷ್ಟು ದಿನಗಳ ಮುಂದೆ ಸಿನಿಮಾ ತೋರಿಸಿದ್ದರು. ಅದಾದ ಬಳಿಕ ಟಾಕ್ಸಿಕ್‌ನಿಂದ ತೆರವಾದ ಜಾಗಕ್ಕೆ ಲವ್ ಮಾಕ್ಟೇಲ್ 3 ಆಗಮಿಸಿತ್ತು. ಪ್ರೇಕ್ಷಕರೆಲ್ಲಾ ಅತ್ಯುತ್ತಮ ಪ್ರತಿಕ್ರಿಯೆ ನೀಡುವ ಮೂಲಕ ಈ ಸಿನಿಮಾವನ್ನು ಗೆಲ್ಲಿಸಿದ್ದಾರೆ. ಯುಎಸ್‌ಎ, ಆಸ್ಟ್ರೇಲಿಯಾ, ಜರ್ಮನಿ ಮುಂತಾದ ಕಡೆಗಳಲ್ಲಿಯೂ ಭರ್ಜರಿಯಾಗಿಯೇ ಬುಕ್ಕಿಂಗ್ ಓಪನ್ ಆಗಿದೆ" ಎಂದು ಹೇಳುವ ಮೂಲಕ ವಿದೇಶದಲ್ಲೂ ʻಲವ್ ಮಾಕ್ಟೇಲ್ 3ʼ ಸಿನಿಮಾ ರಿಲೀಸ್‌ ಆಗುತ್ತಿರುವ ವಿಚಾರವನ್ನು ಖಚಿತ ಪಡಿಸಿದರು.

Love Mocktail 3: ಇದು ಸಿನಿಮಾದ ಅಂತಿಮ ಕತೆ; ‘ಲವ್ ಮಾಕ್ಟೆಲ್ 3’ ಟ್ರೈಲರ್ ಔಟ್‌

ಪ್ರತಿಭಾವಂತರ ಪ್ರತಿಭೆಯನ್ನ ನಾವು ಬಳಸಿಕೊಂಡಿದ್ದೇವೆ

"ಪಾರ್ಟ್ 1 ಹಾಗೂ 2 ಗೆದ್ದಾಗ ಖುಷಿಯಾಗಿತ್ತು. ಆದರೆ ಮೂರನೇ ಆವೃತ್ತಿಯ ಗೆಲುವು ನನ್ನನ್ನು ಭಾವುಕಳನ್ನಾಗಿಸಿದೆ. ಇದಕ್ಕೆ ಪ್ರೇಕ್ಷಕರ ಕಡೆಯಿಂದ ಬರುತ್ತಿರುವ ಪ್ರತಿಕ್ರಿಯೆಗಳಿಂದ ಮನಸ್ಸು ತುಂಬಿ ಬಂದಿದೆ' ಎಂದು ಮಿಲನಾ ನಾಗರಾಜ್‌ ತಿಳಿಸಿದರೆ, "ನಾವು ತುಂಬಾ ಲೆಕ್ಕಾಚಾರ ಇಟ್ಟುಕೊಂಡೇ ಮುಂದುವರೆಯುತ್ತೇವೆ. ಯಾವುದೇ ಮುಲಾಜಿಗೆ ಬಿದ್ದು ಯಾರನ್ನೂ ಆಯ್ಕೆ ಮಾಡಿಕೊಳ್ಳುವುದಿಲ್ಲ. ನಮ್ಮ ತಂಡದಲ್ಲಿರುವವರೆಲ್ಲರೂ ಪಕ್ಕಾ ಪ್ರತಿಭಾವಂತರು. ಆ ಕಾರಣದಿಂದಲೇ ಅವಕಾಶ ಪಡೆದುಕೊಂಡಿದ್ದಾರೆ. ಅವರ ಪ್ರತಿಭೆಯನ್ನು ನಾವು ಬಳಸಿಕೊಂಡಿದ್ದೇವೆ. ಆದ್ದರಿಂದ ಸಿನಿಮಾ ತಂಡದವರ್‍ಯಾರೂ ನಮಗೆ ಥ್ಯಾಂಕ್ಸ್ ಹೇಳುವ ಹಾಗಿಲ್ಲ" ಎಂದು ಡಾರ್ಲಿಂಗ್ ಕೃಷ್ಣ ತಿಳಿಸಿದರು.

Yash: 'ಟಾಕ್ಸಿಕ್' ಜಾಗಕ್ಕೆ 'ಲವ್ ಮಾಕ್‌ಟೇಲ್ 3' ಎಂಟ್ರಿ; ಯುಗಾದಿ ರಜೆಗಳ ಮೇಲೆ ಕಣ್ಣಿಟ್ಟ ʻಡಾರ್ಲಿಂಗ್ʼ ಕೃಷ್ಣ!

ಕ್ರಿಸ್‌ಮೀ ಬ್ಯಾನರ್‌ನಿಂದ ಹೊಸ ಸಿನಿಮಾ

ಈ ಕ್ರಿಸ್‌ಮೀ ಬ್ಯಾನರ್‌ ಅಡಿಯಲ್ಲಿ ವರ್ಷಕ್ಕೊಂದು ಹೊಸ ಸಿನಿಮಾ ಮಾಡುವ ಯೋಜನೆ ಇದೆಯಂತೆ. ಆ ಬಗ್ಗೆಯೂ ಮಿಲನಾ ಮತ್ತು ಕೃಷ್ಣ ದಂಪತಿ ಸುಳಿವು ನೀಡಿದರು. "ಈ ಕಾಲಮಾನದಲ್ಲಿ ಯಾವುದೇ ಸಿನಿಮಾದ ಸಕ್ಸಸ್ ಮೀಟ್ ಎಂಬ ವಿಚಾರವೇ ಹಿತವೆನ್ನಿಸುತ್ತೆ. ಈ ವರ್ಷದ ಆರಂಭದಿಂದ ಒಂದು ರೀತಿಯ ನಿರಾಶದಾಯಕ ವಾತಾವರಣ ಕನ್ನಡ ಚಿತ್ರರಂಗವನ್ನು ಆವರಿಸಿಕೊಂಡಿತ್ತು. ಇಂಥಾ ಹೊತ್ತಿನಲ್ಲಿ ಲವ್ ಮಾಕ್ಟೇಲ್ ಗೆದ್ದಿರುವುದರಿಂದ ಚಿತ್ರರಂಗಕ್ಕೆ ಹೊಸಾ ಚೈತನ್ಯ ಬಂದಂತಾಗಿದೆ. ಇದು ಬರೀ ಚಿತ್ರತಂಡದ ಗೆಲುವಲ್ಲ. ಚಿತ್ರರಂಗದ ಗೆಲುವು" ಎಂದು ನಿರ್ದೇಶಕ ಶಶಾಂಕ್ ಹೇಳಿದರು.

ರೆಚೆಲ್ ಡೇವಿಡ್, ಅಮೃತಾ ಅಯ್ಯಂಗಾರ್, ಜಗ್ಗ ಮಮ್ಮಿ ಎಂದೇ ಖ್ಯಾತರಾದ ಜಗದೀಶ್, ಸಂವೃತಾ, ರೇಖಾ ಕೂಡ್ಲಿಗಿ, ಶ್ವೇತಾ ಪ್ರಸಾದ್‌, ರಜನಿ ಭಾರದ್ವಾಜ್‌, ನೆಯಾರಾ ದೀಪಕ್‌, ಛಾಯಾಗ್ರಾಹಕ ಹಾಗೂ ಸಂಕಲನಕಾರ ಶ್ರೀ ಕ್ರೇಜಿಮೈಂಡ್ಸ್ ಮುಂತಾದವರು ಲವ್ ಮಾಕ್ಟೇಲ್ 3 ಸಕ್ಸಸ್‌ ಬಗ್ಗೆ ಹೇಳಿಕೊಂಡಿದ್ದಾರೆ.