ʻಧುರಂಧರ್ 2ʼ ಸಿನಿಮಾದ ಹಿಟ್ ಆಗಿದ್ದಕ್ಕೆ ರಣವೀರ್ ಸಿಂಗ್‌ಗೆ 5 ಕೋಟಿಯ ಹಮ್ಮರ್ ಕಾರ್ ಉಡುಗೊರೆಯಾಗಿ ಸಿಕ್ತಾ? ಈ ಸುದ್ದಿಯ ಅಸಲಿಯತ್ತೇನು?
Ranveer Singh: ʻಧುರಂಧರ್ 2ʼ ಚಿತ್ರವು ವಿಶ್ವದಾದ್ಯಂತ 1100 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ಈ ಯಶಸ್ಸಿನ ಖುಷಿಯಲ್ಲಿ ನಿರ್ದೇಶಕ ಆದಿತ್ಯ ಧರ್ ಅವರು ರಣವೀರ್‌ಗೆ 5 ಕೋಟಿ ಮೌಲ್ಯದ ಹಮ್ಮರ್ ಕಾರನ್ನು ಉಡುಗೊರೆ ನೀಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಆದರೆ, ಇದು ನಿಜವೇ?
-
ರಣವೀರ್ ಸಿಂಗ್ ನಟನೆಯ 'ಧುರಂಧರ್: ದಿ ರಿವೆಂಜ್' ಸಿನಿಮಾದ ಅಭೂತಪೂರ್ವ ಯಶಸ್ಸು ಕಂಡಿದೆ. ಮಾರ್ಚ್ 19 ರಂದು ತೆರೆಕಂಡ ಆದಿತ್ಯ ಧರ್ ನಿರ್ದೇಶನದ ಈ ಸೀಕ್ವೆಲ್ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ. ಕೇವಲ ಒಂದು ವಾರದಲ್ಲಿ ಭಾರತದಲ್ಲಿಯೇ ಈ ಸಿನಿಮಾದ ಗಳಿಕೆ 800 ಕೋಟಿ ರೂ. ದಾಟಿದೆ. ವಿಶ್ವದಾದ್ಯಂತ ಒಟ್ಟಾರೆ ಗಳಿಕೆಯು 1100 ಕೋಟಿ ರೂ. ಮೇಲಿದೆ. ಈ ಮಧ್ಯೆ ಒಂದು ಇಂಟರೆಸ್ಟಿಂಗ್ ಸುದ್ದಿ ವೈರಲ್ ಆಗಿದೆ.
ಗಿಫ್ಟ್ ರೂಪದಲ್ಲಿ ಬಂತ ಹಮ್ಮರ್ ಕಾರು
ಅದೇನಪ್ಪ ಅಂದರೆ, 'ಧುರಂಧರ್: ದಿ ರಿವೆಂಜ್' ಸಿನಿಮಾ ದೊಡ್ಡ ಹಿಟ್ ಆಗಿದ್ದರಿಂದ ನಿರ್ದೇಶಕ, ನಿರ್ಮಾಪಕ ಆದಿತ್ಯ ಧರ್ ಅವರು ರಣವೀರ್‌ಗೆ 5 ಕೋಟಿ ರೂ. ಮೌಲ್ಯದ GMC ಹಮ್ಮರ್ ಇವಿ (GMC Hummer EV) ಮಾಡೆಲ್‌ನ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು, ರಣವೀರ್ ಸಿಂಗ್ ಅವರು ಈಚೆಗೆ ವಿಮಾನ ನಿಲ್ದಾಣಕ್ಕೆ ಐಷಾರಾಮಿ ಹಮ್ಮರ್ ಕಾರಿನಲ್ಲಿ ಆಗಮಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕಾರನ್ನು ಚಿತ್ರದ ನಿರ್ದೇಶಕ ಆದಿತ್ಯ ಧರ್ ಮತ್ತು ಅವರ ಪತ್ನಿ ಯಾಮಿ ಗೌತಮ್ ಅವರು ರಣವೀರ್‌ಗೆ ಉಡುಗೊರೆಯಾಗಿ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
Deepika Padukone: ಹೀಗಿದ್ದಾಳೆ ನೋಡಿ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಪುತ್ರಿ ದುವಾ; ಮೊದಲ ಬಾರಿ ಫೋಟೊ ರಿವೀಲ್
ಈ ಸುದ್ದಿಯಲ್ಲಿ ಸತ್ಯಾಸತ್ಯಾತೆ ಇದೆಯಾ?
ಅಷ್ಟಕ್ಕೂ ರಣವೀರ್ ಸಿಂಗ್‌ಗೆ ಈ ರೀತಿ ಒಂದು ಉಡುಗೊರೆ ನೀಡಿರುವ ಬಗ್ಗೆ ಚಿತ್ರತಂಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ನೆಟ್ಟಿಗರಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಇದು ಕೇವಲ ಸೋಶಿಯಲ್ ಮೀಡಿಯಾ ಎಂಗೇಜ್‌ಮೆಂಟ್‌ಗಾಗಿ ಹಬ್ಬಿಸಲಾದ ವದಂತಿ ಇರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಅಧಿಕೃತ ಮಾಹಿತಿ ಇಲ್ಲದೆ ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಹಲವರು ಎಚ್ಚರಿಸಿದ್ದಾರೆ. ಅಲ್ಲದೆ, ರಣವೀರ್ ಸಿಂಗ್ ಈ ಐಷಾರಾಮಿ ಕಾರನ್ನ ಕಳೆದ ವರ್ಷವೇ ಖರೀದಿಸಿದ್ದರು. ರಣವೀರ್ ಸಿಂಗ್ ಈ ಹಿಂದೆಯೂ ಹಲವು ಬಾರಿ ಇದೇ ಕಾರಿನಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದೆ. ಹೀಗಾಗಿ, ಇದು ಈಗ ನೀಡಲಾದ ಗಿಫ್ಟ್ ಅಲ್ಲ. ಬದಲಿಗೆ ರಣವೀರ್ ಅವರದ್ದೇ ಸ್ವಂತ ಕಾರು ಎನ್ನಲಾಗುತ್ತಿದೆ.
Deepika Padukone-Ranveer Singh: ಮತ್ತೆ ತೆರೆಮೇಲೆ ಒಂದಾದ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ
ರಣವೀರ್ ಸಿಂಗ್ ಹಮ್ಮರ್ ಕಾರು
MEGA EXCLUSIVE 🔥🚨🚨
— Rahul Gupta (@RahulGupta25376) March 27, 2026
After the massive success of #Dhurandhar2, #YamiGautam (wife of Aditya Dhar) gifted Ranveer Singh a stunning GMC Hummer worth 5 crore. 🚙🔥
And in his signature style, #Ranveersingh also celebrated a fan’s birthday with them, proving once again how much… pic.twitter.com/vCXKlzNZke
ಸದ್ಯ ವೈರಲ್ ವಿಡಿಯೋದಲ್ಲಿ ರಣವೀರ್ ಸಿಂಗ್ ತಮ್ಮ ಐಷಾರಾಮಿ ಕಾರಿನಿಂದ ಇಳಿದು ವಿಮಾನ ನಿಲ್ದಾಣದಲ್ಲಿ ಫ್ಯಾನ್ಸ್ ಬಹಳ ಆತ್ಮೀಯವಾಗಿ ಸಮಯ ಕಳೆದಿದ್ದಾರೆ. ತಮ್ಮ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಅಭಿಮಾನಿಯೊಬ್ಬರು ತಂದಿದ್ದ ಕೇಕ್ ಅನ್ನು ಕತ್ತರಿಸಿ, ಅವರೊಂದಿಗೆ ಹಾಡು ಹಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಈಗ ಅಭಿಮಾನಿಗಳ ಮನಗೆದ್ದಿದೆ.